​​​​​​​ಕನ್ನಡ ಭವನ ಎಜುಕೇಶನ್‌ ಸೊಸೈಟಿ: “ಮಧುರವಾಣಿ’ ಸ್ವರ್ಣ ಸಂಭ್ರಮ

Team Udayavani, Feb 5, 2019, 1:29 PM IST

0401mum07.jpg

ಮುಂಬಯಿ: ಕನ್ನಡ ಭವನ ವಿದ್ಯಾ ಸಂಸ್ಥೆಯು ಹಲವಾರು ವೈಶಿಷ್ಟéತೆಗಳಿಂದ ಕೂಡಿದ ಸಂಸ್ಥೆ.  ಈ ಸಂಸ್ಥೆಗೆ ಹಿರಿಯರ ಸಂಪೂರ್ಣ ಬೆಂಬಲವಿದೆ ಜತೆ¿ಲ್ಲಿ ಹಳೆವಿದ್ಯಾರ್ಥಿಗಳು ಬೆನ್ನೆಲುಬಾಗಿ ನಿಂತಿದ್ದಾರೆ.  21ರ ನವ ತರುಣನಾಗಿ ಸೇರಿದ ತನ್ನನ್ನು ಕನ್ನಡ ಭವನ ಬೆಳೆಸಿತು.  ಅಲ್ಲಿಂದಲೇ ತನ್ನ ಮುಂದಿನ ಉಚ್ಚ ವ್ಯಾಸಂಗ ಮಾಡಲು ಎಲ್ಲ ರೀತಿಯ ಸಹಕಾರ ಈ ಸಂಸ್ಥೆಯು ತನಗೆ ನೀಡಿದೆ. “ಮಧುರವಾಣಿ’ ಪತ್ರಿಕೆಯ ಪ್ರಥಮ ಸಂಚಿಕೆಯು ತನ್ನ ಕೈಯಿಂದಲೇ ಮುದ್ರಿತವಾಗಿ ನಿವೃತ್ತಿ ತನಕ ಸತತ 28 ವರ್ಷ ಅದರ ಆರೈಕೆ ಮಾಡಿದ ನೆನಪು ತನಗೆ ಹೆಮ್ಮೆ ಎನಿಸುತ್ತಿದೆ. ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದ ನನಗೆ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲನಾಗಿ ನಿವೃತ್ತಿ ಹೊಂದುವ ಸೌಭಾಗ್ಯ ಆಡಳಿತ ಮಂಡಳಿಯು ಕರುಣಿಸಿದೆ.  ವಿದ್ಯಾರ್ಥಿಗಳು ಮೊದಲು ತಮ್ಮ ಗುರಿಯನ್ನು ನಿರ್ಧಾರಿಸಬೇಕು.  ಮುಂದೆ ಈ ಗುರಿಯನ್ನು ತಲುಪಲು ಕಠಿಣ ಪರಿಶ್ರಮ ಅತೀ ಅಗತ್ಯ.  ಎಲ್ಲ ವಿದ್ಯಾರ್ಥಿಗಳಲ್ಲಿ ಒಂದೊಂದು ವಿಶಿಷ್ಟ ಪ್ರತಿಭೆ ಇರುತ್ತದೆ ಎಂದು ಶ್ರೀ ಸರ್ವಜ್ಞ ವಿದ್ಯಾಪೀಠ ವಿರಾರ್‌ ಇದರ ಕುಲಪತಿ ಹಾಗೂ ಕನ್ನಡ ಭವನದ ನಿವೃತ್ತ ಪ್ರಾಂಶುಪಾಲ ಪ್ರಹ್ಲಾದಾಚಾರ್ಯ ಆರ್‌. ನಾಗರಹಳ್ಳಿ ತಿಳಿಸಿದರು.

ಕನ್ನಡ ಭವನ ಎಜುಕೇಶನ್‌ ಸೊಸೆ„ಟಿ ಮುಂಬಯಿ ಫೆ.3ರಂದು  ಸಂಜೆ ಸಿಎಸ್‌ಎಂಟಿ ಪಕ್ಕದ  ಅಲೆಗಾÕಂಡ್ರೀಯಾ ಗರ್ಲ್ಸ್‌ ಹೆ„ಸ್ಕೂಲ್‌ ಸಭಾಗೃಹದಲ್ಲಿ ಕನ್ನಡ ಭವನ ಎಜ್ಯುಕೇಶನ್‌ ಸೊಸೈಟಿ ಹೆ„ಸ್ಕೂಲ್‌ ಮತ್ತು ಜ್ಯೂನಿಯರ್‌ ಕಾಲೇಜು ಇವುಗಳ 57ನೇ ವಾರ್ಷಿಕೋತ್ಸವ ಮತ್ತು ಉಭಯ ಸಂಸ್ಥೆಗಳ ವಾರ್ಷಿಕ ಸಂಚಿಕೆ (ಮುಖವಾಣಿ) “ಮಧುರವಾಣಿ’ಯ ಐವತ್ತರ ಸಂಭ್ರಮದ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ನಾಗರಹಳ್ಳಿ ಮಾತನಾಡುತ್ತಿದ್ದರು.

