ಚೆಂಬೂರು ಕರ್ನಾಟಕ ಸಂಘದ “ಸಾಹಿತ್ಯ ಸಹವಾಸ 


Team Udayavani, Dec 28, 2017, 4:41 PM IST

26-Mum07.jpg

ಮುಂಬಯಿ: ಶಿಕ್ಷಣಾಲಯಗಳು ಸಂಸ್ಕೃತಿ  ಸಂಸ್ಕಾರವನ್ನು ಕೊಡುತ್ತವೆ. ಕಲಿಕೆಯು ಜೀವನಯಾತ್ರೆಯಾಗಿದ್ದು ಇದು ಮುಗಿಯದ ಪ್ರಕ್ರಿಯೆಯಾಗಿದೆ.ಎಲ್ಲಾ ಎಡರು-ತೊಡರುಗಳನ್ನು ದಾಟಿ ಮರಾಠಿ ನೆಲದಲ್ಲಿ ಸುಮಾರು 6 ದಶಕಗಳ ಕಾಲ ಶಿಕ್ಷಣ ಸೇವೆಯನ್ನು ಕೊಟ್ಟಿರುವ ಚೆಂಬೂರು ಕರ್ನಾಟಕ ಸಂಘವನ್ನು ಶ್ಲಾಘಿಸಲು ಅಭಿನಂದಿಸಲು ಅಭಿಮಾನವಾಗುತ್ತದೆ. ಜೊತೆಗೆ ನಮ್ಮ ನಡುವೆ ಇರುವ ನಡೆದಾಡುವ ಅಚ್ಚರಿ ಹಾಜಬ್ಬ ಅವರನ್ನು ಗೌರವಿಸುವ ಮೂಲಕ ಸಂಸ್ಥೆ ತನ್ನ ಕಿರೀಟಕ್ಕೆ ಇನ್ನೊಂದು ಗರಿ ಮೂಡಿಸಿಕೊಂಡಿದೆ ಎಂದು ಮುಂಬಯಿ ಕ್ರೈಂ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಕೆ. ಎಂ. ಎಂ. ಪ್ರಸನ್ನ ಐಪಿಎಸ್‌ ನುಡಿದರು.

