ಮೀರಾರೋಡ್ ಪಲಿಮಾರು ಮಠದಲ್ಲಿ ಮಹಾಶಿವರಾತ್ರಿ
Team Udayavani, Mar 6, 2019, 2:15 PM IST
ಮುಂಬಯಿ: ಸಕಲ ಜೀವರಾಶಿಗಳನ್ನು ಪ್ರೀತಿಯಿಂದ ಕಾಪಾಡುವ ಶಿವ ಆಡಂಬರ ಇಲ್ಲದ ಸರಳ ಬದುಕಿನ ದೇವರೂಪ. ಪಂಚದ್ರವ್ಯಗಳ ಅಭಿಷೇಕದಿಂದ ಹೊರ ಹೊಮ್ಮುವ ಶಿವಲಿಂಗದ ಶಕ್ತಿ ತರಂಗಗಳ ದೇಹಕ್ಕೆ ನವೋಲ್ಲಾಸ ನೀಡುತ್ತದೆ. ಶುದ್ಧವಾದ ಆಮ್ಲಜನಕವನ್ನು ಸೂಸುವ ಬಿಲ್ವಪತ್ರ ಆರೋಗ್ಯವನ್ನು ಕಾಪಾಡುತ್ತದೆ. ದೇಹವನ್ನು ಸಮತೋಲಿತಗೊಳಿಸುವ ಉಪವಾಸ, ಉಷ್ಣತೆಯನ್ನು ಹೆಚ್ಚಿಸುವ ಜಾಗರಣೆಯ ಶಿವಾರಾಧನೆ ಪ್ರಾಚೀನತೆಯ ಪ್ರತೀಕವಾಗಿದೆ ಎಂದು ಮೀರಾರೋಡ್ ಪಲಿಮಾರು ಮಠದ ಟ್ರಸ್ಟಿ, ಮುಖ್ಯ ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್ ನುಡಿದರು.
ಮಾ. 4 ರಂದು ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ವಿವಿಧ ವೈದಿಕ ತತ್ವದಡಿ ಜರಗುವ ಮಹಾಶಿವರಾತ್ರಿ ಆಚರಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿ, ಭಕ್ತಾದಿಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅವರು ಸನ್ನಿಧಿಯಲ್ಲಿರುವ ಹಿಮಾಲಯದ ಋಷಿಗಳಿಂದ ಪೂಜೆಯನ್ನು ಸ್ವೀಕರಿಸಿದ ಓಂ ಕಾರ ಇರುವ ಮಾಣಿಕ್ಯ ಲಿಂಗ ಶ್ರೀ ಮುಂಗೇಶಿ ಮಹಾ ಮೃತ್ಯುಂಜಯ ರುದ್ರದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಶ್ರೀಕ್ಷೇತ್ರದ ಬಗ್ಗೆ ತಿಳಿಸಿ, ಉಡುಪಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಇಚ್ಛೆಯಂತೆ ಮೀರಾರೋಡ್ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಪ್ರತೀ ಶನಿವಾರ ರಂಗಪೂಜೆ, ಪ್ರತಿ ತಿಂಗಳು ಅಮಾವಾಸ್ಯೆಯಂದು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ, ಹುಣ್ಣಿಮೆಯಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಸನಾತನ ಧರ್ಮಗಳ ಬೋಧನೆ ವಿವಿಧ ಕಲಾಪ್ರಕಾರಗಳ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದರು.
ಬೆಳಗ್ಗೆ ಪಂಚಗವ್ಯ ಪುಣ್ಯಾಹ ವಾಚನ, ಪಂಚವಿಂಶತಿ 25 ಕಲಶ ಪ್ರತಿಷ್ಠೆ, ರುದ್ರಯಾಗ, ರುದ್ರಾಭಿಷೇಕ ಜರಗಿತು. ಮಧ್ಯಾಹ್ನ ಅಭಿಷೇಕ, ಮಹಾಪೂಜೆ, ಸಂಜೆ ಸಾಮೂಹಿಕ ಭಜನೆ, ದ್ವಾದಶ ಲಿಂಗ ಮಂಡಲ ರಚನೆ, ಶತರುದ್ರ ಅಭಿಷೇಕ, ಶ್ರೀ ರಂಗಪೂಜೆ ನೆರವೇರಿತು.
ವಿವಿಧ ಪೂಜಾ ಕೈಂಕರ್ಯದಲ್ಲಿ ವಿದ್ವಾನ್ ಗೋಪಾಲ್ ಭಟ್, ಉದಯ ಶಂಕರ್ ಭಟ್, ರಾಘವೇಂದ್ರ ನಕ್ಷತ್ರಿ, ಜಯರಾಮ ಹೆಬ್ಟಾರ್, ಕಾರ್ತಿಕ್, ವಿಷ್ಣು, ಪ್ರಸಾದ್, ವಿಟuಲ್ ಭಟ್, ಯತಿರಾಜ ಉಪಾಧ್ಯಾಯ, ವಿದ್ವಾನ್ ದೇವಿ ಪ್ರಸಾದ್ ಇವರು ಸಹಕರಿಸಿದರು. ಕನ್ನಡಿಗರು, ಕನ್ನಡೇತರರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.