ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷರಾಗಿ ಎಂ.ಎಂ.ಕೋರಿ ಮರು ಆಯ್ಕೆ
Team Udayavani, Jun 18, 2019, 4:42 PM IST
ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗರ ಸಂಘಗಳಲ್ಲೇ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆ ಎಂದೆಣಿಸಿ ಒಂಬತ್ತನೇ ದಶಕದತ್ತ ಮುನ್ನಡೆಯುತ್ತಿರುವ ಕರ್ನಾಟಕ ಸಂಘ ಮುಂಬಯಿ ಇದರ 2019-2022ನೇ ಸಾಲಿನ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಜೂ. 16 ರಂದು ಚುನಾವಣೆ ನಡೆಯಿತು.
ಹೊರನಾಡಿನಲ್ಲಿ ಎಲ್ಲಾ ಜಾತಿ-ಮತ, ಸಮುದಾಯಗಳ ಪ್ರಾತಿನಿಧ್ಯ ಹೊಂದಿರುವ ಸಂಘದ ಕಾರ್ಯಕಾರಿ ಸಮಿತಿ ಆಯ್ಕೆಗೆ ನಗರದ ಮಾಟುಂಗ ಪಶ್ಚಿಮದ ಟಿ. ಎಚ್. ಕಟರಿಯಾ ಮಾರ್ಗದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಆವರಣದಲ್ಲಿ ಪೂರ್ವಾಹ್ನದಿಂದ ಸಂಜೆ ವರೆಗೆ ಮತದಾನ ನಡೆಸಲ್ಪಟ್ಟಿತು. ಶಾಂತಯುತವಾಗಿಯೇ ನಡೆದ ಮತದಾನದಲ್ಲಿ ಸುಮಾರು 500 ಸದಸ್ಯರು ಮತ ಚಲಾಯಿಸಿದರು.
ಹಾಲಿ ಅಧ್ಯಕ್ಷ ಮನೋಹರ ಎಂ. ಕೋರಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು 355 ಮತಗಳನ್ನು ಪಡೆದು ವಿಜೇತರೆಣಿಸಿದರು. ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ರಾಮೇಶ್ವರ ಎನ್. ಹತ್ತರRರ್ 121 ಮತಗಳನ್ನು ಪಡೆದು ಪರಾಜಿತಗೊಂಡರು. ಅಧ್ಯಕ್ಷ ಸ್ಥಾನದಲ್ಲಿ 24 ಮತಗಳು ಅಸಿಂಧುಗೊಂಡಿದ್ದವು. ಹಾಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಸೆೇರಿದಂತೆ ಅನೇಕ ಗಣ್ಯ ಸದಸ್ಯರು ಆಗಮಿಸಿ ಮತ ಚಲಾಯಿಸಿದರು. ಎಸ್. ಬಿ. ರಾಮಣ್ಣ, ಸುಧಾಕರ ಮೈಂದನ್ ಮತ್ತು ಸದಾನಂದ ಅಮೀನ್ ಅವರು ಚುನಾವಣಾ ಅಧಿಕಾರಿಗಳಾಗಿದ್ದು ಸಂಜೆ ವೇಳೆಗೆ ಚುನಾವಣಾ ಫಲಿತಾಂಶ ಪ್ರಕಟಿಸಿದರು.
ಸಾಮಾನ್ಯ ವಿಭಾಗದ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಹಾಲಿ ಆಡಳಿತ್ವ ತಂಡದ ಪರವಾಗಿ ಅಭ್ಯರ್ಥಿಗಳಾಗಿದ್ದ ನರಸಿಂಹ ಎಂ. ಗುಡಿ 332 ಮತಗಳು, ಸೋಮನಾಥ ಸಿ. ಹಲಗತ್ತಿ 326, ಸುಂದರ ಸಿ. ಕೋಟ್ಯಾನ್ 361, ವಿದ್ಯಾ ವಿ. ಚಿಟಗುಪ್ಪಿ 327 ಮತಗಳನ್ನು ಪಡೆದು ವಿಜೇತರೆಣಿಸಿದರೆ, ಪ್ರತಿಸ್ಪರ್ಧಿಗಳಾಗಿದ್ದ ಹ್ಯಾರಿ ರೋಸಾರಿಯೋ ಸಿಕ್ವೇರ 141 ಮತ್ತು ವಿಶ್ವನಾಥ ಎಸ್. ಶೆಟ್ಟಿ ಅವರು 151 ಮತಗಳನ್ನು ಪಡೆದು ಪರಾಭವಗೊಂಡರು.
ಸಂಘದ 85ನೇ ವಾರ್ಷಿಕ ಮಹಾಸಭೆಯು ಜೂ. 23 ರಂದು ಸಂಜೆ 5 ರಿಂದ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ನಡೆಯಲಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಭರತ್‌ಕುಮಾರ್ ಪೊಲಿಪು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ಮನೋಹರ ಎಂ. ಕೋರಿ, ಉಪಾಧ್ಯಕ್ಷರಾಗಿ ಡಾ| ಈಶ್ವರ್ ಅಲೆವೂರು, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಡಾ| ಭರತ್‌ಕುಮಾರ್ ಪೊಲಿಪು, ಗೌರವ ಜೊತೆ ಕಾರ್ಯದರ್ಶಿಯಾಗಿ ಅಮರೇಶ್ ಸಿ. ಪಾಟೀಲ್, ಗೌರವ ಕೋಶಾಧಿಕಾರಿಯಾಗಿ ನ್ಯಾಯವಾದಿ ಎಂ. ಡಿ. ರಾವ್, ಗೌರವ ಜೊತೆ ಕೋಶಾಧಿಕಾರಿಯಾಗಿ ದಿನೇಶ್ ಎ. ಕಾಮತ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ| ಎಸ್. ಕೆ. ಭವಾನಿ, ಸುಧಾಕರ್ ಪಾಲನ್, ರಾಜೀವ್ ಎನ್. ನಾಯಕ್, ಲಲಿತಾ ಪಿ. ಅಂಗಡಿ, ಓಂದಾಸ್ ಕಣ್ಣಂಗಾರ್, ಡಾ| ಮಮತಾ ಟಿ. ರಾವ್, ಡಾ| ಜಿ. ಪಿ. ಕುಸುಮಾ, ದುರ್ಗಪ್ಪ ಎಲ್ಲಪ್ಪ ಕೊಟ್ಯಾವರ್, ಸುಶೀಲಾ ಎಸ್. ದೇವಾಡಿಗ ಸೇರಿದಂತೆ ಒಟ್ಟು 16 ಮಂದಿ ಸದಸ್ಯರ ಮಂಡಳಿ ಕಾರ್ಯನಿರತವಾಗಿದೆ.
ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.