ಕುಲಾಲ ಸಂಘ ಥಾಣೆ-ಭಿವಂಡಿ:ಸಾಧಕರಿಗೆ ಸಮ್ಮಾನ
Team Udayavani, Nov 4, 2017, 4:49 PM IST
ಕಲ್ಯಾಣ್: ಕುಲಾಲ ಸಂಘ ಮುಂಬಯಿ ಇದರ ಥಾಣೆ-ಕಸರಾ-ಕರ್ಜತ್- ಭಿವಂಡಿ ಸ್ಥಳೀಯ ಸಮಿತಿಯ 14 ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಅ. 29 ರಂದು ಕಲ್ಯಾಣ್ ಪೂರ್ವದ ವಲೀಫಿರ್ ರೋಡ್, ಜಶ್ರಾಜ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮೌರ್ಯಗ್ರೌಂಡ್ ಬ್ಯಾಂಕ್ವೆಟ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸುದೀರ್ಘ ಕಾಲ ಸೇವೆಗೈದ ಹಾಗೂ ದಾನಿಗಳಾದ ಗಣೇಶ್ ಬಿ. ಬಂಗೇರ ಡೊಂಬಿವಲಿ, ಎಲ್. ಆರ್. ಮೂಲ್ಯ ಪನ್ವೇಲ್, ಸುಧಾಕರ ಎನ್. ಮೂಲ್ಯ ಡೊಂಬಿವಲಿ ದಂಪತಿಗಳನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.
ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ವರದಿ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜ ಬಾಂಧವರ ಎಸ್‌ಎಸ್‌ಸಿ, ಎಚ್‌ಎಸ್‌ಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ದೇವದಾಸ್ ಕುಲಾಲ್, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಮೂಲ್ಯ, ಉಪಕಾರ್ಯಾಧ್ಯಕ್ಷ ಸುಧಾಕರ ಬಂಗೇರ,ಗೌರವ ಕಾರ್ಯದರ್ಶಿ ಲಕ್ಷ್ಮಣ್ ಮೂಲ್ಯ, ಗೌರವ ಕೋಶಾಧಿಕಾರಿ ಸದಾಶಿವ ಬಂಗೇರ, ಸಂಘದ ಹಾಗೂ ಸಮಿತಿಯ ಇತರ ಪದಾಧಿಕಾರಿಗಳಾದ ಡಿ. ಐ. ಮೂಲ್ಯ, ಜಯ ಅಂಚನ್, ಮಮತಾ ಗುಜರನ್,ರೇಖಾ ಮೂಲ್ಯ, ಉಮಾ ಸಾಲ್ಯಾನ್, ಶೇಖರ ಮೂಲ್ಯ,ಮೋಹನ್ ಬಂಜನ್, ಶೇಖರ ಬಿ. ಮೂಲ್ಯ, ರಘುಮೂಲ್ಯ, ಶಂಕರ ಮೂಲ್ಯ, ಕೃಷ್ಣ ಬಂಗೇರ, ಹರಿಯಪ್ಪಮೂಲ್ಯ,ರಮೇಶ್ ಎಸ್. ಮೂಲ್ಯ, ಯಶ್ಮಿತಾ ಮೂಲ್ಯ, ಕವಿತಾ ಮೂಲ್ಯ, ಆಶಾ ಬಂಗೇರ, ವಸಂತಿ ಬಂಜನ್, ಭಾರತಿ ಆರ್ಕೇನ್, ರವಿಕುಲಾಲ್,ಕುಶ ಬಿ. ಕುಲಾಲ್, ವಿ. ಜಿ. ಮೂಲ್ಯ, ವಾಮನ್ ಬಂಗೇರ,ರಮೇಶ್ ಮೂಲ್ಯ, ಸದಾನಂದ ಸಾಲ್ಯಾನ್, ಶೈಲೇಶ್ ಮೂಲ್ಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.