ಚೆಂಬೂರು ಘಾಟ್ಲಾ ಅಲ್ಲಿನ ಸಂಸ್ಥೆಯ ಸಂಕುಲದಲ್ಲಿ ಡಿ. 23ರಂದು ಸಂಜೆ ಚೆಂಬೂರು ಕರ್ನಾಟಕ ಸಂಘ ಇದರ ವಾರ್ಷಿಕ “ಸಾಹಿತ್ಯ ಸಹವಾಸ-2017-2018′ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಸಾಧಕರಿಂದ ಕಲಿಯುವುದು ಬಹಳಷ್ಟಿದೆ.ಆದ್ದರಿಂದ ಭವಿಷ್ಯತ್ತಿನ ಪ್ರಜೆಗಳಾದ ಮಕ್ಕಳು ತಮ್ಮಜೀವನ ಧ್ಯೇಯ ಏನೆಂದು ತಿಳಿದುಕೊಳ್ಳಬೇಕು. ಸಾಕಷ್ಟು ಕನಸುಗಳನ್ನು ಕಂಡು ನಿರಂತರ ಪ್ರಯತ್ನದಿಂದ ಕನಸುಗಳನ್ನು ನನಸಾಗಿಸಿರಿ. ಸತತ ಅಭ್ಯಾಸದಿಂದ ಸಾಧನೆ ಸಿದ್ಧಿಸಿರಿ. ಬದುಕು ಚಿಮ್ಮುವ ಹಲಗೆಯಂತೆ. ಆದ್ದರಿಂದ ಸಮಾಜದಿಂದ ಬಹಳಷ್ಟು ಪಡೆದ ನಾವುಗಳು ಸೇವೆಯ ಮೂಲಕ ಸಮಾಜಕ್ಕೆ ಹಿಂತಿರುಗಿಸಿ ಜೀವನ ಪಾವನಗೊಳಿಸಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ ಅರಾಟೆ ಅವರು ಮಾತನಾಡಿ,  ಚೆಂಬೂರು ಕರ್ನಾಟಕ ಸಂಘದ ಮಟ್ಟಿಗೆ ಸಾಹಿತ್ಯ ಸಹವಾಸ ನಮ್ಮ ಮೇರು ಕಾರ್ಯಕ್ರಮ. ಶೈಕ್ಷಣಿಕವಾಗಿ ಬೆಳೆದ ನಮಗೆ ಸಾಂಸ್ಕೃತಿಕವಾಗಿ ಅಸ್ತಿತ್ವವನ್ನು,  ಅಸ್ಮಿತೆಯನ್ನು ಕೊಟ್ಟದ್ದೂ ಇಂತಹ ಕಾರ್ಯಕ್ರಮಗಳೇ. ಈ ವರ್ಷ ರಾಷ್ಟ್ರೀಯ ಪುರಸ್ಕಾರವನ್ನು ರಾಷ್ಟ್ರದ ಅಪೂರ್ವ ಶೆ„ಕ್ಷಣಿಕ ಸಾಧಕ ನಡೆದಾಡುವ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಸಾಧ್ಯವಾದದ್ದು ನಮ್ಮ ಸಂಸ್ಥೆಯ ಅಸ್ತಿತ್ವಕ್ಕೆ ಸಂದ ಗೌರವ. ಹೆಚ್ಚುಗಾರಿಕೆ ಕೊಡುವುದು ಹೆಮ್ಮೆ ತಂದಿದ್ದು ನಮ್ಮನ್ನು ಧನ್ಯಗೊಳಿಸಿದೆ. ಬರುವ 
ವರ್ಷಗಳಲ್ಲಿ ಇಂತಹದ್ದೇ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ತಲುಪುವ ಭರವಸೆ ನೀಡುತ್ತೇನೆ ಎಂದರು.

ಸಮಾರಂಭದಲ್ಲಿ ಗಣ್ಯರು ಹಾಗೂ ಸಂಸ್ಥೆಯ ಪದಾಧಿ
ಕಾರಿಗಳಾದ ಉಪಾಧ್ಯಕ್ಷ ಪ್ರಭಾಕರ ಬಿ. ಬೋಳಾರ್‌, ಗೌರವ ಪ್ರಧಾನ ಕಾರ್ಯದರ್ಶಿ ರಂಜನ್‌ಕುಮಾರ್‌ ಆರ್‌. ಅಮೀನ್‌, ಗೌರವ ಕೋಶಾಧಿಕಾರಿ ಟಿ. ಆರ್‌. ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಜಯ ಎನ್‌. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘದ ವಾರ್ಷಿಕ ಪ್ರತಿಷ್ಠಿತ “ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2017’ನ್ನು “ಅಕ್ಷರ ಸಂತ ಅಕ್ಕರದ ಅವಧೂತ’ ಹರೇಕಳ ಹಾಜಬ್ಬ, “ದಿ| ವೈ. ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕಿ ಲೀಲಾವತಿ ಕೆ. ಶೆಟ್ಟಿ, “ಸುಬ್ಬಯ್ಯ ಶೆಟ್ಟಿ ದತ್ತಿ’ ಗೌರವ ಪುರಸ್ಕಾರವನ್ನು ಹಿರಿಯ ರಂಗ ನಟ, ನಿರ್ದೇಶಕ ಉಮೇಶ್‌ ಎನ್‌. ಶೆಟ್ಟಿ ಹಾಗೂ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಪ್ರದಾನಿಸಿ ಗೌರವಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಜೊತೆ ಕಾರ್ಯದರ್ಶಿ ದೇವದಾಸ್‌ ಕೆ. ಶೆಟ್ಟಿಗಾರ್‌, ಜೊತೆ ಕೋಶಾಧಿಕಾರಿ ಸುಂದರ್‌ ಎನ್‌. ಕೋಟ್ಯಾನ್‌, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗುಣಾಕರ್‌ ಎಚ್‌. ಹೆಗ್ಡೆ, ಯೋಗೇಶ್‌ ವಿ. ಗುಜರನ್‌, ಮಧುಕರ್‌ ಜಿ. ಬೈಲೂರು, ಮೋಹನ್‌ ಎಸ್‌. ಕಾಂಚನ್‌, ಚಂದ್ರಶೇಖರ್‌ ಎ. ಅಂಚನ್‌, ಅಶೋಕ್‌ ಸಾಲ್ಯಾನ್‌, ಜಯ ಎಂ. ಶೆಟ್ಟಿ, ಸುಧೀರ್‌ ಪುತ್ರನ್‌, ಸಂಜೀವ ಎಸ್‌. ಶೆಟ್ಟಿ, ಮಾಜಿ ಅಧ್ಯಕ್ಷರಾದ ಜಯ ಎನ್‌. ಶೆಟ್ಟಿ ಸೇರಿದಂತೆ ಕನ್ನಡ ಶಿಕ್ಷಣಾಭಿಮಾನಿಗಳು, ಸಂಸ್ಕೃತಿ ಪ್ರಿಯರು, ಕಲಾಸಕ್ತರು, ಸಂಘದ ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.  ಭರತ್‌ ಶೆಟ್ಟಿ ಪ್ರಾರ್ಥನೆಗೈದರು.

