ಕರ್ನಾಟಕ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ: ವಾರ್ಷಿಕ ಮಹಾಸಭೆ


Team Udayavani, Sep 6, 2017, 11:27 AM IST

03-Mum09a.jpg

ಮುಂಬಯಿ: ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸ್ವಾವಲಂಬನೆ, ಸ್ವಂತ ಉದ್ಯೋಗ, ಉನ್ನತ ಶಿಕ್ಷಣ ಆರ್ಥಿಕ ಸಾಲವನ್ನು ನೀಡಿ ಜನ ಸಾಮಾನ್ಯರ ಬದುಕನ್ನು ಮೇಲ್‌ಸ್ತರಕ್ಕೆ ತಲುಪಿಸಿದೆ. ನೋಟು ಅಮಾನ್ಯದಂತಹ ಆರ್ಥಿಕ ಪ್ರತಿಕೂಲ ಸಂದರ್ಭದಲ್ಲೂ ವಸಾಯಿಯ ಕರ್ನಾಟಕ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯು ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿದೆ. ಆರ್ಥಿಕ ವರ್ಷದಲ್ಲಿ ಠೇವಣಿ 569 ಲಕ್ಷ ರೂ. ಗಳಷ್ಟು ಸಾಧಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 222 ಲಕ್ಷ ರೂ. ಸಾಲ ನೀಡಿ ಸ್ವಉದ್ಯೋಗಿಗಳಿಗೆ ಉತ್ತೇಜನ ನೀಡಿದೆ. ಅನುತ್ಪಾದಕ ಆಸ್ತಿ ಶೂನ್ಯವಾಗಿದ್ದು, ಶೇರುದಾರರಿಗೆ ಶೇ. 13 ಲಾಭಾಂಶ ಘೋಷಿದೆ ಎಂದು ಕರ್ನಾಟಕ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ವಸಾಯಿ ಇದರ ಕಾರ್ಯಾಧ್ಯಕ್ಷ ಭಾಸ್ಕರ ಕೆ. ಶೆಟ್ಟಿ ನುಡಿದರು.

ಸೆ. 3ರಂದು ವಸಾಯಿ ಪಶ್ಚಿಮದ ಬಬೋಲದ ಪಾಪಾಡಿರೋಡ್‌ನ‌ ಡಿ. ಸಿ. ಕ್ಲಬ್‌ ಹಾಲ್‌ನಲ್ಲಿ ನಡೆದ ಕರ್ನಾಟಕ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 21ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾತೃಸಂಸ್ಥೆ ವಸಾಯಿ ಕರ್ನಾಟಕ ಸಂಘದ ಆಡಳಿತ ಮಂಡಳಿಯು ಸೊಸೈಟಿಯ ಸರ್ವರ್ತೋಮುಖ ಅಭಿವೃದ್ಧಿಗೆ ಕಾರಣಿಭೂತರಾಗಿದೆ. ಮಾಜಿ ಉಪಕಾರ್ಯಾಧ್ಯಕ್ಷ ಕರ್ನಿರೆ ಶ್ರೀಧರ ಶೆಟ್ಟಿ ಅವರ ತ್ಯಾಗಮಯ ಜೀವನ, ಆದರ್ಶ ಬದುಕು ಕ್ರೆಡಿಟ್‌ ಸೊಸೈಟಿಯ ಶ್ರೇಷ್ಠತೆಯನ್ನು ಹೆಚ್ಚಿಸಿದೆ. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಶೇರುದಾರರಾಗಿ ಅಭಿವೃದ್ಧಿಯ ಪಥಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು.

ಸೊಸೈಟಿಯ ಕಾರ್ಯದರ್ಶಿ ಓ. ಪಿ. ಪೂಜಾರಿ ಅವರು ಗತ ಮಹಾಸಭೆಯ ವರದಿ ವಾಚಿಸಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ವಸಾಯಿ ಕರ್ನಾಟಕ ಸಂಘದ   ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಮಾತನಾಡಿ, ಕರ್ನಾಟಕದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಶೇರುದಾರರಾಗಬೇಕು. ಠೇವಣಿಗಳನ್ನಿತ್ತು ವಿವಿಧ ಸಾಲ, ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಮುನ್ನಡೆಗೆ ಸಹಕರಿಸಬೇಕು ಎಂದರು.

