ಕರ್ನಾಟಕ ಸಮಾಜ ಸೂರತ್‌:ಕರ್ನಾಟಕ ರಾಜ್ಯೋತ್ಸವ 


Team Udayavani, Nov 2, 2017, 12:25 PM IST

01-Mum06a.jpg

ಸೂರತ್‌: ಕರ್ನಾಟಕದವರು ಒಂದಾದಾಗ ಮಾತ್ರ ಇಂತಹ ಸಂಭ್ರಮಗಳು  ಅರ್ಥಪೂರ್ಣವಾಗುತ್ತವೆೆ. ಅಲೂರು ವೆಂಕಟರಾಯರ ಏಕೀಕರಣದ ಫಲವಾಗಿ ಈ ಸಂಭ್ರಮ ನಮಗೆ ಸಾಧ್ಯವಾಗಿದೆ. ಕನ್ನಡಿಗರ ಏಕೀಕರಣದ ಸುದಿನವೆ ರಾಜ್ಯೋತ್ಸವವಾಗಿದ್ದು, ಇದು ಭವಿಷ್ಯತ್ತಿನ ಪೀಳಿ ಗೆಗೂ ಮುನ್ನಡೆಯಬೇಕು. ಹೊರನಾಡ‌ ಕನ್ನಡಿಗರಲ್ಲಿ ಒಳನಾಡಿನ ಕನ್ನಡಿಗರಿಕ್ಕಿಂತ ಭಾಷಾ ಸ್ಪಷ್ಟತೆಯಿದೆ. ಸೂರತ್‌- ಹುಬ್ಬಳ್ಳಿ-ಬೆಂಗಳೂರಿಗೆ ನೇರ ವಿಮಾನ ಸಂಚಾರ ಸೇವಾ ರಂಭಗೊಳ್ಳಬೇಕು.  ಸೂರತ್‌ನಲ್ಲಿ ಕನ್ನಡಿಗ ಸಂಸದ, ಶಾಸಕರ  ಆಯ್ಕೆ ಯಾಗಬೇಕು ಎಂಬ  ಆಶಯ ನನ್ನದಾಗಿದೆ.  ಇದಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.  ಇಲ್ಲಿನ ಕನ್ನಡಿಗರು ಒಗ್ಗಟ್ಟಿನ ದನಿ ಗೂಡಿಸಿದರೆ ಇದೆಲ್ಲವೂ ಸಾಕಾರಗೊಳ್ಳುವ ಭರವಸೆ ನನಗಿದೆ ಎಂದು ಸೂರತ್‌ನ ಆದಾಯ ತೆರಿಗೆ ಇಲಾಖೆಯ ಆಯುಕ್ತ  ಶ್ರೀನಿವಾಸ ಬಿದರಿ ಮಾತನಾಡಿದರು.

ನ. 1 ರಂದು ಕರ್ನಾಟಕ ಸಮಾಜ ಸೂರತ್‌ ವತಿಯಿಂದ ಸೂರತ್‌ ನಾನ್‌ಪುರದ ಜೀವನ ಭಾರತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಕನ್ನಡಾಭಿಮಾನಕ್ಕೆ ಋಣಿಯಾಗಿದ್ದೇನೆ. ಭಾಷೆಯ ಬಗ್ಗೆ ಗೌರವ, ಅಭಿಮಾನವನ್ನು ಮಕ್ಕಳು ಹೊಂದುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿವೆ ಎಂದರು.

ಶ್ರೀ ಕ್ಷೇತ್ರ ಕಟೀಲು ಮೇಳದ ಭಾಗವತ, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮಂಗಳೂರು ಇದರ ಸಂಸ್ಥಾಪಕಾಧ್ಯಕ್ಷ, ಯಕ್ಷ ಚಕ್ರೇಶ್ವರ ಪಟ್ಲ ಸತೀಶ್‌ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಗುಜರಾತ್‌ನಲ್ಲಿ ಒಳನಾಡ ಸಂಭ್ರಮ ನಿಜವಾಗಿ ಅಭಿನಂದನೀಯ. ಭಾಷೆ ಸಂಸ್ಕೃತಿಯನ್ನು ಎಲ್ಲಾ ಪ್ರಕಾರಗಳೊಂದಿಗೆ ಆಚರಿಸುತ್ತಿರುವುದು ಕನ್ನಡದ ಸೌಭಾಗ್ಯವಾಗಿದೆ. ಇದೊಂದು ಅರ್ಥಗರ್ಭಿತವಾಗಿ ಆಚರಣೆಯಾಗಿದ್ದು, ಮಕ್ಕಳಲ್ಲಿ ಕನ್ನಡದ ಹುಮ್ಮಸ್ಸು ಬೆಳೆಸುತ್ತಿರುವುದನ್ನು  ಹೇಳಲು ಶಬ್ದಗಳಿಲ್ಲ. ಭಾಷಾ ವಿರೋಧಿಗಳಾಗದಿರಿ, ಆದರೆ ಕನ್ನಡ ಅಥವಾ ಮಾತೃಭಾಷೆಯನ್ನು ಎಂದೂ ಮರೆಯದಿರಿ. ಕನ್ನಡ ಭಾಷೆ ಜನನಿ ಸಮಾನವಾದದ್ದು ಇದನ್ನು ಪ್ರೀತಿಸಿದರೆ ಜನನಿದಾತೆಯನ್ನು ಪ್ರೀತಿಸಿದಂತೆ ಎಂದು ನುಡಿದರು.

