ಕುಲಾಲ ಸಂಘ ಮುಂಬಯಿ ಇದರ 87ನೇ ವಾರ್ಷಿಕ ಮಹಾಸಭೆ
Team Udayavani, Oct 15, 2017, 2:39 PM IST
ಮುಂಬಯಿ: ನಮ್ಮ ಹಿರಿಯರು ಉತ್ತಮ ಧ್ಯೇಯೊದ್ದೇಶವನ್ನಿಟ್ಟುಕೊಂಡು ಸ್ಥಾಪಿಸಿದ ಈ ಸಂಘಟನೆಯನ್ನು ಮತ್ತಷ್ಟೂ ಬಲಪಡಿಸುವಲ್ಲಿ ನಾವೆಲ್ಲರೂ ಹೆಚ್ಚಿನ ಮಟ್ಟದಲ್ಲಿ ಕ್ರಿಯಾಶೀಲರಾಗಬೇಕು. ಬಹುಕೋಟಿ ರೂಪಾಯಿಯ ಮಂಗಳೂರಿನ ಕುಲಾಲ ಭವನದ ಯೋಜನೆಗೆ ನಿಮ್ಮೆಲ್ಲರ ಸಹಕಾರ ಸಿಗುತ್ತಿದ್ದು, ಈ ಯೋಜನೆಯನ್ನು ಸಮಾಜ ಬಾಂಧವರ ಸಹಕಾರದಿಂದ ಆದಷ್ಟು ಬೇಗನೆ ಪೂರ್ಣಗೊಳಿಸಲಿರುವೆವು. ಸಮಾಜದ ಯುವಕರು ಮುಂದೆ ಬಂದು ಸಮಾಜ ಸೇವೆಯಲ್ಲಿ ನಿರತರಾಗಬೇಕು. ಇದರಿಂದ ಅವರಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು ನುಡಿದರು.
ಕುಲಾಲ ಸಂಘ ಮುಂಬಯಿ ಇದರ 87 ನೇ ವಾರ್ಷಿಕ ಮಹಾಸಭೆಯು ಸಂಘದ ವಡಾಲದ ಎನ್‌ಕೆಇಎಸ್ ಹೈಸ್ಕೂಲ್ ಸಭಾಂಗಣದಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸಮಾಜಪರ ಯೋಜನೆಗಳ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳುವಂತೆ ವಿನಂತಿಸಿದರು.
ಸಭೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ ಅವರು ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಜಯ ಅಂಚನ್ ಅವರು ಗತವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಚುನಾವಣಾಧಿಕಾರಿ ಬಿ. ಜಿ. ಅಂಚನ್ ಅವರು 2017- 2019ನೇ ಸಾಲಿನ ನೂತನ ಸದಸ್ಯರ ಹೆಸರನ್ನು ಮಂಡಿಸಿದರು.
ಕುಲಾಲ ಸಂಘದ ಉಪಾಧ್ಯಕ್ಷ ದೇವದಾಸ್ ಕುಲಾಲ್ ಅವರು ಮಾತನಾಡಿ, ಈ ಬಾರಿ ಮಹಾಸಭೆಯಲ್ಲಿ ಯುವ ಜನಾಂಗದ ಕೊರತೆ ಕಂಡು ಬರುತ್ತಿದ್ದು ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಯಾಶೀಲರಾಗುವಂತಾಗಬೇಕು. ಜ್ಯೋತಿ ಕ್ರೆಡಿಟ್ ಸೊಸೈಟಿಯ ಪ್ರಯೋಜನವನ್ನು ಸಮಾಜ ಬಾಂಧವರು ಎಲ್ಲರೂ ಪಡೆಯುವಂತಾಗಬೇಕು ಎಂದರು.
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಮಮತಾ ಗುಜರನ್ ಅವರು ಮಾತನಾಡಿ, ಸಂಘದ ಆಡಳಿತ ಸಮಿತಿಯಲ್ಲಿ ಮಹಿಳೆಯರು ಸಕ್ರಿಯರಾಗಬೇಕು. ಎಲ್ಲಾ ಸ್ಥಳೀಯ ಸಮಿತಿಯ ಮಹಿಳಾ ವಿಭಾಗಗಳು ಸಮಾಜದ ಬಹುಕೋಟಿ ಯೋಜನೆಗೆ ಸ್ಪಂದಿಸುತ್ತಿರುವುದು ಅಭಿನಂದನೀಯ ಎಂದರು.
ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಲ್ಲಮಾರು ಗೋಪಾಲ್ ಬಂಗೇರ ಅವರು ಮಾತನಾಡಿ, ಸಂಘದ ಥಾಣೆಯಲ್ಲಿರುವ ಜಾಗದಲ್ಲಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಯೋಜನೆ ನಿರ್ಮಾಣವಾಗಲಿದೆ. ಮಂಗಳೂರಿನ ಕುಲಾಲ ಭವನ ಶೀಘ್ರಗತಿಯಲ್ಲಿ ಕೆಲಸ ನಡೆಯುತ್ತಿದ್ದು, ಸಮಾಜ ಬಾಂಧವರು ಸಮಾನತೆಯ ಮನಸ್ಸಿನಿಂದ ಸಂಘದ ಯೋಜನೆಗೆ ಸಹಕರಿಸಬೇಕು ಎಂದು ನುಡಿದರು.
