ಉದ್ಯಮಿಗಳು ಹೃದಯವಂತರಾದಾಗ ಜೀವನ ಸಾರ್ಥಕ: ಶಶಿಕಿರಣ್ ಶೆಟ್ಟಿ
Team Udayavani, Nov 2, 2021, 11:16 AM IST
ಮುಂಬಯಿ: ಬಂಟ ಸಮಾಜ ದಲ್ಲಿ ಹುಟ್ಟಿದ್ದೇ ನನ್ನ ಸೌಭಾಗ್ಯ. ಪೂರ್ವ ಜರ ಆಶೀರ್ವಾದವೇ ನನ್ನ ಸಾಧನೆಗೆ ಪ್ರೇರಣೆ ಯಾಗಿದ್ದು, ಅದು ನನ್ನನ್ನು ಔದ್ಯೋಗಿಕವಾಗಿ ಬಲ ಗೊಳಿಸಿದೆ. ನಮ್ಮ ಜ್ಞಾನವನ್ನು ಇತರ ರೊಂದಿಗೆ ಹಂಚಿಕೊಳ್ಳುವುದರಿಂದ ನಾವು ಮತ್ತೂ ಬ್ಬರಿಂದ ಕಲಿಯಲು ಸಾಧ್ಯವಾಗುತ್ತದೆ. ಇದೆಲ್ಲವೂ ನಮ್ಮ ಅಭಿಜ್ಞಾನ ವ್ಯಕ್ತಿತ್ವವನ್ನು ವಿಕಸನ ಗೊಳಿಸುತ್ತದೆ. ಉದ್ಯಮದಲ್ಲಿ ಮತ್ತೂ ಬ್ಬರ ಹಣಕ್ಕಿಂತ ಸ್ವಂತ ಹಣಕ್ಕೆ ಮಹತ್ವ ನೀಡಿ ದಾಗ ಯಶಸ್ಸು ನಮ್ಮದಾಗುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಉದ್ಯಮಸ್ಥ ಸ್ಪರ್ಧಿ ಗಳನ್ನು ವಿಶ್ವಾ ಸಕ್ಕೆ ಪಡೆದಾಗಲೇ ನಾವು ಉದ್ಯಮ ಶೀಲರಾಗಿ ಹೃದಯವಂತರಾಗಿ ಜೀವನ ಸಾರ್ಥಕ್ಯ ಕಾಣಲು ಸಾಧ್ಯವಿದೆ ಎಂದು ಆಲ್‌ಕಾರ್ಗೋ ಲಾಜಿಸ್ಟಿಕ್ಸ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಶಶಿಕಿರಣ್ ಶೆಟ್ಟಿ ತಿಳಿಸಿದರು.
ಬಂಟರ ಉದ್ಯಮಿಗಳ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಅ. 31ರಂದು ಸಂಜೆ ಅಂಧೇರಿ ಪಶ್ಚಿಮದ ಜೆ.ಡಬ್ಲ್ಯು. ಮರಿಯೊಟ್ (ಜುಹೂ) ಸಭಾಗೃಹದಲ್ಲಿ ಯುನಿಟಾಪ್ ಸಮೂಹ, ಆರ್ಗ್ಯಾನಿಕ್ ಪ್ರೈ. ಇಂಡಸ್ಟ್ರೀಸ್ ಲಿ. ಮತ್ತು ಹೆರಂಬಾ ಇಂಡಸ್ಟ್ರೀಸ್ ಲಿ. ಸಂಸ್ಥೆಗಳ ಪ್ರಧಾನ ಪ್ರಾಯೋಜಕತ್ವದಲ್ಲಿ ಐಬಿಸಿಸಿಐ ಅಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಜ್ಞಾನ ಶೃಂಗಸಭೆಯ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು “ಬದಲಾಗುತ್ತಿರುವ ವ್ಯಾಪಾರ ಸನ್ನಿವೇಶ’ ಬಗ್ಗೆ ಮಾಹಿತಿ ನೀಡಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಆಡಳಿತ ಎಂಡಿ, ಸಿಇಒ ರಾಜಕಿರಣ್ ರೈ “ಬದಲಾಗುತ್ತಿರುವ ಬ್ಯಾಂಕಿಂಗ್ ಸನ್ನಿ ವೇಶ’ ವಿಷಯವಾಗಿ ಮಾತನಾಡಿ, ನೈತಿಕ ವ್ಯವ ಹಾರವು ಬ್ಯಾಂಕಿಂಗ್ ಆರ್ಥಿಕತೆಯನ್ನು ಚೆನ್ನಾಗಿ ಹೊಂದಿಸುತ್ತದೆ. 2022ರಲ್ಲಿ ಮತ್ತೆ ಹಣಕಾಸು ಕ್ರಮ ಹಿಂದಿನ ಆರ್ಥಿಕತೆಗಿಂತಲೂ ಸುಧಾರಣೆಯಾಗಲಿದೆ. ಅವಿಷ್ಕಾರ ಹೊಂದಿದ ತಂತ್ರಜ್ಞಾನದಿಂದ ಬ್ಯಾಂಕಿಂಗ್ ಕ್ಷೇತ್ರ ಕ್ಷೀಪ್ರವಾಗಿ ಮುನ್ನಡೆಯತ್ತಿದೆ. ಆದ್ದ ರಿಂದ ನಾವೂ ನಮ್ಮಲ್ಲಿನ ಮಾಹಿತಿ ತಂತ್ರ ಜ್ಞಾನ ಇಮ್ಮಡಿಗೊಳಿಸಿದಾಗ ಸಾಧನೆ ಸುಲಭ ಸಾಧ್ಯವಾಗುವುದು. ಮಾತ್ರವಲ್ಲದೆ ಭವಿಷ್ಯ ದಲ್ಲಿ ಬ್ಯಾಂಕಿಂಗ್ ಸವಾಲು ಮಾಡಿದವನೇ ನಾಯಕನಾಗಲು ಸಾಧ್ಯ ಎಂದರು.
“ವ್ಯಾಪಾರ ಮತ್ತು ಕುಟುಂಬದಲ್ಲಿ ಉತ್ತರಾಧಿಕಾರ ಯೋಜನೆ’ ಎಂಬ ವಿಷಯದ ಬಗ್ಗೆ ಸುಪ್ರಜಿತ್ ಎಂಜಿನಿಯರಿಂಗ್ ಲಿ. ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಹಿತಿ ಯನ್ನಿತ್ತು, ನನ್ನ ಉದ್ಯಮಶೀಲತ ಅಭ್ಯು ದಯಕ್ಕೆ ಸಾಂಪ್ರದಾಯಿಕ ಧೈರ್ಯವೇ ಪ್ರೋತ್ಸಾಹವಾಗಿತ್ತು. ನನ್ನ ಮನೋ ಸ್ಥೈರ್ಯವೂ ನನ್ನನ್ನು ಈ ಮಟ್ಟಕ್ಕೆ ಬೆಳೆಸಿತು. ಜಾಗತಿಕವಾಗಿ ಯಶಸ್ವಿ ಉದ್ಯಮಿಯಾಗಲು ಇಂತಹ ಸಮಾವೇಶಗಳು ಅತ್ಯಾವಶ್ಯ ಕ ವಾಗಿವೆ. ಕುಟುಂಬ ಉದ್ಯಮ ಮಾಡು ವುದರ ಜತೆಗೆ ಮಕ್ಕಳನ್ನು ಅವರ ಇಷ್ಟದ ಉದ್ಯಮ ವನ್ನು ಪ್ರೋತ್ಸಾಹಿಸಿ ಅವ ರನ್ನೂ ಸ್ವಂತಿ ಕೆಯ ಉದಯೋನ್ಮುಖ ಉದ್ಯಮಿಗಳಾಗಿಸಿ ಎಂದು ಸಲಹೆ ನೀಡಿದರು.
