ಮಹಾರಾಷ್ಟ್ರ SCC:ಕನ್ನಡಿಗರ ಶಿಕ್ಷಣ ಸಂಸ್ಥೆಗಳಿಂದ ಉತ್ತಮ ಸಾಧನೆ
Team Udayavani, Jun 10, 2018, 3:18 PM IST
ಮುಂಬಯಿ: ಮಹಾ ರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರೆ ಶಿಕ್ಷಣ ಮಂಡಳಿ (ಎಂಎಸ್ ಬಿಎಸ್‌ಎಚ್‌ಇ) ನಡೆಸಿರುವ 2018 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ನಗರ ಮತ್ತು ಉಪ ನಗರಗಳಲ್ಲಿರುವ ತುಳು-ಕನ್ನಡಪರ ಮತ್ತು ಜಾತೀಯ ಸಂಘಟನೆಗಳ ಸಂಚಾಲಕತ್ವದ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಫಲಿತಾಂಶ ಲಭಿಸಿದೆ.
ಬಂಟರ ಸಂಘ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗೆ ಶೇ. 100 ಫಲಿತಾಂಶ
ಪೊವಾಯಿ: ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಪ್ರತಿಷ್ಠಿತ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಗೆ ಶೇ. 100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 182 ವಿದ್ಯಾರ್ಥಿಗಳ ಪೈಕಿ 141 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 38 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಅದಿತಿ ಪ್ರಕಾಶ್ ಅವರು ಶೇ. 97.04 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾದರೆ, ಅದಿತ್ಯ ವರ್ಮಾ ಶೇ. 97 ಮತ್ತು ಸಿದ್ದಿ ಗೋತಿರ್ವೆಕರ್ ಅವರು ಶೇ. 96.06 ಅಂಕಗಳನ್ನು ಪಡೆದು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು, ಸಹಕರಿಸಿದ ಶಿಕ್ಷಕ ವೃಂದ, ಪಾಲಕ- ಪೋಷಕರನ್ನು ಬಂಟರ ಸಂಘ ಮುಂಬಯಿ ಮತ್ತು ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ವಿಕ್ರೋಲಿ ಕನ್ನಡ ಸಂಘ ವೀಕೇಸ್ ಇಂಗ್ಲೀಷ್ ಹೈಸ್ಕೂಲ್‌ಗೆ ಶೇ. 97.67 ಫಲಿತಾಂಶ
ವಿಕ್ರೋಲಿ : ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವಿಕ್ರೋಲಿ ಪೂರ್ವ ಠಾಕೂರ್ ನಗರದ ವೀಕೇಸ್ ಇಂಗ್ಲೀಷ್ ಹೈಸ್ಕೂಲ್‌ಗೆ ಶೇ. 97.67 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 86 ವಿದ್ಯಾರ್ಥಿಗಳಲ್ಲಿ 84 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 34 ವಿದ್ಯಾರ್ಥಿಗಳು ಪ್ರಥಮ ದರ್ಜೆ, 24 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಯಲ್ಲಿ ತೇರ್ಗಡೆಹೊಂದಿದ್ದಾರೆ. ಶಾಲೆಯ ವಿಶಾಲ್ ಎಸ್. ಯಾದವ್ ಅವರು ಶೇ. 91.80 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಉತ್ತಮ ಅಂಕಗಳನ್ನು ಪಡೆಯಲು ಸಹಕರಿಸಿದ ಸಂಸ್ಥೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕ-ಪೋಷಕರನ್ನು ವಿಕ್ರೋಲಿ ಕನ್ನ ಡದ ಸಂಘದ ಅಧ್ಯಕ್ಷ ಶ್ಯಾಂಸುಂದರ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ವರ್ಲಿ ನಿತ್ಯಾನಂದ ನೈಟ್ ಹೈಸ್ಕೂಲ್: ಶೇ. 84 ಫಲಿತಾಂಶ
ವರ್ಲಿ : ಬಂಟರ ಸಂಘ ಮುಂಬಯಿ ಸಂಚಾಲಕತ್ವದ ವರ್ಲಿಯ ನಿತ್ಯಾನಂದ ನೈಟ್ ಹೈಸ್ಕೂಲ್‌ಗೆ ಶೇ. 84 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 6 ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು, ಸಹಕರಿಸಿದ ಶಿಕ್ಷಕ ವೃಂದ, ಪಾಲಕ-ಪೋಷಕರನ್ನು ಬಂಟರ ಸಂಘ ಮುಂಬಯಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ಮುಲುಂಡ್ ವಿಪಿಎಂ ಕನ್ನಡ ಹೈಸ್ಕೂಲ್‌ಗೆ ಶೇ. 96.88 ಫಲಿತಾಂಶ
