ರಂಗಭೂಮಿಗೆ ನೈಜ ಕಥೆಯ ಸ್ಪರ್ಶಕೊಟ್ಟ “ಕೊಪ್ಪರಿಗೆ’

Team Udayavani, Mar 28, 2018, 4:04 PM IST

2003mum01.jpg

ತಾನು ಕಂಡಿರುವುದು ಅಥವಾ ಕಾಣುತ್ತಿರುವುದು ಸತ್ಯವೋ ಸುಳ್ಳೋ ಎನ್ನುವ ತೊಳಲಾಟದಲ್ಲಿರುವ ಯುವತಿಗೆ ಮತಿ ಭ್ರಮಣೆಯಾಗಿದೆ. ಆಕೆಯ ಮೈಯೊಳಗೆ ಯಾವುದೋ ದುಷ್ಟ ಶಕ್ತಿಯ ಪ್ರವೇಶವಾಗಿದೆ ಎಂದು ವಾಮಾಚಾರಕ್ಕೆ ಇಳಿಯುವ ಮಂತ್ರವಾದಿ ಒಂದುಕಡೆಯಾದರೆ, ಯುವತಿಯ ಮನದಲ್ಲಿರುವುದು ಕೇವಲ ಭ್ರಮೆ ಮಾತ್ರ ಎನ್ನುವುದನ್ನು ವಾದಿಸುತ್ತಾ ಆಕೆಯನ್ನು ಈ ಭ್ರಮೆಯಿಂದ ಹೊರತರಲು ಹೋರಾಡುವ ಮನೋವೈದ್ಯ ಇನ್ನೊಂದೆಡೆ.

ಇದೆಲ್ಲದರ ನಡುವೆ ಕೊಪ್ಪರಿಗೆ ಗುತ್ತಿನ ಬಗ್ಗೆ ಅಲ್ಲಿನ ಚಿತ್ರ-ವಿಚಿತ್ರ ಘಟನೆಗಳ ಬಗ್ಗೆ, ಆ ಗುತ್ತಿನಲ್ಲಿರುವ ಕೊಪ್ಪರಿಗೆ, ಅದನ್ನು ಕಾಪಾಡುತ್ತಿರುವ ಆದಿಶೇಷನ ಬಗ್ಗೆ ತಿಳಿದುಕೊಂಡು ಈ ಬಗ್ಗೆ ಸಿನೇಮಾ ಮಾಡಬೇಕು ಎಂದು ಬಂದು ಈ ಕೊಪ್ಪರಿಗೆ ಗುತ್ತು ಸೇರಿ ವಿಚಿತ್ರಗಳ ಸುಳಿಯೊಳಗೆ ಸಿಲುಕಿ ತಾನೇ ಒಂದು ಪಾತ್ರವಾಗಿ ಹೋಗುವ ಸಿನೇಮಾ ನಿರ್ದೇಶಕ, ತುಳುನಾಡಿನ ದೈವಾರಾಧನೆಯನ್ನು ಮೂಡನಂಬಿಕೆಯಲ್ಲಿ ಬಂಧಿಸುವ ಯತ್ನ ಮಾಡುವ ಮಂತ್ರವಾದಿ ಮತ್ತು ದೈವ ನಂಬಿಕೆಯನ್ನು ನಂಬಿಕೆಯಲ್ಲಿಯೇ ಉಳಿಸಿ ತುಳುನಾಡಿನ ದೈವ ಒಂದು ಕಾರಣಿಕ ಶಕ್ತಿ ಎನ್ನುವುದನ್ನು ಸಾಧಿಸಿ ತೋರಿಸಿ ಕೊಪ್ಪರಿಗೆ ಎನ್ನುವುದಕ್ಕೆ ನಿಜ ವ್ಯಾಖ್ಯಾನ ಬರೆದ ತುಳು ರಂಗಭೂಮಿಯ ಒಂದು ಹೊಸ ಪ್ರಯೋಗಶೀಲ ನಾಟಕ ಕೊಪ್ಪರಿಗೆ.