ದಕ್ಷಿಣ ಕನ್ನಡ ಹಿರಿಯ ಪತ್ರಕರ್ತ ಗುರುವಪ್ಪ ಎನ್‌. ಟಿ. ಬಾಳೆಪುಣಿ ಅವರು ಹಾಜಬ್ಬರ ಸಿದ್ಧಿ-ಸಾಧನೆಗಳನ್ನು ಸ್ಥೂಲವಾಗಿ ಬಣ್ಣಿಸಿದರು. ಗೌರಿ ಜಗ್ತಾಪ್‌ ಸಾಂಸ್ಕೃತಿಕ  ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯದರ್ಶಿ ದಯಾ ಸಾಗರ್‌ ಚೌಟ ಸ್ವಾಗತಿಸಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂ ಪಿಸಿದರು.  ರಂಜನ್‌ ಕುಮಾರ್‌ ಆರ್‌. ಅಮೀನ್‌ ವಂದಿಸಿದರು.

ನೂಪುರ್‌ ಡ್ಯಾನ್ಸ್‌ ಅಕಾಡೆಮಿ ತಂಡ ಹಾಗೂ ಭರತ್‌ ಶೆಟ್ಟಿ ಬಳಗ ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವ ಸಾರುವ ಸಂಸ್ಕೃತಿ ಉತ್ಸವ
ವನ್ನು ಹಾಗೂ ಸಂಘದ ಚೆಂಬೂರು ಕರ್ನಾಟಕ ಪೂರ್ವ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಕಿರಿಯ ಮಹಾ ವಿದ್ಯಾಲಯ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿ ಗಳಿಂ¨ ‌ ವಿವಿಧ  ವಿನೋದಾವಳಿಗಳು ಪ್ರದರ್ಶನಗೊಂಡವು.

