ಕನ್ನಡ ಸಂಘ ಹಾಗೂ ಬಂಟರ ಸಂಘ ಪುಣೆ: ಡಾ| ಭಟ್‌ರಿಗೆ ಸಮ್ಮಾನ
Team Udayavani, Jul 6, 2018, 3:56 PM IST
ಪುಣೆ: ಶತ ಶತಮಾನಗಳಿಂದ ವಿಶ್ವಕ್ಕೆ ಮಾದರಿಯಾಗಿ ಗುರುತಿಸಿಕೊಂಡ ಹಿಂದೂ ಸಮಾಜ ಇಂದು ಜಾಗತೀಕರಣದ ಭರಾಟೆ ಯಲ್ಲಿ ವಿದೇಶೀಯ ವ್ಯಾಮೋಹಕ್ಕೊಳಗಾಗಿ, ಸಮಾಜಘಾತಕ ಶಕ್ತಿಗಳ ಉಪಟಳದಿಂದಾಗಿ, ಯಾರದೋ ಸಂಸ್ಕೃತಿಯ ದಾಸರಾಗಿ ಭಾರ ತೀಯ ನಮ್ಮ ಮೌಲ್ಯಯುತ ಸಂಸ್ಕೃತಿ, ಆಚಾರ ವಿಚಾರಗಳು, ಹಿಂದೂ ಧಾರ್ಮಿಕ ನಂಬಿಕೆಗಳು, ನಮ್ಮತನವನ್ನು ಕಳೆದುಕೊಂಡು ತಲೆತಗ್ಗಿಸಿಕೊಂಡು ಬದುಕುವ ಆತಂಕ ಎದುರಾಗಿರುವುದು ಇಂದಿನ ದುರಂತ. ಜಗತ್ತಿನಲ್ಲಿಯೇ ಶ್ರೇಷ್ಠ ಜೀವನಪದ್ಧತಿ ಹೊಂದಿದ ದೇಶವೆಂದರೆ ಅದು ನಮ್ಮ ಭಾರತ. ಎಷ್ಟೋ ಋಷಿ ಮುನಿಗಳು,ಸಾಧು ಸಂತರ ತ್ಯಾಗ ಸಮರ್ಪಣೆಯಿಂದ ಭಾರತ ದೇಶ ಸಮೃದ್ಧವಾಗಿದೆ. ಹಿಂದೂ ಸಮಾಜವು ಸಹಿಷ್ಣುತೆಯೊಂದಿಗೆ ಯಾ ರಿಗೂ ಅನ್ಯಾಯ ಬಗೆಯದೆ ಪ್ರೀತಿ, ಪ್ರೇಮದಿಂದ ಬದುಕುತ್ತಿದ್ದರೂ ಕೂಡಾ ಹಿಂದೂ ಧರ್ಮದ ಮೇಲೆ ನಿರಂತರವಾಗಿ ಆಕ್ರಮಣವಾಗುತ್ತಿರುವುದನ್ನು ನಾವು ಕಾಣ ಬಹುದಾಗಿದೆ. ಇಂತಹ ಸಮಾಜವನ್ನು ಒಡೆಯುವ ಷಡ್ಯಂತ್ರಗಳ ವಿರುದ್ಧ ಹೋರಾ ಡಬೇಕಾದರೆ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ಹೊಣೆಗಾರಿಕೆ ನಮ್ಮೆಲ್ಲರಿಗಿದೆ. ಭಾರತೀಯತೆಯ ಸಂಸ್ಕೃತಿಯೇ ನಮ್ಮ ಜೀವನದ ಉಸಿರಾಗಬೇಕು ಎಂದು ಕರಾವಳಿ ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಮುಂದಾಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖರಾಗಿರುವ ಡಾ| ಕಲ್ಲಡ್ಕ ಪ್ರಭಾಕರ ಭಟ್ ನುಡಿದರು.
