ಪತ್ರಕರ್ತ ಎಲ್.ಎಸ್.ಶಾಸ್ತ್ರಿಗೆ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ
Team Udayavani, Jun 20, 2017, 12:35 PM IST
ಮುಂಬಯಿ: ಹವ್ಯಕ ಸಮಾಜದವರೇ ಆದ ಕರ್ಕಿ ಅವರಿಗೆ ಆ ಸಮಾಜದ ಒಳಗಿನ ಸಮಸ್ಯೆಗಳ ಕುರಿತು ಬರೆಯಲು ಸುಲಭವಾಯಿತು. ಸೂರಿ ವೆಂಕಟರಮಣ ಶಾಸ್ತ್ರಿ ಅವರು ತಾನೂ ಯಾವ ಸಂಸ್ಕೃತಿಯ ಹಿನ್ನೆಲೆಯಿಂದ ಬಂದರೂ ಅದನ್ನು ತಮ್ಮ ಕೃತಿಯಲ್ಲಿ ಪ್ರಾಮಾಣಿಕವಾಗಿ ತರಲು ಪ್ರಯತ್ನಿಸಿದ್ದಾರೆ. ನಾವೂ ಇಂದು ಕಳಕೊಂಡಿರುವ ಸಾಂಸ್ಕೃತಿಕ ಮೌಲ್ಯಗಳ ಸಂಪತ್ತನ್ನು ಸೂರಿ ಅವರ ಕೃತಿಗಳಲ್ಲಿ ಕಾಣಬಹುದು. ಪ್ರಶಸ್ತಿ ಪ್ರದಾನ ಸಮಾರಂಭವೊಂದು ಹೇಗೆ ನಡೆಯಬೇಕು ಎಂಬುದಕ್ಕೆ ಇಂದಿನ ಈ ಕಾರ್ಯಕ್ರಮ ಆದರ್ಶಪ್ರಾಯವಾಗಿದೆ ಎಂದು ನಾಡಿನ ಹೆಸರಾಂತ ವಿದ್ವಾಂಸ, ಸಾಹಿತಿ ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಮುಖ್ಯಸ್ಥ ಡಾ| ತಾಳ್ತಜೆ ವಸಂತ್ ಕುಮಾರ್ ಅವರು ನುಡಿದರು.
ಜೂ. 18 ರಂದು ಹವ್ಯಕ ವೆಲ್ಫೆàರ್ ಟ್ರಸ್ಟ್ ಮುಂಬಯಿ ವತಿಯಿಂದ ಘಾಟ್ಕೊàಪರ್ ಪಶ್ಚಿಮದ ಹವ್ಯಕ ಸಭಾಗೃಹದಲ್ಲಿ ಆಯೋಜಿಸಿದ್ದ ವಾರ್ಷಿಕ “ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2017′ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಶುಭಹಾರೈಸಿದರು.
ಕರ್ನಾಟಕ ಮಲ್ಲ ದೈನಿಕದ ಸಹಯೋಗದೊಂದಿಗೆ ನಡೆಸಲ್ಪಟ್ಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹವ್ಯಕ ವೆಲ್ಫೆàರ್ ಟ್ರಸ್ಟ್‌ನ ಅಧ್ಯಕ್ಷ ಶಿವಕುಮಾರ್ ಪಿ. ಭಾಗÌತ್ ಅವರು, ನಮ್ಮ ಸೂರಿ ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ಈ ಪ್ರಶಸ್ತಿ ಪ್ರದಾನ ಸಮಾರಂಭ ಇಂದಿಗೂ ನಮ್ಮಲ್ಲಿ ಸ್ಫೂರ್ತಿಯ ಸೆಲೆಯನ್ನು ನೀಡುತ್ತಿದೆ. ಅವರ ಕೇವಲ 5 ವರ್ಷಗಳ ಸಾಧನೆ ನಮಗೆ ಪ್ರೇರಕ ಶಕ್ತಿಯಾಗಿದೆ. ಎಲ್. ಎಸ್. ಶಾಸ್ತ್ರಿ ಅಂತಹ ಪ್ರಾಮಾಣಿಕ ಪತ್ರಕರ್ತ ನಮ್ಮೊಂದಿಗೆ ಇದ್ದಾರೆ ಎನ್ನುವುದು ಅಭಿಮಾನದ ಸಂಗತಿ. ಈ ಪ್ರಶಸ್ತಿ ಯೋಗ್ಯ ವ್ಯಕ್ತಿಗೆ ಸಂದಿದೆ ಎಂದು ನಮಗೆ ಹೆಮ್ಮೆಯಾಗುತ್ತಿದೆ ಎಂದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಸಾಹಿತಿ ಎಸ್. ಎಂ. ಕೃಷ್ಣ ರಾವ್ ಅವರು ಅಭಿನಂದನ ಭಾಷಣಗೈದು, ಎಲ್. ಎಸ್. ಶಾಸ್ತ್ರಿ ಅವರಲ್ಲಿ ಪ್ರಾಮಾಣಿಕತೆ ಇದೆ. ತಾನೂ ಬೆಳೆಯುತ್ತಾ ಇನ್ನೊಬ್ಬರನ್ನು ಬೆಳೆಸಿದವರು ಅವರು. ಆದುದರಿಂದ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಅವರ ನೆನಪಿನ ಈ ಪ್ರಶಸ್ತಿ ಯೋಗ್ಯ ವ್ಯಕ್ತಿಗೆ ಸಂದಿದೆ ಎನ್ನುತ್ತಾ ಪ್ರಶಸ್ತಿ ಪುರಸ್ಕೃರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ 2017′ ನ್ನು ಹಿರಿಯ ಪತ್ರಕರ್ತ, ಲೇಖಕ ಎಲ್. ಎಸ್. ಶಾಸ್ತ್ರಿ ಅವರಿಗೆ ಪ್ರದಾನಿಸಲಾಯಿತು. ಅತಿಥಿಯಾಗಿ ಪಾಲ್ಗೊಂಡ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಮಾತನಾಡಿ, ಜೋಕಟ್ಟೆ ಮಾತನಾಡಿ, ಕರ್ಕಿ ಪ್ರಶಸ್ತಿಯೊಂದಿಗೆ ಕರ್ನಾಟಕ ಮಲ್ಲ ಸೇರಿಕೊಂಡಿರುವುದು ಅಭಿಮಾನದ ಸಂಗತಿ. ಯಾವುದೇ ಪತ್ರಕರ್ತ ಜಾತಿಯಿಂದಲ್ಲ, ತಮ್ಮ ಕರ್ತವ್ಯದಿಂದ ಗುರುತಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕರ್ಕಿ ಅವರು ನಮಗೆ ಆದರಣೀಯರು ಎಂದು ನುಡಿದರು.
