ಸ್ವರಾಜ್ ಗ್ರೂಪ್ ಆಫ್ ಕಂಪೆನೀಸ್: ಸಾಧಕರಿಗೆ ಸಮ್ಮಾನ
Team Udayavani, Dec 6, 2017, 4:32 PM IST
ಕಲ್ಯಾಣ್: ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ಸೇವಾನಿರತವಾಗಿರುವ ಆರ್ಥಿಕ ಹಾಗೂ ವಾಸ್ತುಸೇವಾ ಸಂಸ್ಥೆ ಸ್ವರಾಜ್ ಗ್ರೂಪ್ ಆಫ್ ಕಂಪೆನೀಸ್ ಇದರ 5ನೇ ನೂತನ ಶಾಖೆಯು ಇತ್ತೀಚೆಗೆ ಥಾಣೆ ಜಿÇÉೆಯ ಕಲ್ಯಾಣ್ ಪಶ್ಚಿಮ ರೈಲ್ವೇ ನಿಲ್ದಾಣ ಸಮೀಪದ ಗೋಪಾಲಕೃಷ್ಣ ಹೊಟೇಲ್ ಎದುರುಗಡೆ ಇರುವ ಗಿರಿರಾಜ್ ಭವನದ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಸತತ 25 ವರ್ಷಗಳಿಂದ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ ಗಣ್ಯರು ಹಾಗೂ ಸಂಸ್ಥೆಯ ಹಿತೈಷಿಗಳನ್ನು ಸಂಸ್ಥೆಯ ಪದಾಧಿಕಾರಿಗಳು ಗೌರವಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಬಿ. ನಾರಾಯಣ ಶೆಟ್ಟಿ, ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ, ಶಂಕರ ಶೆಟ್ಟಿ ಪುತ್ತೂರು, ರಾಧಾಕೃಷ್ಣ ಶೆಟ್ಟಿ, ದಯಾಶಂಕರ ಪಿ. ಶೆಟ್ಟಿ, ರವಿ ಶೆಟ್ಟಿ ಸಾಯಿ ಗ್ರೂಪ್ ಆಫ್ ಹೊಟೇಲ್ಸ್, ಸುಬ್ಬಯ್ಯ ಶೆಟ್ಟಿ ದಂಪತಿ, ಸತೀಶ್ ಎನ್. ಶೆಟ್ಟಿ ದಂಪತಿ, ಸುಬೋಧ್ ಡಿ. ಭಂಡಾರಿ ದಂಪತಿಗಳನ್ನು ಅತಿಥಿ ಗಣ್ಯರು ಶಾಲು, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಅತಿಥಿಗಳಾದ ಶಿರ್ವನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿ ಸದಸ್ಯ ಕೆ. ಉದಯ ಕುಮಾರ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್ಬೆಟ್ಟು ಸಂತೋಷ್ ಶೆಟ್ಟಿ, ವಿದ್ಯಾವರ್ಧಕ ಸಂಘ ಕಟಪಾಡಿ ಉಡುಪಿ ಇದರ ಕಾರ್ಯದರ್ಶಿ ಕೆ. ಮಹೇಶ್ ಶೆಣೈ, ವಾಸ್ತು ವಿಜ್ಞಾನದಲ್ಲಿ ಚಿನ್ನದ ವಿಜೇತ ಡಾ| ದಿನೇಶ್ ಶೆಟ್ಟಿ, ವಾಸ್ತುತಜ್ಞ ಪ್ರಸಾದ್ ಜೋಶಿ ಹಾಗೂ ಸ್ವರಾಜ್ ಗ್ರೂಪ್ ಆಫ್ ಕಂಪೆನೀಸ್ ಇದರ ಸಿಎಂಡಿ ಬಿ. ಪುರಂದರ ಶೆಟ್ಟಿ ಅವರು ಉಪಸ್ಥಿತರಿದ್ದರು. ಕರ್ನೂರು ಮಹಾನ್ ರೈ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.