ಕನ್ನಡ ವಿಭಾಗ ಮುಂಬಯಿ ವಿವಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Team Udayavani, Feb 15, 2017, 3:00 PM IST

14-Mum03a.jpg

ಮುಂಬಯಿ: ಜನಪರ ಸಂವಿಧಾನಿಕವಾಗಿ ಜಾಗೃತಿಯಲ್ಲಿನ ಸುರಕ್ಷಾ ಜಾಗದಲ್ಲಿರುವ ಸಾರ್ವಜನಿಕ ಸಂಸ್ಥೆ ಆಕಾಶವಾಣಿಯಾಗಿದೆ. ಅಕ್ಷರ ಮಾಧ್ಯಮದಿಂದ ಧ್ವನಿ ಮಾಧ್ಯಮಕ್ಕೆ ಸೇತುವೆಯಾಗಿ ಸೇವಾನಿರತ ಆಕಾಶವಾಣಿಗಳಿಗೆ ತಲ್ಲಣಗಳಿಲ್ಲ ಎನ್ನುವುದು ನನ್ನ ಅಭಿಮತ. ಪ್ರಸ್ತುತ ಸಮಾಜಕ್ಕೆ  ಮಾಧ್ಯಮದ ಭಯ ಮತ್ತು ಮಾಧ್ಯಮಗಳಿಗೆ ಸಮಾಜದ ಭಯವಿದೆ. ಆದ್ದರಿಂದ ತುಂಬಾ ಸೂಕ್ಷ್ಮವಾಗಿರುವ ಇವತ್ತಿನ ಸಮಾಜ ಭಯದ ವಾತಾವರಣದಲ್ಲಿ ಮುನ್ನಡೆಯುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರು ಕತ್ತಿಯ ನೆತ್ತಿಯ ಮೇಲಿದ್ದು, ಒತ್ತಡಕ್ಕೆ ಮಣಿದು ಧಾವಂತದ ಬದುಕು ಸಾಗಿಸುತ್ತಿರುವುದು ಶೋಚನೀಯ. ಆದರೆ ಮಾಧ್ಯಮದಿಂದಲೇ ವಿಶೇಷವಾಗಿ ಚಾನೆಲ್‌ಗ‌ಳು ತೀರ್ಪು ಕೊಡುವ ಕೆಲಸ ಮಾಡುವಂಥದ್ದು ಮಾಧ್ಯಮ ಕ್ಷೇತ್ರವನ್ನು ಮುಜುಗರಕ್ಕೀಡು ಮಾಡುತ್ತಿದೆ ಎಂದು ಆಕಾಶವಾಣಿ ಮಂಗಳೂರು ಇದರ ಕಾರ್ಯಕ್ರಮ ನಿರ್ವಾಹಕ, ಸಾಹಿತಿ ಡಾ| ಸದಾನಂದ ಪೆರ್ಲ ಅಭಿಪ್ರಾಯಿಸಿದರು.