ಭಾರತ್‌ ಬ್ಯಾಂಕಿನ ನಿರ್ದೇಶಕ ಕೆ. ಬಿ. ಪೂಜಾರಿ ಮಾತನಾಡಿ, ಕರ್ನಾಟಕ ಕೋ ಆಪರೇಟಿವ್‌ ಸೊಸೈಟಿಯು ಉತ್ತಮ ನಿರ್ದೇಶಕ ಮಂಡಳಿಯನ್ನು ಒಳಗೊಂಡಿದೆ. ಗುಣಮಟ್ಟದ ಸೇವೆಯೊಂದಿಗೆ ಪಾರದರ್ಶಕತೆಯನ್ನು ಕಾಯ್ದು ಕೊಂಡಿದೆ. ಭಾರತ್‌ ಬ್ಯಾಂಕ್‌ನಲ್ಲಿ ಅವರು ಖಾತೆ ಹೊಂದಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ನುಡಿದರು.

ವಸಾಯಿ ಜಿಎಸ್‌ಬಿ ಸಮಾಜದ ದೇವೇಂದ್ರ ಭಕ್ತ, ಗಿರೀಶ್‌ ಲಾಲ್ವನಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಅಭಿವೃದ್ಧಿ ವಿಭಾಗದ ಅಧಿಕಾರಿ ಪಿ. ಕೆ. ಪಾನಸ್ಕರ್‌ ಅವರು ಕ್ರೆಡಿಟ್‌ ಸೊಸೈಟಿಯ ಕ್ರಮ ನಿರ್ಬಂಧನೆಯ ಬಗ್ಗೆ ವಿವರಿಸಿದರು. ಮಹಾಸಭೆಯಲ್ಲಿ ಇತ್ತೀಚೆಗೆ ನಿಧನರಾದ ಕ್ರೆಡಿಟ್‌ ಸೊಸೈಟಿ ಮತ್ತು ಕರ್ನಾಟಕ ಸಂಘದ ಸ್ಥಾಪಕ ಕರ್ನಿರೆ ಶ್ರೀಧರ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೋಶಾಧಿಕಾರಿ ಮಂಜುಳಾ ಶೆಟ್ಟಿ ಅವರು ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ವಸಾಯಿ ಕರ್ನಾಟಕ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎಚ್‌. ಜಿ. ಕುಂದರ್‌ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಪಾಂಡು ಎಲ್‌. ಶೆಟ್ಟಿ, ಮುಕುಂದ ಎಸ್‌. ಶೆಟ್ಟಿ, ದೇವೇಂದ್ರ ಬಿ. ಬುನ್ನಾನ್‌, ಶಶಿಕಾಂತ್‌ ಎನ್‌. ಶೆಟ್ಟಿ, ಉದ್ಧವ್‌ ಕಾಂಬ್ಳೆ ಅವರು ಉಪಸ್ಥಿತರಿದ್ದರು.

ಕ್ರೆಡಿಟ್‌ ಸೊಸೈಟಿಯ ಸಿಇಒ ರಮೇಶ್‌ ಆರ್‌. ಶಿರೋಲೆ, ಪ್ರಬಂಧಕ ರವಿಕಾಂತ್‌ ನಾಯಕ್‌, ಅಧಿಕಾರಿ ಸೋನಿ ವೈ. ಶೆಟ್ಟಿ, ಇತರ ಸಿಬಂದಿಗಳನ್ನು ಗಣ್ಯರು ಗೌರವಿಸಿದರು. ಓ. ಪಿ. ಪೂಜಾರಿ ವಂದಿಸಿದರು. ಸದಸ್ಯ ಬಾಂಧವರು, ಶೇರುದಾರರು, ಸ್ಥಳೀಯ ಉದ್ಯಮಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.