ಪ್ರಧಾನಿ ಮೋದಿಯವರ ದೇಶ ಪ್ರೇಮ ನಮಗೆ ಆದರ್ಶವಾಗಲಿ: ಸಂಸದ ಗೋಪಾಲ್ ಶೆಟ್ಟಿ
Team Udayavani, Nov 3, 2021, 11:42 AM IST
ಮುಂಬಯಿ: ಮಾತೃಭಾಷೆಯ ಶಿಕ್ಷಣದೊಂದಿಗೆ ಮಕ್ಕಳನ್ನು ಬೆಳೆಸಿ, ಪ್ರಾದೇಶಿಕ ಭಾಷೆಯನ್ನು ಬೆಳೆಸಬೇಕು. ಜಾಗತೀಕರಣದ ವ್ಯವಹಾರಕ್ಕೆ ಆಂಗ್ಲ ಮಾಧ್ಯಮವನ್ನು ಬಳಸಿ ನಮ್ಮ ಪಾರಂಪಾರಿಕ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸಬೇಕು. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳಲ್ಲಿ ರಾಷ್ಟ್ರ ಭಾಷೆ ಹಿಂದಿಯನ್ನು ಬಳಸಿ ರಾಷ್ಟ್ರೀಯತೆಯನ್ನು ಬೆಳೆಸಿ¨ªಾರೆ. ಅವರ ದೇಶ ಪ್ರೇಮ ನಮಗೆ ಆದರ್ಶವಾಗಲಿ ಎಂದು ಉತ್ತರ ಮುಂಬಯಿ ಸಂಸದ ಗೋಪಾಲ್ ಶೆಟ್ಟಿ ತಿಳಿಸಿದರು.
ಅ. 31ರಂದು ಅಪರಾಹ್ನ ಬೊರಿವಲಿ ಪೂರ್ವದ, ಫ್ಲೈಓವರ್, ರಾಜೇಂದ್ರ ನಗರ ಸಮೀಪದಲ್ಲಿರುವ ಗಾಂವ್ಕರ್ ಸಭಾಗೃಹದಲ್ಲಿ ನಡೆದ ಸೆಲ್ಯೂಟ್ ತಿರಂಗ ಕರ್ನಾಟಕ ಮುಂಬಯಿ ಘಟಕದ 49ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದ ಗಡಿ ರಕ್ಷಣೆಯ ಯೋಧರ ಬಗ್ಗೆ ತಮಗಿರುವ ಕಾಳಜಿ ನಿಜಕ್ಕೂ ಶ್ಲಾಘನೀಯ. ಸಕಲವನ್ನು ತೊರೆದು, ಹಬ್ಬ ಹರಿದಿನಗಳಿಂದ ದೂರವಿದ್ದು ಜೀವವನ್ನೇ ಪಣಕ್ಕಿಡುವ ಯೋಧರಿಂದಾಗಿ ನಾವಿಂದು ಸುರಕ್ಷಿತರಾಗಿದ್ದೇವೆ. ಅವರ ಬಲಿದಾನವನ್ನು ಸ್ಮರಿಸಿ, ಗೌರವಿಸುವ ಸೆಲ್ಯೂಟ್ ತಿರಂಗದ ಸಾಧನೆ ಹಲವಾರು ವೈಶಿಷ್ಟ್ಯಗಳ ಶ್ರೇಷ್ಠ ರಾಷ್ಟ್ರೀಯ ಸಂಸ್ಥೆಯಾಗಿದೆ ಎಂದರು.
ಇದೇ ಸಂದರ್ಭ ನಿವೃತ್ತ ಸಿಐಡಿ ಇನ್ಸ್‌ಪೆಕ್ಟರ್ ಎಂ. ಸಿ. ಹೆಮ್ಮಾಡಿ, ಸಿಪಾಯಿ ರಾಮಚಂದ್ರ ಜಿ. ಪಿಸೈಕರ್, ಸಾಮಾಜಿಕ ಕಾರ್ಯಕರ್ತ ಕಿಶೋರ್ ಸಿ. ಉನ್ಹೆಲ್ಕರ್, ಮಿಲಿಟರಿ ಎಂಜಿನಿಯರ್ ವಿಭಾಗದ ಉಪ ಪ್ರಬಂಧಕ ಕಾಶಿಲಾ°ಥ್ ಪಿ. ಗುಪ್ತ, ನಿವೃತ್ತ ಯೋಧ ಪ್ರಕಾಶ್ ಭಾಜೀರಾವ್ ಗೋಸಲ್ಕಾರ್ ಅವರನ್ನು ಗಣ್ಯರು ಶಾಲು ಹೊದೆಸಿ, ಸ್ಮರಣಿಕೆಯೊಂದಿಗೆ ಸಮ್ಮಾನಿಸಿದರು.
