ಕಾತ್ರಜ್ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಉತ್ಸವ
Team Udayavani, Dec 18, 2017, 4:52 PM IST
ಪುಣೆ: ಪುಣೆಯ ಕಾತ್ರಜ್ ಸಚ್ಚಾಯಿ ಮಾತಾ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹೋತ್ಸವ ಹಾಗೂ ಮಹಾಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಡಿ. 16ರಂದು ಜರಗಿತು.
ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಶ್ರೀ ಹರೀಶ್ ಭಟ್ ಮತ್ತು ಸಂಗಡಿಗರ ನೇತೃತ್ವದಲ್ಲಿ ದೇವಸ್ಥಾನದ ಆರಾಧ್ಯ ದೇವರಾದ ಶ್ರೀ ಅಯ್ಯಪ್ಪ ಸ್ವಾಮಿಗೆ ಹಾಗೂ ಪರಿವಾರ ದೇವರಿಗೆ ಹೋಮ, ವಿಶೇಷ ಪೂಜೆ ಮತ್ತು ಪಡಿಪೂಜೆ ಮಹಾಪೂಜೆ, ಪಲ್ಲಕಿ ಉತ್ಸವ, ಬಲಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯ ಕ್ರಮಗಳು ಜರಗಿತು. ಡಿ. 15ರಂದು ಸಂಜೆ ಸುದರ್ಶನ ಹೋಮ ಮತ್ತು ವಾಸ್ತು ಪೂಜೆ ಜರಗಿತು.
ಡಿ. 16ರಂದು ಗಣಹೋಮ, ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರಧಾನ ಹೋಮ ಜರಗಿತು. ಅನಂತರ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿಗೆ ವಿವಿಧ ಅಭಿಷೇಕಗಳು ಮತ್ತು ಅಲಂಕಾರ ಪೂಜೆ ನೆರವೇರಿತು. ಅನಂತರ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಯವರಿಂದ ಮತ್ತು ಭಕ್ತ ಸಮೂಹದಿಂದ ಭಜನಾವಳಿ ನಡೆಯಿತು. ಪೂರ್ವಾಹ್ನ ವಿವಿಧ ರೀತಿಯ ಪ್ರಭಾವಳಿ, ಚೆಂಡೆ, ವಾದ್ಯ, ಮಂತ್ರಘೋಷಗಳೊಂದಿಗೆ ಅಯ್ಯಪ್ಪ ಮಾಲಾಧಾರಿಗಳು ಮತ್ತು ಭಕ್ತವೃಂದದ ಕುಣಿತದೊಂದಿಗೆ ದೇವರ ಪಲ್ಲಕಿ ಬಲಿ ಮೆರವಣಿಗೆಯು ದೇವಸ್ಥಾನದ ಸುತ್ತಮುತ್ತದ ರಸ್ತೆ ಗಳಲ್ಲಿ ಸಾಗಿ ಮತ್ತೆ ದೇವಸ್ಥಾನದಲ್ಲಿ ಸಮಾಪನಗೊಂಡಿತು.
ಮಧ್ಯಾಹ್ನ 12.30 ರಿಂದ ಭಕ್ತರ ಜಯಘೋಷದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಹರೀಶ್ ಭಟ್ ನೇತೃತ್ವದಲ್ಲಿ ಪ್ರಧಾನ ಮಹಾಪೂಜೆ, ಮಹಾಮಂಗಳಾರತಿ ಹಾಗೂ ನೂರಾರು ಅಯ್ಯಪ್ಪ ಮಾಲಾಧಾರಿಗಳು ಮತ್ತು ಪ್ರಭಾಕರ ಗುರುಸ್ವಾಮಿಯವರ ನೇತೃತ್ವದಲ್ಲಿ ಪಡಿಪೂಜೆ ಜರಗಿತು.
ಅನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು ರಾತ್ರಿ 7ರಿಂದ ಶ್ರೀ ಅಯ್ಯಪ್ಪ ಸ್ವಾಮಿಗೆ ರಂಗ ಪೂಜೆ ಮತ್ತು ಮಹಾಅರತಿ ನೆರವೇರಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವರ ಬಲಿ ಉತ್ಸವವು ಪೂಜೆ, ವಿವಿಧ ರೀತಿಯ ವಾದ್ಯಘೋಷ, ಭಜನೆ, ನೃತ್ಯದೊಂದಿಗೆ ಜರಗಿತು. ಪುಣೆ ತುಳು ಕನ್ನಡಿಗರಲ್ಲದೆ ಇತರ ಭಾಷಿಕರು ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2ರಿಂದ ಮಕ್ಕಳಿಂದ ನೃತ್ಯ ವೈವಿಧ್ಯ ಮತ್ತು ವಿವಿಧ ವಿನೋದಾವಳಿಗಳು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರಿಂದ ಮಂಡಲಿಯ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡು ವಿಕೆಯಿಂದ ಪಾಪಣ್ಣ ವಿಜಯ ಗುಣಸುಂದರಿ ಯಕ್ಷಗಾನ ಪ್ರದರ್ಶನಗೊಂಡಿತು.
ದೇವಸ್ಥಾನದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಸುಭಾಷ್ ಎ. ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಸಿ. ಶೆಟ್ಟಿ, ಗೌರವ ಕಾರ್ಯದರ್ಶಿ ರಘುರಾಮ್ ಕೆ. ರೈ, ಗೌರವ ಕೋಶಾಧಿಕಾರಿ ಜಗದೀಶ್ ಬಿ. ಶೆಟ್ಟಿ, ಜನಸಂಪರ್ಕಾಧಿಕಾರಿ ಪ್ರಶಾಂತ್ ಆರ್. ಆಳ್ವ, ಜೊತೆ ಕಾರ್ಯದರ್ಶಿ ಸಚ್ಚಿದಾನಂದ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಬಾಲಕೃಷ್ಣ ಎಸ್. ಗೌಡ, ಕಾರ್ಯಕ್ರಮ ವ್ಯವಸ್ಥಾಪಕರಾದ ಭಾಸ್ಕರ ವಿ. ಶೆಟ್ಟಿ, ಪೂಜಾ ಸಮಿತಿಯ ವ್ಯವಸ್ಥಾಪಕರಾದ ಭಾಸ್ಕರ ಎಂ. ಕೊಟ್ಟಾರಿ, ವ್ಯವಸ್ಥಾಪಕರಾದ ಜಯ ಎಸ್. ಪೂಜಾರಿ ಮತ್ತು ಪ್ರಧಾನ ಸಲಹೆಗಾರರಾದ ಶೇಖರ್ ಟಿ. ಪೂಜಾರಿ ಅವರ ಮುಂದಾಳತ್ವದಲ್ಲಿ, ಶ್ರೀ ಅಯ್ಯಪ್ಪ ಸೇವಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎನ್. ಶೆಟ್ಟಿ ಮತ್ತು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸೇವಾ ಮಹಿಳಾ ಮಂಡಳಿಯ ಅಧ್ಯಕ್ಷೆ ವಿನೋದಾ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು, ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮವು ನೆರವೇರಿತು. ನೂರಾರು ಸಂಖ್ಯೆಯ ಭಕ್ತರು ಸ್ವಯಂಸೇವಕರಾಗಿ ವಾರ್ಷಿಕೋತ್ಸವದಲ್ಲಿ ಸಹಕರಿಸಿದರು.
ಚಿತ್ರ-ವರದಿ :ಹರೀಶ್ ಮೂಡಬಿದ್ರಿ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.