ಫೆ. 13 ರಂದು ಸಾಂತಾಕ್ರೂಜ್‌ ಪೂರ್ವದ ಕಲೀನ ಕ್ಯಾಂಪಸ್‌ನ ರಾನಡೆ ಭವನದ ಕನ್ನಡ ವಿಭಾಗದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಡಿಯೋ ದಿನಾಚರಣೆ ಪ್ರಯುಕ್ತ “ಸಮೂಹ ಮಾಧ್ಯಮ ವರ್ತಮಾನದ ತಲ್ಲಣಗಳು’ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಕನ್ನಡಾಂಬೆಯ ವಿಶೇಷ ಕೆಲಸಗಳು ನಡೆಯುತ್ತದೆ. ಆದುದರಿಂದ ಇಲ್ಲಿನ ಈ ವೇದಿಕೆ ನನ್ನ ಪಾಲಿನ ಗೌರವವಾಗಿದೆ. ಭಾವನಾತ್ಮಕ ಸಂಬಂಧಕ್ಕೆ ಇದು ಅವಕಾಶವಾಗಿದೆ. ಇಂದು ಕನ್ನಡದ ವಿಷಯ, ಕಾರ್ಯಕ್ರಮ ಇತ್ಯಾದಿಗಳ ದಾಖಲೀಕರಣದ ಕೊರತೆ ಇದೆ. ಜೀವನದ ಅವಿಭಾಜ್ಯ ಅಂಗಗಳಾಗಿರುವ ಚಾನೆಲ್‌ಗ‌ಳಾಗಲೀ ಇತರ ಮಾಧ್ಯಮಗಳಾಗಲೀ ನೀತಿತತ್ವ ಮೀರಿ ನಡೆಯಬಾರದು. ಮಾಧ್ಯಮಗಳು ವ್ಯಕ್ತಿಕ್ಕಿಂತ ಅಭಿವ್ಯಕ್ತಿ ಪೂರಕವಾಗಬೇಕು. ಪತ್ರಕರ್ತರು ಭಾವನೆಗಳನ್ನು ತಿಳಿಸಬೇಕೇ ಹೊರತು ತಲ್ಲಣ ಗಳಾಗಬಾರದು. ಇಂದು ವಿಶ್ವದಾದ್ಯಂತ ಪ್ರಜ್ಞಾವಂತ ವೀಕ್ಷಕರಿದ್ದ ಕಾರಣ ಸತ್ಯಾಸತ್ಯತೆ, ವಸ್ತುನಿಷ್ಠೆಗೆ ಮಾಧ್ಯಮಗಳು ಪ್ರಾಧಾನ್ಯ ನೀಡುವ ಪ್ರಯತ್ನ ನಡೆಯಬೇಕಾಗಿದೆ. ಅದರ ಬದಲು ಇಲ್ಲಿನ ಮಾಧ್ಯಮಗಳು ಬರೇ ರಾಜಕೀಯಕ್ಕೆ ಒತ್ತುನೀಡಿ ಕಾಲಹರಣ ಮಾಡುವುದು ಸರಿಯಲ್ಲ.  ಬದಲಾಗಿ ಪ್ರಗತಿಪರ ಚಿಂತನೆಗಳಿಗೆ ಮಾಧ್ಯಮ ಗಳು ಸ್ಪಂದಿಸಿದಾಗ ತಲ್ಲಣಗಳು ದೂರವಾಗಲಿದೆ. ಪತ್ರಕರ್ತರ‌ು ವಚನಬದ್ಧತೆ ಮೈಗೂಡಿಸಿ ಕೊಂಡಾಗ ತಲ್ಲಣಮುಕ್ತತೆ ಸಾಧ್ಯವಾಗಬಹುದು. ಇಂದಿನ ಪತ್ರಕರ್ತರಲ್ಲಿ ಅಧ್ಯಯನದ ಕೊರತೆ ಇದೆ. ಕನಿಷ್ಠ ಸಾಮಾನ್ಯ  ಜ್ಞಾನದ ಅರಿವು ಪತ್ರಕರ್ತರಲ್ಲಿದ್ದಾಗ ಫಲಪ್ರದ ವರದಿಗಳ ಮುಖೇನ ಸಮಾಜವನ್ನು ಕಟ್ಟಲು ಸಾಧ್ಯ. ಪರಿಶ್ರಮ ತಾಳ್ಮೆ, ಅಧ್ಯಯನ ಇಲ್ಲದ ಪತ್ರಕರ್ತರಿಂದ ಏನೂ ಅಪೇಕ್ಷೆಪಡುವಂತಿಲ್ಲ ಮಾಧ್ಯಮ ಗಳು ಕೆರಳಿಸುವ ಅಲ್ಲ, ಅರಳಿಸುವ ಕೆಲಸ ಮಾಡಿಬಲಿಷ್ಠ ರಾಷ್ಟ್ರ ನಿರ್ಮಾಣದ ಅಡಿಪಾಯ ಗಳಾಗಬೇಕು ಎಂದು ನುಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಲ್ಲಣವಿಲ್ಲದ ಜೀವನ ಅಸಾಧ್ಯ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ತಲ್ಲಣಗಳ ಅಗತ್ಯ ಅನಿವಾರ್ಯವಾಗಿದೆ. ಬೃಹತ್‌ ಮಾಧ್ಯಮಗಳು ವ್ಯಾಪಾರೀಕರಣದ ದೃಷ್ಟಿ ಯಿಂದ ವೈಭವೀಕರಿಸುತ್ತಲೇ ಇದ್ದರೂ ಸಣ್ಣಪತ್ರಿಕೆಗಳೇ ಇವತ್ತು ನಿಯತ್ತು ಉಳಿಸಿ ಸಮಾಜ ಬೆಳೆಸುತ್ತಿರುವುದಂತು ಸತ್ಯವಾಗಿದೆ ಎನ್ನುವ ಅಭಿಮಾನ ನನ್ನಲ್ಲಿದೆ.  ಪತ್ರಕರ್ತರು ಎಡಬಲ ಪಂಥೀಯ ವಿಚಾರಕ್ಕಿಂತ ಪಲಾಯನಾವಾದಿಗಳಾಗಬಾರದು. ನಾವೇ ಎನ್ನುವುದರಿಂದ ಮುಕ್ತರಾಗಬೇಕು. ಬದ್ಧತೆ ಕೂಡ ಇಂದಿನ ತಲ್ಲಣವಾಗಿವೆ. ಆದ್ದರಿಂದ ಬದಲಾವಣೆಯ ಘಟ್ಟದಲ್ಲಿ ಮಾಧ್ಯ ಮಗಳು ಶೂನ್ಯದತ್ತ ಸಂಚರಿಸುತ್ತಿವೆ ಎಂದರು.
ಡಾ| ಸದಾನಂದ ಪೆರ್ಲ ಅವರನ್ನು ಡಾ| ಜಿ. ಎನ್‌. ಉಪಾಧ್ಯ ಅವರು ಶಾಲು ಹೊದೆಸಿ, ಸ್ವರ್ಣ ಪದಕವನ್ನಿತ್ತು ಕನ್ನಡಿಗರ ಪರವಾಗಿ ಗೌರವಿಸಿ ಅಭಿವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಂಘಟಕ ಎಚ್‌. ಬಿ. ಎಲ್‌. ರಾವ್‌, ಪತ್ರಕರ್ತರ ಸಂಘದ ಸಲಹಾ ಸಮಿತಿ ಸದಸ್ಯೆ ಡಾ| ಸುನೀತಾ ಎಂ. ಶೆಟ್ಟಿ, ಅನಿತಾ ಪೂಜಾರಿ ತಾಕೋಡೆ, ಜಯರಾಮ ಎಚ್‌. ಪೂಜಾರಿ, ಕನ್ನಡ ವಿಭಾಗದ ರಮಾ ಉಡುಪ, ಮಧುಸೂದನ ರಾವ್‌, ಶಿವರಾಜ್‌ ಕೆ. ಎಸ್‌., ಸುರೇಖಾ ಸುಂದರೇಶ್‌ ದೇವಾಡಿಗ, ಯಜ್ಞನಾರಾಯಣ, ಕುಮುದಾ ಆಳ್ವ, ಗಣಪತಿ ಕೆ. ಮೊಗವೀರ, ಶೈಲಜಾ ಹೆಗಡೆ, ಹೇಮಾ ಸದಾನಂದ್‌ ಅಮೀನ್‌,  ಅನಿತಾ ಎಸ್‌. ಶೆಟ್ಟಿ, ಗೀತಾ ಆರ್‌. ಎಸ್‌. ಮತ್ತಿತರರು ಉಪಸ್ಥಿತರಿದ್ದು  ಸಂವಾದದಲ್ಲಿ ಪಾಲ್ಗೊಂಡರು.
ಮುಂಬಯಿ ಆಕಾಶವಾಣಿ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಾಹಕಿ ಸುಶೀಲಾ ಎಸ್‌. ದೇವಾಡಿಗ ಸ್ವಾಗತಗೀತೆ ಹಾಡಿದರು. ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್‌ ಬಂಟ್ವಾಳ್‌ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಕಾರ್ಯಕ್ರಮ  ನಿರ್ವಹಿಸಿದರು. ಪತ್ರಕರ್ತರ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಎಂ. ಮೂಡಿಗೆರೆ ವಂದಿಸಿದರು.

