ಕನ್ನಡ ಪತ್ರಕರ್ತರ ಸಂಘ ಮಹಾರಾಷ್ಟ್ರ:ಯಕ್ಷಗಾನ ಪ್ರದರ್ಶನಕ್ಕೆ ಮುಹೂರ್ತ
Team Udayavani, Jun 26, 2018, 12:22 PM IST
ಮುಂಬಯಿ: ಪತ್ರ ಕರ್ತರು ವಿಶೇಷವಾಗಿ ಭಾಷೆ, ಸಂಸ್ಕೃತಿ, ಕಲೆಯ ಉಳಿವಿಗಾಗಿ ಬಹಳಷ್ಟು ಶ್ರಮ ವ್ಯಯಿಸುತ್ತಿದ್ದಾರೆ. ಅದರಲ್ಲೂ ಮುಂಬಯಿಯ ಕನ್ನಡಿಗ ಪತ್ರಕರ್ತರು ಹಗಳಿರುಲು ಎನ್ನದೆ ಯಾವುದೇ ಅಪೇಕ್ಷೆಯನ್ನಿರಿಸದೆ ಕಲಾ ಕಾರ್ಯಕ್ರಮಗಳಲ್ಲಿ ಭಾಗ ವಹಿಸಿ ಪ್ರಚಾರದ ಮೂಲಕ ಕಲಾ ರಾಧನೆಗೈದು ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಇಂತಹ ಪತ್ರಕರ್ತರು ಪ್ರತಿಭಾನ್ವಿತ ಹುಟ್ಟು ಕಲಾವಿದರೇ ಸರಿ. ಆದರೆ ಸಮಯದಿಂದ ವಂಚಿತರಾಗಿ ತಮ್ಮ ಕಲಾ ಪ್ರತಿಭಾ ಪ್ರದರ್ಶನದಿಂದ ದೂರ ಉಳಿದಿದ್ದಾರೆ. ಸದ್ಯ ಸಂಘದ ದಶಸಂಭ್ರಮದಲ್ಲಾದರೂ ಒಗ್ಗೂಡಿ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿರುವುದು ಅಭಿನಂದನೀಯ ಎಂದು ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಜೂ. 24ರಂದು ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವಿಕ್ರೋಲಿ ಪೂರ್ವ ಠಾಗೋರ್ ನಗರ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆದ ದಶಮಾನೋತ್ಸವ ಸಂಭ್ರಮ ದಲ್ಲಿರುವ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಲಾವಿದರಿಂದ ನಡೆಯಲಿರುವ ಮಹಿಷ ಮರ್ದಿನಿ ಯಕ್ಷಗಾನ ಪ್ರಸಂಗದ ತರಬೇತಿಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಕಳೆದೆರಡು ದಶಕಗಳಿಂದ ಮುಂಬಯಿ ಪತ್ರ ಕರ್ತರು ನನ್ನ ಕಲಾಸೇವೆಗೆ ಬಹಳಷ್ಟು ಸಹಕರಿಸುತ್ತಿದ್ದಾರೆ. ಅವರ ಈ ಸಣ್ಣ ಪ್ರಯತ್ನಕ್ಕೆ ನನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ. ಇದು ನನ್ನ ಪಾಲಿಗೆ ಒದಗಿ ಬಂದ ಸುವರ್ಣ ಅವಕಾಶವಾಗಿದ್ದು, ಯಾವುದೇ ರೀತಿಯ ಫಲಾಪೇಕ್ಷೆಯಿ ಲ್ಲದೆ ಸಹಕರಿಸುತ್ತೇನೆ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಮ್‌ಸುಂದರ್ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಪೇಜಾವರ, ಕೋಶಾಧಿಕಾರಿ ಉಮೇಶ್ ಪೂಜಾರಿ, ವಿಕ್ರೋಲಿ ಬಂಟ್ಸ್ ಅಧ್ಯಕ್ಷ ಗಣೇಶ್ ಶೆಟ್ಟಿ, ಕೋಶಾಧಿಕಾರಿ ಯುಗಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ ಅವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರುಗಳಾದ ನ್ಯಾಯವಾದಿ ಗುಣಕರ್ ಡಿ. ಶೆಟ್ಟಿ, ಸರಳಾ ಬಿ. ಶೆಟ್ಟಿ, ನಂದಳಿಕೆ ಶಾಂತಾ ಎನ್. ಶೆಟ್ಟಿ, ಮೋಹನದಾಸ್ ರೈ ನೆರೂಲ್, ಪತ್ರಕರ್ತರ ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ. ಪೂಜಾರಿ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ವಿಶ್ವನಾಥ್ ಅಮೀನ್ ನಿಡ್ಡೋಡಿ, ಪತ್ರಕರ್ತ ರಮೇಶ್ ಬಿರ್ತಿ, ವಿಶೇಷ ಆಮಂತ್ರಿತ ಸದಸ್ಯ ಸುರೇಶ್ ಶೆಟ್ಟಿ ಯೆಯ್ನಾಡಿ ಸೇರಿದಂತೆ ಸದಸ್ಯರು ಹೆಚ್ಚಿನ ಸಂಖ್ಯೆ ಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ಪ್ರಸಂಗದ ಸಿದ್ಧತೆ ನಡೆಸಿ ಬಾಲಕೃಷ್ಣ ಶೆಟ್ಟಿ ಅವರು ಕಲಾವಿದ ಸದಸ್ಯರುಗಳಿಗೆ ಪಾತ್ರ ಗಳನ್ನು ನೀಡಿದರು. ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ ದರು. ಜತೆ ಕಾರ್ಯದರ್ಶಿ ಹಾಗೂ ದಶಸಂಭ್ರಮ ಸಾಂಸ್ಕೃತಿಕ ಸಂಚಾಲಕ ಬಾಬು ಕೆ. ಬೆಳ್ಚಡ ವಂದಿಸಿದರು.
