ಕುಲಾಲ ಸಂಘ ನವಿಮುಂಬಯಿ: ಅರಸಿನ ಕುಂಕುಮ
Team Udayavani, Mar 12, 2018, 5:19 PM IST
ನವಿಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ವಾಶಿಯ ಕನ್ನಡ ಸಂಘದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಕುಲಾಲ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚೇತಾ ವಿ. ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ದಿನೇಶ್ ಶೆಟ್ಟಿ ಮತ್ತು ಶ್ರೀ ಶನೀಶ್ವರ ಮಂದಿರ ನೆರೂಲ್ ಇದರ ಮಹಿಳಾ ಮಂಡಳದ ಕಾರ್ಯಾಧ್ಯಕ್ಷೆ ವೀಣಾ ವಿಶ್ವನಾಥ್ ಪೂಜಾರಿ ಇವರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ನವಿ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಲಾ ಎಸ್. ಮೂಲ್ಯ, ಉಪಕಾರ್ಯಾಧ್ಯಕ್ಷೆ ಹರಿಣಾಕ್ಷಿ ಎ. ಸಾಲ್ಯಾನ್, ಕಾರ್ಯದರ್ಶಿ ಬೇಬಿ ವಿ. ಬಂಗೇರ, ಕೋಶಾಧಿಕಾರಿ ಮಲ್ಲಿಕಾ ಡಿ. ಕುಲಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೂಪಾ ಡಿ. ಶೆಟ್ಟಿ ಇವರು, ದಾಂಪತ್ಯ ಜೀವನದಲ್ಲಿ ಅರಸಿನವು ಪತ್ನಿಯನ್ನು ಬಿಂಬಿಸಿದರೆ ಕುಂಕುಮವು ಪತಿಯನ್ನು ರೂಪಿಸುತ್ತದೆ. ಪತಿಪತ್ನಿಯರ ಸಮ್ಮಿಲನ ದ್ಯೋತಕವೇ ಈ ಅರಸಿನ ಕುಂಕುಮವಾಗಿದೆ. ಸುಮಂಗಲೆಯರು ಪತಿಯ ಆಯುಷ್ಯವೃದ್ಧಿಗೆ ದೇವರಲ್ಲಿ ಪ್ರಾರ್ಥಿಸುವ ಉದ್ಧೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕುಂಕುಮವು ಪ್ರತಿಯೋರ್ವ ಸ್ತ್ರೀಯ ಮಾಂಗಲ್ಯದ ಕುರುಹನ್ನು ಎತ್ತಿ ತೋರಿಸುತ್ತದೆ. ಮಹಿಳೆಯರು ಮಕ್ಕಳನ್ನು ನೋಡುವುದರೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಮತ್ತೋರ್ವ ಅತಿಥಿ ವೀಣಾ ಪೂಜಾರಿ ಇವರು ಮಾತನಾಡಿ, ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರನ್ನು ಕಂಡಾಗ ಸಂತೋಷವಾಗುತ್ತಿದೆ. ಕುಲಾಲ ಸಮಾಜದ ಮಹಿಳೆಯರು ಬಹಳ ಸಂಖ್ಯೆಯಲ್ಲಿ ಒಗ್ಗಟ್ಟನ್ನು ನೋಡಿ ಬಹಳ ಸಂತೋಷವಾಗಿದೆ. ಇಂದು ಮಹಿಳೆ ಸಂಸಾರವನ್ನು ತೂಗಿಸಿಕೊಂಡು, ಮಕ್ಕಳನ್ನು ಬೆಳೆಸುವಲ್ಲಿ ಅವರ ಲಾಲನೆ ಪಾಲನೆ, ಶಿಕ್ಷಣದ ಕಡೆ ಸೂಕ್ಷ್ಮವಾಗಿ ಗಮನ ಕೊಟ್ಟು ಪತಿಯ ಬೇಕು-ಬೇಡಗಳನ್ನು ಪೂರೈಸುವಲ್ಲಿ ದಿನ ಕಳೆದುಹೋಗುತ್ತದೆ. ಅದರೊಟ್ಟಿಗೆ ಇಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜ ಸೇವೆ ಮಾಡುವುದು ಸುಲಭ ಸಾಧ್ಯವಲ್ಲ. ಆದರೂ ಮಹಿಳೆಯರು ಗಂಡಸರ ಸರಿ ಸಮಾನವಾಗಿ ಬೆಳೆದು ನಿಲ್ಲಬೇಕು. ನಾನು ಮಹಿಳೆಯಾಗಿ ಹುಟ್ಟಿದ್ದು ನನ್ನ ಸೌಭಾಗ್ಯ ಎಂದು ತಿಳಿಯುತ್ತೇನೆ. ಕುಲಾಲ ಸಂಘದವರು ಹೊಸದಾಗಿ ಕುಲಾಲ ಭವನವನ್ನು ನಿರ್ಮಿಸುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಕುಲಾಲ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚೇತಾ ವಿ. ಕುಲಾಲ್ ಅವರು, ಅರಶಿನ ಕುಂಕುಮದ ಮಹತ್ವದ ಬಗ್ಗೆ ವಿವರಿಸುತ್ತಾ ನಾವು ಪರಶುರಾಮ ಸೃಷ್ಟಿಯಾದ ತುಳುನಾಡಿನಲ್ಲಿ ಹುಟ್ಟಿದವರು. ದೈವ-ದೇವರು, ನಾಗ ದೇವರನ್ನು ಪೂಜಿಸುವವರು. ಕಟ್ಟು ಕಟ್ಟಳೆ ನಿಯಮಗಳಿಗೆ ಹೆಸರುವಾಸಿಯಾದವರು. ನಮ್ಮ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಮಹತ್ತರವಾಗಿದೆ. ಯಾವ ಗುಡಿಯೆ ಇರಲಿ ಭಕ್ತಿ ಬರಲಿ. ಯಾವ ಧರ್ಮವೆ ಇರಲಿ ಬೆಳಕು ಕೊಡಲಿ, ಯಾವ ಭಾವನೆಯೇ ಇರಲಿ ಶಾಂತಿ ದೊರಕಲಿ ಎನ್ನುವ ಹಾಗೆ ಬೆಳಕಿನೆಡೆಗೆ ದೇವರು ಕೈ ಹಿಡಿದು ನಡೆಸಲಿ. ಇದೇ ರೀತಿ ಒಗ್ಗಟ್ಟಿನಿಂದ ಮುಂದೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಭವನಕ್ಕೆ ನಾವೆಲ್ಲರೂ ಒಟ್ಟಾಗಿ ಸಹಕರಿಸೋಣ ಎಂದರು.
ಶಶಿಕಲಾ ಎಸ್. ಮೂಲ್ಯ ಸ್ವಾಗತಿಸಿದರು. ಶಕುಂತಳಾ ಆರ್. ಮೂಲ್ಯ ಮತ್ತು ಉಷಾ ಮೂಲ್ಯ ಪ್ರಾರ್ಥನೆಗೈದರು. ಹರಿಣಾಕ್ಷೀ ಎ. ಸಾಲ್ಯಾನ್ ಮತ್ತು ಮಮತಾ ಎಸ್. ಕುಲಾಲ್ ಅತಿಥಿಗಳನ್ನು ಪರಿಚಯಿಸಿದರು. ಮಾಲತಿ ಜೆ. ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಹರಿಣಾಕ್ಷೀ ಎ. ಸಾಲ್ಯಾನ್ ವಂದಿಸಿ ದರು. ಸಭಾ ಕಾರ್ಯಕ್ರಮದ ಅನಂತರ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರನ್ನು ಉಡುಗೊರೆ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಲಘು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.