ಸಂಘದ ಸದಸ್ಯತ್ವ ಹೆಚ್ಚಿಸಲು ಕ್ರಿಯಾಶೀಲರಾಗೋಣ: ಜಿ. ಟಿ. ಪೂಜಾರಿ
ಚಿತ್ರಾಪು ಬಿಲ್ಲವರ ಸಂಘ ಮುಂಬಯಿ ಇದರ 74ನೇ ವಾರ್ಷಿಕ ಮಹಾಸಭೆ
Team Udayavani, Aug 13, 2019, 11:07 AM IST
ಮುಂಬಯಿ, ಆ. 12: ಎಪ್ಪತ್ತನಾಲ್ಕು ವರ್ಷಗಳ ಹಿಂದೆ ಚಿತ್ರಾಪು ಬಿಲ್ಲವ ಸಮುದಾಯದ ಹಿರಿಯರು ಬಹಳ ಪರಿಶ್ರಮದಿಂದ ಈ ಸಂಘವನ್ನು ಕಟ್ಟಿದ್ದು, ನಾವಿಂದು ಅವರನ್ನು ನೆನಪಿಸಬೇಕಾಗಿದೆ. ಮಹಿಳೆಯರು ಬಹಳ ಸಂಖ್ಯೆಯಲ್ಲಿ ಇಂದು ಇಲ್ಲಿದ್ದು ಮುಂದೆ ಇದು ಹಲವು ಪಟ್ಟು ಹೆಚ್ಚಾಗಲಿ. ನಮ್ಮವರ ಮನೆಯಲ್ಲಿನ ಮಹಿಳೆಯರನ್ನು ಹಾಗೂ ಮಕ್ಕಳನ್ನು ಮಾತ್ರವಲ್ಲದೆ ಸಮಾಜ ಬಾಂಧವರನ್ನು ಚಿತ್ರಾಪು ಬಿಲ್ಲವರ ಸಂಘದ ಸದಸ್ಯರಾಗಿ ಮಾಡುವುದರೊಂದಿಗೆ ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸೋಣ ಎಂದು ಚಿತ್ರಾಪು ಬಿಲ್ಲವರ ಸಂಘದ ಅಧ್ಯಕ್ಷರಾದ ಜಿ. ಟಿ. ಪೂಜಾರಿ ನುಡಿದರು.
ಆ. 11ರಂದು ನಗರದ ಬಿಲ್ಲವ ಭವನ, ನಾರಾಯಣ ಗುರು ಮಾರ್ಗ, ಸಾಂತಾಕ್ರೂಸ್ ಪೂರ್ವ ಇಲ್ಲಿ ಜರಗಿದ ಚಿತ್ರಾಪು ಬಿಲ್ಲವರ ಸಂಘ ಮುಂಬಯಿ ಇದರ 74ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಯುವಕರು ಮುಂದೆ ಬಂದು ನಮ್ಮ ಈ ಸಂಘವನ್ನು ಉನ್ನತ ಮಟ್ಟಕ್ಕೇರಿಸಬೇಕು ಎಂದು ಶ್ರೀ ವಿಠೊಭ ದೇವರ ಆಶೀರ್ವಾದದಿಂದ ನಮಗೆ ಎಲ್ಲರ ಬೆಂಬಲವಿದೆ ಎಂದರು.
ಅಧ್ಯಕ್ಷರಾದ ಜಿ. ಟಿ. ಪೂಜಾರಿಅವರು ವೇದಿಕೆಯಲ್ಲಿದ್ದ ಇತರ ಪದಾಧಿಕಾರಿಗಳೊಂದಿಗೆ ಶ್ರೀ ವಿಠೊಭ ದೇವರ ಭಾವಚಿತ್ರಕ್ಕೆ ಮೊದಲು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯಿತ್ತು ಎಲ್ಲ ಸದಸ್ಯರನ್ನು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಉಮೇಶ್ ಜಿ. ಕೋಟ್ಯಾನ್ ಗತ ಸಭೆಯ ವರದಿಯನ್ನು ಸಭೆಯ ಮುಂದಿಟ್ಟರೆ ಗೌರವ ಕೋಶಾಧಿಕಾರಿ ಸೋಮನಾಥ ಪಿ. ಪೂಜಾರಿಯವರು ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.
