ಕುಲಾಲ ಸಮಾಜಕ್ಕೆ ಒಡಿಯೂರು ಶ್ರೀಗಳ ಸೇವೆ ಅಪಾರ: ದೇವದಾಸ್ ಎಲ್. ಕುಲಾಲ್
ಕುಲಾಲ ಸಂಘ ಮುಂಬಯಿ: ಒಡಿಯೂರು ಶ್ರೀಗಳ ಜನ್ಮ ಷಷ್ಠ್ಯಬ್ದ ಕಾರ್ಯಕ್ರಮ
Team Udayavani, Sep 5, 2021, 2:26 PM IST
ನವಿಮುಂಬಯಿ: ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮ ಷಷ್ಠ್ಯಬ್ದ ಸಂಭ್ರಮದ ಜ್ಞಾನ ವಾಹಿನಿ-2021 ಪ್ರಯುಕ್ತ ನೆರೂಲ್ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಭವಾನಿ ದೇರಣ್ಣ ಶೆಟ್ಟಿ ಜ್ಞಾನ ಮಂದಿರದ ಶ್ರೀ ಗುರುದೇವಾನಂದ ಸಭಾಗೃಹದಲ್ಲಿ ಕುಲಾಲ ಸಂಘ ಮುಂಬಯಿ ವತಿಯಿಂದ 58ನೇ ಕಾರ್ಯಕ್ರಮದ ಅಂಗವಾಗಿ ಭಕ್ತ ಕುಂಬಾರ ಹರಿಕಕಥಾ ಕಾಲಕ್ಷೇಪ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಹರಿಕಥಾ ವಿದ್ವಾನ್ ವಿಶ್ವೇಶದಾಸ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ ಹರಿಕಥಾ ಕಾಲಕ್ಷೇಪ ನಡೆಯಿತು. ಜನಾರ್ದನ್ ಸಾಲ್ಯಾನ್ ತಬಲಾದಲ್ಲಿ ಹಾಗೂ ಶೇಖರ್ ಸಸಿಹಿತ್ಲು ಶ್ರುತಿಯಲ್ಲಿ ಸಹಕರಿಸಿದರು. ಹರಿಕಥೆ ಪ್ರಸ್ತುತಪಡಿಸಿದ ಕೈರಬೆಟ್ಟು ವಿಶ್ವನಾಥ್ ಭಟ್ ಅವರನ್ನು ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್ ಗೌರವಿಸಿ ಬಳಿಕ ಮಾತನಾಡಿ, ಕುಲಾಲ ಸಮಾಜದ ಮೇಲೆ ಅಪಾರ ಗೌರವ ಹೊಂದಿರುವ ಒಡಿಯೂರು ಶ್ರೀಗಳ 60ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಹರಿಕಥೆ ಸೇವೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯದ ಸೇವೆಯನ್ನು ಕುಲಾಲ ಸಂಘವು ನೀಡಿದೆ. ಶ್ರೀಗಳ ಸಮಾಜಪರ ಕಾರ್ಯಕ್ರಮಗಳು ಅನುಪಮವಾಗಿದೆ ಎಂದು ತಿಳಿಸಿ, ಸ್ವಾಮೀಜಿಯವರು ಕುಲಾಲ ಸಮಾಜಕ್ಕೆ ನೀಡಿದ ಸೇವಾ ಕಾರ್ಯಗಳನ್ನು ಸ್ಮರಿಸಿಕೊಂಡರು.
ಇದನ್ನೂ ಓದಿ:ಕಡಿಮೆ ಅಪಾಯದ ಭೂಕಂಪ, ನಿರ್ಭಯವಾಗಿರಿ: ವಿಜಯಪುರ ಜಿಲ್ಲಾಡಳಿತದ ಅಭಯ
ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು ಒಡಿಯೂರು ಶ್ರೀಗಳ ಚಿಂತನೆ ಮತ್ತು ಸಾಧನೆಗಳನ್ನುಗಳನ್ನು ಸ್ಮರಿಸಿ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ರೂ. ವೆಚ್ಚದ ಕುಲಾಲ ಭವನದ ನಿರ್ಮಾಣಕ್ಕೆ ಸ್ವಾಮೀಜಿ ಶಂಕುಸ್ಥಾಪನೆ ಮಾಡಿ ನಮ್ಮನ್ನು ಹಾರೈಸಿದ್ದಾರೆ. ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ನಮ್ಮ ಕುಲಾಲ ಸಂಘ ಮತ್ತು ಜ್ಯೋತಿ ಕ್ರೆಡಿಟ್ ಸೊಸೈಟಿ ಬೆಳೆದಿದೆ ಎಂದರು.
ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಮಾತನಾಡಿ, ಶ್ರೀಗಳ ಹುಟ್ಟುಹಬ್ಬವನ್ನು ಹರಿಕಥೆ, ಭಜನೆ ಮೂಲಕ ಆಚರಿಸುವುದಕ್ಕೆ ಅವಕಾಶ ಮಾಡಿಕೊಟ್ಟ ಶ್ರೀಗಳ ಶಿಷ್ಯವೃಂದದವರಿಗೆ ಮತ್ತು ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಕುಲಾಲ ಸಂಘದ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಕೋಶಾಧಿಕಾರಿ ಜಯ ಅಂಚನ್ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಅಂಚನ್ ಮತ್ತು ಪದಾಧಿಕಾರಿಗಳು, ಸಂಘದ ಮುಖವಾಣಿ ಅಮೂಲ್ಯ ಸಂಪಾದಕ ಶಂಕರ್ ಮೂಲ್ಯ ವಿರಾರ್, ಕುಲಾಲ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ವಾಸು ಬಂಗೇರ, ಮಾಜಿ ಕಾರ್ಯಧ್ಯಕ್ಷ ಶೇಖರ್ ಮೂಲ್ಯ ಪಿ., ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮದ ರೂವಾರಿ ದಾಮೋದರ ಶೆಟ್ಟಿ. ಮತ್ತು ಕಾರ್ಯಕ್ರಮ ನಿರ್ವಾಹಕರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಗುರು ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.