ಐಬಿಸಿಸಿಐ ಅಧ್ಯಕ್ಷ ಕೆ. ಸಿ. ಶೆಟ್ಟಿ ದೀಪಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಚಾನ್ನೆಲ್ ಫ್ತೈಟ್‌ನ ಸಿಎಂಡಿ ಕಿಶನ್ ಜೆ. ಶೆಟ್ಟಿ, ಅದಿತಿ ಎಸೆನ್ಶಿಯಲ್ಸ್ ಸಿಎಂಡಿ ಭರತ್ ಶೆಟ್ಟಿ ಉಪಸ್ಥಿತರಿದ್ದರು. ಯುನಿಟಾಪ್ ಸಮೂಹದ ಬಾಲಕೃಷ್ಣ ಶೆಟ್ಟಿ, ಆಗ್ಯಾìನಿಕ್ ಪ್ರೈ. ಇಂಡಸ್ಟ್ರೀಸ್ ಲಿ.ನ ಆನಂದ್ ಎಂ. ಶೆಟ್ಟಿ, ಹೆರಂಬಾ ಇಂಡಸ್ಟ್ರೀಸ್ ಲಿ.ನ ಎಸ್. ಕೆ. ಶೆಟ್ಟಿ ಮತ್ತು ಆರ್. ಕೆ. ಶೆಟ್ಟಿ, ಹಿರಿಯ ಉದ್ಯಮಿ ಕುಶಲ್ ಹೆಗ್ಡೆ, ಚರಿಶ್ಮಾ ಸಮೂಹದ ಸುಧೀರ್ ವಿ. ಶೆಟ್ಟಿ, ಫೈಬರ್ ಫಲ್ಸ್ ಸಮೂಹದ ದಿವಾಕರ್ ಶೆಟ್ಟಿ, ಬ್ಲೂ ಅಶ್ವಇನೋಲಾಬ್ಸ್ ವ್ಯವಸ್ಥಾಪಕ ನಿರ್ದೇಶಕ ಪರೇಶ್ ತ್ರಿವೇದಿ, ರೋಸಾರಿ ಬಯೋಟೆಕ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಎಸ್. ಚಾರಿ, ಹೆರಾನಾº ಇಂಡಸ್ಟ್ರೀಸ್ ಪ್ರೈ. ಲಿ.ನ ಸಿಎಂಡಿ ಎಸ್. ಕೆ. ಶೆಟ್ಟಿ, ವಿಶ್ವಾತ್ ಕೆಮಿಕಲ್ಸ್ ಲಿ.ನ ಕಾರ್ಯಾಧ್ಯಕ್ಷ ಬಿ. ವಿವೇಕ್ ಶೆಟ್ಟಿ, ಮಹೀಂದ್ರಾ ಮನುಲೈಫ್ ಮ್ಯೂಚುಯಲ್ ಫಂಡ್ಸ್‌ನ ಸಿಎಂಡಿ ಅಶುತೋಷ್ ಬಿಷ್ಣೋಯ್, ಐಎಫ್‌ಎಫ್‌ಸಿಒ ಟೊಕಿಯೊ ಜನರಲ್ ಇನ್ಸುರೆನ್ಸ್ ಕಂಪೆನಿ ಲಿ.ನ ಕಾರ್ಯನಿರ್ವಾಹಕ ಉಪಾ ಧ್ಯಕ್ಷ ಗುಣ ಶೇಖರ್ ಬೋಗಾ, ಜೆ.ಎಂ ಫೆ„ನಾನ್ಶಿಯಲ್ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪೆನಿ ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಗ್ರೋವರ್, ಹೆರಿಟೇಜ್ ಸಮೂಹದ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ, ವಿಟ್ಸ್ ಕಾಮತ್ಸ್ ಗ್ರೂಪ್‌ನ ಸಂಸ್ಥಾಪಕಾಧ್ಯಕ್ಷ ಡಾ| ವಿಕ್ರಮ್ ಕಾಮತ್, ಪ್ರೀತಮ್ ದಾ ಧಾಬಾ-ಗ್ರ್ಯಾಂಡ್ ಮಾಮಾಸ್ ಕೆಫೆ ಸಮೂ ಹದ ಎಂಡಿ ಗುರ್ಬಕ್ಷೀಶ್ ಸಿಂಗ್ ಕೊಹ್ಲಿ, ಮಹಾರಾಜ ರೆಸ್ಟೋರೆಂಟ್‌ನ ನಿರ್ದೇ ಶಕ ಪ್ರದೀಪ್ ಶೆಟ್ಟಿ ಅವರು ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ| ಸುರೇಶ್ ಎಸ್. ರಾವ್ ಕಟೀಲು ಅವರನ್ನು ಸ್ಮರಣಿಕೆಯನ್ನಿತ್ತು ಅಧ್ಯಕ್ಷರು ಗೌರವಿಸಿದರು. ಐಬಿಸಿಸಿಐ ಕೋಶಾಧಿಕಾರಿ ದುರ್ಗಾಪ್ರಸಾದ್ ಬಿ. ರೈ, ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ, ನಿರ್ದೇಶಕರಾದ ನಿಶಿತ್ ಶೆಟ್ಟಿ, ಹಿತೇಶ್ ಶೆಟ್ಟಿ, ಬಿ. ಬಿ. ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಪಾಂಡುರಂಗ ಎಲ್. ಶೆಟ್ಟಿ, ಸಿಎ ಶಂಕರ ಬಿ. ಶೆಟ್ಟಿ, ಕಿಶನ್ ಜೆ. ಶೆಟ್ಟಿ, ಐಬಿಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸದಸ್ಯರು ಸಹಿತ ಐಬಿಸಿಸಿಐ ಪರಿವಾರ ಸದಸ್ಯರು ಉಪಸ್ಥಿತರಿದ್ದರು.
ಐಬಿಸಿಸಿಐ ಉಪಾಧ್ಯಕ್ಷ ಎಸ್. ಬಿ. ಶೆಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕೆ. ಜಯ ಸೂಡಾ ಮತ್ತು ಕಾರ್ಯಾಚರಣ ವ್ಯವಸ್ಥಾಪಕಿ ನಮಿತಾ ಆರ್. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಶ್ರೀನಾಥ್ ಶೆಟ್ಟಿ ವಂದಿಸಿದರು.
ಬಂಟ ಸಮಾಜದ ಉದ್ಯಮಿಗಳ ಸಹಯೋಗದೊಂದಿಗೆ ಬಂಟ ಸಮಾಜದ ಉದ್ಯಮಿಗಳನ್ನು ಪ್ರೇರೇಪಿಸಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಸಂಸ್ಥೆಯ ಧ್ಯೇಯವಾಗಿದೆ. ಬಂಟ ಉದ್ಯಮಿಗಳ ಒಗ್ಗಟ್ಟಿಗೆ ಐಬಿಸಿಸಿಐ ಶಕ್ತಿಯಾಗಿದ್ದು, ನಮ್ಮವರು ಇದರ ಸದುಪಯೋಗ ಪಡೆದರೆ ನಮ್ಮ ಪ್ರಯತ್ನ ಸಫಲವಾಗಲಿದೆ. ಆಧುನಿಕ ತಂತ್ರಜ್ಞಾನ, ಕಲ್ಪನೆಗಳಿಗೆ ಒತ್ತು ನೀಡಿ ಪ್ರೋತ್ಸಾಹಿಸುವ ಐಬಿಸಿಸಿಐ ತನ್ನ ಸದಸ್ಯರನ್ನು ಜಗತ್ತಿನಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಯಶಸ್ವಿ ವೃತ್ತಿಪರ ಅರಿವನ್ನು ಮುಂದಿನ ಪೀಳಿಗೆಗೆ ಒದಗಿಸಬೇಕು. ಯುವ ಪೀಳಿಗೆ ಇದರ ಸದುಪಯೋಗ ಪಡೆಯಬೇಕು ಎನ್ನುವ ಆಶಯ ನಮ್ಮದಾಗಿದೆ ಎಂದು ಬಿಸಿಸಿಐ ಸಂಸ್ಥೆಯ ಕನಸುಕಂಡ ಎಸ್. ಎಂ. ಶೆಟ್ಟಿ ಮತ್ತು ಬಿ. ಡಿ. ಶೆಟ್ಟಿ ಇವರ ದೂರದೃಷ್ಟಿತ್ವ ಅನನ್ಯತೆಯಿಂದ ಕೂಡಿದೆ.–ಕೆ. ಸಿ. ಶೆಟ್ಟಿ, ಅಧ್ಯಕ್ಷರು, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.