ಕುರ್ಲಾ ಜಿಎಸ್‌ಬಿ ಬಾಲಾಜಿ ಮಂದಿರ ಗಣೇಶೋತ್ಸವ ಸುವರ್ಣ ಮಹೋತ್ಸವ 


Team Udayavani, Aug 22, 2017, 12:37 PM IST

20-Mum04.jpg

ಮುಂಬಯಿ: ಜಿಎಸ್‌ಬಿ ಸಭಾ ಕುರ್ಲಾ-ಚೆಂಬೂರು-ಘಾಟ್ಕೊàಪರ್‌ (ಕೆಸಿಬಿ) ಸಂಸ್ಥೆಯ ಕುರ್ಲಾ ಪೂರ್ವದಲ್ಲಿರುವ ಕುರ್ಲಾ ಬಾಲಾಜಿ ಮಂದಿರದ ಸುವರ್ಣ ಗಣೇಶೋತ್ಸವ ಸಂಭ್ರಮವು ಆ. 25 ರಿಂದ ಆ. 29 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಐದು ದಿವಸಗಳ ಕಾಲ ಬೆಳಗ್ಗೆ 8ರಿಂದ 10.30ರವರೆಗೆ ಮೊದಲ ದಿನ ಹೊರತುಪಡಿಸಿ ತುಲಾಭಾರ ಸೇವೆಯನ್ನು ಆಯೋಜಿಸಲಾಗಿದೆ. ಪ್ರತಿದಿನ ಪೂರ್ವಾಹ್ನ 10.30ರಿಂದ ಭಗವಾನ್‌ ಬಾಲಾಜಿಗೆ ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ, ಪೂರ್ವಾಹ್ನ 11ರಿಂದ ಮಧ್ಯಾಹ್ನ 1 ಗಂಟೆಯರೆಗೆ ಮಹಾಗಣಪತಿ ದೇವರಿಗೆ ಶೋಡಷೋಚಾರ ಪೂಜೆ, ಸಹಸ್ರನಾಮ ದುರ್ವಾರ್ಚನೆ, ಪ್ರತಿದಿನ ದಿನ 12 ಗಂಟೆಯಿಂದ ಶ್ರೀ ಬಾಲಾಜಿ ದೇವರಿಗೆ ಸರ್ವಾಲಂಕಾರ, ಮಧ್ಯಾಹ್ನ ಪೂಜೆ, ಗಣೇಶ ಚತುರ್ಥಿಯ ದಿನ ಮಧ್ಯಾಹ್ನ 12.30ರಿಂದ ಮಂದಿರದ ಅರ್ಚಕರಿಂದ ಶ್ರೀ ಗಣೇಶ ದೇವರಿಗೆ ಪೂಜೆ, ಪ್ರತಿದಿನ ಮಧ್ಯಾಹ್ನ 1ರಿಂದ ಮಹಾಗಣಪತಿ ದೇವರಿಗೆ ಮಹಾಪೂಜೆ, ಆರತಿ, ಪ್ರಸಾದ ವಿತರಣೆ ನಡೆಯಲಿದೆ.

