ಲಾಕ್‌ಡೌನ್‌ನಿಂದ ಶೇ. 96 ಜನರ ಆದಾಯಕ್ಕೆ ಬ್ರೇಕ್
Team Udayavani, Mar 1, 2021, 6:48 PM IST
ಮುಂಬಯಿ: ಮಹಾರಾಷ್ಟ್ರದಲ್ಲಿ ಆಹಾರ ಹಕ್ಕುಗಳ ಅಭಿಯಾನದಡಿಯಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಕಳೆದ ವರ್ಷದ
ಕೋವಿಡ್ ಸೋಂಕು ಪ್ರೇರಿತ ಲಾಕ್‌ಡೌನ್‌ನಿಂದಶೇ. 96ರಷ್ಟು ಜನರು ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಸಾಮಾಜಿಕ ಸಂಸ್ಥೆ ಹೇಳಿದೆ.
ಉದ್ಯೋಗ ನಷ್ಟ ಮತ್ತು ಕೆಲಸ ದೊರೆಯದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಪ್ರತಿ ಐದು ವ್ಯಕ್ತಿಗಳಲ್ಲಿ ಓರ್ವ ವ್ಯಕ್ತಿಯ ಬಳಿ ಆಹಾರವನ್ನು ಖರೀದಿಸಲು ಹಣವಿಲ್ಲದ ಕಾರಣ ಹಸಿವಿನಿಂದ ಬಳಲುತ್ತಿದ್ದಾನೆಂದು ಆಹಾರ ಅಧಿಕಾರಅಭಿಯಾನದ ರಾಜ್ಯ ಸಂಚಾಲಕಿ ಮುಕ್ತಾ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಹಾರ ಮತ್ತು ಪೌಷ್ಟಿಕಾಂಶ ಕ್ಷೇತ್ರದಕಾರ್ಯಕರ್ತರ ಗುಂಪು ಕಳೆದ ವರ್ಷ ಮೇ ಮತ್ತುಸೆಪ್ಟಂಬರ್‌ನಲ್ಲಿ ಈ ಅಭಿಯಾನದ ಅಡಿಯಲ್ಲಿಸಮೀಕ್ಷೆ ನಡೆಸಿತ್ತು. ಈ ವೇಳೆ ಮುಂಬಯಿ, ಥಾಣೆ, ರಾಯಗಢ, ಪುಣೆ, ನಂದೂರ್‌ಬಾರ್, ಸೊಲ್ಲಾಪುರ, ಪಾಲ^ರ್, ನಾಸಿಕ್, ಧುಲೆ ಮತ್ತು ಜಲ್ಗಾಂವ್‌ನಲ್ಲಿ ಒಟ್ಟು 250 ಜನರನ್ನು ಸಮೀಕ್ಷೆ ನಡೆಸಲಾಯಿತು.
ಕಳೆದ ವರ್ಷ ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಕೇಂದ್ರವು ಕಳೆದ ಮಾರ್ಚ್‌ನಿಂದ ರಾಷ್ಟ್ರವ್ಯಾಪಿಲಾಕೌಡೌನ್ ಘೋಷಿಸಿತ್ತು. ಕೆಲವು ತಿಂಗಳುಗಳಬಳಿಕ ಹಂತಹಂತವಾಗಿ ನಿರ್ಬಂಧಗಳನ್ನುಸಡಿಲಿಸಲಾಯಿತು. ಸಮೀಕ್ಷೆ ನಡೆಸಿದವರಲ್ಲಿಶೇ. 96ರಷ್ಟು ಜನರ ಆದಾಯವು ಲಾಕ್‌ಡೌನ್ ಅವಧಿಯಲ್ಲಿ ತೀವ್ರವಾಗಿ ಕುಸಿದಿದೆ ಎಂದು ತಿಳಿದುಬಂದಿತ್ತು. ಲಾಕ್‌ಡೌನ್ ಅನ್ನುತೆಗೆದುಹಾಕಿದ ಐದು ತಿಂಗಳ ಬಳಿಕವೂ ಅವರಆರ್ಥಿಕ ಪರಿಸ್ಥಿತಿ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಲಾಕ್‌ಡೌನ್ ಜಾರಿಗೆಬಂದ ಮೊದಲ ಕೆಲವು ತಿಂಗಳುಗಳಲ್ಲಿಪ್ರತಿಕ್ರಿಯಿಸಿದವರ ಗಳಿಕೆಯ ಸ್ಥಿತಿಯ ಬಗ್ಗೆಕೇಳಿದಾಗ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ. 