ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‌ಕೋಪರ್ ಸುವರ್ಣ ಮಹೋತ್ಸವ
Team Udayavani, Jan 11, 2019, 11:53 AM IST
ಮುಂಬಯಿ: ಅಧ್ಯಕ್ಷ ಹುದ್ದೆಯನ್ನು ಅಲಂಕರಿಸುವಾಗ ಬಹಳಷ್ಟ ಆತಂಕ ನನ್ನಲ್ಲಿತ್ತು. ಆದರೆ ದೈವ-ದೇವರ ಅನುಗ್ರಹ, ಹಿರಿಯರ ಆಶೀರ್ವಾದ, ಪದಾಧಿಕಾರಿಗಳ ಸಹಕಾರದಿಂದ ಸಂಸ್ಥೆಯನ್ನು ನನಗೆ ಉತ್ತಮ ರೀತಿಯಲ್ಲಿ ಮುನ್ನಡೆಸಲು ಸಾಧ್ಯವಾಯಿತು. ಸಂಸ್ಥೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ, ಒಮ್ಮತ ದಿಂದ ಕಾರ್ಯನಿರ್ವಹಿಸಿದಾಗ ಅಡೆತಡೆಗಳಿಲ್ಲದೆ ಸಾಧನೆ ಮಾಡಲು ಸಾಧ್ಯವಿದೆ ಎಂಬುವುದಕ್ಕೆ ಸಂಘದ ಸುವರ್ಣ ಮಹೋತ್ಸವ ಸಂಭ್ರಮ ಸಾಕ್ಷಿಯಾಗಿದೆ. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸರ್ವ ಸದಸ್ಯರ ಸಹಕಾರ, ಪ್ರೋತ್ಸಾಹ ಮರೆಯುವಂತಿಲ್ಲ. ದಾನಿಗಳು, ತುಳು-ಕನ್ನಡಿಗರ ಸಹಾಯ ಅಪಾರವಾಗಿದೆ. ಸಂಸ್ಥೆಯ ಬೆನ್ನೆಲುಬಾಗಿ ನಿಂತಿರುವ ದಾನಿಗಳಾದ ಮಹೇಶ್ ಶೆಟ್ಟಿ, ರವೀಂದ್ರನಾಥ್ ಭಂಡಾರಿ ಅವರ ಯೋಗದಾನ ಮಹತ್ತರವಾಗಿದೆ ಎಂದು ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ನುಡಿದರು.
ಜ. 5 ರಂದು ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್ ಸಭಾಗೃಹದಲ್ಲಿ ಕನ್ನಡ ವೆಲ್ಫೆàರ್ ಸೊಸೈಟಿ ಇದರ ಸುವರ್ಣ ಮಹೋತ್ಸವದ ನಿಮಿತ್ತ ನಡೆದ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುವರ್ಣ ಮಹೋತ್ಸವಕ್ಕೆ ಸಹಕರಿಸಿದ ದಾನಿ ಗಳಿಗೆ, ಹಿತೈಷಿಗಳಿಗೆ, ತುಳು-ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿ ಸಹಕಾರ ಸದಾಯಿರಲಿ ಎಂದರು.
ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್. ಸುಧಾಕರ ಅರಾಟೆ ಮಾತ ನಾಡಿ, ಸಂಸ್ಥೆಯ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಸುವರ್ಣ ಮಹೋತ್ಸವ ಸಂಭ್ರಮವೂ ಕೂಡಾ ಮಾದರಿಯಾಗಿದೆ. ಯಾವುದೇ ಸಂಸ್ಥೆಯನ್ನು ಮುನ್ನಡೆಸಲು ಆರ್ಥಿಕ ಬಲದ ಅಗತ್ಯವಿದೆ. ಆದ್ದರಿಂದ ಆರ್ಥಿಕವಾಗಿ ಸಂಸ್ಥೆಯನ್ನು ಬಲಾಡ್ಯಗೊಳಿಸಿದಾಗ ಸಮಾಜಪರ ಕಾರ್ಯಗಳನ್ನು ನಡೆಸಬಹುದು. ಈ ನಿಟ್ಟಿನಲ್ಲಿ ಕನ್ನಡ ವೆಲ್ಫೆàರ್ ಸೊಸೈಟಿಯ ಕಾರ್ಯ ಅಭಿನಂದನೀಯವಾಗಿದೆ ಎಂದು ನುಡಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡಿ, ಸಂಸ್ಥೆಯಲ್ಲಿ ಒಗ್ಗಟ್ಟು ಇದ್ದಾಗ ಏಳ್ಗೆಯನ್ನು ಸಾಧಿಸಲು ಸಾಧ್ಯ ಎಂಬುವುದಕ್ಕೆ ನವೀನ್ ಶೆಟ್ಟಿ ಇನ್ನಬಾಳಿಕೆ ನೇತೃತ್ವದ ಕನ್ನಡ ವೆಲ್ಫೆàರ್ ಸೊಸೈಟಿ ನಿದರ್ಶನವಾಗಿದೆ ಎಂದರು.