ಜಾಗತಿಕವಾಗಿ ಪತ್ರಕರ್ತರ ಕೊಡುಗೆ ಅಮೂಲ್ಯವಾದುದು. ಭೌಗೋಳಿಕ ವಿಚಾರಗಳನ್ನು ಜನರತ್ತ ಮನವೊಲಿಸುವಲ್ಲಿ ಶ್ರಮಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾದುದು ಮಾಧ್ಯಮಗಳ ಮೂಲಕ ಆಚಾರ-ವಿಚಾರಗಳನ್ನು ವಿನಿ ಯೋಗಿಸಿಕೊಳ್ಳುವ ಪತ್ರಕರ್ತರ ಸಾಂಘಿಕತೆ ಅವಶ್ಯವಾಗಿದೆ. ನಮ್ಮ ಪತ್ರಕರ್ತರು ದಶ ಸಂಭ್ರಮದಲ್ಲಿದ್ದು ಅವರೆಲ್ಲರ ಸೇವೆ ಫಲ ಪ್ರದವಾಗಲಿ. ಸಂಘದ ವತಿ ಯಿಂದ ನಿಮ್ಮ ಈ ಕಲಾ ಸೇವೆಗೆ ಪ್ರೋತ್ಸಾಹ, ಸಹಕಾರ ಸದಾಯಿದೆ.
-ಶ್ಯಾಮ್‌ಸುಂದರ್ ಶೆಟ್ಟಿ, ಅಧ್ಯಕ್ಷರು, ವಿಕ್ರೋಲಿ ಕನ್ನಡ ಸಂಘ
ಸಂಘವು 10 ವರ್ಷ ಪೂರೈಸುತ್ತಿದ್ದು ಇದರ ದಶಮಾನೋತ್ಸವವನ್ನು ಸಾಂಕೇ ತಿಕವಾಗಿ ಆಚರಣೆ ಮಾಡುವ ನಿರ್ಣಯ ಮಾಡಿದ್ದೇವೆ. ಅದಕ್ಕಾಗಿ ಮನೋ ರಂಜನೆ, ನೃತ್ಯ, ಯಕ್ಷಗಾನ ಇತ್ಯಾದಿಗಳ ಸಮ್ಮಿಲನದೊಂದಿಗೆ ದಶ ಸಂಭ್ರಮಕ್ಕೆ ಸಿದ್ಧರಾಗಿದ್ದೇವೆ. ಕಲಾ ಉಳಿವಿಗಾಗಿ ಅಜೆಕಾರು ಬಾಲಕೃಷ್ಣರು ಸ್ವಾರ್ಥ ಕಂಡವರಲ್ಲ. ಹಣವನ್ನೂ ಬಯಸಿದವರಲ್ಲ. ಗಳಿಕೆಯನ್ನೇ ಆಯ್ಕೆ ಮಾಡಿದ್ದರೆ ಇವರು ದೊಡ್ಡ ಯಕ್ಷಗಾನ ಅಕಾಡೆಮಿಯನ್ನೇ ಹುಟ್ಟುಹಾಕಬಹುದಿತ್ತು. ಅದನ್ನೆಲ್ಲಾ ಬದಿಗೊತ್ತಿ ಅವರು ಸಾವಿರಾರು ಕಲಾವಿದರನ್ನು ರೂಪಿಸುತ್ತಿರುವುದು ಸ್ತುತ್ಯರ್ಹ. ಇಂತಹ ಕಲಾಪೋಷಕರಿಂದ ಪತ್ರಕರ್ತ ಕಲಾವಿದರು ಯಕ್ಷಗಾನ ತರಬೇತಿ ಪಡೆಯುತ್ತಿರುವುದು ಕಲಾ ಶ್ರೀಮಂತಿಕೆಯಾಗಿದೆ.
-ಚಂದ್ರಶೇಖರ ಪಾಲೆತ್ತಾಡಿ, ಅಧ್ಯಕ್ಷರು, ಕನ್ನಡಿಗ ಪತ್ರಕರ್ತರ ಸಂಘ
ಚಿತ್ರ-ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.