ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ :ಕ್ರಿಕೆಟ್ ಪಂದ್ಯಾಟ
Team Udayavani, Jan 28, 2018, 4:01 PM IST
ಮುಂಬಯಿ: ಇಂದಿನ ಬದಲಾವಣೆಯ ತಾಂತ್ರಿಕ ಯುಗದಲ್ಲಿ ಪಾರಂಪರಿಕ ವೈಶಿಷ್ಟéಗಳನ್ನು ಕಾಪಿಡುವಲ್ಲಿ ಪತ್ರಕರ್ತರ ಸಹಕಾರ ಅನಿವಾರ್ಯವಾಗಿದೆ. ಶಿಸ್ತು, ಪ್ರಮಾಣಿಕತೆಯಿಂದ ದುಡಿಯುವ ಮನಸ್ಸು ನಮ್ಮದಾಗಿರಲಿ. ಕುಂದು ಕೊರತೆಗಳನ್ನು ನಿವಾರಿಸಿ ಯಶಸ್ಸಿನ ದಾರಿಯಾದ ಸಾಮಾಜಿಕ ಸಂಘಟನೆಗೆ ಕೈಜೋಡಿಸೋಣ ಎಂದು ಮೀರಾ-ಭಾಯಂದರ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ ಅವರು ಅಭಿಪ್ರಾಯಿಸಿದರು.
ಜ. 26 ರಂದು ಭಾಯಂದರ್ ಪೂರ್ವದ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ದಶಮಾನೋತ್ಸವದ ಅಂಗವಾಗಿ ಸದಸ್ಯರಿಗೆ ಆಯೋಜಿಸಿದ್ದ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ತುಳು-ಕನ್ನಡಿಗರ ಎಲ್ಲಾ ಕಾರ್ಯಕ್ರಮಗಳನ್ನು ಚಾಚುತಪ್ಪದೆ ಮರುದಿನ ಕನ್ನಡಿಗರ ಕೈಗೆ ತಲುಪಿಸುವ ಪತ್ರಕರ್ತ ಹೊಣೆಗಾರಿಕೆಯನ್ನು ಮೆಚ್ಚಬೇಕು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಒಗ್ಗಟ್ಟು ಮೂಡುತ್ತದೆ. ಸಂಸ್ಥೆಯ ದಶಮಾನೋತ್ಸವದ ಕಾರ್ಯಯೋಜನೆಗಳು ಯಶಸ್ಸನ್ನು ಕಾಣುವಂತಾಗಲಿ ಎಂದು ನುಡಿದರು.
ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ಲಾಂಛನವನ್ನು ಅನಾವರಣಗೊಳಿಸಿದ ಮೀರಾ-ಭಾಯಂದರ್ ಬಂಟ್ಸ್ ಫೋರಂನ ಅಧ್ಯಕ್ಷ ಜಯಪ್ರಕಾಶ್ ಭಂಡಾರಿ ಅವರು ಮಾತನಾಡಿ, ದೈಹಿಕ, ಮಾನಸಿಕ, ಬೌದ್ಧಿಕ, ಸಮತೋಲನಗಳು ಕ್ರೀಡೆ ಮತ್ತು ವ್ಯಾಯಾಮದಿಂದ ಲಭಿಸುತ್ತದೆ. ಒತ್ತಡ ನಿವಾರಣೆಯ ಇಂತಹ ಕಾರ್ಯಕ್ರಮಗಳು ಪ್ರತೀ ವರ್ಷ ನಡೆಯುತ್ತಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ್ ಪಾಲೆತ್ತಾಡಿ ಇವರು ಧ್ವಜಾರೋಹಣಗೈದು ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿ ಮಾತನಾಡಿ, ದಿನಪೂರ್ತಿ ನಡೆದ ಪಂದ್ಯಾಟವು ಒಗ್ಗಟ್ಟಿನ ಸಂಕೇತವಾಗಿ ಎಂದು ನುಡಿದು ಕ್ರೀಡಾರ್ಥಿಗಳಿಗೆ ಶುಭಹಾರೈಸಿದರು.
ಸ್ಥಳೀಯ ಮಾಜಿ ನಗರ ಸೇವಕ ರಾಜೇಶ್ ವೇತೋಸ್ಕರ್, ಪೊಲೀಸ್ ನಿರೀಕ್ಷಕ ಸುರೇಶ್ ಗಗಂಜೆ, ನಗರ ಸೇವಕಿ ಅರ್ಚನಾ ಕದಂ, ಶಿವಸೇನಾ ಪ್ರಮುಖ ಅರುಣ್ ಕದಂ, ಮಧುಕರ್ ಶೆಟ್ಟಿ, ವಿಲಾಸ್ ಜಾಧವ್, ಡಿ. ಜಿ. ಶೆಟ್ಟಿ, ಪ್ರದೀಪ್ ಹೆಗ್ಡೆ, ಭಾಯಂದರ್ ಸೈಂಟ್ ಆ್ಯಗ್ನೇಸ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯಾಧ್ಯಕ್ಷ ಅರುಣೋದಯ ರೈ ಉಪಸ್ಥಿತರಿದ್ದು ಶುಭಹಾರೈಸಿದರು.
ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಬಾಬು ಕೆ. ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ಯಾಮ್ ಎಂ. ಹಂದೆ, ವಿಶ್ವನಾಥ್ ಪಿ. ಅಮೀನ್ ನಿಡ್ಡೋಡಿ, ಗುರುದತ್ತ್ ಎಸ್. ಪೂಂಜಾ, ಸಲಹಾ ಸಮಿತಿಯ ಸದಸ್ಯ ಪಂಡಿತ್ ನವೀನ್‌ಚಂದ್ರ ಆರ್. ಸನಿಲ್, ಆಮಂತ್ರಿತ ಸದಸ್ಯ ಶ್ರೀಧರ ಉಚ್ಚಿಲ್, ಪತ್ರಕರ್ತ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಎಂ. ಮೂಡಿಗೆರೆ, ಸುರೇಶ್ ಶೆಟ್ಟಿ ಯೆಯ್ನಾಡಿ, ಉಮೇಶ್ ಕುಮಾರ್ ಅಂಚನ್, ಸವಿತಾ ಎಸ್. ಶೆಟ್ಟಿ, ವಿದ್ಯಾ ಎಂ. ಭಂಡಾರಿ, ತಾರಾ ಆರ್. ಬಂಟ್ವಾಳ್ ಮತ್ತಿತರರು ಸಹಕರಿಸಿದರು.
ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ. ಪೂಜಾರಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಅವರು ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಗೌರವ ಕೋಶಾಧಿಕಾರಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ವಂದಿಸಿದರು. ಉಪಾಧ್ಯಕ್ಷ ದಯಾಸಾಗರ್ ಚೌಟ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಆನಂತರ ಪತ್ರಕರ್ತರ ಸಂಘದ ಸದಸ್ಯರಿಗೆ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ನಡೆಯಿತು.
ಚಿತ್ರ- ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.