ಹಿರಿಯರನ್ನೂ ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದು
ಜು. 3 ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲಿನ ಸಭಾಂಗಣದಲ್ಲಿ ನಡೆದ ಪುಣೆ ಕನ್ನಡ ಸಂಘ ಹಾಗೂ ಪುಣೆ ಬಂಟರ ಸಂಘಗಳು ಜಂಟಿಯಾಗಿ ಹಮ್ಮಿಕೊಂಡ ಪುಣೆಯ ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರು ಮಾಡಿದ ಪುಣ್ಯ ಫಲದಿಂದಿಂದ ಹಿಂದೂಗಳಾಗಿ ಜನ್ಮ ಪಡೆದಿದ್ದೇವೆ. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಭೋಗದ ವಸ್ತುವಿನಂತೆ ಕಾಣದೆ ಪೂಜನೀಯ ಭಾವನೆ ಯಿಂದ ಕಾಣುವ, ಮಾತಾಪಿತರನ್ನು, ಗುರು ಹಿರಿಯರನ್ನೂ ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದಾಗಿದೆ. ನಮ್ಮ ಆಹಾರಪದ್ಧತಿ ಸಾತ್ವಿಕವಾಗಿದೆ. ನಮ್ಮ ದೇಶೀಯ ಗೋವುಗಳು ಪಾವಿತ್ರÂತೆಯನ್ನು ಹೊಂದಿವೆ. ನಮ್ಮ ದೇಶ ಸ್ವದೇಶೀ ನಿರ್ಮಿತ ದಾಖಲೆಯ ರಾಕೆಟ್‌ಗಳನ್ನು ಉಡ್ಡಯನ ಮಾಡಿ ಜಗತ್ತಿಗೆ ತನ್ನ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದೆ. ನಮ್ಮ ಯೋಗ ಪದ್ಧತಿಯನ್ನು ಇಂದು ವಿಶ್ವವೇ ಒಪ್ಪಿಕೊಂಡಿದೆ. ನಮ್ಮ ಧಾರ್ಮಿಕ ನಂಬಿಕೆಗಳು ಎಲ್ಲಕ್ಕಿಂತಲೂ ಶ್ರೇಷ್ಠತೆಯನ್ನು ಹೊಂದಿವೆ. ಇಂದು ವಿಜ್ಞಾನ ಎಷ್ಟೇ ಮುಂದುವರಿದರೂ ಎಷ್ಟೋ ವರ್ಷಗಳ ಹಿಂದಿನಿಂದಲೇ ನಮ್ಮಲ್ಲಿನ ಜ್ಯೋತಿಷ್ಯಪಂಡಿತರು ಮುಂದೆ ಬರುವಂತಹ ಗ್ರಹಣಗಳ ಕರಾರುವಾಕ್ಕಾದ ಲೆಕ್ಕಾಚಾರಗಳನ್ನೂ ಅವುಗಳ ಬಾಧ್ಯತೆಗಳನ್ನೂ ನಿಖರವಾಗಿ ತಿಳಿಸುವ ಶಕ್ತಿ ಹೊಂದಿ¨ªಾರೆ.
ರಾಜಕೀಯ ನಾಯಕರಿಂದ ದೇಶದ ಘನತೆಗೆ ಧಕ್ಕೆ
ಯಾವುದೇ ಧರ್ಮ, ಜಾತಿಗಳನ್ನು ದ್ವೇಷಿಸದೆ ಎಲ್ಲರನ್ನೂ ಅಪ್ಪಿಕೊಂಡು ಒಪ್ಪಿಕೊಂಡು ಬದುಕುವ ನಮ್ಮ ಸಮಾಜ ಇಂದು ಮತಾಂಧರಿಂದ ನಲುಗಿ ಹೋಗುತ್ತಿದ್ದು ಕೋಮುವಾದದ ಬಣ್ಣ ಹಚ್ಚಲಾಗುತ್ತಿದೆ. ಇಂದು ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಭದ್ರತೆ ಇಲ್ಲದಾಗಿದೆ. ಮತಾಂತರ, ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳು, ನಮ್ಮ ಧರ್ಮದ ಮೇಲೆ ನಂಬಿಕೆ ಇಲ್ಲದಂತಹ ರಾಜಕೀಯ ಶಕ್ತಿಗಳೂ ನಮ್ಮ ಸಂಸ್ಕೃತಿ, ಹಿಂದುತ್ವದ ಮೇಲೆ ದಾಳಿ ಮಾಡುತ್ತಿವೆ. ನಮ್ಮ ಶಿಕ್ಷಣ ವ್ಯವಸ್ಥೆಗಳೂ ವ್ಯಾಪಾ ರೀಕರಣಗೊಳ್ಳುತ್ತಿವೆ. ಕಳೆದ 66 ವರ್ಷಗಳಿಂದ ನಮ್ಮನ್ನಾಳಿದ ರಾಜಕೀಯ ನಾಯಕರು ದೇಶದ ಘನತೆಯನ್ನು ಕುಗ್ಗಿಸುವ ಕಾರ್ಯ ಮಾಡಿ¨ªಾರೆ. ದೇಶಕ್ಕೆ ಹಿಂದುತ್ವಕ್ಕೆ ಮಾರಕವಾದ ಶಕ್ತಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅಗತ್ಯ ತೆ ಎದುರಾಗಿದ್ದು ನಾವು ಅಜ್ಞಾನಿಗಳಾಗದೆ ನಮ್ಮ ಭಾಷೆ, ಪರಂಪರಾಗತ ಸಾಂಸ್ಕೃತಿಕ ಮೌಲ್ಯಗಳು, ಜೀವನಾದರ್ಶನಗಳು, ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಹಿಂದುತ್ವದ ತಳಹದಿಯಲ್ಲಿ ಹಿಂದೂ ಸಮಾಜವನ್ನು ಬಲಿಷ್ಠವಾಗಿಸಿ ಜಗತ್ತಿಗೆ ನಮ್ಮ ಶಕ್ತಿಯನ್ನು, ಮಹತ್ವವನ್ನು ಸಾರುವಂತಾಗಬೇಕು. ನಾವು ಪ್ರತಿಯೊಬ್ಬರೂ ನಮ್ಮ ಮನೆಯಿಂದಲೇ ಹಿಂದುತ್ವದ ಬಗ್ಗೆ ಅಭಿಮಾನ ಬೆಳೆಸಿಕೊಂಡು ವಿದೇಶೀಯ ಮೋಹವನ್ನು ತ್ಯಜಿಸಿ ಭಾರತೀಯ, ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಶ್ರೇಷ್ಠವಾದ ಭಾರತವನ್ನು ಕಟ್ಟುವ ಸಂಕಲ್ಪ ಮಾಡಬೇ ಕಾಗಿದೆ. ಪುಣೆಯಲ್ಲಿ ತುಳುಕನ್ನಡಿಗರು ಹೊರನಾ ಡಿನಲ್ಲಿದ್ದರೂ ಒಗ್ಗಟ್ಟಿನಿಂದ ಸೌಹಾರ್ದದಿಂದ ಬಾಳುತ್ತಾ ಜನ್ಮಭೂಮಿಯನ್ನೂ ಮರೆಯದೆ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಸಮಾಜ ಸೇವೆಯ ಮೂಲಕ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಮ್ಮಾನ
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಶಂಭು ಶೆಟ್ಟಿಯವರು ಉಪಸ್ಥಿತರಿದ್ದರು. ಡಾ| ಪ್ರಭಾಕರ್ ಭಟ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಮಾಧ್ಯಮ ಹೈಸ್ಕೂಲ್ ವಿದ್ಯಾರ್ಥಿನಿಯರು ಗಣೇಶ ವಂದನೆಯ ಪ್ರಾರ್ಥನೆಯನ್ನು ಹಾಡಿದರು. ಡಾ| ಭಟ್‌ರನ್ನು ವಿವಿಧ ಸಂಘ ಸಂಸ್ಥೆಗಳ ಪರವಾಗಿ ಶಾಲು ಹೊದೆಸಿ, ಪುಷ್ಪಗುತ್ಛ, ಗಣೇಶ ಮೂರ್ತಿಯನ್ನು ನೀಡಿ ಸಮ್ಮಾನಿಸಲಾಯಿತು. ಶಂಭು ಶೆಟ್ಟಿಯವರನ್ನೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಸತ್ಕರಿಸ ಲಾಯಿತು. ಕಾರ್ಯಕ್ರಮದಲ್ಲಿ ಪುಣೆ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸದಾ ನಂದ ಕೆ ಶೆಟ್ಟಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ, ಸಿ. ಎ. ಸದಾ ನಂದ ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎರ್ಮಾಳ್ ಸೀತಾರಾಮ ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಕೆ. ಪದ್ಮನಾಭ ಶೆಟ್ಟಿ, ಪುಣೆ ಅಯ್ಯಪ್ಪ ಯಕ್ಷಗಾನ ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಪುಣೆ ತುಳುಕೂಟದ ಅಧ್ಯಕ್ಷ ತಾರನಾಥ ಕೆ. ರೈ ಮೇಗಿನಗುತ್ತು, ತುಳುಕೂಟದ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ, ಹವ್ಯಕ ಸಂಘದ ಮದಂಗಲ್ಲು ಆನಂದ ಭಟ್, ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕುಶಲ್ ಹೆಗ್ಡೆ ಸ್ವಾಗತಿಸಿ ಕನ್ನಡ ಮಾಧ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ತುಳುಕನ್ನಡಿಗರು ಉಪಸ್ಥಿತರಿದ್ದರು. ಪುಣೆ ಕನ್ನಡ ಸಂಘ ಹಾಗೂ ಬಂಟರ ಸಂಘ ಪುಣೆ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಡಾ| ಭಟ್ ಶಿಸ್ತಿನಿಂದ ಅನ್ಯರಿಗೆ ಮಾರ್ಗದರ್ಶನ: ಸಂತೋಷ್ ಶೆಟ್ಟಿ
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರು ಡಾ| ಪ್ರಭಾಕರ ಭಟ್ ಅವರನ್ನು ಪರಿಚಯಿಸಿ ಮಾತನಾಡಿ, ಡಾ| ಭಟ್‌ರವರು ತನ್ನ ನಿರ್ದಿಷ್ಟ ತತ್ವ ಸಿದ್ಧಾಂತದೊಂದಿಗೆ ಶಿಸ್ತಿನಿಂದ ಅನ್ಯರಿಗೆ ದಾರ್ಶನಿಕವಾಗಿ ಗುರುತಿಸಿಕೊಂಡು ಹಿಂದುತ್ವದ ಒಗ್ಗಟ್ಟಿಗೆ ಸತತವಾಗಿ ಶ್ರಮಿಸುತ್ತಾ ಹಲವಾರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಅಪ್ರತಿಮ ಶಕ್ತಿಯಾಗಿ ಅಗ್ರಪಂಕ್ತಿಯಲ್ಲಿ ಗುರುತಿಸಿ ಕೊಳ್ಳುತ್ತಾರೆ. ದೀನ ದಲಿತರನ್ನೂ ಅವರ ಕಷ್ಟಗಳನ್ನೂ ಮನನ ಮಾಡಿಕೊಂಡು ಸರ್ವರ ಅಭ್ಯುದಯವನ್ನು ಬಯಸಿ ಹಿಂದೂ ಸಮಾಜದ ಮುಖ್ಯವಾಹಿನಿಯೊಂದಿಗೆ ಎಲ್ಲರನ್ನೂ ಸೇರಿಸಿಕೊಂಡು ಸಮೃದ್ಧ ಭಾರತವನ್ನು ಕಟ್ಟುವ ಸಂಕಲ್ಪ ಅಭಿನಂದನೀಯವಾಗಿದೆ. ಹಿಂದೂಗಳು ಹಿಂದೂಗಳಿಂದಲೇ ಅಪಾಯ ವನ್ನುದುರಿಸುತ್ತಿದ್ದು ಒಗ್ಗಟ್ಟಿಲ್ಲದೆ ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಬದುಕುತ್ತಿರುವುದ ರಿಂದಲೇ ದೇಶಕ್ಕೆ ಗಂಡಾಂತರ ಎದುರಾಗುತ್ತಿದ್ದು ದೇಶಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶವನ್ನು ಉಳಿಸುವಲ್ಲಿ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತಿದೆ. ಈ ಸಂಘಟ ನೆಯಲ್ಲಿ ತೊಡಗಿಸಿಕೊಂಡ ಡಾ| ಪ್ರಭಾಕರ ಭಟ್‌ರಂತಹ ದೇಶಭಕ್ತರ ಸೇವೆ ದೇಶದ ಸಮಗ್ರತೆಗೆ, ಹಿಂದುತ್ವದ ಉಳಿವಿಗೆ ಮಹಾನ್ ಕೊಡುಗೆಯನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು. ಇಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಗೌರವಿಸುವ ಕಾರ್ಯ ನಮಗೊದಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಮ್ಮ ಕರಾವಳಿ ಕರ್ನಾಟಕದ ಮಹಾನ್ ಮೇಧಾವಿ, ಶೈಕ್ಷಣಿಕ ಹರಿಕಾರ, ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರವಾದ ಕಾರ್ಯವನ್ನು ಮಾಡುತ್ತಿರುವ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇಂದು ನಮ್ಮೊಂದಿಗಿರುವುದು ನಮಗೆಲ್ಲರಿಗೂ ಅಭಿಮಾನದ ವಿಷಯವಾಗಿದೆ. ಅವರು ಮಾಡಿದ ಸಾಧನೆಗಳನ್ನು ಕೇಳುವಾಗ ಒಬ್ಬ ಮನುಷ್ಯ ಇಷ್ಟೊಂದು ಸಾಧನೆ ಮಾಡಲು ಸಾಧ್ಯವೋ ಎಂಬ ಅನುಭವವಾಗುತ್ತಿದ್ದು ಅವರ ಕಾರ್ಯಶೈಲಿಯನ್ನು ಅವರ ಶಿಕ್ಷಣ ಸಂಸ್ಥೆಗಳನ್ನು ನಾವೆಲ್ಲರೂ ಅಗತ್ಯ ಭೇಟಿ ಮಾಡಿ ಪ್ರೇರಣೆಯನ್ನು ಪಡೆದುಕೊಳ್ಳುವ ಅಗತ್ಯತೆ ನಮಗಿದೆ
– ಟಿ. ಭೂಬಾಲನ್, ಅಧ್ಯಕ್ಷರು, ಪುಣೆ ಕನ್ನಡ ಸಂಘ
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.