ಮುಲುಂಡ್ : ಮುಲುಂಡ್ ಪೂರ್ವದ ವಿಪಿಎಂ ಹೈಸ್ಕೂಲ್ ಕನ್ನಡ ಮಾಧ್ಯಮಕ್ಕೆ ಶೇ. 96.88 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳ ಪೈಕಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7 ವಿದ್ಯಾರ್ಥಿಗಳು ಪ್ರಥಮ ದರ್ಜೆ, 11 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಪಿಎಂ ಇಂಗ್ಲೀಷ್ ಮಾಧ್ಯಮ ಹೈಸ್ಕೂಲ್‌ಗೆ ಶೇ. 80.49 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 41 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 10 ವಿದ್ಯಾರ್ಥಿಗಳು ಪ್ರಥಮ ದರ್ಜೆ, 14 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ತ್ರುಪ್ತಿ ಯು. ಶೆಟ್ಟಿ ಇವರು ಶೇ. 89.04 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನಿಯಾದರೆ, ರಾಜೇಶ್ ಎಂ. ಗೌಡ ಅವರು ಶೇ. 84.02 ಅಂಕಗಳೊಂದಿಗೆ ದ್ವಿತೀಯ ಹಾಗೂ ಮಮತಾ ಬಿ. ಕಾಂಬ್ಳೆ ಇವರು ಶೇ. 80.02 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ.
ಚೆಂಬೂರು ಕರ್ನಾಟಕ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ
ಚೆಂಬೂರು: ಚೆಂಬೂರು ಕರ್ನಾಟಕ ಸಂಘ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್ ಕನ್ನಡ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ ಲಭಿಸಿದರೆ, ಇಂಗ್ಲೀಷ್ ಮಾಧ್ಯಮ ಶಾಲೆಗೆ ಶೇ. 99.49 ಫಲಿತಾಂಶ ಲಭಿಸಿದೆ.
ಇಂಗ್ಲೀಷ್ ಮಾಧ್ಯಮದಲ್ಲಿ 196 ವಿದ್ಯಾರ್ಥಿಗಳು ಮತ್ತು ಕನ್ನಡ ಮಾಧ್ಯಮದಲ್ಲಿ 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕನ್ನಡ ಮಾಧ್ಯಮದಲ್ಲಿ ಉಷಾ ಬಿ. ಜನಾರ್ ಅವರು ಶೇ. 85.20 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನಿಯಾದರೆ, ಗಗನ್ ಗೌಡ ಅವರು ಶೇ. 79.40 ಅಂಕಗಳೊಂದಿಗೆ ದ್ವಿತೀಯ ಮತ್ತು ನಮೃತಾ ಶೆಟ್ಟಿ ಅವರು ಶೇ. 79.20 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ.
ಇಂಗ್ಲೀಷ್ ಮಾಧ್ಯಮದಲ್ಲಿ ಹರಿಪ್ರಿಯಾ ಬೋದಲ್ ಅವರು ಶೇ. 94.40 ಅಂಕ ಗಳೊಂದಿಗೆ ಪ್ರಥಮ, ಶೇ. 92.80 ಅಂಕಗಳನ್ನು ಗಳಿಸಿದ ಮಿಲಿಂದ್ ಸಾವಂತ್ ದ್ವಿತೀಯ ಮತ್ತು ಸ್ನೇಹಲ್ ರಾಜ್‌ಬಾರ್ ಅವರು ಶೇ. 92.40 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ. ಉತ್ತಮ ಫಲಿತಾಂಶ ಪಡೆಯಲು ಸಹಕರಿಸಿದ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕವೃಂದದವರು, ಪಾಲಕ-ಪೋಷಕರನ್ನು ಸಂಸ್ಥೆಯ ಪದಾ ಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ಬಿಲ್ಲವರ ಅ.: ಗುರುನಾರಾಯಣ ನೈಟ್ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ
ಮುಂಬಯಿ: 2017- 2018 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದಲ್ಲಿರುವ ಶ್ರೀ ಗುರು ನಾರಾಯಣ ರಾತ್ರಿ ಕನ್ನಡ ಮಾಧ್ಯಮ ಹೈಸ್ಕೂಲ್‌ಗೆ ಈ ಬಾರಿಯೂ ಶೇ. 100 ಫಲಿತಾಂಶ ಲಭಿಸಿದೆ.
