ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ
Team Udayavani, Oct 25, 2018, 4:42 PM IST
ನವಿ ಮುಂಬಯಿ: ಕುಲಾಲ ಸಂಘ ಮುಂಬಯಿ ನವಿಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನವು ಅ. 21ರಂದು ವಾಶಿಯ ಕನ್ನಡ ಸಂಘದ ಸಭಾಗೃಹ ದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಕುಲಾಲ ಸಂಘ ಮುಂಬಯಿ ಉಪಾಧ್ಯಕ್ಷ ರಘು ಎ. ಮೂಲ್ಯ ಅವರು ವಹಿಸಿ ಮಾತನಾಡಿ, ಕುಲಾಲ ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರೂ ಒಟ್ಟಿಗೆ ಚಿಂತನೆ ಮಾಡುವ ಅಗತ್ಯವಿದೆ. ಸ್ಥಳೀಯ ಯುವಕರು ಸ್ವಯಂ ಇಚ್ಛೆಯಿಂದ ನಮ್ಮೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿ¨ªಾರೆ ಎನ್ನಲು ಹರ್ಷವಾಗುತ್ತಿದೆ. ಈ ವರ್ಷ ಯುವಕರೇ ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿ¨ªಾರೆ. ಇದೇ ರೀತಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಂಡು ಕೆಲಸಕ್ಕೆ ಸೇರಿದ ಯುವಕರು ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂಬುದನ್ನು ತೋರಿಸಿ ಕೊಟ್ಟಿ¨ªಾರೆ. ಅವರಿಗೆ ಅಭಿನಂದನೆಗಳು. ಕುಲಾಲ ಸಮಾಜ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳನ್ನು ಗೌರವಿಸುವ ಸಮಾಜವಾಗಿದೆ. ಯುವಕರು ಹಿರಿಯರಿಗೆ ಗೌರವ ಕೊಡುತ್ತಾ ಅವರ ಮಾರ್ಗದರ್ಶನದಲ್ಲಿ ತಮ್ಮ ಲಕ್ಷÂದತ್ತ ಸಾಗಬೇಕು. ಮಹಿಳಾ ವಿಭಾಗದ ವೈದ್ಯಕೀಯ ಧನಸಹಾಯ ವಿತರಣೆ ಅಭಿನಂದನೀಯವಾಗಿದೆ. ಎಲ್ಲ ಸ್ಥಳೀಯ ಸಮಿತಿಗಳು ಇತರರಿಗೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡಬೇಕು. ಆಗ ಮಾತ್ರ ಸಂಘಟನೆ ಬಲಿಷ್ಠವಾಗಲು ಸಾಧ್ಯ ಎಂದರು.
ಪಾಲಕರ ಕರ್ತವ್ಯ
ಕುಲಾಲ ಸಂಘದ ಗೌರವ ಪ್ರಧಾನ ಕಾರ್ಯ ದರ್ಶಿ ಕರುಣಾಕರ ಬಿ. ಸಾಲ್ಯಾನ್ ಮಾತನಾಡಿ, ಸ್ಥಾಪಕ ಸದಸ್ಯರು ಒಳ್ಳೆಯ ಉದ್ದೇಶವಿಟ್ಟು ರಚಿಸಿದ ಈ ಸ್ಥಳೀಯ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜಪರ ಕಾರ್ಯಗಳು ಜನರ ಮನೆ, ಮನಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ನಮ್ಮ ಧರ್ಮ-ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಪಾಲಕರ ಕರ್ತವ್ಯ. ಯುವಪೀಳಿಗೆ ಸಂಘದ ಎÇÉಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದೆ ಇದು ಉತ್ತಮ ಬೆಳವಣಿಗೆ. ಮಂಗಳೂರಿನ ಕುಲಾಲ ಭವನ ಕೆಲಸ ವೇಗವಾಗಿ ಸಾಗುತ್ತಿದೆ. ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲು ಎಲ್ಲರ ಸಹಕಾರ ಅಗತ್ಯ. ಸಂಘದ ವಿದ್ಯಾರ್ಥಿ ಸಹಾಯಧನದ ಪ್ರಯೋಜನ ಪಡೆದುಕೊಳ್ಳಿ ಎಂದರು.
