ಪುಣೆಯ ಮಂಗಳ ಮಲ್ಟಿಪ್ಲೆಕ್ಸ್‌ನಲ್ಲಿ  ಮದಿಪು ಚಲನಚಿತ್ರ ಪ್ರದರ್ಶನ

Team Udayavani, Aug 29, 2017, 4:33 PM IST

27mum04A.jpg

ಪುಣೆ: ಪುಣೆಯ ಸಾಯಿ ಕ್ರಿಕೆಟರ್ಸ್‌ ನ ಸುದೀಪ್‌ ಪೂಜಾರಿ ಮುನಿಯಾಲ್‌, ವಸಂತ್‌ ಶೆಟ್ಟಿ ಹಿರಿಯಡ್ಕ ಮತ್ತು ಮಿತ್ರ ವರ್ಗದವರ ಪ್ರಾಯೋಜಕತ್ವದಲ್ಲಿ ಸಂದೀಪ್‌ ಕುಮಾರ್‌ ನಂದಳಿಕೆ ನಿರ್ಮಾಣದ ,ಚೇತನ್‌ ಮುಂಡಾಡಿ ನಿರ್ದೇಶನದ,  ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಭಾರೀ ಜನಮನ್ನಣೆ ಪಡೆದು ತುಳುನಾಡಿನಾದ್ಯಂತ ಸಂಚಲನ ಮೂಡಿಸಿದ  ಮದಿಪು ತುಳು ಚಲನ ಚಿತ್ರವು  ಆ. 27ರಂದು ಪುಣೆಯ ಶಿವಾಜಿನಗರದ  ಮಂಗಳ ಮಲ್ಟಿಪ್ಲೆಕ್ಸ್‌ ಸಿನಿಮಾ ಗ್ರಹದಲ್ಲಿ ಹೌಸ್‌ ಫುಲ… ಆಗಿ ಪ್ರದರ್ಶನಗೊಂಡಿತು.

ಈ ಚಿತ್ರ  ಪ್ರದರ್ಶನದ ಮೊದಲಿಗೆ ಅಥಿತಿ ಗಣ್ಯರಾದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ… ಬೆಟ್ಟು, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ , ಪುಣೆಯ ಹೋಟೆಲ… ಉದ್ಯಮಿ ಗಣೇಶ್‌  ಹೆಗ್ಡೆ , ಪುಣೆ ರೆಸ್ಟೋರೆಂಟ್‌ ಮತ್ತು ಹೋಟೆಲಿಯರ್ಸ್‌ ಅಸೋಸಿಯೇಶನ್‌ ನ ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ,ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು,ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಉದ್ಯಮಿ ಬಾಲಕೃಷ್ಣ ಹೆಗ್ಡೆ ಅವರು ಉಪಸ್ಥಿತ ರಿದ್ದು, ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಚ‌ಲನಚಿತ್ರದ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು ಅವರು, ನಮ್ಮ ತುಳುನಾಡಿನ ಭಾಷೆ, ಕಲೆ, ಸಂಸ್ಕೃತಿ ತುಂಬಾ ಶ್ರೀಮಂತವಾದುದು.ದೇವಾರಾಧನೆ, ಭೂತಾರಾಧನೆ ಕಟ್ಟು ಕಟ್ಟಳೆಗಳಿಂದ ಶ್ರೀಮಂತವಾಗಿದೆ. ನಾವು ವ್ಯಾಪಾರ ಉದ್ಯೋಗ ನಿಮಿತ್ತ ಪರ ರಾಜ್ಯದಲ್ಲಿ ಇದ್ದರೂ ನಮ್ಮ ಮಾತೃ ಭಾಷೆ ತುಳು ಎಂದರೆ ನಮಗೆ ಹೆಮ್ಮೆ. ಇಲ್ಲಿ ನಮ್ಮ ಊರಿನ ಸಂಸ್ಕೃತಿ , ಕಲೆ, ಆಚಾರ ವಿಚಾರಗಳ ಸಭೆ ಸಮಾರಂಭಗಳು ನಡೆದಾಗ ಹಬ್ಬದ ಸಂಭ್ರಮ ಇರುತ್ತದೆ. ಇಂದು ಕೂಡಾ ಮದಿಪು ಎಂಬ ತುಳು ಚಿತ್ರದ ಈ ಪ್ರದರ್ಶನದ ಕಾರ್ಯಕ್ರಮದಲ್ಲಿ ತುಳುತಾಯಿಯ ಮಕ್ಕಳು ನಾವು ಇಂದು ಒಂದಾಗಿ ಸೇರಿದ್ದೇವೆ. ಮದಿಪು ಚಿತ್ರ ನಮ್ಮ ತುಳುನಾಡಿನ ಭಾವೈಕ್ಯತೆಯನ್ನು ತೋರಿಸುವ ಚಿತ್ರವಾಗಿ ರಾಷ್ಟ್ರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಇಂತಹ ಚಿತ್ರವನ್ನು ಇಲ್ಲಿ ಪ್ರದರ್ಶನ ಏರ್ಪಡಿಸಿದ ಸಾಯಿ ಕ್ರಿಕೆಟರ್ಸ್‌ ನವರ ಕಾರ್ಯ ಶ್ಲಾಘನೀಯ. ಇಂತಹ ತುಳು  ಸಂಸ್ಕೃತಿಯನ್ನು  ಸಾದರಪಡಿಸುವ ಇನ್ನಷ್ಟು ಕಾರ್ಯಕ್ರಮಗಳು ಪುಣೆಯಲ್ಲಿ ನಡೆಯಲಿ ಎಂದು ಹಾರೈಸಿದರು.