ಶಾಲೆಯ ಕಿಶೋರ್ ಶಂಕರ ಪವಾರ್ ಅವರು ಶೇ. 77.02 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮಿಗರೆನಿಸಿದರೆ, ಅರ್ಜುನ್ ರಮೇಶ್ ಕಾಂಬ್ಳೆ ಅವರು ಶೇ. 77 ಮತ್ತು ಪ್ಯಾಟಿ ಗಂಗಾಧರ್ ದೇವೇಂದ್ರ ಅವರು ಶೇ. 70 ಅಂಕಗಳನ್ನು ಗಳಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ಭಾಜನರಾಗಿದ್ದಾರೆ.
ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕವೃಂದದವರನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್‌ನ ಮಾರ್ಗದರ್ಶಕ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು, ಎಂ. ಬಿ. ಕುಕ್ಯಾನ್, ವಿ. ಆರ್. ಕೋಟ್ಯಾನ್, ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಮತ್ತು ಮುಖ್ಯ ಶಿಕ್ಷಕ ಸಿ. ರಾಮಚಂದ್ರಯ್ಯ ಸೇರಿದಂತೆ ಗಣ್ಯರು ಅಭಿನಂದಿಸಿದರು.
ವರದಿ : ರೋನ್ಸ್ ಬಂಟ್ವಾಳ್
ಥಾಣೆ ಶ್ರೀ ಆದಿಶಕ್ತಿ ಕನ್ನಡ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ
ಥಾಣೆ: ಮಹಾರಾಷ್ಟÅ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರೆ ಶಿಕ್ಷಣ ಮಂಡಳಿ (ಎಂಎಸ್‌ಬಿಎಸ್‌ಎಚ್‌ಇ) ನಡೆಸಿರುವ 2018 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಶ್ರೀ ಆದಿಶಕ್ತಿ ಕನ್ನಡ ಸಂಘ ಥಾಣೆ ಸಂಚಾಲಕತ್ವದ ಶ್ರೀ ಆದಿಶಕ್ತಿ ಕನ್ನಡ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 9 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಸುಮಿತ್ ಆರ್. ಅಂಕಲ್ಕರ್ ಅವರು ಶೇ. 84.60 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದರೆ, ವಿನೋದ್ ಟಿ. ಚವ್ಹಾಣ್ ಅವರು ಶೇ. 83.60 ಅಂಕಗಳೊಂದಿಗೆ ದ್ವಿತೀಯ ಮತ್ತು ಸುಧೀರ್ ಎಸ್. ಶೆಟ್ಟಿ ಅವರು ಶೇ. 82 ಅಂಕಗಳೊಂದಿಗೆ ತೃತೀಯ ಸ್ಥಾನಗಳಿಸಿದ್ದಾರೆ.
ಶ್ರೀ ಆದಿಶಕ್ತಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಡೊಂಬಿವಲಿ ಮಂಜುನಾಥ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ
ಡೊಂಬಿವಲಿ: ಕರ್ನಾಟಕ ಸಂಘ ಡೊಂಬಿವಲಿ ಸಂಚಾ ಲಕತ್ವದ ಮಂಜುನಾಥ ವಿದ್ಯಾಲಯದಇಂಗ್ಲೀಷ್ ಮಾಧ್ಯಮಕ್ಕೆ ಶೇ. 100 ಫಲಿತಾಂಶ ಲಭಿಸಿದರೆ, ಕನ್ನಡ ಮಾಧ್ಯಮಕ್ಕೆ ಶೇ. 96 ಫಲಿತಾಂಶ ಲಭಿಸಿದೆ.
