ಕುಲಾಲ ಸಂಘ ಸಿಎಸ್‌ಟಿ-ಮಾನ್‌ಖುರ್ಡ್ ವಾರ್ಷಿಕ ಸ್ನೇಹ ಸಮ್ಮಿಲನ
Team Udayavani, Nov 10, 2017, 3:44 PM IST
ಮುಂಬಯಿ: ಕುಲಾಲ ಸಂಘ ಸಮಾಜವು ಹಿಂದಿನಿಂದಲೂ ಉದ್ಯಮಿಗಳಾಗಿ, ಸ್ವ ಉದ್ಯೋಗದಿಂದ ಜೀವನವನ್ನು ಸಾಗಿಸುತ್ತಿದ್ದರು. ತಮ್ಮ ಕುಲ ಕಸುಬಿನಲ್ಲಿ ಜೀವನದ ದಾರಿಯನ್ನು ಹಿಡಿದವರು. ಪ್ರತಿಯೊಂದು ಬಂಧುಗಳಿಗೂ ಮನೆ ಹೇಗೆ ಅಗತ್ಯವೂ ಅದೇ ರೀತಿ ಸಮಾಜಕ್ಕೂ ಒಂದು ಮನೆಯಂತೆ ಭವನದ ಅಗತ್ಯವಿದೆ. ಮಂಗಳೂರಿನ ನಮ್ಮ ಸ್ವಂತ ಜಾಗದಲ್ಲಿ ಈ ಭವ್ಯ ಭವನ ರೂಪುಗೊಳ್ಳುತ್ತಿದೆ. ಒಳ್ಳೆಯ ಕಾರ್ಯಗಳಿಗೆ ಸಮಾಜ ಬಾಂಧವರು ಸದಾ, ಸಹಕಾರ ನೀಡುತ್ತಾ ಬಂದವರು. ನಿರ್ಮಾಣ ಹಂತದಲ್ಲಿರುವ ಭವನ ಪೂರ್ಣಗೊಳ್ಳುವಲ್ಲಿ ಎಲ್ಲರೂ ಸಹಕರಿಸಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿದೆ. ಅದನ್ನು ಲೋಕಮುಖ ಪರಿಚಯಿಸುವಲ್ಲಿ ಎಲರೂ ಮುಂದಾಗಬೇಕು ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ನುಡಿದರು.
ನ. 5ರಂದು ವಡಾಲದ ಎನ್‌ಕೆಇಎಸ್ ಶಾಲಾ ಸಭಾಂಗಣದಲ್ಲಿ ಕುಲಾಲ ಸಂಘ ಮುಂಬಯಿ ಇದರ ಸಿಎಸ್‌ಟಿ-ಮುಲುಂಡ್-ಮಾನ್‌ಖುರ್ಡ್ ಸ್ಥಳೀಯ ಸಮಿತಿಯ 4 ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಘದ ಕಾರ್ಯಕ್ರಮಗಳಲ್ಲಿ ಯುವಪೀಳಿಗೆಯನ್ನು ಆಕರ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದು ಶುಭ ಹಾರೈಸಿದರು.
ಸಮಾರಂಭವನ್ನು ಹಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ದೇವದಾಸ್ ಎಸ್. ಕುಲಾಲ್ ಅವರು, ಸಂಘದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಗಿದೆ. ಮುಂದಿನ ಕಾಲಾವಧಿಗೆ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ. ಪ್ರತಿಯೊಂದು ಮನೆಯಲ್ಲೂ ಕುಲಾಲ ಭವನದ ಯೋಜನೆಗೆ 5 ಸಾವಿರ ರೂ. ನೀಡುವ ಠರಾವನ್ನು ಮಂಜೂರು ಮಾಡಲಾಗಿದೆ. ಅದರಂತೆ ಸಮಾಜ ಬಾಂಧವರೆಲ್ಲರು ಸ್ಪಂದಿಸಬೇಕು. ಸಂಸ್ಥೆಯ ಕ್ರೆಡಿಟ್ ಸೊಸೈಟಿಯನ್ನು ಸಹಕಾರಿ ಕ್ಷೇತ್ರದ ಬ್ಯಾಂಕಾಗಿ ಪರಿವರ್ತಿಸೋಣ ಎಂದು ನುಡಿದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಗೌರವ ಕಾರ್ಯದರ್ಶಿ ಡಿ. ಐ. ಮೂಲ್ಯ ಅವರು ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. 87 ವರ್ಷಗಳಿಂದ ಸಮಾಜ ಬಾಂಧವರಿಗೆ ಸಹಕಾರ ನೀಡುತ್ತಾ ಬಂದಿದೆ. ಸಂಘದ ಬೆನ್ನೆಲುಬಾಗಿದ್ದ ಪಿ. ಕೆ. ಸಾಲ್ಯಾನ್ ಅವರ ಕನಸಿನಂತೆ ಮಂಗಳೂರು ಕುಲಾಲ ಭವನದ ಯೋಜನೆ ಪೂರ್ಣಗೊಳ್ಳುವಲ್ಲಿ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದು ನುಡಿದರು.
