ತುಳುಕೂಟ ಡೊಂಬಿವಲಿ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ
Team Udayavani, Feb 11, 2018, 12:08 PM IST
ಡೊಂಬಿವಲಿ: ಗೃಹಿಣಿಯೊಬ್ಬಳು ಕೇವಲ ಮನೆಯೊಡತಿಯಾಗದೆ, ಸಮಾಜಪರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಎಲ್ಲಾ ಗುಣಗಳನ್ನು ಹೊಂದಿರುವ ಮಹಿಳೆಯು ತನ್ನಿಂದ ಎಲ್ಲಾ ಸಾಧ್ಯ ಎಂಬುವುದನ್ನು ಸಾಧಿಸಿ ತೋರಿಸುವಲ್ಲಿ ಗುರುತಿಸಿಕೊಳ್ಳಬೇಕು. ಆಗ ಮಾತ್ರ ಆಕೆ ಯುವ ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತಾಳೆ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್. ಭಂಡಾರಿ ಕಡಂದಲೆ ಅವರು ನುಡಿದರು.
ಇತ್ತೀಚೆಗೆ ತುಳುಕೂಟ ಡೊಂಬಿವಲಿ ವತಿಯಿಂದ ಆಯೋಜಿಸಲಾಗಿತ್ತ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಪಾಲ್ಗೊಂಡ ಎಲ್ಲರಿಗೂ ಶುಭಹಾರೈಸಿದರು.
ಓಂ ಶಕ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರು ಮಾತನಾಡಿ, ಹೆಣ್ಣಾಗಿ ಹುಟ್ಟುವುದೇ ಭಾಗ್ಯ. ಈ ಆಧುನಿಕ ಯುಗದಲ್ಲಿ ಹೆಣ್ಣಿಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ಇನ್ನೋರ್ವೆ ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕೃಷಿ¡ ಮುರಳಿ ಶೆಟ್ಟಿ ಅವರು ಮಾತನಾಡಿ, ಅರಸಿನ ಕುಂಕುಮ ಕಾರ್ಯಕ್ರಮವು ಒಂದು ಮಂಗಳದಾಯಕವಾದ ಆಚರಣೆಯಾಗಿದೆ. ಮಹಿಳೆಯೊಬ್ಬಳು ಸಂಸಾರದ ಕರ್ತವ್ಯಗಳನ್ನು ನಿಭಾಯಿಸಿ ಸಮಾಜದ ಬಂಧು-ಬಾಂಧವರ ಜೊತೆ ಬೆರೆತು ತನ್ನನ್ನು ಸಾಮರಸ್ಯದ ಬದುಕಿನಲ್ಲಿ ರೂಪಿಸಿಕೊಳ್ಳುತ್ತಾಳೆ. ಹೆಣ್ಣೊಬ್ಬಳ ಬದುಕು, ಅರಸಿನದಂತೆ ತಾತ್ವಿಕವಾಗಿಯೂ, ಕುಂಕುಮದಂತೆ ಶಕ್ತಿಯುತವಾಗಿರಲಿ ಎಂದರು.
ಕರ್ನಾಟಕ ಸಂಘ ಡೊಂಬಿವಲಿ ಇದರ ಮಹಿಳಾ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ವಿಮಲಾ ವಿಠuಲ್ ಶೆಟ್ಟಿ ಅವರು ಮಾತನಾಡಿ, ಮರಾಠಿ ನೆಲದ ಆಚರಣೆಯನ್ನು ಪರವೂರಿನಿಂದ ಬಂದು ಇಲ್ಲಿ ನೆಲೆಸಿರುವ ತುಳು-ಕನ್ನಡಿಗರು ಸಂತೋಷದಿಂದ ಆಚರಣೆ ಮಾಡುವುದು ನಮ್ಮ ಸದ್ಗುಣಕ್ಕೆ ಒಂದು ನಿದರ್ಶನವಾಗಿದೆ. ನಮ್ಮ ಜನ್ಮಭೂಮಿಯ ಆಚರಣೆಗಳನ್ನು ಆಚರಿಸುವ ಜೊತೆಗೆ ನಮ್ಮ ಕರ್ಮಭೂಮಿಯ ಆಚರಣೆಗಳನ್ನು ನಮ್ಮದಾಗಿಸಿಕೊಳ್ಳಬೇಕು. ಹೆಣ್ಣು ಮನೆಯ ನಂಟಿನ ರೂಪಕ ಎಂದು ತಿಳಿಸಿದರು.