ಸಂಘದ ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್ ಅವರು ಮಾತನಾಡಿ, ನವಿ ಮುಂಬಯಿ ಸ್ಥಳೀಯ ಯುವಕರು ನೀಡಿದ ದತ್ತು ಸ್ವೀಕಾರ ಎಲ್ಲರಿಗೆ ಮಾದರಿ. ಕುಲಾಲ ಭವನದ ಧನಸಹಾಯದಲ್ಲಿ ಸ್ಥಳೀಯ ಸಮಿತಿ ಹೆಚ್ಚು ಮುತುವರ್ಜಿಯಲ್ಲಿ ಕೆಲಸಮಾಡುತ್ತಿದೆ. ಸಮಾಜ ಬಾಂಧವರು ಇನ್ನಷ್ಟು ಸಹಾಯಧನ ನೀಡಿ ಮಂಗಳೂರು ಕುಲಾಲ ಭವನದ ಕಾರ್ಯದಲ್ಲಿ ಕೈಜೋಡಿಸಿ ಎಂದರು.
ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತ್ರಾ ಡಿ. ಬಂಜನ್, ಅಮೂಲ್ಯ ಸಂಪಾದಕ ಶಂಕರ್ ವೈ. ಮೂಲ್ಯ, ಸಂಘದ ಠಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ. ಮೂಲ್ಯ, ಚರ್ಚ್‌ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಸಾಲ್ಯಾನ್, ಸಿಎಸ್‌ಟಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಎಸ್. ಮೂಲ್ಯ, ಮೀರಾ-ವಿರಾರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಮೋಹನ್ ಬಂಜನ್ ಅವರು ಮಾತನಾಡಿ ಶುಭಹಾರೈಸಿದರು.
ಸಮ್ಮಾನ
ಈ ಸಂದರ್ಭದಲ್ಲಿ ಹಿರಿಯ ಕಾರ್ಯ ಕರ್ತರಾದ ಕೃಷ್ಣ ಕೆ. ಮೂಲ್ಯ ಖಾರ್‌ಘರ್ ಮತ್ತು ಸುಮಿತ್ರಾ ರಾಜು ಸಾಲ್ಯಾನ್ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ಅಲ್ಲದೆ ಸಮಾಜದ ಅರು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು. ನಾನಿಲ್ತಾರ್ ಕುಲಾಲ ಅಭಿಮಾನಿ ಬಳಗದ ವತಿಯಿಂದ ಮಂಗಳೂರು ಕುಲಾಲ ಭವನಕ್ಕೆ ಒಂದು ಲಕ್ಷ ರೂ.ದೇಣಿಗೆ ಹಸ್ತಾಂತರಿಸಲಾಯಿತು.