43ರಷ್ಟು ಜನರಿಗೆ ಯಾವುದೇ ಆದಾಯವಿಲ್ಲ. ಅವರಲ್ಲಿ ಕೇವಲ ಶೇ. 10ರಷ್ಟು ಜನರು ಮಾತ್ರ ಲಾಕ್‌ಡೌನ್ ಪೂರ್ವದಲ್ಲಿ ಗಳಿಸಿದ ಆದಾಯಕ್ಕೆಮರಳಿದ್ದಾರೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಯಾವುದೇ ಆದಾಯವಿಲ್ಲದ ಶೇ. 34ರಷ್ಟು ಜನರ ಪರಿಸ್ಥಿತಿ ಸೆಪ್ಟಂಬರ್-ಅಕ್ಟೋಬರ್ ವರೆಗೆಯಾವುದೇ ಬದಲಾವಣೆ ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಶೇ. 12 ಜನರು ತಮ್ಮ ಆಭರಣಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಶೇ. 3ರಷ್ಟು ಜನರು ಲಾಕ್‌ಡೌನ್ ಸಮಯದಲ್ಲಿ ಆಹಾರವನ್ನು ಖರೀದಿಸಲು ತಮ್ಮ ಜಮೀನು ಮಾರಾಟ ಮಾಡಿದ್ದಾರೆ ಎಂದು ಮುಕ್ತಾ ಶ್ರೀವಾಸ್ತವ ಹೇಳಿದ್ದಾರೆ.
ಪೌಷ್ಠಿಕಾಂಶದ ಅಂಶಗಳಲ್ಲಿ ಧಾನ್ಯಗಳಕಡಿಮೆ ಬಳಕೆ ಶೇ. 63ರಷ್ಟು, ತರಕಾರಿಗಳು ಶೇ. 76ರಷ್ಟು, ದ್ವಿದಳ ಧಾನ್ಯಗಳು ಶೇ.71ರಷ್ಟು ಮತ್ತು ಮಾಂಸಾಹಾರ ಶೇ. 82ರಷ್ಟು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಸ್ನೇಹಿತರು, ಸಂಬಂಧಿಕರಿಂದ ಸಾಲ :
ಸಮೀಕ್ಷೆಗೆ ಒಳಪಡಿಸಿದ ಒಟ್ಟು ಮಂದಿಯ ಪೈಕಿ ಶೇ. 52ರಷ್ಟು ಗ್ರಾಮೀಣ ಪ್ರದೇಶದವರು ಮತ್ತು ಉಳಿದವರು ನಗರ ವ್ಯಾಪ್ತಿಯವರು. ಸಮೀಕ್ಷೆಯಲ್ಲಿ ಶೇ. 60ರಷ್ಟು ಮಹಿಳೆಯರು ಸೇರಿದ್ದಾರೆ. ಈಗಾಗಲೇ ಕಡಿಮೆ ಆದಾಯದಿಂದಾಗಿ ಕುಟುಂಬದ ನಿರ್ವಹಣೆ ಮಾಡುವುದು ಗ್ರಾಮೀಣ ಜನರಿಗೆ ಕಷ್ಟವಾಗುತ್ತಿದೆ. ರಾಷ್ಟ್ರವ್ಯಾಪಿ ಆಹಾರ ಹಕ್ಕು ಅಭಿಯಾನದ ಅಂಗವಾಗಿ ನಡೆಸಿದ ಸಮೀಕ್ಷೆಯ ಪ್ರತಿಸ್ಪಂದಕರಲ್ಲಿ ಶೇ. 49ರಷ್ಟು ಜನರು ಆಹಾರವನ್ನು ಖರೀದಿಸಲು ಸ್ನೇಹಿತರು ಮತ್ತು ಸಂಬಂಧಿಕರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.