ಕೆಸಿಎ ನಲಸೊಪರ ಸಂಸ್ಥೆಯ ವಾರ್ಷಿಕ ಶೈಕ್ಷಣಿಕ ಪರಿಕರ ವಿತರಣೆ
Team Udayavani, Jun 12, 2018, 12:36 PM IST
ಮುಂಬಯಿ: ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಿ, ಅವರಲ್ಲಿನ ಕೌಶಲ ಗಳನ್ನು ಅನಾವರಣಗೊಳಿಸಿದಾಗಲೇ ಸಂಸ್ಥೆಗಳ ಉದ್ದೇಶಗಳು ಪರಿಪೂರ್ಣಗೊಳ್ಳುವುದು. ಶಿಕ್ಷಣದ ಜೊತೆ-ಜೊತೆಗೆ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಬೆಂಬಲಿಸಿ ಅವರನ್ನು ಸಾಂಸ್ಕೃತಿಕವಾಗಿ ಬೆಳೆಸಿದಾಗ ಮಕ್ಕಳೂ ಸುಸಂಸ್ಕೃತರಾಗಿ ಬಾಳುತ್ತಾ ರಾಷ್ಟ್ರದ ಸಂಸ್ಕೃತಿಯು ಜೀವಾಳವಾಗುವುದು. ಸಂಸ್ಕಾರಯುತವಾಗಿ ಬೆಳೆದ ಮಕ್ಕಳಿಂದ ಸುಸಂಸ್ಕೃತ ಬದುಕು ಸಾಧ್ಯವಾಗುವುದು. ನಮ್ಮ ದೇಶವು ಬಹುಭಾಷಾ, ವೈವಿಧ್ಯತೆಯ ಸಂಸ್ಕೃತಿಯುಳ್ಳದಾಗಿದ್ದು ಬಹುತ್ವವೇ ಭಾರತದ ಬುನಾದಿಯಾಗಿದೆ. ಆದ್ದರಿಂದ ನಾವು ಜಾತಿ, ಮತ, ಪಂಥ ಭೇದ ಮರೆತು ಎಲ್ಲರನ್ನೂ ಸಮಾನವಾಗಿ ಕಂಡು ಸಮಾನತೆಯ ಬಾಳಿಗೆ ಪ್ರೇರೆಪಿಸಬೇಕು. ಅವಾಗಲೇ ಭವ್ಯ ಭಾರತದ ಕನಸು ನನಸಾಗುವುದು. ಇದನ್ನೇ ಕೆಸಿಎ ಸಂಸ್ಥೆ ಮುನ್ನಡೆಸಿಕೊಂಡು ಬಂದಿದೆ ಎಂದು ಕೊಂಕಣಿ ಕ್ಯಾಥೊಲಿಕ್ ಅಸೋಸಿಯೇಶನ್ ನಲಸೊಪರ (ಕೆಸಿಎ) ಸಂಸ್ಥೆಯು ಅಧ್ಯಕ್ಷ ಹ್ಯಾರಿ ಬಿ. ಕುಟಿನ್ಹೋ ತಿಳಿಸಿದರು.
