‘ಕೊಪ್ಪರಿಗೆ’: ತುಳುನಾಡಿನ ಸಮಗ್ರ ಮಾಹಿತಿ ಡಿಜಿಟಲ್ ದಾಖಲೀಕರಣ ಯೋಜನೆಗೆ ಚಾಲನೆ


Team Udayavani, Aug 28, 2020, 6:07 PM IST

‘ಕೊಪ್ಪರಿಗೆ’: ತುಳುನಾಡಿನ ಸಮಗ್ರ ಮಾಹಿತಿ ಡಿಜಿಟಲ್ ದಾಖಲೀಕರಣ ಯೋಜನೆಗೆ ಚಾಲನೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ ‘ಕೊಪ್ಪರಿಗೆ’ ಸಮಗ್ರ ತುಳುನಾಡ್ ಗ್ರಂಥ ಹಾಗೂ ವೀಡಿಯೋ ದಾಖಲೀಕರಣ ಯೋಜನೆಗೆ ಚಾಲನೆ ದೊರೆತಿದೆ.

ಈ ಬೃಹತ್ ಯೋಜನೆಯ ಮೊದಲ ಹಂತವಾಗಿ ಪರಮ ಪೂಜ್ಯ‌ರ ಹಾಗೂ ಗಣ್ಯಾತಿಗಣ್ಯರ ಶುಭ ಸಂದೇಶಗಳ ಯೂಟ್ಯೂಬ್ ವೀಡಿಯೋ ತುಣುಕುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ‌ಯಲ್ಲಿ ಆಗಸ್ಟ್ 14ರಂದು ನಮ್ಮ ತುಳುನಾಡ್ ಟ್ರಸ್ಟ್‌ನ ಅಂತರಾಷ್ಟ್ರೀಯ ಘಟಕದ ಅಧ್ಯಕ್ಷ‌ರಾದ ಸರ್ವೊತ್ತಮ ಶೆಟ್ಟಿ‌ಯವರು ಈ ಸಂದೇಶವಿರುವ ವಿಡಿಯೋವನ್ನು ಲೋಕಾರ್ಪಣೆ‌ಗೊಳಿಸಿದರು. ಈ ಸಂಧರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ‌ರಾದ ಬಿ.ಕೆ ಗಣೇಶ್ ರೈ ಉಪಸ್ಥಿತರಿದ್ದರು.

ಪ್ರಸ್ತುತ ಅನೀರಿಕ್ಷಿತ ಮಹಾಮಾರಿ ಕೋವಿಡ್ -19ನ ಲಾಕ್‌ಡೌನ್‌ನ ಪರಿಣಾಮ‌ವಾಗಿ ಸಾರ್ವಜನಿಕ ಸಭೆ ಸಮಾರಂಭವನ್ನು ನಡೆಸಲು ಸಾಧ್ಯಾವಾಗದ ಕಾರಣ ಸಾಮಾಜಿಕ ಜಾಲತಾಣದ ಮೂಲಕ ಲೋಕಾರ್ಪಣೆಗೊಳಿಸಿದ ಸರ್ವೊತ್ತಮ ಶೆಟ್ಟಿ‌ಯವರು, ಕೊಪ್ಪರಿಗೆ ಸಮಗ್ರ ತುಳುನಾಡ್ ಗ್ರಂಥ ಹಾಗೂ ವೀಡಿಯೋ ದಾಖಲೀಕರಣ ಯೋಜನೆ‌ಗೆ ಶುಭಾಶಯ‌ಗಳನ್ನು ಕೋರಿ, ‘ತುಳುವರು ವಿವಿಧ ಕ್ಷೇತ್ರಗಳಲ್ಲಿ ದುಡಿದ ಹಾಗೂ ದುಡಿಯುತ್ತಿರುವವರ ಅನುಭವಗಳನ್ನು ಕೇಳಿ ತಿಳಿದು ಮಾಹಿತಿಗಳನ್ನು ಕಲೆ ಹಾಕಿ ಸಂಪೂರ್ಣ ಮಾಹಿತಿಗಳುಳ್ಳ ಅಮೂಲ್ಯ ಗ್ರಂಥ ಹಾಗೂ ವೀಡಿಯೋ ದಾಖಲೀಕರಣವನ್ನು ಮಾಡಲಾಗುವುದು.

