ಕಲಿನಾ ಕ್ಯಾಂಪಸ್ ಕನ್ನಡ ವಿಭಾಗದಲ್ಲಿ ಎರಡು ಕೃತಿಗಳ ಅನಾವರಣ
Team Udayavani, Feb 14, 2017, 12:35 PM IST
ಮುಂಬಯಿ: ಸಾಹಿತ್ಯ ಕೃತಿಗಳಿಂದ ಸಮಾಜ ಸುಧಾರಣೆ ಸಾಧ್ಯ. ಅಂತಹ ಸಾಹಿತಿಗಳಲ್ಲಿ ಒಬ್ಬರಾದ ರವಿ ಅಂಚನ್ ಅವರ ಸಾಹಿತ್ಯ ಬದುಕು ಕಾವ್ಯದಿಂದ ಆರಂಭವಾಗಿದೆ. ಮೊಗವೀರ ಮತ್ತು ತಾಯ್ನಾಡು ಪತ್ರಿಕೆಗಳಲ್ಲಿ ಅವರ ಮೊದಲ ಕವನಗಳು ಪ್ರಕಟಗೊಂಡಿದ್ದವು. ಅವರ ಯಾವುದೇ ಬರವಣಿಗೆ ಸದಾ ಸತ್ಯವನ್ನೇ ಎತ್ತಿ ಹಿಡಿಯುತ್ತವೆ. ತನ್ನ ಬರವಣಿಗೆಯಲ್ಲಿ ಎಲ್ಲವನ್ನು ದೈರ್ಯದಿಂದ ಪ್ರತಿಪಾದಿಸುತ್ತಾರೆ. ಸಂಘ ಸಂಸ್ಥೆಗಳು ಸಮಾಜ ಸುಧಾರಣೆಯ ನೆಪದಲ್ಲಿ ದಾರಿ ತಪ್ಪಿದ ಸಂದರ್ಭಗಳಲ್ಲಿ ಇವರು ತನ್ನ ಲೇಖನಗಳ ಮುಖೇನ ಸತ್ಯವನ್ನು ರುಜುವಾತುಪಡಿಸಿ ಸಾಕಷ್ಟು ನಿಷ್ಠುರ ಕಟ್ಟಿಕೊಂಡಿದ್ದಾರೆ. ಕಲಾವಿದನಾಗಿ, ಪತ್ರಕರ್ತನಾಗಿ ಮತ್ತುಲೇಖಕನಾಗಿ ರವಿ ಅಂಚನ್ ನಿರಂತರ ಅಧ್ಯಯನಶೀಲತೆಯಿಂದಲೇ ಮುಂದು ವರಿದಿದ್ದಾರೆ ಎಂದು ಹಿರಿಯ ಸಮಾಜ ಸೇವಕ ಎಸ್. ಕೆ. ಸುಂದರ್ ನುಡಿದರು.
ಸಾಂತಾಕ್ರೂಜ್ ಪೂರ್ವದ ವಿದ್ಯಾ ನಗರಿಯ ಕಲಿನಾ ಕ್ಯಾಂಪಸ್‌ನ ಮುಂಬಯಿ ವಿಶ್ವವಿದ್ಯಾಲಯದ ಜೆಪಿ ನಾಯಕ್ ಭವನದಲ್ಲಿ ಫೆ. 4ರಂದು ಸಂಜೆ ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ರವಿ ರಾ.ಅಂಚನ್ ಅವರ ಇಪ್ಪತ್ತೆ$çದನೇ “ಜ್ಯೋತಿಬಾ : ಬೆಳಕು-ಬೆರಗು’ ಕೃತಿ ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ
ಕ್ರಮದಲ್ಲಿ ಬಾಗಲಕೋಟೆಯ ಪ್ರಸಿದ್ಧ ಜಾನಪದ ಮತ್ತು ಆಶುಕವಿ ಸಿದ್ಧಪ್ಪ ಸಾಬಣ್ಣ ಬಿದರಿ ರಚಿತ “ಜಾನಪದ ಜವಾರಿ-ಸಮಗ್ರ ಕಾವ್ಯ ಭಾಗ-2′ ಕೃತಿಯನ್ನು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಬಿಡುಗಡೆಗೊಳಿಸಿ ಮಾತನಾಡಿ, ನಾಡಿನ ನಾಮಾಂಕಿತ ಪ್ರಕಾಶಕ ರಾದ ಸ್ವಪ್ನ ಪ್ರಕಾಶನವು ಪ್ರಕಾಶಿತ ರವಿ ಅಂಚನ್‌ರ ಬಾಳಸಂಗಾತಿ ಸ್ವರ್ಗಸ್ಥ ಶೈಲಜಾ ರವಿ ಅಂಚನ್ ಅವರ ಸ್ಮರಣಾರ್ಥ ಪ್ರಕಟ ಗೊಂಡ ಕೃತಿಯು ಹಲವಾರು ದೃಷ್ಟಿಯಿಂದ ಮಹತ್ವವನ್ನು ಪಡೆದಿದೆ. ಮಹಾರಾಷ್ಟ್ರದಲ್ಲಿ ಶೋಷಿತ ವರ್ಗದ ಅದರಲ್ಲೂ ಶೂದ್ರ ಮತ್ತು ಶೂದ್ರಾತಿ ಶೂದ್ರರೂ ಹಾಗೂ ಮಹಿಳೆಯರಲ್ಲಿ ಸಮಾನತೆ ಮತ್ತು ಶಿಕ್ಷಣ ಕ್ರಾಂತಿಯ ಬೆಳಕು ಹರಿಸಿದ ಸಾಮಾಜಿಕ ಕ್ರಾಂತಿಕಾರರೇ ಜ್ಯೋತಿಭಾ ಫುಲೆ ಅವರು. ಫುಲೆ ಅವರ ಸಾಮಾಜಿಕ ಸಮತೆಯ ಹೋರಾಟದ ಅಂಶ ಗಳನ್ನು ತೆರೆದಿಡುವ ಕೃತಿ ಇಂದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಗೊಂಡಿದೆ ಎಂದರು. ಮುಂಬಯಿ ವಿವಿ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿನಿ ಸುರೇಖಾ ನಾಯ್ಕ ಅವರು ಕೃತಿಗಳನ್ನು ಪರಿಚಯಿಸಿ, ಜವಾರಿ ಅವರು ಕನ್ನಡ ನಾಡು ಕಂಡ ಅಪರೂಪದ ಕವಿ. ಹಲಗೆ ಬಳಪ ಹಿಡಿಯದ ಹೆಗ್ಗಳಿಕೆಯ ಕವಿ. ಇವರು ನಡೆದದ್ದೆ ಕಾವ್ಯ. ಅಂತಹ ಕವಿ ಸಿದ್ದಪ್ಪ ಸಾಬಣ್ಣ ಅವರು ಜಾನಪದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ಮಹತ್ವದ ಕವಿಯಾಗಬಲ್ಲರು ಎಂದರು.
ಮುಂಬಯಿ ವಿವಿ ಕನ್ನಡ ವಿಭಾಗದ ವಿದ್ಯಾರ್ಥಿಗಳಾಗಿದ್ದು ತಮ್ಮ ಸಂಪ್ರಬಂಧಕ್ಕೆ ಎಂಫಿಲ್ ಪದವಿ ಪುರಸ್ಕೃತ ಸುಗಂಧಾ ಸತ್ಯಮೂರ್ತಿ, ಆರ್. ಎಂ. ಗಣಚಾರಿ ಅವರಿಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಪರವಾಗಿ ಸ್ವರ್ಣಪದಕವನ್ನಿತ್ತು ಶಾಲು ಹೊದಿಸಿ, ಕೃತಿಯನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶೈಲಜಾ ರವಿ ಅಂಚನ್ ಫೌಡೇಶನ್‌ನ ಡಾ| ಅಕ್ಷರಿ ಆರ್. ಅಂಚನ್, ಶಕುಂತಳಾ ಆರ್. ಪ್ರಭು, ಪಯ್ನಾರು ರಮೇಶ್ ಶೆಟ್ಟಿ, ಡಾ| ವಿಶ್ವನಾಥ್ ಕಾರ್ನಾಡ್, ರಂಗ ಎಸ್. ಪೂಜಾರಿ, ಮದುಸೂಧನ ರಾವ್, ಸಿಎ ನವೀನ್‌ಚಂದ್ರ ಸುವರ್ಣ ಗೋರೆಗಾಂವ್, ಪೇತ್ರಿ ವಿಶ್ವನಾಥ್ ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ಚಿತ್ರಾಪು ಕೆ. ಎಂ. ಕೋಟ್ಯಾನ್, ಸದಾನಂದ ಅಂಚನ್ ಥಾಣೆ ಮತ್ತಿತರರು ಉಪಸ್ಥಿತರಿದ್ದರು.
