ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ: ಐದು ಕೃತಿಗಳ ಬಿಡುಗಡೆ
Team Udayavani, Jan 16, 2018, 1:41 PM IST
ಮುಂಬಯಿ: ಸಾಹಿತಿಗೆ ಇರುವಂತಹ ತುಡಿತವೇ ಓರ್ವ ಕಲಾವಿದನಿಗೂ ಇರುತ್ತದೆ. ಕನ್ನಡ ನುಡಿ-ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಮಾತ್ರ ಓರ್ವ ವ್ಯಕ್ತಿ ಪರಿಪೂರ್ಣ ಕನ್ನಡಿಗನಾಗಲು ಸಾಧ್ಯವಿದೆ. ಕಿರಿಯ ಬರಹಗಾರರನ್ನು ನಮ್ಮ ಸಮಾನವಾಗಿ ನೋಡಿಕೊಳ್ಳಬೇಕು. ಯುವ ಪ್ರತಿಭೆಗಳನ್ನು ಗುರುತಿಸಿ ಗೌರವ ಮಾಡೋದು ಅದಕ್ಕಿಂತ ಉತ್ತಮವಾದ ಕೆಲಸವಿಲ್ಲ. ಡಾ| ಜಿ. ಎನ್. ಉಪಾಧ್ಯ ಅವರ ನೇತೃತ್ವದಲ್ಲಿ ಕನ್ನಡ ವಿಭಾಗವು ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದು, ಓದುಗರಿಗೂ ಅವಕಾಶ ಕೊಟ್ಟಿದ್ದಾರೆ ಎಂದು ಪ್ರಸಿದ್ಧ ರಂಗ ಕಲಾವಿದ ಮೋಹನ್ ಮಾರ್ನಾಡ್ ಅವರು ತಿಳಿಸಿದರು.
ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಜ. 13ರಂದು ಅಪ ರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಅಲ್ಲಿನ ಜೆ. ಪಿ. ನಾಯಕ್ ಸಭಾಗೃಹದಲ್ಲಿ ಆಯೋಜಿಸಿದ್ದ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ, ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ನಡೆಯುವಷ್ಟು ಕನ್ನಡಪರ ಕಾರ್ಯಕ್ರಮಗಳು ಒಳನಾಡಿನಲ್ಲೂ ನಡೆಯಲು ಸಾಧ್ಯವಿಲ್ಲ. ಅನ್ಯಭಾಷಿಗರನ್ನು ಕನ್ನಡಿಗರನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಇಲ್ಲಿನ ಕನ್ನಡ ವಿಭಾಗಕ್ಕೆ ಸಲ್ಲುತ್ತದೆ ಎಂದು ನುಡಿದು ಕೃತಿಕಾರರನ್ನು ಅಭಿನಂದಿಸಿ ಶುಭಹಾರೈಸಿದರು.
ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ| ಜನಾರ್ದನ ಭಟ್, ಕನ್ನಡ ಸೇನಾನಿ ಎಸ್. ಕೆ. ಸುಂದರ್ ಉಪಸ್ಥಿತರಿದ್ದರು.
ರಂಗಕರ್ಮಿ ಮೋಹನ್ ಮಾರ್ನಾಡ್ ಮತ್ತು ಎಸ್. ಕೆ. ಸುಂದರ್ ಅವರು ಡಾ| ಜಿ. ಡಿ. ಜೋಶಿ ಅವರ “ಸಮಗ್ರ ಕನ್ನಡದ ಕಣ್ಮನಗಳು’, ಡಾ| ಜಿ. ಎನ್. ಉಪಾಧ್ಯ ಅವರ “ಏಲೇಶ್ವರ ಕೇತಯ್ಯ’ ಹಾಗೂ ರಾಜೀವ ನಾಯಕ ಅವರ “ಲಾಸ್ಟ್ ಲೋಕಲ್ ಮತ್ತು ಲೋಸ್ಟ್ ಲವ್’ ಕಥಾ ಸಂಕಲನ, ಡಾ| ವಿಶ್ವನಾಥ ಕಾರ್ನಾಡ್ ಅವರ “ಪ್ರಸಿದ್ಧ ಅನುವಾದಕ ಡಾ| ವಾಸು ಬಿ. ಪುತ್ರನ್’ ಸೇರಿದಂತೆ ಐದು ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿದರು.
ಡಾ| ವಿಶ್ವನಾಥ ಕಾರ್ನಾಡ್ ಮಾತನಾಡಿ, ವಾಸು ಪುತ್ರನ್ ಓರ್ವ ಅನುವಾದಕನ್ನಾಗಿ ವಾಸು ಪುತ್ರನ್ ಅವರು ಎದುರಿಸಿದ ಸಮಸ್ಯೆಗಳು, ಸಂಸಾರ ತಾಪತ್ರಯಗಳನ್ನು ತಿಳಿಸಿ ಪುತ್ರನ್‌ರ ಬದುಕಿನ ನೋವಿನ ಮುಖಗಳನ್ನು ತೆರೆದಿಟ್ಟರು.
ಅನುವಾದಕರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಯಾವುದೇ ಸ್ಥಾನಮಾನ ಸೌಲಭ್ಯವಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ವೈ. ವಿ. ಮಧುಸೂದನ್ ರಾವ್, ಡಾ| ದಾûಾಯಣಿ ಯಡವಳ್ಳಿ, ಡಾ| ಈಶ್ವರ ಅಲೆವೂರು ಮತ್ತು ಡಾ| ಪೂರ್ಣಿಮಾ ಎಸ್. ಶೆಟ್ಟಿ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು. ಕೃತಿಕಾರರು ಸಂದಭೋìಚಿತವಾಗಿ ತಮ್ಮ ಕೃತಿಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮೋಹನ್ ಮಾರ್ನಾಡ್, ರಾಜೀವ ನಾಯಕ, ಅಹಲ್ಯಾ ಬಳ್ಳಾಲ್ ಮತ್ತು ಅವಿನಾಶ್ ಕಾಮತ್ ಅವರು “ಅಷಾಢದ ಒಂದು ದಿನ’ ವಾಚನ ನಾಟಕ ಪ್ರಸ್ತುತ ಪಡಿಸಿದರು.
ಸುಶೀಲಾ ಎಸ್. ದೇವಾಡಿಗ ಪ್ರಾರ್ಥನೆಗೈದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಶ್ಯಾಮಲಾ ಪ್ರಕಾಶ್ ಅವರು ಕೃತಜ್ಞತೆ ಸಲ್ಲಿಸಿದರು. ವಿಭಾಗದ ವಿದ್ಯಾರ್ಥಿಗಳು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರ-ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.