ಅಥಿತಿ ಗಣ್ಯರಿಗೆ ಸಾಯಿ ಕ್ರಿಕೆಟರ್ಸ್‌ ನ ಪದಾಧಿಕಾರಿಗಳು ಪುಷ್ಪ$ಗುತ್ಛ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ವ್ಯವಸ್ಥಾಪಕರು ಈ ಚಿತ್ರ ಪ್ರದರ್ಶನಕ್ಕೆ ಸಹಕರಿಸಿದ ಪುಣೆಯ ಸಂಘ ಸಂಸ್ಥೆಗಳಿಗೆ , ಕಲಾಪೋಷಕರಿಗೆ ಹಾಗೂ ಎಲ್ಲಾ   ತುಳು ಬಾಂಧದವರಿಗೆ ಧನ್ಯವಾದ ಸಲ್ಲಿಸಿದರು.ಸಾಯಿ ಕ್ರಿಕೆಟರ್ಸ್‌ನ  ವಿಶ್ವನಾಥ್‌ ಶೆಟ್ಟಿ ಗೋಖಲೆನಗರ್‌, ಪ್ರಶಾಂತ್‌ ಶೆಟ್ಟಿ ಹಿರಿಯಡ್ಕ, ರಾಮ್‌ ಪ್ರಸಾದ್‌ ಶೆಟ್ಟಿ ಮುನಿಯಾಲ್‌, ಸಂಪತ್‌ ಹೆೆಗ್ಡೆ,  ಕುಮಾರ್‌ ಶೆಟ್ಟಿ ಮೊದಲಾದವರು  ಸಹಕರಿಸಿದರು.

