ಕನ್ನಡಿಗ ಪತ್ರಕರ್ತರ ಸಂಘ:ಕ್ರಿಕೆಟ್ ಪಂದ್ಯಾಟ ಸಮಾರೋಪ
Team Udayavani, Jan 30, 2018, 4:29 PM IST
ಮುಂಬಯಿ: ವಾಸ್ತವಿಕ ಸನ್ನಿವೇಶಗಳ ಅಂಕು-ಡೊಂಕುಗಳನ್ನು ತಿದ್ದುವ ಪ್ರಬಲ ಅಸ್ತ್ರ ಪತ್ರಕರ್ತರ ಲೇಖನಿಯಲ್ಲಿದೆ. ವಿಶೇಷ ಅಧ್ಯಾಯದೊಂದಿಗೆ ಅವಿಶ್ರಾಂತ ದುಡಿಯುವ ಪತ್ರಕರ್ತರು ರಾಷ್ಟ್ರದ ವಿದ್ಯಮಾನವನ್ನು ಜಾಗೃತಗೊಳಿಸುತ್ತಾರೆ. ಮುಂಬಯಿ ನಗರ ಹಾಗೂ ಉಪನಗರದ ಸಂಘ-ಸಂಸ್ಥೆಗಳ ಸವಿಸ್ತಾರ ವರದಿಯನ್ನು ನೀಡುವ ಮುಂಬಯಿಯ ಕನ್ನಡ ದಿನಪತ್ರಿಕೆಗಳು ಸಂಘಟನೆಗೆ ಮಹತ್ತರವಾದ ಯೋಗದಾನ ನೀಡುತ್ತಿವೆ ಎಂದು ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ನುಡಿದರು.
ಜ. 26ರಂದು ಭಾಯಂದರ್ ಪೂರ್ವದ ನವಘರ್ ರೋಡ್, ಗುರುದ್ವಾರ ಸಮೀಪದ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ದಶಮಾನೋತ್ಸವದ ಅಂಗವಾಗಿ ನಡೆದ ಸದಸ್ಯರ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ದಶಮಾನೋತ್ಸವದ ಹೊಸ್ತಿಲಿನಲ್ಲಿರುವ ಇಂದಿನ ಕ್ರಿಕೆಟ್ ಪಂದ್ಯಾಟ ಪತ್ರಕರ್ತ ಬಂಧುಗಳ ಸಮಾವೇಶವಾಗಿದೆ. ಮಾನಸಿಕ ನೆಮ್ಮದಿ, ದೈಹಿಕ ಸ್ಥಿರತೆಯನ್ನು ಕಾಪಾಡುವ ಕಾರ್ಯಚಟುವಟಿಕೆಗಳು ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿರಲಿ. ಅದಕ್ಕೆ ಬೇಕಾಗುವ ಎಲ್ಲ ರೀತಿಯ, ಸಹಾಯ, ಸಹಕಾರ ದೊರೆಯಲಿದೆ ಎಂದು ನುಡಿದು ಶುಭಹಾರೈಸಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಬಂಟ್ಸ್ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಅವರು ಮಾತನಾಡಿ, ಉದ್ಯಮಿಗಳು, ಸಾಮಾಜಿಕ ಸೇವಾಕಾರ್ಯಕರ್ತರು, ಸಂಘ-ಸಂಸ್ಥೆಗಳು ಹಾಗೂ ಪತ್ರಕರ್ತರ ಸಮ್ಮಿಲನದಂತೆ ಇಂದಿನ ಕ್ರಿಕೆಟ್ ಪಂದ್ಯಾಟವು ತೋರುತ್ತಿದೆ. ದಶಮಾನೋತ್ಸವದ ಎಲ್ಲ ಕಾರ್ಯಕ್ರಮ ಗಳು ಇತಿಹಾಸ ನಿರ್ಮಿಸುವಂತಾಗಲಿ ಎಂದು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ, ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡ ಕ್ರಿಕೆಟ್ ಪಂದ್ಯಾಟವು ಒಂದು ಸೌಹಾರ್ದ ಕೂಟವಾಗಿದೆ. ಇದು ಸೋಲು-ಗೆಲುವುಗಳ ಸಮಾಂತರ ವೇದಿಕೆ. ಒಟ್ಟಾಗಿ ಕೂಡಿ ಬಾಳುವ ಕಲೆ ನಮ್ಮದಾಗಬೇಕು. ಮೀರಾ-ಭಾಯಂದರ್ ಜನತೆಯ ಸಹಕಾರ ಅವಿಸ್ಮರಣೀಯ. ಪಂದ್ಯಾಟವು ಯಶಸ್ವಿಯಾಗಲು ಸಹಕರಿಸಿದ ಕಾರ್ಯಕ್ರಮದ ಪ್ರಾಯೋಜಕರಿಗೆ, ಉದ್ಯಮಿಗಳಿಗೆ, ತುಳು-ಕನ್ನಡಿಗರಿಗೆ, ರಾಜಕೀಯ ಮುಖಂಡರಿಗೆ ಹಾಗೂ ಆಯೋಜಕರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ವಿನ್ನರ್ ಪ್ರಶಸ್ತಿಗೆ ಭಾಜನರಾದ ಡಾ| ಶಿವ ಎಂ. ಮೂಡಿಗೆರೆ ನಾಯಕತ್ವದ ಪಿಂಕ್ ತಂಡ ಮತ್ತು ರನ್ನರ್ ಪ್ರಶಸ್ತಿ ಪಡೆದ ಬಾಬು ಕೆ. ಬೆಳ್ಚಡ ನಾಯಕತ್ವದ ಯೆಲ್ಲೊ ತಂಡ ಹಾಗೂ ಶಿಸ್ತಿನ ತಂಡ ಪುರಸ್ಕಾರವನ್ನು ಪಡೆದ ಸುರೇಶ್ ಶೆಟ್ಟಿ ಯೆಯ್ನಾಡಿ ನಾಯಕತ್ವದ ಬ್ಲೂ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.
ಅತ್ಯುತ್ತಮ ಎಸೆತಗಾರ ಪ್ರಶಸ್ತಿಯನ್ನು ಅಶೋಕ್ ಆರ್. ದೇವಾಡಿಗ, ಸರಣಿ ಶ್ರೇಷ್ಠ ಹಾಗೂ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ರಮೇಶ್ ಎಂ. ಬಿಲ್ಲವ, ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ಕರುಣಾಕರ ವಿ. ಶೆಟ್ಟಿ ಅವರು ಪಡೆದರು. ಅಲ್ಲದೆ ಉತ್ತಮ ದಾಂಡಿಗರಾಗಿ ಅಶೋಕ್ ಆರ್. ದೇವಾಡಿಗ ಮತ್ತು ಪುರಂದರ ಅಮೀನ್ ಅವರು ಬಹುಮಾನಕ್ಕೆ ಪಾತ್ರರಾದರು.
ವೇದಿಕೆಯಲ್ಲಿ ಉದ್ಯಮಿ ರವೀಂದ್ರ ಎಸ್. ಕರ್ಕೇರ, ಬಂಟ್ಸ್ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು, ಸಂಘಟಕದ ದಿನೇಶ್ ಶೆಟ್ಟಿ ಕಾಪು ಅವರು ಉಪಸ್ಥಿತರಿದ್ದು ಶುಭಹಾರೈಸಿದರು. ವೀಕ್ಷಕ ವಿವರಣೆ ನೀಡಿದ ಶ್ರೀ ಅಯ್ಯಪ್ಪ ವೃಂದದ ಕೋಶಾಧಿಕಾರಿ ವಿಶ್ವನಾಥ ಎನ್. ಶೆಟ್ಟಿ, ಮೀರಾ-ಭಾಯಂದರ್ ಬಂಟ್ಸ್ ಫೋರಂನ ಸುಖ್‌ದೀಪ್ ಶೆಟ್ಟಿ, ತೀರ್ಪುಗಾರರಾಗಿ ಸಹಕರಿಸಿದ ರಮಾನಂದ ಪೂಜಾರಿ, ಶ್ರೀಕಾಂತ್ ಪೂಜಾರಿ, ಗಂಗಾಧರ ಪೂಜಾರಿ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ. ಪೂಜಾರಿ, ಸದಸ್ಯ ಉಮೇಶ್ ಅಂಚನ್ ಅವರನ್ನು ಗೌರವಿಸಲಾಯಿತು.
ಗೌರವ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿದರು. ಉಪಾಧ್ಯಕ್ಷ ದಯಾಸಾಗರ್ ಚೌಟ ಸ್ವಾಗತಿಸಿದರು. ತಾರಾ ಆರ್. ಬಂಟ್ವಾಳ್, ಸವಿತಾ ಎಸ್. ಶೆಟ್ಟಿ, ವಿದ್ಯಾ ಎಂ. ಭಂಡಾರಿ ರಾಷ್ಟÅಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ತುಳು-ಕನ್ನಡೇತರರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಆಗಮಿಸಿ ಶುಭಹಾರೈಸಿದರು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.