ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮಹಾರಾಷ್ಟ್ರ : ಸಾಂಸ್ಕೃತಿಕ ಕಾರ್ಯಕ್ರಮ
Team Udayavani, Mar 29, 2019, 8:10 PM IST
ಮುಂಬಯಿ: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮಹಾರಾಷ್ಟ್ರ ಘಟಕದ ವತಿಯಿಂದ ಸಮೂಹ ಗಾಯನ ಸ್ಪರ್ಧೆ ಮತ್ತು ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜರಗಿತು.
ದ. ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ ತುಳು ವರಿದ್ದುಕೊಂಡು ಕನ್ನಡವನ್ನು ಗಟ್ಟಿ ಅನುಷ್ಠಾನಗೊಳಿಸಿದ್ದಾರೆ. ಮಹಾರಾಷ್ಟ್ರದ ತಾಯಿ ಬೇರೆಯಲ್ಲ, ಕನ್ನಡಾಂಬೆ ಬೇರೆಯಲ್ಲ, ನಾವೆಲ್ಲರೂ ಭಾರತಮಾತೆಯ ಮಕ್ಕಳಾಗಿ ಬೆಳೆ ದವರು. ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು, ಊರಿನ ಎಲ್ಲ ಕಾರ್ಯಗಳಿಗೂ ಬೆಳಕು ನೀಡಿದವರು. ಮುಂಬಯಿ ಕನ್ನಡಿಗರ ಮುಂಬಯಿಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಊರಿನವರಿಗೆ ಅಸೂಯೆ ತರುವಂತಹದ್ದು. ಜಾತೀಯ, ಇತರ ಸಂಘಟನೆ ಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡುತ್ತಿದ್ದು, ಮನಸಿಗೆ ಮುಟ್ಟುವಂತೆ ಹಾಡುವ ಸಂಗೀತಗಾರರ ತಂಡವೇ ಸುಗಮ ಸಂಗೀತ ಪರಿಷತ್ತಾಗಿದೆ. ವಿಶಿಷ್ಟವಾದ ಕಲಾವಿದರು ನಮ್ಮಲ್ಲಿ ದ್ದಾರೆ. ಅವರ ಪ್ರತಿಭೆಗೆ ಸೂಕ್ತ ವೇದಿಕೆ ಯನ್ನು ಸುಗಮ ಸಂಗೀತ ಪರಿಷತ್ತು ಕಲ್ಪಿಸುತ್ತದೆ. ಸುಗಮ ಸಂಗೀತ ಪರಿಷತ್ತು ಮುಖೇನ ಸಾಹಿತ್ಯ ಪರಿಷತ್ತು ಮುಂಬಯಿಯಲ್ಲಿ ನಡೆಯುವಂತಾಗಲಿ ಎಂದರು.
ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ನಾಡಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮಹಾರಾಷ್ಟ್ರ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು, ಅಧ್ಯಕ್ಷ ದಿನೇಶ್ ಆರ್. ಕೆ., ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಮೋಹನ್‌ದಾಸ್ ಶೆಟ್ಟಿ, ಸಂಚಾಲಕ ಕೃಷ್ಣ ಶೆಟ್ಟಿ ಮತ್ತು ರಾಜ್‌ಕುಮಾರ್ ಕಾರ್ನಾಡ್, ಸದಸ್ಯರುಗಳಾದ ಪ್ರಭಾಕರ ನಾಯಕ್, ಪುಷ್ಪಲತಾ ಗೌಡ, ಶಲಿತಾ ಕೊತ್ವಾಲ್, ಪ್ರತಿಮಾ ಹೆಗ್ಡೆ, ಸೌಭಾಗ್ಯ ಗೌಡ, ನಂದಾ ಸುವರ್ಣ, ರಾಜೇಂದ್ರ ರಾವ್, ಹರೀಶ್ ಪೂಜಾರಿ, ಸಲಹೆಗಾರರಾದ ಗಣೇಶ್ ಬಲ್ಯಾಯ, ವಿಜಯ ಕುಮಾರ್ ಶೆಟ್ಟಿ ತೋನ್ಸೆ ಅವರು ಉಪಸ್ಥಿತರಿದ್ದರು.
ಸಂಘಟಕ-ನಿರ್ದೇಶಕ, ರಂಗನಟ ಭಾಸ್ಕರ ಸುವರ್ಣ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಭಾವಗೀತೆ, ಸಮೂಹ ಗಾಯನ, ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ ದರು. ಸಂಸ್ಥೆಯ ಕಲಾವಿದರು ಗಳಿಂದ ಸಂಗೀತ, ನೃತ್ಯ ವೈವಿಧ್ಯ ನಡೆಯಿತು. ಆನಂತರ ಕವಿಗೋಷ್ಠಿ ನೆರವೇರಿತು.
ಚಿತ್ರ-ವರದಿ : ಸುಭಾಷ್‌ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.