ಕುಮಾರ ಕ್ಷತ್ರಿಯ ಸಂಘ: 53ನೇ ವಾರ್ಷಿಕ ದಿನಾಚರಣೆ
Team Udayavani, Mar 12, 2019, 1:07 PM IST
ಮುಂಬಯಿ: ಕುಮಾರ ಕ್ಷತ್ರಿಯ ಸಂಘ ಮುಂಬಯಿ ಇದರ 53ನೇ ವಾರ್ಷಿಕ ದಿನಾಚರಣೆಯು ಮಾ. 3ರಂದು ಬೆಳಗ್ಗೆ 10ರಿಂದ ಸಾಂತಾಕ್ರೂಜ್ ಪೂರ್ವದ ಮಾಧವ ಭವನ ಪೇಜಾವರ ಮಠದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ವಿಜೃಂಭಣೆ ಯಿಂದ ನಡೆಯಿತು.
ಅರಸಿನ ಕುಂಕುಮ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶಾಲಿನಿ ಎಂ. ರಾವ್ ಅವರ ನೇತೃತ್ವದಲ್ಲಿ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಕೊನೆಯಲ್ಲಿ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ನಂತರ ನಡೆದ ಪರಿಷತ್ತಿನ ಮಹಾ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಎಂ. ಡಿ. ರಾವ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಸಮಾಜ ಬಾಂಧವರಿಗಾಗಿ ಸ್ವಂತ ಕಚೇರಿ ಪಡೆದುಕೊಳ್ಳುವ ವಿಷಯದಲ್ಲಿ ಸಭಿಕರೊಂದಿಗೆ ಚರ್ಚಿಸಿ, ಎಲ್ಲರೂ ತುಂಬು ಹೃದಯದಿಂದ ಸಹಕಾರ ನೀಡಬೇಕೆಂದು ವಿನಂತಿಸಿದರು.
ಆರಂಭಿಸುವ ಮೊದಲು ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಹಾಗೂ 2018-2019ರಲ್ಲಿ ನಿಧನರಾದ ನಮ್ಮ ಸಂಸ್ಥೆಯ ಸದಸ್ಯಭಾಂದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಕೋಶಾಧಿಕಾರಿ ಶ್ರೀ ಶಾಂತಾರಾಮ ಜೆ. ಮಾಂಗಾಡ್ ಲೆಕ್ಕ ಪತ್ರವನ್ನು ಮಂಡಿಸಿದರು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಎಸ್‌ಎಲ್‌ಸಿ ಪದವೀಧರ ಮತ್ತು ಸ್ನಾತಕೋತ್ತರ ಪದವೀಧರರಿಗೆ ಸಂಘದ ಜೇಷ್ಠ ಸದಸ್ಯರಾದ ಪ್ರಭಾ ಎಂ. ರಾವ್ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕವನ್ನು, ಇನ್ನೋರ್ವ ಜೇಷ್ಠ ಸದಸ್ಯರಾದ ಉಮಾ ಶಿವ ರಾವ್ ಇವರಿಬ್ಬರ ಹಸ್ತದಿಂದ ನೀಡಲಾಯಿತು. ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ನಂತರ ನಮ್ಮ ದಿವಂಗತ ಮಾಜಿ ಅಧ್ಯಕ್ಷರಾದ ಪ್ರಮೋದ್ ರಾವ್ ಅವರು ಸಮುದಾಯಕ್ಕೆ ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ದಿವಂಗತರ ಪತ್ನಿ ಪ್ರತಿಮಾ ರಾವ್ ಹಾಗೂ ಪುತ್ರ ಸಾಗರ ರಾವ್ ಅವರಿಗೆ ಸಮುದಾಯದ ವತಿಯಿಂದ ಜೇಷ್ಠ ಸದಸ್ಯರಾದ ನೀಲಾಕ್ಷಿ ಪ್ರಭಾಕರ್ ಬೇಕಲ್ ಅವರ ಹಸ್ತದಿಂದ ನೀಡಲಾಯಿತು. ಕಾರ್ಯಕ್ರಮವನ್ನು ಸಮಿತಿಯ ಸದಸ್ಯರಾದ ಶಾಲಿನಿ ಎಂ. ರಾವ್ ಅವರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ನೂತನ ಮಹಿಳಾ ವಿಭಾಗವನ್ನು ರಚಿಸಲಾಯಿತು.
ಕಾರ್ಯಾಧ್ಯಕ್ಷೆಯಾಗಿ ಶಾಲಿನಿ ಮಿಲಿಂದ ರಾವ್ ಅವರು ಆಯ್ಕೆಯಾದರೆ, ಇತರ ಪದಾಧಿಕಾರಿಗಳಾಗಿ ಉಮಾ ಶಿವ ರಾವ್ , ಕಲ್ಪನಾ ಶಶಿ ರಾವ್, ಬಿಂದು ಕುಂದರ್, ಕವಿತಾ ರೋಹನ್, ವಿಶಾಲಾಕ್ಷಿ ಅರುಣ ಚಂದ್ರಗಿರಿ, ದಿವ್ಯಾ ಕಲ್‌ನಾಡ್ ಅವರು ಆಯ್ಕೆಯಾದರು. ವೇದಿಕೆಯಲ್ಲಿ ಅಧ್ಯಕ್ಷ ಎಂ. ಡಿ. ರಾವ್, ಉಪಾಧ್ಯಕ್ಷ ರವಿ ಚಂದ್ರಗಿರಿ, ಜತೆ ಕಾರ್ಯದರ್ಶಿ ಉಮಾನಾಥ್ ರಾವ್, ಕೋಶಾಧಿಕಾರಿ ಶಾಂತರಾಮ್ ಜೆ. ಮಾಂಗಾಡ್, ಸಲಹೆಗಾರ ಬಿ. ಎಸ್. ರಾವ್, ಸದಸ್ಯರಾದ ಶಾಲಿನಿ ಎಂ. ರಾವ್, ರವಿ ಎಸ್. ಕಲ್‌ನಾಡ್, ಸಾಗರ್ ಪಿ. ರಾವ್, ಕೆ. ಎಂ. ರಾವ್, ಸುರೇಂದ್ರ ಎ. ರಾವ್ ಅವರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಉಮಾನಾಥ ರಾವ್ ವಂದಿಸಿದರು.
ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.