ಸುವರ್ಣ ಮಹೋತ್ಸವ ಸಮಿತಿಯ ಉಪ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರು ಮಾತನಾಡಿ, ಕನ್ನಡ ವೆಲ್ಫೆàರ್ ಸೊಸೈಟಿಯ ಸುವರ್ಣ ಮಹೋತ್ಸವ ಸಮಾರಂಭವು ಅದ್ದೂರಿಯಾಗಿ ಯಶಸ್ವಿಯಾಗಿ ನಡೆದಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಸಂಸ್ಥೆಯ ಎಲ್ಲರೂ ಸಮಾರಂಭದ ಯಶಸ್ಸಿಗೆ ದುಡಿದಿದ್ದಾರೆ. ತುಳು-ಕನ್ನಡಿಗರೆಲ್ಲರೂ ಕೈಜೋಡಿಸಿದ್ದಾರೆ ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ಅವರು ಮಾತನಾಡಿ, ನವೀನ್ ಶೆಟ್ಟಿ ಇನ್ನಬಾಳಿಕೆಯವರಲ್ಲಿ ಸಂಘಟನಾ ಶಕ್ತಿಯಿದೆ. ಎಲ್ಲಾ ಮಹಿಳಾ ಸದಸ್ಯೆಯರು ಸಂಸ್ಥೆಯ ಉತ್ತಮ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಮಗೆ ತುಂಬಾ ಪ್ರೋತ್ಸಾಹವನ್ನು ಮಹಿಳಾ ಸದಸ್ಯೆಯರು ನೀಡಿದ್ದು, ನಗರದ ದಾನಿಗಳು, ತುಳು-ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ದಾಂಪತ್ಯ ಜೀವನದ ರಜತ ಮಹೋತ್ಸವ ಆಚರಿಸಿಕೊಂಡ ಸಂಸ್ಥೆಯ ಪದಾಧಿಕಾರಿಗಳಾದ ರಾಧಾಕೃಷ್ಣ ಶೆಟ್ಟಿ ಮತ್ತು ಮಲ್ಲಿಕಾ ಶೆಟ್ಟಿ ಹಾಗೂ ತಿಮ್ಮ ದೇವಾಡಿಗ ಮತ್ತು ಶಕುಂತಳಾ ದೇವಾಡಿಗ ದಂಪತಿಗಳನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಹಿರಿಯ ಸದಸ್ಯ ಶಿವಣ್ಣ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಜೊತೆ ಕಾರ್ಯದರ್ಶಿ ವೀಣಾ ಎಂ. ಶೆಟ್ಟಿ ಪ್ರಾರ್ಥನೆಗೈದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರಿಗೆ ಮತ್ತು ಮಕ್ಕಳಿಗೆ ವಿವಿಧ ಮನೋರಂಜನ ಆಟೋಟ ಕಾರ್ಯಕ್ರಮಗಳು ನಡೆಯಿತು. ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಚಿತ್ರ: ಸುಭಾಷ್ ಶಿರಿಯಾ
ಕನ್ನಡ ವೆಲ್ಫೆàರ್ ಸೊಸೈಟಿಯ ಯಶಸ್ಸಿನ ಶ್ರೇಯಸ್ಸು ಸಂಸ್ಥೆಯ ಎಲ್ಲಾ ಕಾರ್ಯಕರ್ತರಿಗೆ ಸಲ್ಲುತ್ತದೆ. ತುಳು-ಕನ್ನಡಿಗರೆಲ್ಲರೂ ಸಹಕಾರ ನೀಡಿದ್ದಾರೆ. ಸಂಸ್ಥೆಯ ಪ್ರತಿಯೊಂದು ವಿಭಾಗದ ಪದಾಧಿಕಾರಿಗಳು, ಸದಸ್ಯರು ತಮ್ಮ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿ ಸುವರ್ಣ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ್ದಾರೆ. ಈ ಕಾರಣದಿಂದಲೆ ಜನಮೆಚ್ಚುಗೆಯ ಸುವರ್ಣ ಮಹೋತ್ಸವ ಆಚರಣೆ ನಮ್ಮದಾಗಿದೆ.
– ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್, ಕಾರ್ಯಾಧ್ಯಕ್ಷರು, ಸುವರ್ಣ ಮಹೋತ್ಸವ ಸಮಿತಿ ಕನ್ನಡ ವೆಲ್ಫೆàರ್ ಸೊಸೈಟಿ
ಘಾಟ್‌ಕೋಪರ್
ನಾವೆಲ್ಲ ಬದುಕನ್ನು ಕಟ್ಟಲು, ಅರಳಿಸಲು ಈ ನಗರಕ್ಕೆ ಬಂದಿದ್ದೇವೆ. ನಮ್ಮಲ್ಲಿ ಒಗ್ಗಟ್ಟು ಮುಖ್ಯವಾಗಿರಬೇಕು. ನಾವೆಲ್ಲ ಒಗ್ಗಟ್ಟನ್ನು ಕಾಪಾಡಿಕೊಂಡು ಬಾಳಬೇಕು. ಓರ್ವ ಮಹಿಳೆ ಯಾವುದೇ ಒಂದು ಸಂಸ್ಥೆಗೆ ಕಾಲಿಟ್ಟರೆ ಆ ಸಂಸ್ಥೆ ನಿಜವಾಗಿಯೂ ಅಭಿವೃದ್ದಿಯಾಗುತ್ತದೆ. ಪ್ರಸ್ತುತ ಎಲ್ಲಾ ಸಂಘ-ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಿದ ಕನ್ನಡ ವೆಲ್ಫೆàರ್ ಸೊಸೈಟಿ ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿಯನ್ನು ಕಾಣುವಂತಾಗಲಿ.
– ಡಾ| ಸುನೀತಾ ಎಂ. ಶೆಟ್ಟಿ , ಹಿರಿಯ ಸಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.