1955ರಲ್ಲಿ ಶೆಟ್ರ ಜಾಗದಲ್ಲಿ ಹುಟ್ಟಿದರೂ ಅಂದು ಒಂದು ರೂಪಾಯಿ ಬೆಲೆಯಿಲ್ಲದ ನನಗೆ ತಮ್ಮಂಥವರ ಪ್ರೋತ್ಸಾಹವೇ ಉಮೇದು ತುಂಬಿದೆ. ತೀವ್ರ ಬಡತನದಲ್ಲಿದ್ದ ನನಗೆ ಕಿತ್ತಾಳೆ ಮಾರಾಟವೇ ಜೀವನೋಪಾಯವಾಯಿತು. ಪತ್ರಕರ್ತ ಗುರುವಪ್ಪ  ಬಾಳೆಪುಣಿ ಅವರ ಕಿತ್ತಾಳೆ ಬುಟ್ಟಿಯ ಲೇಖನ ನನ್ನನ್ನು ಇಷ್ಟೆತ್ತರಕ್ಕೆ ಬೆಳೆಸಿತು. ಎಂದೂ ಬೊಂಬಾಯಿ ಕಾಣದ ನನಗೆ ಇಂದು ತಾವು ಆಹ್ವಾನಿಸಿ ಈ ಪುರಸ್ಕಾರ ನೀಡಿದಿರಿ. ತಮ್ಮೆಲ್ಲರ ಪ್ರೀತಿವಾತ್ಸಲ್ಯದ ಈ ಗೌರವ ಪಡೆದ 64ರ ವ್ಯಕ್ತಿಯ ಜೀವನವೇ ಸಾರ್ಥಕವಾಯಿತು. ಗೌರವಕ್ಕೆ ಕಾರಣಕರ್ತರಾದ ದಯಸಾಗರ್‌ ಚೌಟ ಮತ್ತು ಸಂಘಕ್ಕೆ ಋಣಿಯಾಗಿದ್ದೇನೆ. ಈ ಸಂಘವು ಹೆಮ್ಮರವಾಗಿ ಬೆಳೆಯಲಿ 
 – ಹರೇಕಳ ಹಾಜಬ್ಬ  (ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ -2017 ಪುರಸ್ಕೃತರು).

ನಾನು ಬರೇ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದವಳು ಅಷ್ಟೇ. ಅಂತಹದ್ದೇನು ಸಾಧನೆ ಮಾಡಿಲ್ಲ. ಆದರೆ ಅಂದಿನ ದಿನಗಳಲ್ಲಿ ಸರಕಾರ, ಸಂಸ್ಥೆಗಳ ಸಹಯೋಗ ಅಷ್ಟೇನಿರದ ಕಾರಣ ನಾವೇ ಜವಾಬ್ದಾರಿಯುತವಾಗಿ ಸಲ್ಲಿಸಿದ ಶ್ರಮದಾಯಕ ಸೇವೆ ನನ್ನನ್ನು ಇಷ್ಟರ ಮಟ್ಟಕ್ಕೆ ಬೆಳೆಸಿದೆ. ಆ ಶ್ರಮಕ್ಕೆ ಈ ಗೌರವ ಪೂರಕವಾಗಿದೆ   ಎಂದೆಣಿಸುವೆ ಗೌರವವನ್ನು ಅಭಿಮಾನದಿಂದ ಸ್ವೀಕರಿಸುತ್ತೇನೆ 
– ಲೀಲಾವತಿ ಶೆಟ್ಟಿ  (ದಿ| ವೈ. ಜಿ. ಶೆಟ್ಟಿ   ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು).

ಮುಂಬಯಿಯಲ್ಲಿ ಕನ್ನಡಕ್ಕಾಗಿ ದುಡಿಯುವ (ವ್ಯಕ್ತಿಯೊಬ್ಬರು) ಮೊಮ್ಮಗ ಅಜ್ಜಿಯ ಹೆಸರಲ್ಲಿ ಪ್ರಶಸ್ತಿ ಅದೇ ನಗರದಲ್ಲಿದ್ದು ಕನ್ನಡ ಸೇವೆ ಮಾಡಿದ ಅಜ್ಜಿಯಾಗಿರುವ ನನಗೆ ಈ ಇಳಿವಯಸ್ಸಿನಲ್ಲಿ ಸಂದಿರುವುದು ನನ್ನ ಅನುಭವವನ್ನು ಹೆಚ್ಚಿಸಿದೆ. ಕನ್ನಡದ ಮನಸ್ಸುಗಳ  ಇಂತಹ ವೈಶಾಲ್ಯವನ್ನು ನಾನು ಮೆಚ್ಚುವೆ, ಅಭಿನಂದಿಸುವೆ 
– ಡಾ| ಸುನೀತಾ ಎಂ. ಶೆಟ್ಟಿ (ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ ಪುರಸ್ಕೃತರು)

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.