ಕರ್ನಾಟಕ ಸಂಘ ಕಲಾವೇದಿಕೆ ಸಂಗೀತ ಕಾರ್ಯಕ್ರಮ
Team Udayavani, Nov 21, 2017, 2:15 PM IST
ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಕಲಾವೇದಿಕೆ ಕಲಾಭಾರತಿ ಆಶ್ರಯದಲ್ಲಿ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳನ್ನು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಆಯೋಜಿಸಲಾಗಿತ್ತು.
ನ. 5ರಂದು ಪೂರ್ವಾಹ್ನ 10ರಿಂದ ಶುಭಮ್ ಮ್ಯೂಸಿಕ್ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಶಾಸ್ತ್ರೀಯ ಸಂಗೀತ ಮೈಫಲ್ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಪದ್ಮವಿಭೂಷಣ ಡಾ| ಗಂಗೂಬಾಯಿ ಹಾನಗಲ್ ಅವರ ಶಿಷ್ಯ ಅಶೋಕ ನಾಡಗೀರ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ನೆರವೇರಿತು. ಪಕ್ಕವಾದಕರಾಗಿ ಪುಷ್ಕರ ಜೋಶಿ ಅವರು ತಬಲಾದಲ್ಲಿ, ಸಂವಾದಿನಿಯಲ್ಲಿ ಸುಪ್ರಿಯಾ ಜೋಶಿ ಅವರು ಸಹಕರಿಸಿದರು.
ಅದೇ ರೀತಿ ನ. 12ರಂದುಪೂರ್ವಾಹ್ನ 10ರಿಂದ ಖಯಾಲ್ ಟ್ರಸ್ಟ್ ಅವರ ಪ್ರಾಯೋಜಕತ್ವದಲ್ಲಿ ಉಸ್ತಾದ್ ನಿಜಾಮುದ್ದೀನ್ ಖಾನ್‌ಸ್ಮರಣಾರ್ಥ ಶಾಸ್ತ್ರೀಯಸಂಗೀತಸ್ಮೃತಿಕಾರ್ಯಕ್ರಮವನುಆಯೋಜಿಸಲಾಗಿತ್ತು.ಪ್ರಸಿದ್ಧ ಕಲಾವಿದೆಅಪರ್ಣಾಪಣಶೀಕರ ಅವರಿಂದಶಾಸ್ತ್ರೀಯ ಗಾಯನ, ವಿಂದೋಳ್ ಮುಜುಮ್‌ದಾರ್ ಅವರಿಂದ ಏಕ ವ್ಯಕ್ತಿ ತಬಲಾ ವಾದನವು ನೆರೆದ ಸಂಗೀತ ರಸಿಕರನ್ನು ರಂಜಿಸಿತು.ಪಕ್ಕವಾದಕರಾಗಿ ಅಜಯ್ ಜೋಗಳೇಕರ್ ಮತ್ತು ಜ್ಞಾನೇಶ್ವರ್ ಸೋನಾವಣೆ ಹಾರ್ಮೋನಿಯಂನಲ್ಲಿ ಹಾಗೂ ತಬಲಾದಲ್ಲಿ ಭೂಷಣ್ ಪರಚುರೆ ಅವರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘದ ವತಿಯಿಂದ ಕಲಾವಿದರುಗಳನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ವಿಭಾಗಗಳ ಪದಾಧಿಕಾರಿಗಳು, ಸದಸ್ಯರು, ಸಂಗೀತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.