ಸೂರತ್‌ನ ಹಿರಿಯ ತುಳು-ಕನ್ನಡತಿ, ಸಮಾಜ ಸೇವಕಿ ಮೀನಾ ಮಂಜುನಾಥ್‌ ಶೆಟ್ಟಿಗಾರ್‌ ಅವರು ಅತಿಥಿಯಾಗಿ ಪಾಲ್ಗೊಂಡು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವವನ್ನು ನಿಜವಾಗಿಸಿ ಆಚರಿಸಿದಾಗ ಕನ್ನಡಿಗರ ಜನ್ಮ ಸಾರ್ಥಕವಾಗುವುದು. ಕರ್ನಾಟಕ ಕನ್ನಡಿಗರೆಲ್ಲರ ಆಸ್ತಿ. ಇದರ ಉಳಿವು ನಮ್ಮೆಲ್ಲರ ಹೊಣೆಯಾಗಿದೆ ಎಂದು  ಸ್ಥಾನೀಯ ಕನ್ನಡಿಗರಿಗೆ ಕರೆ ನೀಡಿದರು.

ಗೌರವ ಅತಿಥಿಗಳಾಗಿ ಸ್ಥಾನೀಯ  ಉದ್ಯಮಿ ರಾಧಾಕೃಷ್ಣ ಶೆಟ್ಟಿ ಸೂರತ್‌, , ಬಿಲ್ಲವ ಸಂಘ ಸೂರತ್‌ ಇದರ ವಿಶ್ವನಾಥ ಪೂಜಾರಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಇದರ ಗುಜರಾತ್‌ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಸಮಾಜ ಸೇವಕರಾದ ಅಜಿತ್‌ ಎಸ್‌. ಶೆಟ್ಟಿ ಅಕ್ಲೇಶ್ವರ, ವಸಂತ ಶೆಟ್ಟಿ, ಪ್ರಭಾಕರ್‌ ಶೆಟ್ಟಿ, ಗೋಪಾಲ ಪೂಜಾರಿ, ಇಂದುದಾಸ್‌ ಶೆಟ್ಟಿ, ವಾಸು ಪಿ. ಪೂಜಾರಿ ಬರೋಡಾ, ಶಿವರಾಮ ಶೆಟ್ಟಿ, ಸಂಘದ ಗೌರವಾಧ್ಯಕ್ಷ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ದಿನೇಶ್‌ ಶೆಟ್ಟಿ, ರಮೇಶ್‌ ಭಂಡಾರಿ ಬರ್ಡೊಲಿ, ಉಮೇಶ್‌ ಸಫಲಿಗ, ಅಜಿತ್‌ ಶೆಟ್ಟಿ, ಗೌರವ  ಪ್ರಧಾನ  ಕಾರ್ಯದರ್ಶಿ ವನಿತಾ ಜೆ. ಶೆಟ್ಟಿ, ಜೊತೆ ಕಾರ್ಯದರ್ಶಿ ಶಾಂತಿ ಡಿ. ಶೆಟ್ಟಿ,  ಸಂಘಟನಾ ಕಾರ್ಯದರ್ಶಿ  ಸಂತೋಷ್‌  ವಿ. ಶೆಟ್ಟಿ, ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷೆ ಸುನೀತಾ ಆರ್‌. ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಿಸಿದ ಹಿರಿಯರಾದ  ರಾಮಣ್ಣ ಶೆಟ್ಟಿ ಮತ್ತು ಯಶೋಧಾ ಆರ್‌. ಶೆಟ್ಟಿ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ದಾನಿಗಳು ಹಾಗೂ ಪ್ರಾಯೋಜಕರನ್ನು  ಗೌರವಿಸಲಾಯಿತು. ಪ್ರತಿಭಾವಂತ ಮಕ್ಕಳನ್ನು  ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಸಂಸ್ಥೆಯ ವಾರ್ಷಿಕ   ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿ ಗಣ್ಯರು ಶುಭಹಾರೈಸಿದರು. ನಾಡಗೀತೆಯೊಂದಿಗೆ ರಾಜ್ಯೋತ್ಸವ  ಸಂಭ್ರಮ ಪ್ರಾರಂಭಗೊಂಡಿತು.