ಅಮೂಲ್ಯ ತ್ತೈಮಾಸಿಕದ ಉಪಸಂಪಾದಕ ಶಂಕರ ವೈ. ಮೂಲ್ಯ ಅವರು ಮಾತನಾಡಿ, ಸಂಘದ ಮುಖವಾಣಿ ಅಮೂಲ್ಯ ತ್ತೈಮಾಸಿಕವು ಹಲವಾರು ವಿಶೇಷತೆಗಳಿಂದ ಕೂಡಿದ್ದು, ಹೆಚ್ಚಿನ ಸದಸ್ಯರ ವಿಳಾಸ ಸರಿಯಿಲ್ಲದೆ ವಾಪಾಸಾಗುತ್ತಿದೆ. ಸದಸ್ಯರು ಸಂಘದ ಕಚೇರಿಯಲ್ಲಿ ಸರಿಯಾದ ವಿಳಾಸವನ್ನು ನೀಡಬೇಕು. ಅಮೂಲ್ಯ ತ್ತೈಮಾಸಿಕದ ಸದಸ್ಯತನವನ್ನು ಎಲ್ಲರೂ ಪಡೆದುಕೊಳ್ಳುವಂತೆ ವಿನಂತಿಸಿದರು.
ಸಭಿಕರ ಪರವಾಗಿ ಲಕ್ಷಣ್ ಪಿ. ಮೂಲ್ಯ ಮತ್ತು ಮಮತಾ ಜಿ. ಸಾಲ್ಯಾನ್ ಮಾತನಾಡಿ ಸಲಹೆ-ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಸಂಘದ ಇತರ ಪದಾಧಿಕಾರಿಗಳಾದ ಸುನೀಲ… ಕುಲಾಲ್, ರಾಘು ಬಿ. ಮೂಲ್ಯ, ಚಂದ್ರಹಾಸ ಎನ್. ಸಾಲ್ಯಾನ್, ಸದಸ್ಯರಾದ ಪಿ. ಶೇಖರ ಮೂಲ್ಯ, ಕೆ. ಗೋಪಾಲ… ಬಂಗೇರ, ರಾಘು ಮೂಲ್ಯ, ಪಿ. ಉಮೇಶ್ ಬಂಗೇರ, ಜಗದೀಶ್ ಆರ್. ಬಂಜನ್, ಹರೀಶ್ ಜಿ. ಬಂಗೇರ, ಆಶೀಶ್ ವಿ. ಕರ್ಕೇರ, ಶಂಕರ್ ವೈ. ಮೂಲ್ಯ, ಕರುಣಾಕರ ಬಿ. ಸಾಲ್ಯಾನ್, ಬಿ. ಅಣ್ಣಿ ಮೂಲ್ಯ, ಸುರೇಶ್ ಕೆ. ಕುಲಾಲ್, ಶೀನ ಮೂಲ್ಯ, ನ್ಯಾಯವಾದಿ ಉಮಾನಾಥ್ ಕೆ. ಮೂಲ್ಯ, ಅಶ್ವಿನ್ ಎ. ಬಂಗೇರ, ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಂದರ್ ಮೂಲ್ಯ, ಆನಂದ ಬಿ. ಮೂಲ್ಯ, ಪಿ. ಶೇಖರ್ ಮೂಲ್ಯ, ರಘು ಆರ್. ಮೂಲ್ಯ, ಶೇಖರ ಬಿ. ಮೂಲ್ಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್, ಉಪಕಾರ್ಯಾಧ್ಯಕ್ಷೆ ಸುಚೇತಾ ಬಂಜನ್, ಕಾರ್ಯದರ್ಶಿ ಮಾಲತಿ ಜಯ ಅಂಚನ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ ಅವರು ವಂದಿಸಿದರು.
ಸಂಘಕ್ಕೆ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಸದಸ್ಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ಸ್ಮಾರಕ ಪ್ರಶಸ್ತಿಗಳಾದ ದಿ| ಡಾ. ಎಚ್. ಎಂ. ಸುಬ್ಬಯ್ಯ ಸ್ಮರಣಾರ್ಥ ಟ್ರೋಫಿ, ದಿ| ಬಂಟ್ವಾಳ ಬಾಬು ಸಾಲ್ಯಾನ್ ಸ್ಮರಣಾರ್ಥ ರೋಲಿಂಗ್ ಟ್ರೋಫಿ, ದಿ| ಸುಂದರ ಕರ್ಮರನ್ ಸ್ಮರಣಾರ್ಥ ಟ್ರೋಫಿ, ದಿ| ಪಿ. ಕೆ. ಸಾಲ್ಯಾನ್ ಸ್ಮರಣಾರ್ಥ ಟ್ರೊಫಿಯನ್ನು ಕ್ರಮವಾಗಿ ಸೀನ ಜಿ. ಮೂಲ್ಯ, ಮಾಲತಿ ಜೆ. ಅಂಚನ್, ಶ್ರುತಿ ಜಯ ಅಂಚನ್ ಮತ್ತು ದಯಿತ ಹರೀಶ್ ಬಂಗೇರ ಇವರಿಗೆ ನೀಡಿ ಗೌರವಿಸಲಾಯಿತು. ಸಂಘದ ಹಿರಿಯರಾದ ಭೋಜ ಬಂಗೇರ, ಪನ್ವೇಲ್ ಶೀನ ಮೂಲ್ಯ ದಂಪತಿಯನ್ನು, ಜಯಲಕ್ಷ್ಮಿ, ಪದ್ಮನಾಭ ಮತ್ತು ಹೇಮಲತಾ ಕರುಣಾಕರ ಮೂಲ್ಯ ಇವರನ್ನೂ ಸಮ್ಮಾನಿಸಲಾಯಿತು. ದೇವದಾಸ್ ಕುಲಾÇ, ರಾಘು ಡಿ. ಮೂಲ್ಯ ಸಮ್ಮಾನಿತರನ್ನು ಪರಿಚಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.