ಕನ್ನಡ ಭವನ ಎಜ್ಯುಕೇಶನ್‌ ಸೊಸೈಟಿ ಕಾರ್ಯಾಧ್ಯಕ್ಷ ಎ.ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಆಶೀರ್ವಚನ ನೀಡಿದರು. ಗೌರವ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ, ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್‌.ಕೆ ಶೆಟ್ಟಿ ಹಾಗೂ ಎಜ್ಯುಕೇಶನ್‌ ಸೊಸೈಟಿಯ ಉಪ ಕಾರ್ಯಾಧ್ಯಕ್ಷರಾದ ದಯಾನಂದ ಬಿ. ಅಮೀನ್‌ ಮತ್ತು ಕೇಶವ ಕೆ.ಕೋಟ್ಯಾನ್‌, ಗೌರವ ಪ್ರಧಾನ ಕೋಶಾಧಿಕಾರಿ ಪುರುಷೋತ್ತಮ ಎಂ. ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದು ವಿದ್ಯಾರ್ಥಿಗಳಿಗೆ ವಾರ್ಷಿಕ ಶೆ„ಕ್ಷಣಿಕ ಪಾರಿತೋಷಕಗಳನ್ನು ಪ್ರದಾನಿಸಿ ಶುಭ ಹಾರೈಸಿದರು.

ಪ್ರತಿಯೊಬ್ಬನು 3 ಭಾಷೆಗಳನ್ನು ಅವಶ್ಯವಾಗಿ ಕಲಿಯಬೇಕಾಗಿದೆ.  ತನ್ನ ಮಾತƒ ಭಾಷೆ, ರಾಷ್ಟ್ರೀಯ ಭಾಷೆ ಹಾಗೂ ತನ್ನನ್ನು ಜಗತ್ತಿನಲ್ಲಿ ಗುರುತಿಸಿಕೊಳ್ಳಳು ಜಾಗತಿಕ ಭಾಷೆಯಾದ ಅಂಗ್ಲ ಭಾಷೆ.   ಕನ್ನಡ ಭವನ ಶಾಲೆಯು ಮಾಸದ ಸೊತ್ತು.  ಈ ಸಂಸ್ಥೆ ಬೆಳೆಯುತ್ತಾ ಹೊಗಬೇಕು.  ವಾರ್ಷಿಕ ಪತ್ರಿಕೆ ಮಧುರವಾಣಿಯು ಅಮರವಾಣಿಯಾಗಿ  ಬೆಳೆಯಲಿ ಎಂದು ವಿಶ್ವನಾಥ ಭಟ್‌  ಆಶೀರ್ವದಿಸಿದರು.  ಸದ್ಯ ಭಾರತ ಜಗತ್ತಿನಲ್ಲಿ ಉನ್ನತ  ಸ್ಥಾನ ಗಳಿಸುತ್ತಾ ಇದೆ. ಇದು ಇಲ್ಲಿನ ಸಂಸ್ಕಾರಕ್ಕೆ ಸಿಕ್ಕ ಮಾನ್ಯತೆ.  ಅತೀ ಕಠಿಣ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಯನ್ನು ನಡೆಸುತ್ತಿರುವ ಈ ಸಂಸ್ಥೆಗೆ  ಶ್ರೀಕೃಷ್ಣ ವಿಟuಲ ಪ್ರತಿಷ್ಠಾನದ ವತಿಯಿಂದ ಮುಂದೆಯೂ ಸಹಕಾರ ನೀಡುವೆವು  ಎಂದರು.

ಆರ್‌.ಕೆ. ಶೆಟ್ಟಿ ಮಾತನಾಡಿ ಇಂದು ನನಗೆ ಕನ್ನಡ ಭವನದ ಹಳೆ ವಿದ್ಯಾರ್ಥಿ ಎಂದು ಹೇಳಲು ತನಗೆ ಹೆಮ್ಮೆ ಎನಿಸುತ್ತಿದೆ.  ಈ ಸಂಸ್ಥೆಯ ಸಕಲ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಕಾತರಿಸುತ್ತಿದ್ದೇನೆ.  ಕನ್ನಡ ಭವನವು ತನಗೆ ಪುನರ್ಜನ್ಮ  ನೀಡಿದ ವಿದ್ಯಾ ಸಂಸ್ಥೆ.  ಅಂದು ಮುಂದಿನ ದಾರಿ ಇಲ್ಲದೆ ಮುಂಬಯಿಗೆ ಬಂದ ಸಂದರ್ಭದಲ್ಲಿ ತನಗೆ ದಾರಿದೀಪವಾಗಿ ಲಭಿಸಿದ್ದು ಕನ್ನಡ ಭವನ.  ಇಲ್ಲಿ ಸಂಜೆಯ ಕಾಲೇಜಿನಲ್ಲಿ ವಿದ್ಯಾಭಾಸ ಮುಗಿಸಿದ ತನಗೆ ಮುಂದಿನ ಉಚ್ಚ ಶಿಕ್ಷಣಕ್ಕೆ ಅನುವಾಯಿತು.  ನನ್ನ ಜೀವನದಲ್ಲಿ ಶಿಸ್ತು, ಸಂಸ್ಕƒತಿ ಆಚಾರ ವಿಚಾರ ಎಲ್ಲವನ್ನೂ ಈ ವಿದ್ಯಾ ಸಂಸ್ಥೆಯಿಂದ ಕಲಿತಿದ್ದೇನೆ ಎಂದರು.

