ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ
Team Udayavani, May 31, 2020, 8:16 AM IST
ಪುಣೆ, ಮೇ 30: ಕೋವಿಡ್-19ರ ಹಿನ್ನೆಲೆಯಲ್ಲಿ ಕೆಲಸದಿಂದ ವಜಾಗೊಳಿಸಲ್ಪಟ್ಟ ಅಥವಾ ವೇತನ ಕಡಿತವನ್ನು ಎದುರಿಸುತ್ತಿರುವ ನೌಕರರ ಉದ್ಯೋಗವನ್ನು ಉಳಿಸಿಕೊಡಲು ಮಧ್ಯಸ್ಥಿಕೆ ವಹಿಸುವಂತೆ ಐಒಟಿ ಕಂಪೆನಿಗಳ ನೌಕರರ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಪುಣೆ ಮೂಲದ ಯೂನಿಯನ್‌ವೊಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದೆ.
ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ನೌಕರರ ಸೆನೆಟ್ ಸಿಎಂಗೆ ಬರೆದ ಪತ್ರದಲ್ಲಿ ಮಹಾರಾಷ್ಟ್ರದಾದ್ಯಂತದ ಹಲವಾರು ಐಟಿ, ಐಟಿಇಎಸ್, ಬಿಪಿಒ, ಕೆಪಿಒ ಕಂಪೆನಿಗಳು ಯಾವುದೇ ಕಾರಣವಿಲ್ಲದೆ ತಮ್ಮ ನೌಕರರನ್ನು ಸೇವೆಯಿಂದ ವಜಾಗೊಳಿಸಲು ಪ್ರಾರಂಭಿಸಿರುವುದಲ್ಲದೆ, ಅವರ ಸಂಬಳವನ್ನು ತಡೆಹಿಡಿಯಲು ಅಥವಾ ಕಡಿತಗೊಳಿಸಲು ಪ್ರಾರಂಭಿಸಿವೆ. ಇದು ಮಹಾರಾಷ್ಟ್ರ ಸರಕಾರ ಹೊರಡಿಸಿದ ನಿರ್ದೇಶನಗಳು ಮತ್ತು ಸಲಹೆಗಳ ಉಲ್ಲಂಘನೆಯಾಗಿದೆ ಎಂದು ನೈಟ್ಸ್ ಇದರ ಪ್ರಧಾನ ಕಾರ್ಯದರ್ಶಿ ಹರ್ಪ್ರೀತ್ ಸಲೂಜಾ ಅವರು ಹೇಳಿದ್ದಾರೆ.
ಇಂತಹ ಕಠಿನ ಸಮಯದಲ್ಲಿ ದೇಶದ ಹಲವಾರು ಉದ್ಯೋಗಿಗಳು ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕಾರಣ ನೌಕರರ ಹಕ್ಕುಗಳನ್ನು ಸರಕಾರವು ಕಂಪೆನಿಗಳಿಗೆ ಅಗತ್ಯವಾದ ಆದೇಶಗಳು ಮತ್ತು ನಿರ್ದೇಶನಗಳಿಂದ ರಕ್ಷಿಸಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ಆರು ಲಕ್ಷಕ್ಕೂ ಹೆಚ್ಚು ಐಟಿ, ಐಟಿಇಎಸ್, ಬಿಪಿಒ, ಕೆಪಿಒ ನೌಕರರ ಜೀವನ, ಉದ್ಯೋಗಗಳು ಮತ್ತು ಕುಟುಂಬಗಳನ್ನು ರಕ್ಷಿಸಲು ರಾಜ್ಯ ಸರಕಾರದ ಬೆಂಬಲವನ್ನು ಕೋರುತ್ತಿದೆ ಎಂದು ನೈಟ್ಸ್ ಹೇಳಿರುವುದಲ್ಲದೆ, ಉದ್ಯೋಗಿಗಳ ಇಂತಹ ಶೋಷಣೆ ಭವಿಷ್ಯದಲ್ಲಿ ಸಂಭವಿಸುವುದಿಲ್ಲ. ಕೆಲಸದ ಪರಿಸ್ಥಿತಿಗಳು ವೇಗವಾಗಿ ಸುಧಾರಿಸುತ್ತವೆ ಎಂಬುವುದು ನಮ್ಮ ಆಶಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.