ವಿಶೇಷ ಆಕರ್ಷಣೆಯಾಗಿ ಆಗಮಿಸಿದ್ದ ತುಳು ಚಲನಚಿತ್ರ ನಟ ಸೌರಭ್ ಭಂಡಾರಿ ಅವರು ಮಾತನಾಡಿ, ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವಲ್ಲಿ ತುಳುಕೂಟ ಡೊಂಬಿವಲಿ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ಯುವಪೀಳಿಗೆ ತುಳುವ ಸಂಸ್ಕೃತಿಯನ್ನು ಉಳಿಸುವಲ್ಲಿ ಮುಂದೆ ಬರಬೇಕು ಎಂದರು.
ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ ಅನಿತಾ ಭಂಡಾರಿ, ತುಳುಕೂಟ ಡೊಂಬಿವಲಿ ಅಧ್ಯಕ್ಷ ಹೇಮಂತ್ ಶೆಟ್ಟಿ, ಕೃಷ್ಣ ಶೆಟ್ಟಿ, ಚಿತ್ರಾ ಶೆಟ್ಟಿ, ವಿಮಲಾ ಶೆಟ್ಟಿ, ಸೌರಭ್ ಭಂಡಾರಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾರಂಭದಲ್ಲಿ ಚಂದ್ರಹಾಸ್ ರೈ ಪುತ್ತೂರು ಮತ್ತು ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು. ಯೋಗ ಗುರು ಜಯಶೀಲ ಭಂಡಾರಿ ಇವರ ಬಳಗದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.
ಸಾಹಿತಿ, ವಿದ್ವಾನ್ ಮಿತ್ರಪಟ್ಣ ನಾರಾಯಣ ಬಂಗೇರ ದಂಪತಿ ಹಾಗೂ ಜೊತೆ ಕೋಶಾಧಿಕಾರಿ ಹೇಮಾನಂದ ದೇವಾಡಿಗ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ತುಳುಕೂಟ ಡೊಂಬಿವಲಿಯ ಅಧ್ಯಕ್ಷ ಹೇಮಂತ್ ಶೆಟ್ಟಿ ಅವರು ಮಾತನಾಡಿ, ರಂಗಕರ್ಮಿ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರ ಕಲ್ಪನೆ, ಅವರು ನಿರ್ಮಿಸಿಕೊಟ್ಟ ಈ ಸಂಸ್ಥೆಯನ್ನು ತುಂಬಾ ಉತ್ತಮ ರೀತಿಯಲ್ಲಿ ನಾವು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಸಂಸ್ಥೆಯ ಉದ್ದೇಶಗಳಿಗೆ ಪ್ರಾಮುಖ್ಯತೆ ಕೊಟ್ಟು, ಕಲೆಯ ಮುಖಾಂತರ ಭಾಷೆ, ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದೇವೆ. ಅದಕ್ಕಾಗಿ ಎಲ್ಲರ ಸಹಕಾರ ಸದಾಯಿರಲಿ. ಹೆಣ್ಣು ಎಂದರೆ ಶಕ್ತಿ. ಆಕೆ ಮನಸ್ಸು ಮಾಡಿದರೆ, ಈ ಬದುಕಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನೂ ಮಾಡಬಲ್ಲಳು. ಜೀವನದಲ್ಲಿ ತನ್ನೆಲ್ಲಾ ಪಾತ್ರಗಳನ್ನು ಸರಳವಾಗಿ ನಿಭಾಯಿಸಲು ಹೆಣ್ಣೊಬ್ಬಳಿಗೆ ಸಾಧ್ಯ ಎಂದರು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತುಳು-ಕನ್ನಡಿಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.