ಈಗಾಗಲೇ ಅನೇಕ ಜ್ಞಾನ ಸಂಪತ್ತನ್ನುನಾವು ಕಳೆದು ಕೊಂಡಿದ್ದೇವೆ. ಹಲವಾರು ವಿದ್ವಾಂಸರುಗಳು ವಯಸ್ಸಿನ‌ಂಚಿನಲ್ಲಿದ್ದಾರೆ ಅವರು ಜೀವಿತದಲ್ಲಿರುವಾಗಲೇ ಅವರನ್ನೆಲ್ಲಾ ನೇರವಾಗಿ ಸಂದರ್ಶಿಸಿ ಮುಂದಿನ ಪೀಳಿಗೆಗೆ ಅವರ ಜ್ಞಾನ ಸಂಪತ್ತಿನ ದಾಖಲೀಕರಣವೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ನೆಲೆಸಿರುವ ತುಳುವರು ನಮ್ಮ ತುಳುನಾಡ್ ಟ್ರಸ್ಟ್‌ನ ದಾಖಲೀಕರಣ‌ದ ಬೃಹತ್‌ ಯೋಜನೆಗೆ ಸಹಕಾರ ಪ್ರೋತ್ಸಾಹ ನೀಡಿ ಯಶಸ್ವಿಗೊಳಿಸಬೇಕೆಂದು’ ತಮ್ಮ ಸಂದೇಶದಲ್ಲಿ ತಿಳಿಸಿದರು.

ಕೊಪ್ಪರಿಗೆ ಸಮಗ್ರ ತುಳುನಾಡ್ ದಾಖಲೀಕರಣ ಯೋಜನೆಯು ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಧೋಕ್ಷಜ ಪೇಜಾವರ ಮಠ, ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಹಾಗೂ ರಾಜರ್ಷಿ ಡಾ ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು  ಇವರುಗಳ ಶುಭಾಶಿರ್ವಾದಗಳೊಂದಿಗೆ ತುಳು ಲಿಪಿ ಶಿಕ್ಷಕಿ ವಿದ್ಯಾಶ್ರೀ ಎಸ್ ಉಳ್ಳಾಲರ ಮುಂದಾಳತ್ವದಲ್ಲಿ ಯೋಜನೆಯ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ದುಬೈ, ಕಾರ್ಯಕಾರಿ ನಿರ್ದೇಶಕರಾಗಿ ಬಿ.ಕೆ ಗಣೇಶ್ ರೈ, ಪರಿಕಲ್ಪನೆ ಮತ್ತು ನಿರ್ದೇಶಕರಾಗಿ ಜಿ.ವಿ.ಎಸ್ ಉಳ್ಳಾಲ್, ಸಹಾಯಕ ನಿರ್ದೇಶಕರಾಗಿ ಕಾರ್ತಿಕ್ ಮೂಲ್ಕಿ ಹಾಗೂ ವಿಕಾಸ್ ಶೆಟ್ಟಿ ಬೆದ್ರ, ಪಿ.ಆರ್.ಓ ಆಗಿ ರೂಪೇಶ್ ರೈ ಹಾಗೂ ದಿನೇಶ್ ರೈ ಕಡಬರವರು ಇದ್ದಾರೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ‌ಯನ್ನು ನೋಡಿಕೊಂಡು ತುಳುನಾಡಿನಿಂದ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ತುಳುವರ ದಾಖಲೀಕರಣ ಯೋಜನೆಯನ್ನು ಮುಂದುವರೆಸಲಾಗುವುದೆಂದು ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ಗೌರವಾಧ್ಯಕ್ಷ‌ರು ಬಿ.ಕೆ ಗಣೇಶ್ ರೈಯವರು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.