ಪ್ರಚಾರದಲ್ಲಿರುವ ಜನರೇ ಬಹಳ ತಲ್ಲಣದಲ್ಲಿ ಇದ್ದಾರೆ. ಇವತ್ತಿನ ಮಾನವ ಜೀವನವೇ ತಲ್ಲಣದಾಯಕವಾಗಿದ್ದು, ತಲ್ಲಣವಿಲ್ಲದ ಜನಜೀವನ ಶೂನ್ಯವಾಗಿರುತ್ತದೆ. ಸಂಶೋಧಕರು ಹುಡುಕಾಡಿ ಕಲೆ ಹಾಕುತ್ತಾ ಶೋಧನೆ ಮಾಡಬೇಕೇ ಹೊರತು ಮತ್ತೂಬ್ಬರನ್ನು ಅನುಕರಿಸಿ  ಸಂಶೋಧನೆ ಮಾಡಕೂಡದು. ಕಾಡಿನ ಮರದಂತಿದ್ದು ವಸ್ತುನಿಷ್ಠೆ, ಭಿನ್ನತೆಗಳ ಬಗ್ಗೆ ಅರಿವು ಹೊಂದುವ ಅಗತ್ಯ ಸಂಶೋಧಕರಿಗಿದೆ. ಆಳವಾದ ಶೋಧನೆಯಿಂದ ಸತ್ಯವೂ, ಸತ್ಯದಿಂದ ಸಂತೋಷವೂ, ಸಂತೋಷದಿಂದ ಸಂಶೋಧನಾ ಫಲಪ್ರದವಾದಾಗ ಆತ್ಮ ಸಂತೋಷವಾಗುವುದು. ಇಂತಹ ಸಂಶೋಧನೆಗಳೇ ಅಮೂಲ್ಯವಾಗಿರುತ್ತದೆ 
 – ಬಾಬು ಶಿವ ಪೂಜಾರಿ (ಸಂಪಾದಕರು: ಗುರುತು ಮಾಸಿಕ).

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕನ್ನಡ ವಿಭಾಗದ ಶೈಕ್ಷಣಿಕ ಪಾಲುದಾರರು ಇದ್ದಂತೆ. ಬಹುಜನ ಹಿತಾಯ ಬಹುಜನ ಸುಖಾಯ ಎನ್ನುವ ಆಕಾಶವಾಣಿಯ ಧ್ಯೇಯವಾಕ್ಯದಂತೆ ನಿಜಾರ್ಥದ ಪತ್ರಕರ್ತರಾಗಿ ಶ್ರಮಿಸುವ ಡಾ| ಪೆರ್ಲರ ಸೇವೆ ಅನುಕರಣೀಯ. ಸದ್ಯ ಆತಂಕದ ಅರಿವು ಮೂಡಿಸುವ ಸಮೂಹ ಮಾಧ್ಯಮಗಳು ಎತ್ತ ಸಾಗುತ್ತಿವೆ ಎನ್ನುವುದೇ ಇಂದಿನ ಪ್ರಶ್ನೆಯಾಗಿ ಕಾಡುತ್ತಿದೆ. ಇದರ ಮಧ್ಯೆ ಇಂತಹ ಒಂದು ಕಾರ್ಯಕ್ರಮ ಪತ್ರಿಕೋದ್ಯಮ ಮತ್ತು ಸಮಾಜದ ಸೌಹಾರ್ದ ವಾತಾವರಣ ಬೆಳೆಸುವಲ್ಲಿ ಫಲದಾಯಕವಾಗ ಬಲ್ಲದು 
    – ಡಾ| ಜಿ. ಎನ್‌. ಉಪಾಧ್ಯ (ಮುಖ್ಯಸœರು: ಕನ್ನಡ ವಿಭಾಗ ಮುಂಬಯಿ ವಿವಿ).   

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.