ಇಂಗ್ಲೀಷ್ ಮಾಧ್ಯಮ ದಲ್ಲಿ ಪರೀಕ್ಷೆಗೆ ಹಾಜರಾದ 104 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದರೆ, 49 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 36 ವಿದ್ಯಾರ್ಥಿಗಳು ಪ್ರಥಮ ದರ್ಜೆ, 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಕೃಷಾ ಗಾಲಾ ಇವರು ಶೇ. 93.40 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾದರೆ, ಮೋಕ್ಷಿತಾ ಶೆಟ್ಟಿ ಅವರು ಶೇ. 93 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಮತ್ತು ಶ್ರೇಯಸ್ ಕಾನಡೆ ಅವರು ಶೇ. 92.60 ಅಂಕಗಳೊಂದಿಗೆ ತೃತೀಯ ಹಾಗೂ ಧನ್ಯಾ ಕುಲಕರ್ಣಿ ಅವರು ಶೇ. 90 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 25 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 8 ವಿದ್ಯಾರ್ಥಿಗಳು ಪ್ರಥಮ ದರ್ಜೆ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಉತ್ತಮ ಫಲಿತಾಂಶವನ್ನು ಪಡೆಯು ವಲ್ಲಿ ಸಹಕರಿಸಿದ ಸಂಸ್ಥೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದದವರು, ಶಿಕ್ಷಕೇತರ ಸಿಬಂಧಿಗಳನ್ನು ಸಂಸ್ಥೆಯ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ಬೊರಿವಲಿ ಸೈಂಟ್ ಕ್ಸೇವಿಯರ್ ಹೈಸ್ಕೂಲ್: ಶೇ.100 ಫಲಿತಾಂಶ
ಬೊರಿವಲಿ : ರಾಯನ್ ಇಂಟರ್‌ನ್ಯಾಷನಲ್ ಸಮೂಹ ಶೈಕ್ಷಣಿಕ ಸಂಸ್ಥೆಯ ಪ್ರೌಢಶಾಲೆಗಳಲ್ಲಿ ಒಂದಾದ ಬೊರಿವಿಲಿ ಪೂರ್ವದ ಸೈಂಟ್ ಕ್ಸೇವಿಯರ್ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ ಲಭಿಸಿದೆ.
ಶೇ. 97.07 ಅಂಕಗಳೊಂದಿಗೆ ಉತ್ತೀರ್ಣರಾದ ಸಾಕ್ಷಿ ಶಾØ ಶಾಲೆಯಲ್ಲೇ ಪ್ರಥಮ ಸ್ಥಾನಿಯಾಗಿದ್ದಾರೆ. ಸಂಜನಾ ಶಿಂಧೆ ಮತ್ತು ಸಾಕ್ಷಿ ಪ್ರಜಾಪತಿ ಅವರು ಶೇ. 96.04 ಅಂಕಗಳೊಂದಿಗೆ ದ್ವಿತೀಯ ಹಾಗೂ ಕನ್ನಡಿಗ ವಿದ್ಯಾರ್ಥಿಗಳಾದ ಗಣೇಶ್ ಕೃಷ್ಣ ನಾಯ್ಕ ಗುಜ್ಜಾಡಿ ಅವರು ಶೇ. 88.80 ಅಂಕಗಳನ್ನು ಮತ್ತು ತೀರ್ಥ್ ಗೋಪಾಲ್ ನಾಯ್ಕ ಕುಂದಾಪುರ ಇವರು ಶೇ. 91 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿ ಒಟ್ಟು 257 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 126 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 96 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 33 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಬಂಟ್ವಾಳ ಮೂಲದ ಶಾಲೆಯ ಪ್ರಾಂಶುಪಾಲೆ ಮಾರಿಯೆಟ್ ಫೆರ್ನಾಂಡಿಸ್ ತಿಳಿಸಿದ್ದಾರೆ. ರಾಯನ್ ಶೈಕ್ಷಣಿಕ ಸಂಸ್ಥೆಗಳ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್ ಎಫ್. ಪಿಂಟೋ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ, ಸಿಇಒ ರಾಯನ್ ಪಿಂಟೋ ಅವರು ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವರದಿ ರೋನ್ಸ್ ಬಂಟ್ವಾಳ್
ಕನ್ನಡ ಸಂಘ ಪುಣೆ ಸಂಚಾಲಿತ ಡಾ| ಕಲ್ಮಾಡಿ ಕನ್ನಡ ಹೈಸ್ಕೂಲ್‌ಗೆ ಶೇ. 96.07 ಫಲಿತಾಂಶ
ಪುಣೆ : ಕನ್ನಡ ಸಂಘ ಪುಣೆ ವತಿಯಿಂದ ನಡೆಸಲ್ಪಡುವ ಡಾ| ಶಾಮರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲಿ ನಲ್ಲಿ ಈ ಬಾರಿಯ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ. 96.07 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 51 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 21 ವಿದ್ಯಾರ್ಥಿಗಳು ಪ್ರಥಮ ದರ್ಜೆ, 16 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಶ್ರಾವ್ಯಾ ಶ್ರೀಧರ ಕುಲಾಲ್ ಅವರು ಶೇ. 91.08 ಅಂಕಗಳನ್ನು ಗಳಿಸಿ ತರಗತಿಯಲ್ಲಿ ಪ್ರಥಮ ಸ್ಥಾನಿಯಾಗಿ¨ªಾಳೆ. ಮಾಲಿ ಬಿರಾದಾರ್ ಭೀಮನ್ ಗೌಡ ಶಿವರಾಯ ಶೇ. 85. 06 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾದರೆ, ಕೀರ್ತಿ ನರಸಿಂಹ ಮಿಸಾಳ್ ಶೇ. 80.04 ಅಂಕಗಳನ್ನು ಪಡೆದು ತೃತೀಯ ಸ್ಥಾನಿಯಾಗಿದ್ದಾರೆ. ಶ್ರಾವ್ಯಾ ಕುಲಾಲ್ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ವಿಜ್ಞಾನ ಹಾಗೂ ಸಮಾಜ ಶಾಸ್ತ್ರಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಉಪಾಧ್ಯಕ್ಷರು ಗಳಾದ ಇಂದಿರಾ ಸಾಲ್ಯಾನ್, ನಾರಾಯಣ ಹೆಗಡೆ, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥರು, ಕನ್ನಡ ಮಾಧ್ಯಮ ಹೈಸ್ಕೂಲ್ ಪ್ರಾಚಾರ್ಯ ರಾದ ಚಂದ್ರ ಕಾಂತ ಹಾರಕೂಡೆ, ಶಿಕ್ಷಕ ವೃಂದ ಅಭಿ ನಂದಿಸಿ¨ªಾರೆ.
