ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ : ಸಪ್ತಾಹ ಸಮಾರೋಪ
Team Udayavani, Oct 12, 2018, 4:01 PM IST
ಮುಂಬಯಿ: ಯಕ್ಷಗಾನ ಎಂಬು ವುದು ಅಳಿಯುತ್ತಿರುವ ಕಲೆಯಲ್ಲ. ಅದು ಬೆಳೆ ಯುತ್ತಿರುವ ಕಲೆಯಾಗಿದೆ ಎಂಬುವು ದಕ್ಕೆ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಇದರ ಮಕ್ಕಳೇ ಸಾಕ್ಷಿ. ಇಂದಿನ ಮಕ್ಕಳು ಈ ಕಲೆಯ ಮೇಲೆ ತೋರುವ ಆಸಕ್ತಿ ನಿಜವಾಗಿಯೂ ಅಭಿನಂದನಿಯ. ಮುಂಬಯಿಗರು ಯಕ್ಷಗಾನಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇಂತಹ ಉತ್ತಮ ಯಕ್ಷಗಾನಕ್ಕೆ ನಾವು ಸದಾ ಪ್ರೋತ್ಸಾಹ ನೀಡುತ್ತೇವೆ. ಈ ಮಕ್ಕಳ ಮೇಳಕ್ಕೆ ನಮ್ಮ ಸಹ ಕಾರವು ಸದಾಯಿದೆ ಎಂದು ನೆರೂಲ್ ಶ್ರೀ ಶನೀಶ್ವರ ಮಂದಿರದ ಗೌರವಾಧ್ಯಕ್ಷ, ರಾಜಕೀ ಯ ಧುರೀಣ ಸಂತೋಷ್ ಡಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.
ಅ.8 ರಂದು ನೆರೂಲ್ ಶ್ರೀ ಶನೀಶ್ವರ ಮಂದಿ ರದಲ್ಲಿ ನಡೆದ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳ ಇದರ ಮುಂಬಯಿ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಮಕ್ಕಳ ಮೇಳವನ್ನು ಕಟ್ಟಿ ಅವರಿಗೆ ಶಿಕ್ಷಣದೊಂದಿಗೆ ಯಕ್ಷಗಾನದಲ್ಲೂ ಅಭಿರುಚಿ ಯನ್ನು ಹುಟ್ಟಿಸಿದಂತಹ ರೂವಾರಿ ಜಯಂತ್ ಅಮೀನ್ ಅವರ ಕಾರ್ಯ ಅಭಿನಂದನೀಯ. ಅವರ ಈ ತಂಡವು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಖ್ಯಾತಿ ಪಡೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು ಮಾತನಾಡಿ, ಮಕ್ಕಳ ಮೇಳದ ಯಕ್ಷಗಾನವನ್ನು ಕಂಡಾಗ ಮನಸ್ಸಿಗೆ ಆನಂದವಾಗುತ್ತಿದೆ. ಇವರು ಪುರಾಣ ಪ್ರಸಂಗಗಳ ಮೂಲಕ ಪುರಾಣ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಆಶೀರ್ವಚನ ನೀಡಿದ ವಿದ್ವಾನ್ ದಿನೇಶ್ ಉಪರ್ಣ ಅವರು, ಒಬ್ಬ ಕಲಾವಿದನಿಗೆ ಪ್ರೇಕ್ಷಕರೇ ನಿಜವಾದ ಸಂಪತ್ತು. ಮಕ್ಕಳ ಮೇಳದ ಯಕ್ಷಗಾನ ನೋಡಲು ಕಿಕ್ಕಿರಿದು ಸೇರುವ ಪ್ರೇಕ್ಷಕರನ್ನು ನೋಡುವಾಗ ಈ ಮೇಳ ಎಷ್ಟು ಪ್ರಬುದ್ಧವಾಗಿ ಬೆಳೆದಿದೆ ಎಂಬುವುದು ಅರಿವಾಗುತ್ತದೆ. ಧಾರ್ಮಿಕ ಪ್ರಸಂಗಗಳ ಮೂಲಕ ಈ ಮಕ್ಕಳು ಧರ್ಮವನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದು, ಈ ಮಕ್ಕಳಿಗ ಮುಂದೆ ಉತ್ತಮ ಭವಿಷ್ಯವಿದೆ ಎಂದು ನುಡಿದರು.
ಸಮಾರಂಭದಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಇದರ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್, ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ನ ಉಪಕಾರ್ಯಾಧ್ಯಕ್ಷ ಪ್ರಭಾಕರ ಎಸ್. ಹೆಗ್ಡೆ, ಖ್ಯಾತ ಭಾಗವತರಾದ ಕು| ಕಾವ್ಯಶ್ರೀ ಅಜೇರು ಮೊದಲಾದವರನ್ನು ಸಮ್ಮಾನಿಸಲಾಯಿತು.