ವಿದ್ಯಾರ್ಥಿಯು ತನ್ನ  ವಿದ್ಯಾರ್ಥಿ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ವಿದ್ಯಾಭ್ಯಾಸದ ಜತೆ ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾಭ್ಯಾಸಕ್ಕೆ ಭಾಷೆ ಮುಖ್ಯವಲ್ಲ. ಪ್ರಾರಂಭಿಕ ವಿದ್ಯಾಭ್ಯಾಸ ಮಾತೃಭಾಷೆಯಲ್ಲಿ ಮಾಡುವುದು ಉತ್ತಮವಾಗಿದ್ದು,ಅಂಥವರು ಉಚ್ಚ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಿದ ನಿದರ್ಶನಗಳೆಷ್ಟೋ ನಮ್ಮಲ್ಲಿವೆ. ಮುಂಬಯಿಯಲ್ಲಿ ಕನ್ನಡಾಭಿವೃದ್ಧಿಗೆ ಕನ್ನಡ ಭವನ ಎಜ್ಯುಕೇಶನ್‌ ಸೊಸೈಟಿ ಕೊಡುಗೆ ಅಪಾರ. ಸಂಸ್ಥೆಯು ವಿದ್ಯಾರ್ಜನೆಗೆ ಸಲ್ಲಿಸಿದ ನಿರಂತರ 57 ವರ್ಷಗಳ ಸೇವೆ ಶ್ಲಾಘನೀಯ.   ಇಂದು ಶಾಲೆ ಮತ್ತು ಕಿರಿಯ ಮಹಾವಿದ್ಯಾಲಯ ಸೇರಿ ಮೂರು ಸರದಿಯಲ್ಲಿ ವಿದ್ಯಾಲಯ ನಡೆಯುತ್ತಿದ್ದರೆ, ಇದಕ್ಕೆ ಮುಖ್ಯವಾಗಿ ಕನ್ನಡ ಶಾಲೆಯ ಪಾಲಕರು, ಕನ್ನಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಮುಖ ಕಾರಣರಾಗುತ್ತಾರೆ  ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎ.ಬಿ. ಶೆಟ್ಟಿ  ನುಡಿದರು. ಮನೋರಂಜನಾ ಕಾರ್ಯಕ್ರಮವಾಗಿ ವಿದ್ಯಾರ್ಥಿಗಳು ವಿವಿಧ ನೃತ್ಯಾವಳಿಗಳನ್ನು ಸಾದರ ಪಡಿಸಿದರು. ಕಲಾ ಸೌರಭ ಮುಂಬಯಿ ತಂಡವು ಪದ್ಮನಾಭ ಸಸಿಹಿತ್ಲು ನಿರ್ದೇಶನದಲ್ಲಿ ಗಾಯನ ನರ್ತನದ ಅಪೂರ್ವ ಸಂಗಮ “ಸಂಗೀತ ಶೃಂಗಾರ’ ಪ್ರಸ್ತುತಗೊಳಿಸಿತು.

ಕಲಾ ಸೌರಭದ ಕಲಾವಿದರು ಪ್ರಾರ್ಥನೆಯನ್ನಾಡಿದರು. ಪ್ರಾಂಶುಪಾಲ ಎಲ್‌. ರಾಧಾಕೃಷ್ಣನ್‌ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಶೇಖರ ಎ. ಅಮೀನ್‌ ಪ್ರಸ್ತಾವಿಕ ನುಡಿಗಳನ್ನಾಡಿದರು. ವಸಂತಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅಮೃತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಠಲ್‌ ಮನೋರೆ ವಂದನಾರ್ಪಣೆಗೈದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Team India; Bumrah meets Kiwi surgeon: Doubts over Champions Trophy?

Team India; ಕಿವೀಸ್‌ ಸರ್ಜನ್‌ ಭೇಟಿಯಾದ ಬುಮ್ರಾ: ಚಾಂಪಿಯನ್ಸ್‌ ಟ್ರೋಫಿಗೆ ಅನುಮಾನ?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

13-frndshp

Friendship: ಸ್ನೇಹವೇ ಸಂಪತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.