ಅಮಿತಾ ಉಮೇಶ್‌ ಪ್ರಾರ್ಥನೆಗೈದರು. ಕೋಶಾಧಿಕಾರಿ ರಾಧಾಕೃಷ್ಣ ಮೂಲ್ಯ ಬಹುಮಾನ ವಿಜೇತರ ಪಟ್ಟಿಯನ್ನು  ವಾಚಿಸಿದರು. ರಂಜನಿ ಪ್ರವೀಣ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸೂರತ್‌ನ ಕಲಾವಿದರಿಂದ, ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.  ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಪಟ್ಲ ಸತೀಶ್‌ ಶೆಟ್ಟಿ ಅವರ ಭಾಗವತಿಕೆಯಲ್ಲಿ “ಮಾನಿಷಾದ’ ಯಕ್ಷಗಾನ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸೌಮ್ಯಾ ಪಿ. ಪೂಜಾರಿ, ಕಾರ್ಯದರ್ಶಿ ಕಸ್ತೂರಿ ಎಲ್‌. ಶೆಟ್ಟಿ, ಜೊತೆ ಕಾರ್ಯದರ್ಶಿ ಉಮಾ ಆರ್‌. ಮೂಲ್ಯ, ಬರೋಡದ ಹರೀಶ್‌ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಕೃಷ್ಣ ಶೆಟ್ಟಿ, ಸೂರತ್‌ನ ದಿನೇಶ್‌ ಶೆಟ್ಟಿ ಹಾವಂಜೆ, ಶೋಭಾ ಪ್ರಕಾಶ್‌ ಶೆಟ್ಟಿ, ರಮೇಶ್‌ ಭಂಡಾರಿ, ಪುಷ್ಪಾ ವಿ. ಶೆಟ್ಟಿ, ರತ್ನಾಕರ ಕೋಟ್ಯಾನ್‌, ನರೇಶ್‌ ಕುಲಾಲ್‌, ಮೋಹನ್‌ ಬಂಜನ್‌, ಶಾರದಾ ದೇವಾಡಿಗ, ಜಗನ್ನಾಥ್‌ ರೈ ಸೇರಿದಂತೆ‌ ಸದಸ್ಯರು, ಕರ್ನಾಟಕ, ಗುಜರಾತ್‌ ಮತ್ತು ಮಹಾರಾಷ್ಟ್ರ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

ಹೊರನಾಡ ಕನ್ನಡಿಗರು ಅಪ್ಪಟ ಕನ್ನಡ ಪ್ರೇಮಿಗಳಾಗಿದ್ದಾರೆ. ಇವರಲ್ಲಿನ ಭಾಷಾಪ್ರೇಮ, ಸಾಹಿತ್ಯ ಸಂಸ್ಕೃತಿಯ ನೈಜ ಸೇವೆ ಒಳನಾಡ ಕನ್ನಡಿಗರಿಗೆ ಮಾದರಿಯಾಗಿದೆ. ಭವಿಷ್ಯತ್ತಿನಲ್ಲೂ ಕನ್ನಡಾಂಭೆಯ ಅನುಪಮ ಸೇವೆಯಲ್ಲಿ ತೊಡಗಿಸಿ ನಮ್ಮತನ ಉಳಿಸಿಕೊಳ್ಳೋಣ
–  ಶಶಿಧರ್‌ ಶೆಟ್ಟಿ  ಬರೋಡ
(ಅಧ್ಯಕ್ಷರು, ತುಳು ಸಂಘ ಬರೋಡ).

ಹೊರನಾಡಿನಲ್ಲಿ ಭವನೇಶ್ವರಿಯ ಸೇವೆಯನ್ನು ಕರುನಾಡ ದೀಪ ಹಚ್ಚಿ ಬಾಂಧವ್ಯತೆ ಮೈಗೂಡಿಸಿಕೊಂಡು ನಡೆಸುತ್ತಿದ್ದೇವೆ. ಕನ್ನಡಕ್ಕಾಗಿ ಸಂಘಟನೆಯ ಅವಶ್ಯಕತೆಯಿದೆ. ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ತನ್ನಿಂದ ತಾನೇ ಬೆಳೆಯುತ್ತದೆ. ಮಕ್ಕಳಿಗೆ ನಾಡು-ನುಡಿ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಿಸುವ ಕಾರ್ಯದಲ್ಲಿ ಸಂಸ್ಥೆಯು ತೊಡಗಿದೆ. ನಮ್ಮ ನಾಡು-ನುಡಿ ಸೇವೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ
– ಮನೋಜ್‌ ಸಿ. ಪೂಜಾರಿ
(ಅಧ್ಯಕ್ಷರು,  ಕರ್ನಾಟಕ ಸಮಾಜ ಸೂರತ್‌).

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.