ಆ. 25 ರಿಂದ ಆ. 28 ರವರೆಗೆ ಅಪರಾಹ್ನ 3 ರಿಂದ ಸಂಜೆ 7 ರವರೆಗೆ ಮೂಢಗಣಪತಿ ಹಾಗೂ ರಂಗಪೂಜೆ ಸೇವೆಗಳು ನಡೆಯಲಿವೆ. ಬಾಲಾಜಿ ದೇವರಿಗೆ ಜಿಎಸ್‌ಬಿ ಸಭಾದ ವತಿಯಿಂದ ಗಣೇಶ ಚುತುರ್ಥಿಯ ದಿನ ರಾತ್ರಿ 8 ರಿಂದ ರಂಗಪೂಜೆ, ರಾತ್ರಿಪೂಜೆ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ.
ಗಣೇಶ ಚತುರ್ಥಿಯ ದಿನ ಪೂರ್ವಾಹ್ನ 11.30 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಆ. 25 ಮತ್ತು ಆ. 26 ರಂದು ಸಂಜೆ 7 ರಿಂದ ಗುರುಕೃಪಾ ಭಜನ ಮಂಡಳಿ ಹಾಗೂ ಮಹಿಳಾ ಇವಭಾಗದವರಿಂದ ಭಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ. 27 ರಂದು ಸಂಜೆ 5 ರಿಂದ ರಾತ್ರಿ 8 ರವರೆಗೆ ಜಿಎಸ್‌ಬಿ ಸಭಾ ಕುರ್ಲಾ ಮಹಿಳಾ ವೃಂದದವರಿಂದ ಅರಸಿನ ಕುಂಕುಮ ಕಾರ್ಯಕ್ರಮ ಜರಗಲಿದೆ. ಆ. 29 ರಂದು ಬಾಲಾಜಿ ದೇವರಿಗೆ ಮಹಿಳಾ ವೃಂದದವರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ.ಅಪರಾಹ್ನ 3.30 ರಿಂದನ ಗಣಪತಿ ವಿಸರ್ಜನ ಪೂಜೆ, ವಿಸರ್ಜನ ಮೆರವಣಿಗೆಯು ತಿಲಕ್‌ ಬ್ರಿಡ್ಜ್ ಮಾರ್ಗವಾಗಿ ಶಿವಾಜಿಪಾರ್ಕ್‌ಗೆ ತೆರಳಲಿದೆ. ಪೂಜಾ ಸೇವಾರ್ಥಕವಾಗಿ ಸಹಸ್ರ ಮೋದಕ ಹವನ, ಅಥರ್ವ ಶ್ರೀಷಪಠಣ, ಸತ್ಯವಿನಾಯಕ ಪೂಜೆ, ಲಕ್ಷಪ್ರದಕ್ಷಿಣೆ, ಪುಷ್ಪಾಲಂಕಾರ ಸೇವೆ ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹರಿಕೀರ್ತನೆ, ಯಕ್ಷಗಾನ ಬಯಲಾಟ, ಪ್ರತಿಭಾ ಸ್ಪರ್ಧೆ, ಸಂಗೀತ, ನೃತ್ಯ, ಸಾಹಿತ್ಯಕ ಕಾರ್ಯಕ್ರಮ, ಸಾಂಸ್ಕೃತಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನಗರದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಕಳೆದ ಅರ್ಧ ಶತಮಾನದುದ್ದಕ್ಕೂ ಹುಟ್ಟುಹಾಕಿದ ಸಂಘ-ಸಂಸ್ಥೆಗಳ ಪೈಕಿ ಜಿಎಸ್‌ಬಿ ಸಭಾ ಕುರ್ಲಾ-ಚೆಂಬೂರು–ಘಾಟ್‌ಕೋಪರ್‌ ಸಂಸ್ಥೆಯು ಧಾರ್ಮಿಕ, ಸಾಂಸ್ಕೃತಿಕ ಇನ್ನಿತರ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನುಪಮವಾಗಿದೆ. ಕುರ್ಲಾ ಪಶ್ಚಿಮದ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಬಾಲಾಜಿ ಮಂದಿರವು  ಜಿಎಸ್‌ಬಿ ಸಮಾಜದ ಇಷ್ಟದೇವತೆ ಎಂದೆಣಿಸಿಕೊಂಡು ಭಗವಾನ್‌ ವೆಂಕಟರಮಣ ದೇವಸ್ಥಾನವೂ ಇತ್ತೀಚೆಗೆ ಪ್ರಚಲಿತಕ್ಕೆ ಬಂದಿದೆ. ಜಿಎಸ್‌ಬಿ ಸಭಾ ಟ್ರಸ್ಟ್‌ ಅಧಿನಿಯಮದ ಪ್ರಕಾರ  ಇಲ್ಲಿಯ ಆಡಳಿತವು ನಡೆಯುತ್ತಿದ್ದು, ಈ ಪರಿಸರದ ಸಮಾಜ ಬಾಂಧವರಲ್ಲಿ ದೇವರ-ಧರ್ಮ-ಗುರು ಸದ್ಭಾವನೆ ಸಮಾಜ ಸೇವೆಯ ಕುರಿತು ಭಕ್ತಿ, ಶ್ರದ್ಧೆ, ಮೂಡಿಸುವುದರಲ್ಲಿ ಅಪಾರ ಸಾರ್ಥಕತೆಯನ್ನು ಹೊಂದಿದೆ.

ವರ್ಷವಿಡೀ ಪ್ರತಿಷ್ಠಾ ವರ್ಧಂತಿ ಉತ್ಸವ, ಶ್ರೀ ಗಣೇಶೋತ್ಸವ, ಶ್ರೀ ರಾಮನವಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಗಳು ಸಡಗರದಿಂದ ಕ್ಷೇತ್ರದಲ್ಲಿ ನಡೆಯುತ್ತಿದೆ. ಸಂಸ್ಥೆಯು ಸ್ಥಾಪನೆ ಯಾಗಿ 55 ವರ್ಷಗಳು ಸಂದರೂ ಜಿಎಸ್‌ಬಿ ಕುರ್ಲಾ ಗಣೇಶೋತ್ಸವಕ್ಕೆ ಪ್ರಸ್ತುತ ವರ್ಷ ಸುವರ್ಣ ಮಹೋತ್ಸವದ ಸಂಭ್ರಮವಾಗಿದೆ. ಈ ಉತ್ಸವದಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸು ವಂತೆ ಸಂಸ್ಥೆಯ ಆಡಳಿತ ಸಮಿತಿಯ ಪ್ರಕಟನೆ ತಿಳಿಸಿದೆ. 

ಟಾಪ್ ನ್ಯೂಸ್

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

6

Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.