ಕಾರ್ಯದರ್ಶಿ ಜಯ ಅಂಚನ್ ಅವರು ಮಾತನಾಡಿ, ಈ ಸ್ಥಳೀಯ ಸಮಿತಿಯು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಯಾನ್ ಪರಿಸರದ ಉದ್ಯಮಿಗಳ ಸಹಕಾರ-ಪ್ರೋತ್ಸಾಹ ಕಾರಣವಾಗಿದೆ. ಕುಲಾಲ ಭವನಕ್ಕೂ, ಸಯಾನ್ ಪರಿಸರದ ದಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಅಮೂಲ್ಯದ ತ್ತೈಮಾಸಿಕ ಉಪ ಸಂಪಾದಕ ಶಂಕರ ವೈ. ಮೂಲ್ಯ ಮಾತನಾಡಿ, 19 ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ಕೃಷಿ ಮಾಡಿದ ಅಮೂಲ್ಯ ಪತ್ರಿಕೆ, ಸಮಾಜದ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ಇನ್ನಷ್ಟು ಪ್ರಗತಿಗೊಳಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಸಮಾಜದ ಬೆಳವಣಿಗೆಯಲ್ಲಿ ಪರಿವರ್ತನೆ ಆಗಬೇಕಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಪಿ. ಶೇಖರ್ ಮೂಲ್ಯ, ಥಾಣೆ-ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಣೇಶ್ ಸಾಲ್ಯಾನ್, ಮೀರಾ-ವಿರಾರ್ ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಮೋಹನ್ ಬಂಜನ್, ಹಾಗೂ ಸಿಎಸ್‌ಟಿ-ಮಾನ್‌ಖುರ್ಡ್ ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಶೇಖರ್ ಬಿ. ಮೂಲ್ಯ, ಸುಂದರ ತೊಕ್ಕೊಟ್ಟು, ಸುರೇಶ್ ಬಂಜನ್, ಜಗದೀಶ್ ಬಂಟ್ವಾಳ, ಮಹೇಶ್ ಸಾಲ್ಯಾನ್, ಸೂರಜ್ ಎಸ್. ಹಾಂಡೆಲ್, ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಇಂದಿರಾ ಆರ್. ಬಂಜನ್, ಧನಲಕ್ಷ್ಮೀ ಬಂಜನ್, ಮಲ್ಲಿಕಾ ಎಸ್. ಮೂಲ್ಯ, ಜ್ಯೋತಿ ಎಸ್. ಹಾಂಡೆಲ್, ಶಾಂತಾ ಮೂಲ್ಯ, ಪ್ರಿಯಾ ಡಿ. ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು. ಶೇಖರ್ ಬಿ. ಮೂಲ್ಯ ಮತ್ತು ಮಮತಾ ಗುಜರಾನ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಲ್ಯಾಣಿ ಬಂಜನ್, ಗೀತಾ ಸುಂದರ್ ಕರ್ಮರನ್ ಹಾಗೂ ಮಹಾಬಲ ಮೂಲ್ಯ ದಂಪತಿಯನ್ನು ಸಮ್ಮಾನಿಸಲಾಯಿತು. ಸುರೇಶ್ ಕೆ. ಬಂಜನ್ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಮೂಲ್ಯ, ಸುಂದರ ಮೂಲ್ಯ, ಜಗದೀಶ್ ಬಂಟ್ವಾಳ್ ಅವರು ಸಮ್ಮಾನಿತರನ್ನು ಪರಿಚಯಿಸಿದರು. ದಾನಿಗಳ ಯಾದಿಯನ್ನು ಸುನೀಲ್ ಕುಲಾಲ್ ವಾಚಿಸಿದರು. ಪ್ರಾರಂಭದಲ್ಲಿ ಭಜನೆ, ನೃತ್ಯ ವೈವಿಧ್ಯ ಹಾಗೂ ಸ್ಥಳೀಯ ಸಮಿತಿಯ ಸದಸ್ಯರಿಂದ ರುಕ್ಮಯ ಕುಲಾಲ್ ರಚಿಸಿದ ಕರುಣೆದ ಕಣ್ಣು ನಾಟಕ ಪ್ರದರ್ಶನಗೊಂಡಿತು.ಗೌರೀಶ್ ಬಂಜನ್, ದುರ್ಗಾಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.