ಕೊಲ್ಹಾಪುರ ತುಳುಕೂಟ: ವಾರ್ಷಿಕೋತ್ಸವ, ಸಮ್ಮಾನ
Team Udayavani, Mar 9, 2018, 4:48 PM IST
ಉಡುಪಿ: ಕೊಲ್ಹಾಪುರ ಮತ್ತು ಅದರ ಆಸುಪಾಸಿನ ಊರಾದ ಇಚಲಕರಂಜಿ ಹಾಗೂ ಜೈಸಿಂಗ್‌ಪುರದ ತುಳು ಕನ್ನಡ ಬಾಂಧವರ ಸಂಘಟನೆಯಾದ ಕೊಲ್ಹಾಪುರ ತುಳುಕೂಟದ 6ನೇ ವಾರ್ಷಿಕೋತ್ಸವವು ಶ್ರೀ ಗಣೇಶ್ ಮಲ್ಟಿಪರ್ಪಸ್ ಲಾನ್ ಮತ್ತು ಹಾಲ್‌ನಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೊಡಿಯಾಲ್‌ಗುತ್ತು ಅಜಿತ್ ಕುಮಾರ್ ರೈ ಅವರು ವಹಿಸಿದ್ದರು. ಪತ್ನಿ ಡಾ| ಆಶಾ ಜ್ಯೋತಿ ರೈ ಅವರು ಅತಿಥಿಯಾಗಿ ಮಹಿಳಾ ಶಕ್ತಿಯನ್ನು ಪ್ರಶಂಸಿಸಿದರು.
ಅತಿಥಿಗಳಾಗಿ ಮುಂಬಯಿ ಬಂಟ್ಸ್ ಎಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ, ಕರ್ನಾಟಕ ತುಳುನಾಡ ಸಂಘ ಸಾಂಗ್ಲಿ ಅಧ್ಯಕ್ಷ ಉಮೇಶ್ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಟuಲ್ ಹೆಗ್ಡೆ, ತುಳುಕೂಟದ ಅಧ್ಯಕ್ಷ ತ್ಯಾಗರಾಜ್ ಶೆಟ್ಟಿ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಆಶಾಲತಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ಲಯನ್ ಜಿಲ್ಲಾ ಗವರ್ನರ್ ಹಾಗೂ ಪೆರ್ಮೆದ ತುಳುವೆ ಬಿರುದನ್ನು ಪಡೆದ ದಿವಾಕರ್ ಶೆಟ್ಟಿ ಮತ್ತು ಜ್ಯೋತಿ ದಿವಾಕರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಇದೇ ವೇಳೆ ತುಳುಕೂಟದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.ಮಹಿಳಾ ವಿಭಾಗದ ಕಾರ್ಯದರ್ಶಿ ಸಂಧ್ಯಾ ವಿಜಯ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ ವರದಿಯನ್ನು ಮಂಡಿಸಿದರು. ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಆರ್. ಶೆಟ್ಟಿ ಸಮ್ಮಾನ ಪತ್ರವನ್ನು ವಾಚಿಸಿದರು. ರಾಜೇಶ್ ಶೇರಿಗಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.