ಹೆಸರಾಂತ ಕಲಾವಿದ, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾರ್ಥಿ ಜಯ್ ಸಿ. ಸಾಲ್ಯಾನ್ ಅವರು ರಚಿಸಿದ ಭಾವಚಿತ್ರಗಳನ್ನು ರಮ್ಯಾ ವಸಿಷ್ಠ ಮತ್ತು ಹಿರಿಯ ಲೇಖಕ ಡಾ| ಕೆ. ಎಸ್. ಶರ್ಮಾ ಅವರಿಗೆ ಹಸ್ತಾಂತರಿಸಿದರು. ರಮಾ ಉಡುಪ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಕಾರ್ಯಕ್ರಮ ಅವರು ನಿರ್ವಹಿಸಿದರು. ಸುಶೀಲಾ ಎಸ್. ದೇವಾಡಿಗ ವಂದಿಸಿದರು.
ಜ್ಯೋತಿ ಫುಲೆ ಅವರು ತಾನು ಬರೆದದ್ದು ಮಾತ್ರವಲ್ಲ ಇತರರನ್ನೂ ಬರೆಸಿದ್ದಾರೆ. ಇದಕ್ಕೆ ಬಂಡಾಯದ ಮೊದಲ ಕವಯತ್ರಿ ಸಾವಿತ್ರಿಭಾç ಫುಲೆ ಮಾದರಿ. ಮೊದಲ ಬಂಡಾಯದ ಲೇಖಕಿ ಮುಕ್ತ ಸಾಳ್ವೆ, ಅದೇ ರೀತಿ ಮೊದಲ ಬಂಡಾಯದ ಪ್ರಬಂಧ, ಸ್ತ್ರೀಪುರುಷ ತುಲನ ಕೃತಿ ತಾರಾ ಭಾç ಶಿಂಧೆ ಅವರಿಂದ ಬಂದಿದೆ. ಇವರು ಸಾವಿತ್ರಿ ಭಾç ಫುಲೆ ಅವರ ಶಿಷ್ಯೆ. ಅದೇ ರೀತಿ ಪ್ರಥಮ ಮುಸ್ಲಿಂ ಶಿಕ್ಷಕಿ ಫಾತಿಮಾ ಖಾನ್ ಅವರನ್ನು ನೀಡಿದ ಶ್ರೇಯಸ್ಸು ಫುಲೆ ದಂಪತಿಗೆ ಸಲ್ಲುತ್ತದೆ. ಅಂತಹ ಪ್ರೇರಣೆ ನನ್ನ ಈ ಕೃತಿಗೆ ಪೂರಕವಾಯಿತು
-ರವಿ ರಾ. ಅಂಚನ್ (ಮುಂಬಯಿ ಸಾಹಿತಿ).
ಮುಂಬಯಿ ವಿವಿ ಕನ್ನಡ ವಿಭಾಗವು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದೆ. ವಿದ್ಯಾಲಯಗಳು ಪಾಠ ಪ್ರವಚನಕ್ಕೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತಾರಗೊಂಡು ಶೈಕ್ಷಣಿಕ ಪಾಲುದಾರರಾಗಿ ಬೆಳೆಯಬೇಕು. ನಮ್ಮ ವಿಭಾಗವು ಸದ್ಯ ಬರೇ ಶೈಕ್ಷಣಿಕ ದ್ವೀಪವಾಗಿರದೆ ಜನಮುಖೀಯಾಗಿ ಸ್ಪಂದಿಸುತ್ತಿದೆ. ಇಂದಿಲ್ಲಿ ಮೂರು ಗ್ರಂಥಗಳು ಬಿಡುಗಡೆಗೊಂಡಿರುವುದು ಸಂತೋಷದ ಸಂಗತಿ. ನಮಗೆ ಯಾವತ್ತೂ ಇತಿಹಾಸದ ಪ್ರಜ್ಞೆಯ ಅಗತ್ಯವಿದೆ. ರವಿ ಅಂಚನ್ ಮುಂಬಯಿಯಲ್ಲಿ ಅರಳಿದ ಶ್ರೇಷ್ಠ ಪ್ರತಿಭೆ. ಡಾ| ಜೀವಿ ಅವರು ತಮ್ಮ ಮಹಾಪ್ರಬಂಧವನ್ನು 20 ವರ್ಷಗಳ ಅನಂತರ ಪ್ರಕಟಿಸುತ್ತಿದ್ದಾರೆ. ಸಿದ್ಧಾಪ್ಪ ಬಿದರಿ ನಮ್ಮ ಜೊತೆಗಿರುವ ಅರುಕ್ ಕವಿಯ ಕೊನೆಯ ಕೊಂಡಿಯಾಗಿದ್ದಾರೆ
– ಡಾ| ಜಿ. ಎನ್. ಉಪಾಧ್ಯ (ಮುಖ್ಯಸ್ಥರು: ಕನ್ನಡ ವಿಭಾಗ ಮುಂಬಯಿ ವಿವಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.