“ಒಗ್ಗಟ್ಟಿನಿಂದ ಶ್ರಮಿಸಿದಾಗ ಕರ್ನಾಟಕ ಕ್ರೀಡಾ ಭವನ ನಿರ್ಮಾಣ ಸಾಧ್ಯ ‘

Team Udayavani, Feb 23, 2021, 5:37 PM IST

“ಒಗ್ಗಟ್ಟಿನಿಂದ ಶ್ರಮಿಸಿದಾಗ ಕರ್ನಾಟಕ ಕ್ರೀಡಾ ಭವನ ನಿರ್ಮಾಣ ಸಾಧ್ಯ ‘

ಮುಂಬಯಿ: ನಗರದ ತುಳು-ಕನ್ನಡಿಗರ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲೊಂದಾದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಫೆ. 20ರಂದು ಚರ್ಚ್‌ಗೇಟ್‌ ಸಮೀಪದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಕ್ರೀಡಾಂ ಗಣದಲ್ಲಿ ಜರಗಿತು.

ಕೋವಿಡ್ ಮಹಾಮಾರಿಯಿಂದ ಪ್ರಸ್ತುತ ವರ್ಷದ ವಾರ್ಷಿಕ ಮಹಾ ಸಭೆಯು ವಿಳಂಬವಾಗಿ ನಡೆಯಿತು. ಗತ ವಾರ್ಷಿಕ ಮಹಾಸಭೆಯ ವರದಿ ಮತ್ತುಲೆಕ್ಕಪತ್ರಗಳನ್ನು ಸಂಸ್ಥೆಯ ಪದಾಧಿಕಾರಿಗಳು  ವಾಚಿಸಿ, ಮಂಜೂರು ಮಾಡಲಾಯಿತು.ಇದೇ ಸಂದರ್ಭದಲ್ಲಿ ಕ್ರೀಡಾರಂಗದಲ್ಲಿ ವಿಶೇಷ ಸಾಧನೆಗೈದವರನ್ನು ಕರ್ನಾಟಕನ್ಪೋರ್ಟಿಂಗ್‌ ಅಸೋಸಿಯೇಶನ್‌ನ ಜೀವ ಮಾನ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ಪ್ರಸ್ತಾವಕ್ಕೆ ಸರ್ವಾನುಮತದಿಂದ ಮಾನ್ಯತೆನೀಡಲಾಯಿತು.

ಕ್ರೀಡಾ ಸಾಧಕರಿಗೆ ಅಭಿನಂದನೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ, ಅರ್ಜುನ್‌ ಪ್ರಶಸ್ತಿ ಪುರಸ್ಕೃತ ಚಿರಾಗ್‌ ಶೆಟ್ಟಿ, ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟಗಾರರಾದ ಸ್ಟೀವನ್‌ ಡಯಾಸ್‌, ಗೋಡ್‌ಫ್ರೇ ಪರೇರಾ, ಮಹಾರಾಷ್ಟ್ರ ಫುಟ್ಬಾಲ್‌ ತಂಡದ ನಾಯಕ ವಿಜೇತ್‌ ಶೆಟ್ಟಿ, ಅಂತಾರಾಷ್ಟ್ರೀಯ ಫುಟ್ಬಾಲ್‌ಪಟು ರಾಯನ್‌ ಡಿ’ಸೋಜಾ ಹಾಗೂ ಅಂತರಾಷ್ಟ್ರೀಯ ಜೂನಿಯರ್‌ ಕ್ರಿಕೆಟ್‌ ಪಟು ತನುಷಾ ಕೋಟ್ಯಾನ್‌ ಅವರನ್ನು ಸಂಸ್ಥೆಯ ಪದಾಧಿಕಾರಿಗಳು ಅಭಿನಂದಿಸಿ, ಗೌರವಿಸಿ ಶುಭ ಹಾರೈಸಿದರು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿ ಯೇಶನ್‌ ಅಧ್ಯಕ್ಷ ಡಾ| ಪಿ. ವಿ.ಶೆಟ್ಟಿ ಮಾತನಾಡಿ, ಸಂಸ್ಥೆಯ ಲೀಸ್‌ ನವೀಕರಣ ದೊರಕಿದ ಬಳಿಕ ಚರ್ಚ್ ಗೇಟ್‌ನಲ್ಲಿ ಕ್ರೀಡಾಪಟುಗಳಿಗೆ ಸುಸಜ್ಜಿತ ವಾದ ಕ್ಲಬ್‌ ಹೌಸ್‌ ಮತ್ತು ಇನ್ನಿತರ ಸವಲತ್ತುಗಳನ್ನೊಳಗೊಂಡ ಕರ್ನಾಟಕಕ್ರೀಡಾ ಭವನವನ್ನು ನಿರ್ಮಿಸಲಾಗುವುದು. ಸಂಸ್ಥೆಯ ಈ ಬೃಹತ್‌ ಯೋಜನೆಗೆ ಅಸೋಸಿಯೇಶನ್‌ನ ಸದಸ್ಯರು, ಕ್ರೀಡಾ ಪ್ರೇಮಿಗಳು ಅಲ್ಲದೆ ತುಳು-ಕನ್ನಡಿಗರು, ಹಿತಚಿಂತಕರ ಸಹಕಾರ ಅಗತ್ಯವಾಗಿದೆ. ನಾವೆಲ್ಲರು ಒಂದಾಗಿ ಕರ್ನಾಟಕ ಕ್ರೀಡಾಭವನದ ನಿರ್ಮಾಣಕ್ಕೆ ಮುಂದಾಗೋಣ. ಒಗ್ಗಟ್ಟಿನಿಂದ ಮುನ್ನಡೆದರೆ ತುಳು-ಕನ್ನಡಿಗ ಕ್ರೀಡಾಪಟುಗಳ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿ ಸಂಸ್ಥೆಯ ಕಾರ್ಯವೈಖರಿಯನ್ನು ಅಭಿನಂದಿಸಿದರು.

ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿ ಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಜಯ ಎ. ಶೆಟ್ಟಿ ಅವರು ಸಂಸ್ಥೆಯ ಸಾಧನೆಗಳನ್ನು ವಿವರಿಸಿ, ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರವನ್ನು ಬಯಸಿದರು. ಸದಸ್ಯರುಸಂಸ್ಥೆಯ ವಿವಿಧ ಯೋಜನೆಗಳಿಗೆಅನುಮೋದನೆ ನೀಡಿದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಹಕರಿಸಿ ಇತ್ತೀಚೆಗೆ ರಾಜ್ಯಪಾಲರಿಂದ ಕೋವಿಡ್ ಯೋಧ ಪುರಸ್ಕಾರ ಪಡೆದ ಸಂಸ್ಥೆಯ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ಪೊಯಿಸಾರ್‌ ಜಿಮ್ಖಾನದ ಉಪಾಧ್ಯಕ್ಷ ಕರುಣಾಕರ್‌ ಶೆಟ್ಟಿ ಅವರನ್ನು ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಉಪಾಧ್ಯಕ್ಷ ರವಿ ಅಂಚನ್‌, ಜತೆ ಕಾರ್ಯದರ್ಶಿಎಂ. ಪಿ. ಶೆಟ್ಟಿ ಅವರು ಅಭಿನಂದಿಸಿ, ಗೌರವಿಸಿದರು.

ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನುಪಡೆದು ವಿಜಯಿಯಾದ ಗೌರವ್‌ ಪಯ್ಯಡೆಅವರನ್ನು ಸಂಸ್ಥೆಯ ಕೋಶಾಧಿಕಾರಿ ಜಯಂತ್‌ ಕುಂದರ್‌ ಗೌರವಿಸಿದರು. ರಾಜ್ಯಮಟ್ಟದ ಫುಟ್ಬಾಲ್‌ ಪಂದ್ಯಾಟದಲ್ಲಿ ಉಪ ವಿಜೇತರಾದ ಕರ್ನಾಟಕ ಸ್ಪೋರ್ಟಿಂಗ್‌ ಅಸೋಸಿಯೇಶನ್‌ ತಂಡದ ಆಟಗಾರರು, ತರಬೇತುದಾರ ಶ್ಯಾಮ್‌ ಸಾವಂತ್‌, ವ್ಯವಸ್ಥಾಪಕ ಸಾಲ್ಪ್ಢೋರ್‌ ಡಿ’ಸೋಜಾ, ಸಹಾಯಕ ಗಣೇಶ್‌ ಅವರನ್ನು

ವಿಶೇಷವಾಗಿ ಸಮ್ಮಾನಿಸಲಾಯಿತು. ಕಾರ್ಯದರ್ಶಿ ಜಯ ಎ. ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿ, ವಂದಿಸಿದರು. ಕರ್ನಾಟಕ ಸ್ಪೋರ್ಟಿಂಗ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಮಹಾಸಭೆಯ ಯಶಸ್ಸಿಗೆ ಸಹಕರಿಸಿ ದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಟರ್ಫ್‌ ಕ್ರೀಡಾಂಗಣ ನಿರ್ಮಾಣಕ್ಕೆ ಮಾನ್ಯತೆ :

ಕೆಎಸ್‌ಎ ಸಂಸ್ಥೆಯ ಲೀಸ್‌ ನವೀಕರಣದ ಬಗ್ಗೆ ಮಹಾರಾಷ್ಟ್ರ ಸರಕಾರದಿಂದ ಸಕಾರಾತ್ಮಕ ಸೂಚನೆ ದೊರಕಿದ್ದು, ಈ ನಿಟ್ಟಿನಲ್ಲಿ ರಾಜಕೀಯ ಧುರೀಣರಾದ ಎನ್‌ಸಿಪಿ ನೇತಾರ ಶರದ್‌ ಪವಾರ್‌, ಕ್ರೀಡಾ ಸಚಿವ ಸುನೀಲ್‌ ಕೇದಾರ್‌, ಅದಿತಿ ತಟ್ಕರೆ, ಪರಿಸರ ಸಚಿವ ಮತ್ತು ಮುಂಬಯಿ ಡಿಸ್ಟ್ರಿಕ್ಟ್ ಫುಟ್ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ಆದಿತ್ಯ ಠಾಕ್ರೆ ಹಾಗೂ ಸಂಸದ ಗೋಪಾಲ್‌ ಶೆಟ್ಟಿ ಅವರ ಸಹಾಯವನ್ನು ಸಭೆಯಲ್ಲಿ ಸ್ಮರಿಸಿ ಅವರಿಗೆ ಕೃತಜ್ಞತೆಸಲ್ಲಿಸಲಾಯಿತು. ಕ್ರೀಡಾಂಗಣದಲ್ಲಿ ವಿದ್ಯುದ್ದೀಕರಣ, ಟರ್ಫ್‌ ಕ್ರೀಡಾಂಗಣ ನಿರ್ಮಾಣಕ್ಕೆ ಸಭೆಯಲ್ಲಿ ಮಾನ್ಯತೆ ನೀಡಲಾಯಿತು.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.