ಸಂಘದ ಮುಂದಿನ ಮೂರು ವರ್ಷದ ಅವಧಿಗೆ ಜಿ. ಟಿ. ಪೂಜಾರಿ ಅವರು ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಜಿ. ಕೋಟ್ಯಾನ್, ಗೌರವ ಕೋಶಾಧಿಕಾರಿಯಾಗಿ ಸೋಮನಾಥ ಪಿ. ಪೂಜಾರಿ, ಉಪಾಧ್ಯಕ್ಷರಾಗಿ ರಾಜು ಎಸ್. ಪೂಜಾರಿ, ಜತೆ ಕಾರ್ಯದರ್ಶಿಗಳಾಗಿ ನಿಶಿತ್ ಎಸ್. ಕೋಟ್ಯಾನ್ ಮತ್ತು ಮಧುಕರ್ ಆರ್. ಕೋಟ್ಯಾನ್, ಜತೆ ಕೋಶಾಧಿಕಾರಿಯಾಗಿ ಕಿಶೋರ್ ಎಸ್. ಕರ್ಕೇರ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುರೇಶ್ ಎಂ. ಕೋಟ್ಯಾನ್, ಪದ್ಮನಾಭ ಜೆ. ಪೂಜಾರಿ, ಜಯಶೀಲ ಕೋಟ್ಯಾನ್, ರಮೇಶ್ ಕೆ. ಕುಂದರ್, ವಿ. ಸಿ. ಸಾಲ್ಯಾನ್, ನವೀಶ್ ಜೆ. ಬಂಗೇರ, ಗಣೇಶ್ ಸಾಲ್ಯಾನ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಶೇಖರ ಜೆ. ಚಿತ್ರಾಪು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಿಧನರಾದ ಚಿತ್ರಾಪು ಬಿಲ್ಲವರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಟಿ. ಕುಕ್ಯಾನ್ ಅವರಿಗೆ ಸಂತಾಪ ಸೂಚಿಸಲಾಯಿತು. ಸಭಿಕರ ಪರವಾಗಿ ಮಾತನಾಡಿದ ಸುಂದರ ಸುವರ್ಣ, ಭಾಸ್ಕರ ಎಸ್. ಕೋಟ್ಯಾನ್, ಸುರೇಶ್ ಎಂ. ಕೋಟ್ಯಾನ್, ಉಮೇಶ್ ಕೋಟ್ಯಾನ್, ರವಿ ಸನಿಲ್, ಸೋಮನಾಥ ಪಿ. ಪೂಜಾರಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದಿ. ರಾಮಚಂದ್ರ ಟಿ. ಕುಕ್ಯಾನ್ ಅವರ ಸೇವೆಯನ್ನು ಸ್ಮರಿಸಿದರು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸಂಘದ ಸಾಧಕರಾದ ಸುರೇಶ್ ಎಂ. ಕೋಟ್ಯಾನ್, ರಾಧಾ, ಪದ್ಮನಾಭ ಜೆ. ಪೂಜಾರಿ ದಂಪತಿಯನ್ನು ಸಮ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಈ ಸಭೆಯಲ್ಲಿ ಗೌರವಿಸಲಾಯಿತು. ಚಿತ್ರಾಪು ಬಿಲ್ಲವರ ಸಂಘದ ನೂತನ ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಜಿ. ಕೋಟ್ಯಾನ್ ವಂದಿಸಿದರು.
ಚಿತ್ರ-ವರದಿ: ಈಶ್ವರ ಎಂ. ಐಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Twist; ಛತ್ತೀಸ್ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!
Kannada Movie: ನಿರಂಜನ್ ಶೆಟ್ಟಿಯ ʼ31 ಡೇಸ್ʼ ಚಿತ್ರ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Udupi; ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಸುನಿಲ್ ಕುಮಾರ್ ಆಕ್ರೋಶ
Water Price Hike: ಬಸ್ ದರ ಏರಿಕೆ ಬೆನ್ನಲ್ಲೇ ನೀರಿನ ಬೆಲೆ ಹೆಚ್ಚಳ ಬಿಸಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.