ನವಿಮುಂಬಯಿ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡಬಿದಿರೆಯ ರಕ್ಷಿತಾ ಕುಲಾಲ್ ಅವರಿಗೆ 20,000 ರೂ. ಧನಸಹಾಯ ಹಸ್ತಾಂತರಿಸಲಾಯಿತು. ಸ್ಥಳೀಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಎಸ್. ಬಂಗೇರ ಸ್ವಾಗತಿಸಿದರು. ಬೇಬಿ ವಿ. ಬಂಗೇರ, ಪದ್ಮಾ ಎಲ್. ಮೂಲ್ಯ ಮತ್ತು ಉಷಾ ಆರ್. ಮೂಲ್ಯ ಪ್ರಾರ್ಥನೆಗೈದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ರಮೇಶ್ ಬಂಜನ್ ಥಾಣೆ ಮತ್ತು ಶ್ರುತಿ ಜೆ. ಅಂಚನ್ ಸಹಕರಿಸಿದರು. ಸಮ್ಮಾನಿತರನ್ನು ಮಾಲತಿ ಜೆ. ಅಂಚನ್ ಮತ್ತು ಕೃಪೇಶ್ ಕುಲಾಲ್ ಅವರು ಪರಿಚಯಿಸಿದರು. ಸಭಾ ಕಾರ್ಯಕ್ರಮವನ್ನು ಎಲ್ ಆರ್. ಮೂಲ್ಯ ಮತ್ತು ಪಿ. ಶೇಖರ್ ಮೂಲ್ಯ ನಿರೂಪಿಸಿದರು. ಸುರೇಶ್ ಕೆ. ಕುಲಾಲ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಶಿಕುಮಾರ್ ವಿ. ಕುಲಾಲ್ ಮತ್ತು ಸೂರಜ್ ಎಸ್ ಕುಲಾಲ್ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ಮತ್ತು ಸದಸ್ಯರಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು. ಶಶಿಕುಮಾರ್ ವಿ. ಕುಲಾಲ್ ರಚಿಸಿ ನಿರ್ದೇಶಿಸಿದ ಸ್ಥಳೀಯ ಸಮಿತಿಯ ಮಕ್ಕಳ ಅಭಿನಯದ ಬಲೀಂದ್ರೆ ಪೌರಾಣಿಕ ತುಳು ಕಿರುನಾಟಕ ಮತ್ತು ಸ್ಥಳೀಯ ಸದಸ್ಯರಿಂದ ಕಲ್ಜಿಗದ ಕರ್ಣೆ ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಸಂಘಟನೆಯನ್ನು ಬಲಿಷ್ಠ ಮಾಡುವುದೇ ಸ್ಥಳೀಯ ಸಮಿತಿಯ ಉದ್ದೇಶ. ಯುವ ಪೀಳಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆೆ. ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಪ್ರೋತ್ಸಾಹಿಸಬೇಕು. ಮಂಗಳೂರು ಭವನ ಆದಷ್ಟು ಬೇಗ ಲೋಕಾರ್ಪಣೆಗೊಳ್ಳುವತ್ತ ನಾವು ಪ್ರಯತ್ನಿಸುತ್ತಿದ್ದೇವೆ. ಸದ್ಯದÇÉೇ ಜ್ಯೋತಿ ಕ್ರೆಡಿಟ್ ಸೊಸೈಟಿಯ ಪುಣೆ ಶಾಖೆಯನ್ನು ಸ್ಥಾಪಿಸಲಾಗುವುದು. ಸಮಾಜ ಬಾಂಧವರು ಸ್ವಂತ ವ್ಯಾಪಾರದತ್ತ ಹೆಚ್ಚು ಒಲವು ತೋರಿಸಿ ಅದಕ್ಕೆ ಬೇಕಾಗುವ ಬಂಡವಾಳವನ್ನು ಜ್ಯೋತಿ ಕ್ರೆಡಿಟ್ ಸೊಸೈಟಿಯಿಂದ ಸಾಲದ ಸವಲತ್ತಿನ ಮುಖಾಂತರ ಪಡೆದು ಅಭಿವೃದ್ಧಿ ಹೊಂದಿ ಸಮಾಜಕ್ಕೆ ಮಾದರಿಯಾಗಬೇಕು. ನಾನಿಲ್ತಾರ್ ಕುಲಾಲ ಅಭಿಮಾನಿ ಬಳಗದ ದೇಣಿಗೆಗೆ ನಾವು ಚಿರಋಣಿ.
-ಗಿರೀಶ್ ಬಿ. ಸಾಲ್ಯಾನ್, ಕಾರ್ಯಾಧ್ಯಕ್ಷರು, ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ
ಚಿತ್ರ : ವರದಿ : ಈಶ್ವರ ಎಂ.ಐಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.