ಮದಿಪು ಚಿತ್ರದ ಹೆಸರು ಸೂಚಿಸುವಂತೆ ಈ ಚಿತ್ರ ನಮ್ಮ ತುಳು ಸಂಸ್ಕೃತಿಯನ್ನು ಜಗತ್ತಿಗೆ ಎತ್ತಿ ತೋರಿಸಿದೆ. ರಾಷ್ಟ್ರ ರಾಜ್ಯ ಮಟ್ಟದಲ್ಲಿ ಹೆಸರನ್ನು ಪಡೆದ ಈ ಚಿತ್ರ ತುಳುವರೆಲ್ಲರೂ ನೋಡ ಲೇಬೇಕಾದ ಚಿತ್ರವಾಗಿದೆ. ನಮ್ಮ ಊರಿನಲ್ಲಿ ಹಿಂದಿ ನಿಂದ ನಡೆದುಕೊಂಡು ಬಂದ ದೈವಾರಾಧನೆ, ನಮ್ಮ ಸಾಮರಸ್ಯದ ಬದುಕು, ಆಚಾರ ವಿಚಾರ ಹೇಗಿತ್ತು ಎಂಬುದಕ್ಕೆ ಒಂದು ಒಳ್ಳೆಯ ಅಭಿರುಚಿಯನ್ನು ಹೊಂದಿರುವ ಚಿತ್ರವನ್ನು ನಿರ್ಮಿಸಿದ ಸಂದೀಪ್‌  ಕುಮಾರ್‌ ನಂದಳಿಕೆ ಮತ್ತು ನಿರ್ದೇಶಿಸಿದ ಚೇತನ್‌ ಮುಂಡಾಡಿ ಅವರ ಕಾರ್ಯ ಶ್ಲಾಘನೀಯ. ಈ ಚಿತ್ರವನ್ನು ಪುಣೆಯಲ್ಲಿ ಪ್ರದರ್ಶನವನ್ನು ಏರ್ಪಡಿಸಿ ತುಳುವರೆಲ್ಲರಿಗೂ ನೋಡಲು ಅವಕಾಶ ಮಾಡಿಕೊಟ್ಟ ಸಾಯಿ ಕ್ರಿಕೆಟರ್ಸ್‌ನ  ವಸಂತ್‌ ಶೆಟ್ಟಿ ಮತ್ತು ಸುದೀಪ್‌ ಪೂಜಾರಿ ಹಾಗೂ ಮಿತ್ರ ವರ್ಗದವರ ಕಲಾಸೇವೆ ಕೂಡಾ ಮೆಚ್ಚುವಂತಹದು. 
–  ವಿಶ್ವನಾಥ್‌ ಪೂಜಾರಿ ಕಡ್ತಲ, ಉಪಾಧ್ಯಕ್ಷರು , ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌.

ತುಳು ಕಲೆ, ಸಂಸ್ಕೃತಿ ಮತ್ತು ದೈವಾರಾಧನೆ ಯನ್ನು ಬಿಂಬಿಸುವ, ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಮದಿಪು  ಚಿತ್ರ ತುಳುನಾಡಿನಲ್ಲಿ  ಭಾರೀ  ಯಶಸನ್ನು ಗಳಿಸಿದೆ ಎಂಬುದನ್ನು ನಾವು ಕೇಳಿದ್ದೇವೆ.  ಎಲ್ಲಾ  ಧರ್ಮದವರು ತಮ್ಮ ತಮ್ಮ ಧರ್ಮವನ್ನು ಗೌರವಿಸುತ್ತಾ ಅನ್ಯ ಧರ್ಮವನ್ನು ಗೌರವಿಸಿ ಸಾಮರಸ್ಯದಿಂದ ಬಾಳಿದರೆ ಸಮಾಜದಲ್ಲಿ ಪ್ರೀತಿ  ಪ್ರೇಮದಿಂದ ಬದುಕಬಹುದು ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ. ನಮ್ಮ ಯುವ ಪೀಳಿಗೆಗೆ ಇಂತಹ ಚಿತ್ರವನ್ನು ತೋರಿಸುವ ಮೂಲಕ ತುಳು ಸಂಸ್ಕೃತಿಯನ್ನು ತಿಳಿಸುವ, ಕಲಿಸುವ ಕಾರ್ಯ ನಮ್ಮಿಂದಾಗಬೇಕು.
– ಪ್ರವೀಣ್‌ ಶೆಟ್ಟಿ ಪುತ್ತೂರು, ಅಧ್ಯಕ್ಷರು , ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ

ಚಿತ್ರ -ವರದಿ:  ಹರೀಶ್‌ ಮೂಡಬಿದ್ರೆ

ಟಾಪ್ ನ್ಯೂಸ್

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.