![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 19, 2018, 5:54 PM IST
ಮುಂಬಯಿ: ನಗರದಲ್ಲಿ ತುಳುಭಾಷೆ, ಸಂಸ್ಕೃತಿಯ ಪ್ರೀತಿ ಅತ್ಯದ್ಭುತವಾದುದು. ತುಳುವನ್ನು ನಾನಾ ವಿಧದಲ್ಲಿ ಬೆಳೆಸಿ ಪೋಸಿ ಪ್ರಸಿದ್ಧಿಯಲ್ಲಿರಿ ಸುವಲ್ಲಿ ಮುಂಬಯಿವಾಸಿ ತುಳುವರ ಸೇವೆ ಅನುಪಮ. ಬುದ್ಧಿಜೀವಿಯಾದ ಮನುಜನು ತನ್ನ ಜೀವನ ಸ್ವರೂಪವನ್ನು ಜೀವಂತವಾಗಿದ್ದಾಗಲೇ ಕೇಳಿ, ಅನುಭವಿಸಿ ಧನ್ಯರೆಣಿಸಿದಾಗಲೇ ಮನುಷ್ಯ ಬದುಕು ಹಸನಾಗುವುದು. ಜನ ನಮ್ಮ ಬಗ್ಗೆ ಏನೂ ಮಾತನಾಡುವಂತಿದ್ದರೆ ನಾವೇ ಮೊದಲಾಗಿ ಬದುಕು ರೂಪಿಸಿ ಅದಕ್ಕೆ ಉತ್ತರಿಸಿದಾಗ ನಮ್ಮ ಜೀವನ ಅರ್ಥಪೂರ್ಣವಾಗುವುದು ಎಂದು ಗುರುಪುರ ವಜ್ರದೇ ಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ತಿಳಿಸಿದರು.
ಅ.14 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃ ಹದಲ್ಲಿ ಕಲಾ ಸಂಘಟಕ ನವೀನ್ ಪಡುಇನ್ನಾ ಸಂಘ ಟನೆಯ ಕಮಲ ಕಲಾ ವೇದಿಕೆ ಸಂಸ್ಥೆ ಮುಂಬಯಿ ಇದರ 12 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ರಂಗಭೂಮಿ ಕಲಾವಿದನ ಸ್ವರ್ಗದಂತ್ತಿದ್ದು, ಕಲಾವಿದರ ಬದುಕು ಸ್ವರೂಪ ಸಾಗರದಷ್ಟೇ ವಿಶಾಲವಾದುದು. ಇಂ ತಹ ನಾಟಕಗಳಿಂದ ಒಳ್ಳೆ ಸಂಪರ್ಕ ಸಂಬಂಧ ಸಾಧ್ಯವಾಗುತ್ತದೆ. ಆದುದರಿಂದ ನಾವೆಲ್ಲರು ಬದುಕಿನೊಂದಿಗೆ ಧರ್ಮಕಾರ್ಯ ನಿರಂತರವಾಗಿ ನಡೆಸುತ್ತಾ, ಕಲಾಮಾತೆಯ ಕಾಯಕ ಶಾಶ್ವತವಾಗಿಸಿ ಕೊಂಡು ಮುನ್ನಡೆಯೋಣ ಎಂದು ನುಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಸಮಾಜ ಸೇವಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಎನ್. ಟಿ. ಪೂಜಾರಿ, ಹರೀಶ್ ಜಿ. ಅಮೀನ್, ಗಂಗಾಧರ್ ಜೆ. ಪೂಜಾರಿ, ಡೇವಿಡ್ ಡಿಸೋಜಾ ಮುದರಂಗಡಿ, ಶೇಖರ್ ಶೆಟ್ಟಿ ಇನ್ನಾ, ಇನ್ನಾಬೀಡು ರವೀಂದ್ರ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ವಿಶ್ವನಾಥ ಪೂಜಾರಿ ಕಡ್ತಲ, ಪ್ರೇಮಾ ಆರ್. ಕೋಟ್ಯಾನ್ ಬಾಂದ್ರಾ, ಕೃಷ್ಣ ಶೆಟ್ಟಿ ಅಂಧೇರಿ, ರವಿ ಪೂಜಾರಿ ಬೋಳ, ಪ್ರಮೋದ್ ಕರ್ಕೇರ, ಹರೀಶ್ ಸಾಲ್ಯಾನ್ ಬಜಗೋಳಿ, ಸಂತೋಷ್ ಪೂಜಾರಿ ಮಲಾಡ್, ನಿಲೇಶ್ ಪೂಜಾರಿ ಪಲಿಮಾರ್, ಇನ್ನಬಾಳಿಕೆ ನವೀನ್ ಶೆಟ್ಟಿ, ಪುರೋಹಿತರಾದ ಶಂಕರ್ ಗುರು ಭಟ್ ಮತ್ತು ಗುರು ಶಂಕರ್ ಭಟ್, ಪ್ರವೀಣಾ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಹುರ್ಲಾಡಿ ರಘುವೀರ ಎ. ಶೆಟ್ಟಿ, ಸಿಬಿಡಿ ಭಾಸ್ಕರ್ ಶೆಟ್ಟಿ, ಲಕ್ಷಿ¾à ಎನ್. ಕೋಟ್ಯಾನ್, ಮಮತಾ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಉಮೇಶ್ ಮಿಜಾರ್ ಅವರನ್ನು ರಂಗದ ಬೊಳ್ಳಿ-ಕುಸಲ್ದ ರಾಜೆ ಬಿರುದು ಪ್ರದಾನಿಸಿ ಅಭಿನಂದಿಸಲಾಯಿತು. ಶಂಕರ್ ಪೂಜಾರಿ ಮತ್ತು ಶಕುಂತಳಾ ಎಸ್. ಪೂಜಾರಿ ಹಾಗೂ ಪ್ರಭಾಕರ್ ಬೆಳುವಾಯಿ ಮತ್ತು ಶೋಧನಾ ಪ್ರಭಾಕರ್ ಬೆಳುವಾಯಿ ದಂಪತಿಗಳನ್ನು ಸಮ್ಮಾನಿಸಲಾಯಿತು.