ಪ್ರಾರಂಭದಲ್ಲಿ ಶ್ರೀ ಶನೀಶ್ವರ ಮಂದಿರ ನೆರೂಲ್ ಇದರ ಪ್ರಧಾನ ಅರ್ಚಕ ಸೂರಜ್ ಭಟ್ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಶ್ರೀ ಶನೀಶ್ವರ ಮಂದಿರ ನೆರೂಲ್ ಜತೆ ಕೋಶಾಧಿಕಾರಿ ಆದ್ಯಪಾಡಿ ಕರುಣಾಕರ ಎಸ್. ಆಳ್ವ, ತುಳುಕೂಟ ಐರೋಲಿ ಅಧ್ಯಕ್ಷ ಕೆ.ಕೆ. ಹೆಬ್ಟಾರ್, ಕರ್ನಾಟಕ ಸಂಘ ಪನ್ವೇಲ್ ಇದರ ಅಧ್ಯಕ್ಷ ಧನಂಜಯ ಶೆಟ್ಟಿ ಕೊಲ್ಪೆ, ಶ್ರೀ ಶನೀಶ್ವರ ಮಂದಿ ನೆರೂಲ್ ವಿಶ್ವಸ್ಥ ಕೃಷ್ಣ ಎಂ. ಪೂಜಾರಿ, ಉದ್ಯಮಿ ಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮೇಳದ ಅಧ್ಯಕ್ಷ ಜಯಂತ್ ಅಮೀನ್, ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ, ಪ್ರಭಾಕರ ಎಸ್. ಹೆಗ್ಡೆ ಅವರು ಉಪಸ್ಥಿತರಿದ್ದರು. ಜಗದೀಶ್ ಶೆಟ್ಟಿ ಪನ್ವೇಲ್ ಮತ್ತು ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಸಹಕರಿಸಿದರು. ವಿ. ಕೆ. ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳ ಮೇಳದಿಂದ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು. ಶ್ರೀ ಶನೀಶ್ವರ ಸೇವಾ ಸಮಿತಿ, ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್, ರಂಗಭೂಮಿ ಫೈನ್‌ಆರ್ಟ್ಸ್ ಅವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮವು ಜರಗಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇಂದು ಮಕ್ಕಳು ಪ್ರದರ್ಶಿಸಿದ ಶ್ರೀನಿವಾಸ ಕಲ್ಯಾಣ ಯಕ್ಷಗಾನವು ಉತ್ತಮವಾಗಿ ಮೂಡಿಬಂದಿದೆ. ಇದು ಅವರ ಕಲಾಚಾತುರ್ಯತೆಗೆ ಸಾಕ್ಷಿಯಾಗಿದೆ. ತಂಡಕ್ಕೆ ನಮ್ಮ ಪ್ರೋತ್ಸಾಹ ಸದಾಯಿದೆ
– ಗೋಪಾಲ್ ವೈ. ಶೆಟ್ಟಿ .,
ಉಪಾಧ್ಯಕ್ಷರು, ಶ್ರೀ ಶನೀಶ್ವರ ಮಂದಿರ ನೆರೂಲ್
ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿರುವ ಪ್ರಸ್ತುತ ದಿನಗಳಲ್ಲಿ ಕೆರೆಕ್ಕಾಡಿನ ಈ ಮಕ್ಕಳು ಇಂತಹ ಕಲಾತಂಡವನ್ನು ಕಟ್ಟಿ ಯಕ್ಷಗಾನವನ್ನು ಉಳಿಸಿ-ಬೆಳೆಸುವ ಕಾರ್ಯಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ
– ಅನಿಲ್ ಹೆಗ್ಡೆ , ರಂಗಕಲಾವಿದ
ಉತ್ತಮ ಸಂಘಟಕರು ಇರುವುದರಿಂದಾಗಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಯಕ್ಷಗಾನವನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿದೆ. ಮಕ್ಕಳಿಗೆ ನಾವು ಪ್ರೋತ್ಸಾಹ ನೀಡಬೇಕು. ಅವರು ಈ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ
– ಜಗದೀಶ್ ಶೆಟ್ಟಿ ನಂದಿಕೂರು, ಉಪಾಧ್ಯಕ್ಷರು,ಘನ್ಸೋಲಿ
ಶ್ರೀ ಮೂಕಾಂಬಿಕಾ ಮಂದಿರ
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.