ಹಿರಿಯ ಕವಿ ಹಾಗೂ ಟ್ರಸ್ಟ್‌ನ ಉಪಾಧ್ಯಕ್ಷ ಸಂಜಯ ಭಟ್, ಗೌರವ ಪ್ರಧಾನ ಕಾರ್ಯದರ್ಶಿ ನಾರಾಯಣ ಆರ್. ಅಕದಾಸ, ಗೌರವ ಕೋಶಾಧಿಕಾರಿ ಎ. ಜಿ. ಭಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಇತರ ಪದಾಧಿಕಾರಿಗಾಳು ಸೇರಿದಂತೆ ಅನೇಕರು ಹಾಜರಿದ್ದರು. ಟ್ರಸ್ಟ್‌ನ ಮುಖವಾಣಿ “ಹವ್ಯಕ ಸಂದೇಶ’ ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್. ಭಾಗÌತ್ ಪ್ರಸ್ತಾವನೆಗೈದು ವೆಂಕಟರಮಣ ಶಾಸ್ತ್ರಿ ಅವರ ಜೀವನಶೈಲಿ ಮತ್ತು ಅವರ ಪತ್ರಿಕೋದ್ಯಮದ ಸೇವೆಯನ್ನು ವಿವರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೇಹಾ ಹೆಗಡೆ ಅವರಿಂದ ಭರತನಾಟ್ಯ ಹಾಗೂ ಜೆ. ಜಿ. ಕ್ರಿಯೇಶನ್ಸ್ ನ ಬಾಳೇಸರ ವಿನಾಯಕ ಮತ್ತು ಬಳಗದಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡಿತು. ಕಾವ್ಯಾ ಅಶ್ವಿನ್ ಹೆಗಡೆ ಪ್ರಾರ್ಥನೆಗೈದರು. ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಚಿದಾನಂದ ಭಾಗÌತ್ ಶುಭ ಸಂದೇಶಗಳನ್ನು ವಾಚಿಸಿದರು. ಪೂರ್ಣಿಮಾ ಅಕದಾಸ ಸಮ್ಮಾನ ಪತ್ರ ವಾಚಿಸಿದರು. ರಂಗ ನಿರ್ದೇಶಕ, ನಟ ಸಾ. ದಯಾ ಅತಿಥಿಗಳನ್ನು ಪರಿಚಯಿಸಿದರು. ಹವ್ಯಕ ಸಂದೇಶ ಮಂಡಳಿ ಸದಸ್ಯೆ ಹಾಗೂ ಶಶಿಕಲಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಮಹೇಶ ಹೆಗಡೆ ವಂದಿಸಿದರು.
ಸೂರಿ ಅವರ ಹೆಸರಿನ ಈ ಪ್ರಶಸ್ತಿಯನ್ನು ಅತ್ಯಂತ ಆದರ ಅಭಿಮಾನದಿಂದ ನಾನು ಸ್ವೀಕರಿಸಿದ್ದೇನೆ. ಅಂದಿನ ಆ ಕಾಲದಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಅವರು ಆ ಕಾಲ ಘಟ್ಟದಲ್ಲಿ ನಿಂತು ಕ್ರಾಂತಿಕಾರಿ ಕೃತಿಗಳನ್ನು ರಚಿಸಿದ್ದು, ಬಹಳ ಮಹತ್ವದ್ದು. ಈ ಪತ್ರಿಕೋದ್ಯಮ ನನಗೆ ಆರ್ಥಿಕವಾಗಿ ಬಲ ಕೊಟ್ಟಿರಲಿಲ್ಲ, ಆದರೆ ಸಾಂಸ್ಕೃತಿಕವಾಗಿ ಇದು ನನ್ನನ್ನು ಬೆಳೆಸಿದೆ. ತಾಂತ್ರಿಕ ಸೌಲಭ್ಯಗಳಿಲ್ಲದ ಅಂದಿನ ಸಂದರ್ಭದಲ್ಲಿ ಸೂರಿ ಅವರು ಪ್ರಾಮಾಣಿಕತೆಯಿಂದ ನಿರ್ವಹಿಸಿದ ಪತ್ರಕರ್ತನ ಪಾತ್ರ ಇಂದಿನ ಮಾಧ್ಯಮದವರಿಗೆ ಆದರ್ಶಪ್ರಾಯವಾಗಿದೆ
– ಎಲ್. ಎಸ್. ಶಾಸ್ತ್ರಿ (ಪ್ರಶಸ್ತಿ ಪುರಸ್ಕೃತರು).
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.