ಸೆಲ್ಯೂಟ್ ತಿರಂಗದ ಕರ್ನಾಟಕ ಮುಂಬಯಿ ಘಟಕದ ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸೆಲ್ಯೂಟ್ ತಿರಂಗದ ಮಹಾರಾಷ್ಟ್ರ ಕರ್ನಾಟಕ ಮುಂಬಯಿ ಘಟಕದ ಉಪಾಧ್ಯಕ್ಷರಾದ ಯಶವಂತ ಪೂಜಾರಿ ಮತ್ತು ಸಂತೋಷ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಎಸ್. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾವತಿ ಜೆ. ಗುಜರನ್, ಕಾರ್ಯದರ್ಶಿ ಜಯಂತಿ ಆರ್. ಮೊಲಿ ಮತ್ತು ವಾಣಿ ಶೆಟ್ಟಿ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಘಟಕದ ಗೌರವ ಕಾರ್ಯ ದರ್ಶಿ ಹರೀಶ್ ಮೈಂದನ್, ಮುಂಬಯಿ ಘಟಕದ ಕಾರ್ಯದರ್ಶಿ ಸುಧಾಕರ ಎಲ್ಲೂರು ಮತ್ತು ಕೃಷ್ಣರಾಜ್ ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ರಘು ಮೊಲಿ, ಪ್ರಭಾವತಿ ದೇವಾಡಿಗ, ಪೂರ್ಣಿಮಾ ದೇವಾಡಿಗ, ದಯಾನಂದ ದೇವಾಡಿಗ, ಗಣೇಶ್ ಶೇರಿಗಾರ್, ತಿಮ್ಮ ದೇವಾಡಿಗ ಮೊದಲಾದವರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯ, ನಾಡಗೀತೆ, ಜಾನಪದ ಹಾಡು ಹಾಗೂ ದೇಶ ಭಕ್ತಿ ಗೀತೆ, ಸಮೂಹ ನೃತ್ಯ ಪ್ರದರ್ಶನಗೊಂಡಿತು.
ಜಾತ್ಯತೀತವಾಗಿ, ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ರಾಷ್ಟ್ರವ್ಯಾಪ್ತಿ ಸಂಘಟನೆ ಸೆಲ್ಯೂಟ್ ತಿರಂಗವಾಗಿದೆ. ದೇಶದ ಅಭಿವೃದ್ಧಿಗೆ ಕೈಜೋಡಿಸುವ ಸಾಧಕರಿಗೆ ಪುರಸ್ಕಾರ, ಅಶಕ್ತರಿಗೆ ನೆರವು, ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಚಿಂತನೆ ನಮ್ಮದಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು.-ರಾಮಣ್ಣ ಬಿ. ದೇವಾಡಿಗ ಅಧ್ಯಕ್ಷರು, ಸೆಲ್ಯೂಟ್ ತಿರಂಗ ಕರ್ನಾಟಕ ಮುಂಬಯಿ ಘಟಕ
ರಾಷ್ಟ್ರೀಯತೆಯ ಮನೋಭಾವ ತುಂಬುವ ಸ್ವಾತಂತ್ರ್ಯಹೋರಾಟಗಾರರ ಅರಿವು ಮೂಡಿಸುವ ಸರಕಾರೇತರ ರಾಷ್ಟ್ರೀಯ ಸಂಸ್ಥೆ ಸೆಲ್ಯೂಟ್ ತಿರಂಗವಾಗಿದೆ. ನಾಲ್ಕು ವರ್ಷದ ನಮ್ಮ ಈ ಸಂಸ್ಥೆ ದೇಶದ 23 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗಡಿ ರಕ್ಷಣೆ ಮಾಡುವವರನ್ನು, ನಿಸ್ವಾರ್ಥ ಸೇವಾಕರ್ತರಿಗೆ ಸ್ಫೂರ್ತಿ ನೀಡುವ ಸಂಸ್ಥೆ ನಮ್ಮದಾಗಿದೆ.-ರಾಜೇಶ್ ರಾಯಿ ಅಧ್ಯಕ್ಷರು, ಸೆಲ್ಯೂಟ್ ತಿರಂಗ ಮಹಾರಾಷ್ಟ್ರ
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.