ಕೊಂಕಣಿ ಕ್ಯಾಥೋಲಿಕ್ ಅಸೋಸಿಯೇಶನ್ ನಲಸೊಪರ ಸಂಸ್ಥೆಯು ಸ್ಥಾನೀಯ ಬಡ ಶಾಲಾಮಕ್ಕಳಿಗೆ ಧರ್ಮಾರ್ಥವಾಗಿ ಕೊಡಮಾಡುವ ವಾರ್ಷಿಕ ಶೈಕ್ಷಣಿಕ ಪರಿಕರಗಳನ್ನು ಕಳೆದ ಹಲವಾರು ವರ್ಷಗಳಿಂದ ವಿತರಿಸುತ್ತಿದ್ದು, 2018 ನೇ ಸಾಲಿನ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮವು ಹೆಲ್ಪಿಂಗ್ ಹ್ಯಾಂಡ್ಸ್ ಡಾಟ್ ಗಿವ್ಸ್ ಸಂಸ್ಥೆಯ ಸಹಯೋಗದಲ್ಲಿ ಜೂ. 10 ರಂದು ಪೂರ್ವಹ್ನ ನಲಸೊಪರ ಪೂರ್ವದ ಕೆಸಿಎ ಸಭಾಗೃಹದಲ್ಲಿ ನಡೆದಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಟಿನ್ಹೋ ಅವರು, ಮಕ್ಕಳಿಗೆ ಕೇವಲ ಶಿಕ್ಷಣವನ್ನು ನೀಡಿದರೆ ಸಾಲದು, ಅದರೊಂದಿಗೆ ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಿಸಿ ಅವರನ್ನು ಸುಸಂಸ್ಕೃತರನ್ನಾಗಿಸಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಕೆಸಿಎ ಮತ್ತು ಹೆಲ್ಪಿಂಗ್‌ಹ್ಯಾಂಡ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿ ದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಥಾಣೆ ಜಿಲ್ಲಾ ಪಾಲ^ರ್‌ನ ಪೊಲೀಸ್ ಅಧಿಕಾರಿ ಸಂದೀಪ್ ಮಕೋಳ್ ಅವರು ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತೇಜಿಸುವುದು ಮಹತ್ತರವಾದ ಕೆಲಸವಾಗಿದೆ. ಆ ನಿಟ್ಟಿನಲ್ಲಿ ಕೆಸಿಎ ಸಂಸ್ಥೆಯ ಸೇವೆ ಅನನ್ಯ. ಈ ಸಂಸ್ಥೆ ಇನ್ನೂ ಪ್ರಾಮಾಣಿಕವಾಗಿ ಸೇವೆಯಲ್ಲಿ ತೊಡಗಿಸಿ ಕೊಂಡು ಎಲ್ಲರ ಪ್ರಶಂಸಗೆ ಪಾತ್ರವಾಗಲಿ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಈ ವರ್ಷವೂ ಸ್ಥಳೀಯ ಆರ್ಥಿಕವಾಗಿ ಹಿಂದುಳಿದ ನೂರಾರು ಮಕ್ಕಳಿಗೆ ಶಾಲಾ ಶುಲ್ಕ, ಸಮವಸ್ತ್ರ, ನೋಟ್‌ಬುಕ್), ಇನ್ನಿತರ ಶೈಕ್ಷಣಿಕ ಪರಿಕರಗಳನ್ನು ಗಣ್ಯರು ವಿತರಿಸಿದರು. ಕೆಸಿಎ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವಿಲ್ಡಾ ಡಿ’ಸೋಜಾ, ಕ್ಲಾಡ್ ಡಿ’ಸಿಲ್ವಾ, ಲವಿನಾ ಡಾಯಸ್, ಲಿಲ್ಲಿ ಕ್ವಾಡ್ರಸ್, ರೋಮಿಯೋ ಕಾಸ್ತೆಲಿನೋ, ಡೈನಾ ಮೊರಾಯಸ್, ಹೆಲ್ಪಿಂಗ್ ಹ್ಯಾಂಡ್ಸ್‌ನ ಜೀವನ್ ಕೋಟ್ಯಾನ್, ಇಮೆಲ್ಡಾ ಡಿ’ಸೋಜಾ, ಪೀಟರ್ ರೋಡ್ರಿಗಸ್ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ರೋವಿನ್‌ಗrನ್ ಕಾಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರೋನಿ ಪಾಯ್ಸ ಫಲಾನುಭವಿಗಳ ಪಟ್ಟಿ ವಾಚಿಸಿದರು. ರಿಚಾರ್ಡ್ ಪಿಂಟೋ ವಂದಿಸಿದರು. ನೂರಾರು ಮಕ್ಕಳು, ಪಾಲಕ-ಪೋಷಕರು ಉಪಸ್ಥಿತರಿದ್ದರು.
ಚಿತ್ರ-ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.