ರಂಗ ತುಡರ್‌ ಕಲಾವಿದರು ಭಿವಂಡಿ ಕಲಾವಿದರು ಇತ್ತೀಚೆಗೆ ಸಂಸ್ಥೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ  ಅಭಿನಯಿಸಿದ ಕೊಪ್ಪರಿಗೆ ನಾಟಕವನ್ನು ಮಧು ಬಂಗೇರ ಕಲ್ಲಡ್ಕ ಇವರು ರಚಿಸಿದ್ದು, ತುಳು ರಂಗಭೂಮಿಯ ದಕ್ಷ ನಿರ್ದೇಶಕ ಜಗದೀಶ್‌ ಶೆಟ್ಟಿ ಕೆಂಚನಕೆರೆ ನಿರ್ದೇಶನದಲ್ಲಿ ಪ್ರದರ್ಶನಗೊಂಡ  ಈ ನಾಟಕ ವಿಟ್ಲ ಪರಿಸರದಲ್ಲಿ ನಡೆದಿರುವ ಒಂದು ಸತ್ಯ ಘಟನೆಯನ್ನು ರಂಗಭೂಮಿಗೆ ಭಟ್ಟಿ ಇಳಿಸಿರುವ ಯತ್ನವಾಗಿದೆ.

ಹಾಸ್ಯವನ್ನೇ ಪ್ರಧಾನವನ್ನಾಗಿಸಿಕೊಂಡು ಸಾಮಾನ್ಯ ಕಥೆಯ ಎಸಳನ್ನು ಅಂತಿಮ ದೃಶ್ಯಕ್ಕೆ ತಗಲು ಹಾಕಿಸಿ ನಾಟಕ ಮುಗಿಸಿ ಹೋಗುವಾಗ ಪ್ರೇಕ್ಷಕನ ಮನಸ್ಸಿನಲ್ಲಿ ಶೂನ್ಯತಾ ಭಾವನೆಯನ್ನು ಉಂಟು ಮಾಡುವ ಇಂದಿನ ಕೆಲ ನಾಟಕಗಳ ಸಾಲಿನಲ್ಲಿ ತೀರಾ ಭಿನ್ನವಾಗಿ ಮೂಡಿ ಬರುವ ಕೊಪ್ಪರಿಗೆ ನಾಟಕವು ತವರೂರ ನೆಲದಲ್ಲಿ ಸಾಲು ಸಾಲು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದೆ.

ತುಳುನಾಡಿನ ಗುತ್ತು ಮನೆತನ, ದೈವಸ್ಥಾನ ಇವು ರಂಗವೇದಿಕೆಯ ಪ್ರಮುಖ ಆಕರ್ಷಣೆಯಾಗಿದ್ದು, ಅಂತಿಮ ದೃಶ್ಯದಲ್ಲಿ ದೈವಸ್ಥಾನದ ನೆಲ ಬಗೆದು ಹೊರ ಬರುವ ಕೊಪ್ಪರಿಗೆ ಪ್ರೇಕ್ಷಕನ ಮನದಲ್ಲಿ ಹೊಸ ರೋಮಾಂಚನವನ್ನು ಉಂಟುಮಾಡುತ್ತದೆ. ತುಳುನಾಡಿನ ಬಗ್ಗೆ ತಿಳಿದುಕೊಂಡು ಇಲ್ಲಿ ಸಂಸ್ಕೃತಿಯ ಬಗ್ಗೆ ಸಿನೇಮಾ ಮಾಡಬೇಕು ಎಂದುಕೊಂಡು ಇಂಟರ್‌ನೆಟ್‌ ಮೂಲಕ ಮಾಹಿತಿ ಸಂಗ್ರಹಿಸಿ ತುಳುನಾಡಿನ ಕೊಪ್ಪರಿಗೆ ಗುತ್ತಿಗೆ ಬೆಂಗಳೂರಿನಿಂದ ಬರುವ ನಿರ್ದೇಶಕನ ಪಾತ್ರದೊಂದಿಗೆ ತೆರೆದುಕೊಳ್ಳುವ ಸಿನೇಮಾ ಪ್ರತೀ ಕ್ಷಣ ಕ್ಷಣಕ್ಕೂ ಕುತೂಹಲವನ್ನುಂಟು ಮಾಡುತ್ತದೆ. ಕಥಾ ನಾಯಕಿಯನ್ನು ಆವರಿಸಿಕೊಂಡಿರುವ ಒಂದು ಭ್ರಮೆಯನ್ನು ಲಾಭ ಮಾಡಿಕೊಳ್ಳಬಯಸುವ ಮಂತ್ರವಾದಿಗೆ ತುಳುನಾಡಿನ ದೈವಗಳು ನೀಡುವ ಉತ್ತರ ನಿಜಕ್ಕೂ ಅದ್ಭುತ ಎನ್ನುವಂತಹ ನಿರೂಪಣೆ ನೀಡಿದೆ.  ಒಂದು ಭಿನ್ನವಾದ ನಿರೂಪಣೆ ಮತ್ತು ಪಾತ್ರವಿನ್ಯಾಸ ನೋಡುಗನಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ.

