ಐಸಿಯು ಹಾಸಿಗೆಗಳಿಲ್ಲದೆ ಸೋಂಕಿತರ ಪರದಾಟ
Team Udayavani, Jun 24, 2020, 1:32 PM IST
ಮುಂಬಯಿ, ಜೂ. 23: ಕೋವಿಡ್ ಸೋಂಕಿತರಿಗೆ ಹೆಚ್ಚಿನ ಸೌಲಭ್ಯವನ್ನು ಮುಂಬಾಯಿ ಮನಪಾ ತನ್ನಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದೆ. ಆದರೆ ಜೂನ್ 20ರೊಳಗೆ 300 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳನ್ನು ನಿರ್ಮಿಸಲು ಯೋಜಿಸಿರುವ ಮನಪಾ ಜೂನ್ 17ರ ವರೆಗೆ ಕೇವಲ 51 ಐಸಿಯು ಹಾಸಿಗೆಗಳನ್ನು ನಿರ್ಮಿಸಿದ್ದು, ಆಸ್ಪತ್ರೆಗಳಲ್ಲಿ ಸೌಲಭ್ಯಕ್ಕಾಗಿ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಮತ್ತು ಕೇಂದ್ರದ ಸಮೀಕ್ಷೆಗಳು ಜೂನ್ ಅಂತ್ಯದ ವೇಳೆಗೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದು ಈ ಹಿನ್ನೆಲೆ ನಗರದಲ್ಲಿ ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದಾಗಿ ಬಿಎಂಸಿ ಹೇಳಿದೆ. ಪ್ರಸ್ತುತ ಸೋಂಕಿನ ಬೆಳವಣಿಗೆಯ ವೇಗ ಮುಂದುವರಿದರೆ ಅಂದಾಜು 80,000 ಕೋವಿಡ್ -19 ಪ್ರಕರಣಗಳಿಗೆ ಐಸಿಯು ಘಟಕಗಳನ್ನು ಸಿದ್ಧತೆ ಮಾಡಬೇಕಾಗಿದೆ ಎನ್ನಲಾಗಿದೆ.
ಈಗಾಗಲೇ ಯೋಜಿಸಿರುವಂತೆ ಬಿಎಂಸಿ ಜೂನ್ 25ರ ವರೆಗೆ ಹಾಸಿಗೆಯ ಸಾಮರ್ಥ್ಯವನ್ನು 300ರಷ್ಟು ಹೆಚ್ಚಿಸಲಾಗುವುದು. ನಾವು ಐಸಿಯು ಹಾಸಿಗೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದೇನೆ ಎಂದು ಪುರಸಭೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಹೇಳಿದರು. ಜೂನ್ 10ರಂದು ಚಾಹಲ್ 10 ದಿನಗಳಲ್ಲಿ 300 ಐಸಿಯು ಹಾಸಿಗೆಗಳನ್ನು ಸೇರಿಸಲಾಗುವುದು ಎಂದು ಹೇಳಿದ್ದರು. ನಗರದಲ್ಲಿ ಪ್ರಕರಣಗಳ ಸಂಖ್ಯೆಯನ್ನು ಪರಿಗಣಿಸಿ ಈ ಸಾಮರ್ಥ್ಯವನ್ನು ಹೆಚ್ಚಿಸುವ ಆವಶ್ಯಕತೆಯಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಜೂನ್ 17ರ ವರೆಗೆ 1,215ರ ಒಟ್ಟು ಐಸಿಯು ಹಾಸಿಗೆಯ ಸಾಮರ್ಥ್ಯದ ಬಿಎಂಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸುಮಾರು ಶೇ. 95ರಷ್ಟು ಹಾಸಿಗೆಗಳನ್ನು ಆಕ್ರಮಿಸಲಾಗಿದೆ.
ಕನಿಷ್ಠ ಶೇ. 7ರಷ್ಟು ಪ್ರಕರಣಗಳಿಗೆ ಐಸಿಯು ಹಾಸಿಗೆಗಳು ಲಭ್ಯವಿರಬೇಕು ಎಂದು ವೈದ್ಯಕೀಯ ಸಲಹೆಗಾರರ ಸಂಘದ ಅಧ್ಯಕ್ಷ ಡಾ| ದೀಪಕ್ ಬೈದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.