ಕುಲಾಲ ಸಂಘ ಚರ್ಚ್‌ಗೇಟ್‌-ದಹಿಸರ್‌ ಸಮಿತಿ: ಕ್ರೀಡೋತ್ಸವ 


Team Udayavani, Feb 1, 2018, 10:41 AM IST

3101mum02a.jpg

ಮುಂಬಯಿ: ಸಮಾಜ ಬಾಂಧವರು ಹುಮ್ಮಸ್ಸಿನಿಂದ ಭಾವನಾತ್ಮಕ ವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಇದೊಂದು ಸಂಪೂರ್ಣ ಯಶಸ್ವಿ ಕ್ರೀಡಾ ಉತ್ಸವವಾಗಿ ವಿಜೃಂಭಿಸಿದೆ. ಎಲ್ಲ ಪ್ರಾದೇಶಿಕ ಸಮಿತಿಯ ಕಾರ್ಯಕಾರಿ ಹಾಗೂ ಸಮಿತಿಯ ಸದಸ್ಯರ ಹುರುಪು, ಉತ್ಸಾಹ ಕ್ರೀಡೋತ್ಸವವನ್ನು ಯಶಸ್ಸುಗೊಳಿಸುವಲ್ಲಿ ಸಹಭಾಗಿಯಾಗಿ ದುಡಿದಿದ್ದಾರೆ. ಬೆಳಗ್ಗಿನಿಂದ ಪ್ರಾರಂಭಗೊಂಡ ಕ್ರೀಡಾ ಕಾರ್ಯಕ್ರಮದಲ್ಲಿ ಪ್ರತಿಯೊಂದು ಸ್ಪರ್ಧೆ ಯಲ್ಲಿ ಸ್ನೇಹ, ಸೌಹಾರ್ದ ಪೂರಕವಾಗಿ ಮೂಡಿ ಬಂದಿದೆ ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಪಿ. ಕುಲಾಲ್‌ ನುಡಿದರು.

ಜ. 28ರಂದು ಕುಲಾಲ ಸಂಘ ಚರ್ಚ್‌ಗೇಟ್‌-ದಹಿಸರ್‌  ಪ್ರಾದೇಶಿಕ ಸಮಿತಿ ಕಾಂದಿವಲಿ ಪಶ್ಚಿಮದ ಎಕ್ಸ್‌ಪ್ರೆಸ್‌ ಹೈವೇ ಸಮೀಪದ ಸಾಯಿಗ್ರೌಂಡ್‌ನ‌ಲ್ಲಿ ಆಯೋಜಿಸಲಾದ ಕ್ರೀಡೋತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣೆ  ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದೆಯೂ ಸಂಘದ ವತಿಯಿಂದ ಪ್ರಾದೇಶಿಕ ಸಮಿತಿಗಳಿಂದ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರ ಮನೋಭಾವ, ಒಗ್ಗಟ್ಟು ಎಲ್ಲರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ, ಜ್ಯೋತಿ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ಮಾತನಾಡಿ, ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಸದಸ್ಯರ ಉತ್ಸುಕತೆ, ಆತ್ಮಾಭಿಮಾನ ಮುಖ್ಯ. ಅತ್ಯುತ್ಸಾಹದಿಂದ ದಿನಪೂರ್ತಿ ಕ್ರೀಡೆಯಲ್ಲಿ ಭಾಗವಹಿಸುವ ಜತೆಗೆ ಇತರರಿಗೆ ಪ್ರೋತ್ಸಾಹ ನೀಡಿ ಯಶಸ್ವಿ ಕ್ರೀಡೋತ್ಸವಕ್ಕೆ ಕಾರಣೀಭೂತರಾಗಿದ್ದಾರೆ. ಮುಂದೆಯೂ ಈ ಯಶಸ್ವಿ ಸಂಘಟನೆ ಸಮಾಜದ ಏಳ್ಗೆಗೆ ಸಹಕಾರಿಯಾಗಬೇಕು. ಸಂಘಕ್ಕೆ ಎಲ್ಲರ ಸಹಾಯ ದೊರೆತಾಗ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ಸಂಸ್ಥೆಯ ಹಿರಿಯರಾದ ಪಿ. ಕೆ. ಸಾಲ್ಯಾನ್‌ ಮೊದಲಾದವರ ಕನಸಾಗಿರುವ ಊರಿನ ಕುಲಾಲ ಭವನವನ್ನು ಸಂಪೂರ್ಣಗೊಳಿಸುವಲ್ಲಿ ಕೈಜೋಡಿಸಬೇಕು ಎಂದರು.

ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ರಾಘು ಪಿ. ಮೂಲ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಒಟ್ಟು ಆರು ಪ್ರಾದೇಶಿಕ ಸಮಿತಿಗಳ ಈ ಕ್ರೀಡಾಕೂಟವು ಎಲ್ಲಾ ಸದಸ್ಯರ ಹಾಗೂ ಕಾರ್ಯಕಾರಿ ಸಮಿತಿಯ ಕಾರ್ಯತತ್ಪರತೆಯಿಂದ ಯಶಸ್ವಿಯಾಗಿರುವುದು ಸಂತೋಷದ ಸಂಗತಿಯಾಗಿದೆ. ಸಮಾಜದ ಉನ್ನತಿಗಾಗಿ ಮುಂದೆಯೂ ಸದಸ್ಯರ ಮನೋಬಲದ ಧನಾತ್ಮಕ ಚಿಂತನೆ ಇದೇ ರೀತಿ ಮುಂದುವರಿಯುತ್ತಿರಲಿ ಎಂದು ಹೇಳಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳಾದ ಐತು ಮೂಲ್ಯ, ಚೇತನಾ ಕುಂದರ್‌, ಜಗದೀಶ್‌ ಬಂಜನ್‌, ಸುಕುಮಾರ್‌ ಸಾಲ್ಯಾನ್‌, ವಿಜಯ ಸಾಲ್ಯಾನ್‌, ನರೇಂದ್ರ ಬಂಗೇರ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಿನೇಶ್‌ ಬಿ. ಕುಲಾಲ್‌ ಹಾಗೂ ಇತರ ಗಣ್ಯರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಸತ್ಕರಿಸಲಾಯಿತು.

ವೇದಿಕೆಯಲ್ಲಿ ಆರ್‌ಬಿಐ ಫುಟ್ಬಾಲ್‌ ತರಬೇತುದಾರ ಸುರೇಶ್‌ ಬ    ಂಜನ್‌, ಉದ್ಯಮಿ ಐ. ಆರ್‌. ಮೂಲ್ಯ, ಸುನಿಲ್‌ ಆರ್‌. ಸಾಲ್ಯಾನ್‌, ಉದ್ಯಮಿ ಎ. ಬಾಲಕೃಷ್ಣ ಸಾಲ್ಯಾನ್‌, ಅಶೋಕ್‌ ಸಾಲ್ಯಾನ್‌, ವಿಠಲ ಎಸ್‌. ಕುಲಾಲ್‌, ಕುಲಾಲ ಕೇಂದ್ರ ಸಮಿತಿಯ ಉಪ ಕಾರ್ಯಾಧ್ಯಕ್ಷ, ಸಮಿತಿಯ ಗೌರವ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್‌, ಗೌರವ ಕೋಶಾಧಿಕಾರಿ ಜಯ ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಘು ಆರ್‌. ಮೂಲ್ಯ, ಉಪ ಕಾರ್ಯಾಧ್ಯಕ್ಷ ಗಣೇಶ್‌ ಬಿ. ಸಾಲ್ಯಾನ್‌, ಕಾರ್ಯದರ್ಶಿ ಅರುಣ್‌ ಡಿ. ಬಂಗೇರ, ಕೋಶಾಧಿಕಾರಿ ಸತೀಶ್‌ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪುಷ್ಪಲತಾ ವಿ. ಸಾಲ್ಯಾನ್‌, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್‌, ಕಾರ್ಯದರ್ಶಿ ಅಶ್ವಿ‌ನಿ ಎ. ಬಂಗೇರ, ಸಮನ್ವಯಕ ಹರೀಶ್‌ ಜಿ. ಬಂಗೇರ, ಕ್ರೀಡಾ ಸಮಿತಿಯ ಯುವ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಕ್ರಿಕೆಟ್‌, ಯುವತಿಯರಿಗೆ ಬಾಕ್ಸ್‌ ಕ್ರಿಕೆಟ್‌, ಮಹಿಳೆಯರಿಗೆ ತ್ರೋಬಾಲ್‌, ಹದಿನೇಳು ವರ್ಷದೊಳಗಿನ ಯುವಕರಿಗೆ ರಿಂಕ್‌ ಫುಟ್ಬಾಲ್‌, ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ-ಜಗ್ಗಾಟ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ವಯೋಮಿತಿಗೆ ಅನುಗುಣವಾಗಿ  ರನ್ನಿಂಗ್‌ ರೇಸ್‌ ಇನ್ನಿತರ ವೈವಿಧ್ಯಮಯ ಸ್ಪರ್ಧೆಗಳು ನಡೆದವು. ಸಮಾಜ ಬಾಂಧವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿದರು. ಮನೋಜ್‌ ಸಾಲ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. 

ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಕಬಡ್ಡಿ ಪಂದ್ಯವನ್ನು ಆಯೋಜಿ ಸುವ ನನ್ನ ಉದ್ಧೇಶ ಸಾರ್ಥಕಗೊಂಡಿದೆ. ಪ್ರೊ ಕಬಡ್ಡಿಯನ್ನು ಹತ್ತಿರಲ್ಲಿದ್ದು ಕಂಡ ನನಗೆ ಇದನ್ನು ಸಂಯೋಜಿಸುವ ಆಸೆ ಇಟ್ಟುಕೊಂಡಿದ್ದೆ. ಅದು ಯಶಸ್ವಿಯಾಗಿದೆ. ಮುಂದೆ ದೇಶಾದ್ಯಂತ ಸಮಾಜದ ಗಣ್ಯರನ್ನು ಪರಿಚಯಿಸುವ ಮುಖ್ಯ ಕಾರ್ಯಕ್ರಮ ನೃತ್ಯ ಪರ್ವವನ್ನು ಆಯೋಜಿಸುವ ಯೋಜನೆ ಯಿದೆ. ಅದಕ್ಕಾಗಿ ಎಲ್ಲರ ಸಹಕಾರವಿರಲಿ.
 -ದಿನೇಶ್‌ ಬಿ. ಕುಲಾಲ್‌, ಕಾರ್ಯಕರ್ತ, ಸಮಾಜ ಸೇವಕರು

ಯಾವುದೇ  ಕಾರ್ಯಕ್ರಮ ಯಶಸ್ವಿಯಾದಗ ನಮಗೆ ದೊರ ಕುವ ಸಂತೋಷವೇ ಬಹುದೊಡ್ಡ ದೇಣಿಗೆ. ಕುಲಾಲ ಸಂಘದ ಹಾಗೂ ಮುಂಬಯಿ ತುಳು-ಕನ್ನಡಿಗರು ನನ್ನ ಚಲನಚಿತ್ರದ ಯಶಸ್ಸಿಗೆ ಕಾರಣೀ ಭೂತರಾಗಿದ್ದಾರೆ. ಸಂಸ್ಥೆಯ ಉನ್ನತಿಗೆ ನನ್ನ ಸಹಕಾರ ಸದಾಯಿದೆ. 
-ವೇಣುಗೋಪಾಲ್‌ ಶೆಟ್ಟಿ, ಉದ್ಯಮಿ, ಚಲನಚಿತ್ರ ನಟ, ಸಮಾಜ ಸೇವಕ

ಚಿತ್ರ ವರದಿ:  ರಮೇಶ್‌ ಉದ್ಯಾವರ 

ಟಾಪ್ ನ್ಯೂಸ್

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.