ಮಹಿಳಾ ವಿಭಾಗದವರು ಪ್ರಾರ್ಥನೆಗೈದರು. ಸಂಸ್ಥೆಯ ಮುಖ್ಯಸ್ಥ ನವೀನ್
ಪಡುಇನ್ನಾ ಸ್ವಾಗತಿಸಿದರು. ಕಮಲ ಕಲಾ ವೇದಿಕೆ ಅಧ್ಯಕ್ಷ ಹರೀಶ್ ಕೋಟ್ಯಾನ್ ಪಡುಇನ್ನಾ, ಸಲಹೆಗಾರರಾದ ಸುಧಾಕರ್ ಪೂಜಾರಿ ಹೆಜ್ಮಾಡಿ, ದೇವಕಿ ಅಮೀನ್ ಮತ್ತು ಪ್ರಕಾಶ್ ಪೂಜಾರಿ ಅದಮಾರು, ಸದಸ್ಯರಾದ ಹರೀಶ್ ಕೋಟ್ಯಾನ್, ರಮೇಶ್ ಶ್ರೀಯಾನ್, ಸುದೀಪ್ ಮುನಿಯಾಲು, ಪ್ರಶಾಂತ್ ಪಂಜ, ಎಸ್. ಮದುಸೂಧನ್, ಪ್ರಶಾಂತ್ ಶೆಟ್ಟಿ, ಸುರೇಶ್ ಕಡಂದಲೆ, ಕಿರಣ್ ಜೈನ್, ವಿನೋದ್ ಕೆ., ಲೀಲಾ ಗಣೇಶ್ ಪೂಜಾರಿ, ಕು| ಶ್ವೇತಾ ಶೆಟ್ಟಿ ಅವರು ಅತಿಥಿಗಳನ್ನು ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಸತೀಶ್ ಎರ್ಮಾಳ್ ಪ್ರಸ್ತಾವಿಕ ನುಡಿಗಳನ್ನಾಡಿ ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾಗ-ದೀಪ ತಂಡ ಪುತ್ತೂರು, ದೀಪಕ್ ಕುಮಾರ್ ಇವರಿಂದ ವಿಶೇಷ ನೃತ್ಯ ಕಾರ್ಯಕ್ರಮ, ಕಲಾವಿದರಾದ ಹರೀಶ್ಚಂದ್ರ ಪೆರಾಡಿ ಬಳಗ ಮತ್ತು ಕು| ವಿದ್ಯಾಶ್ರೀ, ಕು| ಸುಶ್ಮಿತಾ, ಶ್ರೀಜಿತ್, ಕು| ಅಂಕಿತಾ ನಾಯಕ್, ಕು| ಸೌಜನ್ಯಾ ಬಿಲ್ಲವ ಇವರಿಂದ ನೃತ್ಯ ವೈಭವ ಹಾಗೂ ಕು| ನಿಶ್ಚಿತಾ ಅವರಿಂದ ಸಮೂಹ ನೃತ್ಯ ಪ್ರದರ್ಶನಗೊಂಡಿತು. ಶರಣ್ ಕೈಕಂಬ ಅವರಿಂದ ರಸಮಂಜರಿ ನಡೆಯಿತು. ಕೊನೆಯಲ್ಲಿ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಉಮೇಶ್ ಮಿಜಾರ್ ಸಾರಥ್ಯ ಮತ್ತು ಸತೀಶ್ ಅಮೀನ್ ಕಲ್ಲಮುಂಡ್ಕೂರು ಸಂಚಾಲಕತ್ವದಲ್ಲಿ ಶ್ರೀನಾಥ್ ಮೂಡುಬಿದಿರೆ ಇವರ ಸಂಗೀತದೊಂದಿಗೆ, ಉಮೇಶ್ ಮಿಜಾರ್ ಅವರ ಕಥೆ, ಸಂಭಾಷಣೆ, ಗೀತಾರಚಣೆ, ನಿರ್ದೇಶನದ “ಆಪುಜಿ ಪಂಡ ದೀಪುಜಿ’ ತುಳು ನಾಟಕ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್
You seem to have an Ad Blocker on.
To continue reading, please turn it off or whitelist Udayavani.