ಇದಲ್ಲದೆ ತುಳು ತಿಳಿಯದೆ ತುಳು ಸಿನೆಮಾದ ನಟನೆಗೆ ಬಂದು ಇಲ್ಲಿನ ಭಾಷಾ ಗೊಂದಲದಲ್ಲಿ ಇನ್ನಿಲ್ಲದ ಪಾಡುಪಡುವ ನಟನೊಬ್ಬ ನಮ್ಮ ನಡುವೆ ಹಾಸ್ಯದ ಹೊನಲನ್ನೇ ಹರಿಸುತ್ತಾನೆ. ನಾಟಕ ಮುಗಿದರೂ ಈ ನಟ ನಮ್ಮ ನೆನಪಿನಲ್ಲಿ ಸದಾ ಉಳಿಯುತ್ತಾನೆ. ನಾಟಕದ ಕಥಾ ವಸ್ತುವಿಗೆ ಧಕ್ಕೆ ಬಾರದ ರೀತಿಯಲ್ಲಿ ಹೊಟ್ಟೆ ಹುಣ್ಣಾಗುವ ರೀತಿಯಲ್ಲಿರುವ ಹಾಸ್ಯ ನಮಗೆ ಇಷ್ಟವಾಗುತ್ತದೆ.
ತುಳುನಾಡಿನ ಸಂಪ್ರದಾಯಿಕ ರಾಗ ಹೊಂದಾಣಿಕೆಯ ಹಿನ್ನೆಲೆ ಸಂಗೀತ, ರಂಗವಿನ್ಯಾಸ, ಹವ್ಯಾಸಿ ಕಲಾವಿದರ ಅಭಿನಯ ಜಗದೀಶ್‌ ಶೆಟ್ಟಿ ಕೆಂಚನಕೆರೆಯವರ ನಿರ್ದೇಶನದಿಂದ ನಾಟಕ ರಂಗಭೂಮಿಗೆ ಹೊಸ ದಿಕ್ಕನ್ನು ನೀಡುವ ಲಕ್ಷಣ ಕಂಡು ಬಂದಿದೆ. 

ಈ ನಿಟ್ಟಿನಲ್ಲಿ ಒಂದು ಯಶಸ್ವಿ ಪ್ರದರ್ಶನ ನೀಡಿದ ಕೀರ್ತಿಗೆ ರಂಗತುಡರ್‌ ಭಿವಂಡಿ ಕಲಾವಿದರು ಭಾಜನರಾಗಿದ್ದಾರೆ. ಮುಂಬಯಿ ನಗರದಲ್ಲಿ ಕೊಪ್ಪರಿಗೆ ನಾಟಕವು ಇನ್ನಷ್ಟು ಪ್ರದರ್ಶನವನ್ನು ಕಾಣುವಂತಾಗಲಿ ಎಂಬುವುದು ನನ್ನ ಹಾರೈಕೆ.

ಲೇಖಕ:ನರೇಶ್‌ ಕುಮಾರ್‌ ಸಸಿಹಿತ್ಲು

ಟಾಪ್ ನ್ಯೂಸ್

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

saavu

Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.