ವರದಿ: ಕಿರಣ್ ರೈ ಪುಣೆ
ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆ ಶೇ. 100 ಫಲಿತಾಂಶ
ಮುಂಬಯಿ: 2017- 2018 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಕನ್ನಡಿಗರ ವಿದ್ಯಾದಾಯಿನಿ ಸಭಾ ಮುಂಬಯಿ ಸಂಚಾಲಿತ ಕೆನರಾ ವಿದ್ಯಾದಾಯಿನಿ ರಾತ್ರಿಶಾಲೆಗೆ ಶೇ. 100 ಫಲಿತಾಂಶ ಲಭಿಸಿದೆ.
ಕಳೆದ ಹಲವು ವರ್ಷಗಳಿಂದ ಜಾಗದ ಅಭಾವದಿಂದ ಬಳಲುತ್ತಿರುವ ಈ ಶಾಲೆಗೆ ಫೋರ್ಟ್ ಪರಿಸರದ ಉದ್ಯಮಿ, ಸಮಾಜ ಸೇವಕ ಸೂರು ಸಿ. ಕರ್ಕೇರ ಅವರು ಜಾಗವನ್ನು ಕಲ್ಪಿಸಿಕೊಟ್ಟು ಸಹಕರಿಸುತ್ತಿದ್ದಾರೆ. ಶಾಲೆಯು ಕಳೆದ ಐದು ವರ್ಷ ಗಳಿಂದ ನೂರು ಪ್ರತಿಶತ ಫಲಿತಾಂಶ ಪಡೆಯುತ್ತಿದ್ದು, ಈ ಸಲವೂ ನೂರು ಫಲಿತಾಂಶ ಬಂದಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ವರ್ಷದಲ್ಲಿ 9 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಜೆ. ಎಂ. ಕೋಟ್ಯಾನ್, ಗೌರವ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಕೋಶಾಧಿಕಾರಿ ಆರ್. ಕೆ. ಕೋಟ್ಯಾನ್, ಕೋಶಾಧಿಕಾರಿ ಜಿ. ಸಿ. ಸಾಲ್ಯಾನ್, ಸಭಾದ ಸದಸ್ಯರು, ಪದಾಧಿಕಾರಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಉದ್ಯಮಿ ಸೂರು ಸಿ. ಕರ್ಕೇರ ಅವರು ವಿದ್ಯಾರ್ಥಿಗಳನ್ನು, ಶಿಕ್ಷಕ ವೃಂದದವರನ್ನು ಅಭಿನಂದಿಸಿದರು.
ಉಚಿತ ಶಿಕ್ಷಣ
ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯ ಮಕ್ಕಳಿಗೆ ಎಲ್ಲಾ ರೀತಿಯ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸಿ ಈಗಾಗಲೇ 8ನೇ ತರಗತಿಯಿಂದ 10 ನೇ ತರಗತಿಯವರೆಗೆ ತರಗತಿಗಳ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದೆ. ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಜಿ. ಸಿ. ಸಾಲ್ಯಾನ್ (9870314464), ಪ್ರಭಾಕರ ಕರ್ಕೇರ (9870392796), ವಿಜಯ ಪೂಜಾರಿ (9869458751) ಅವರನ್ನು ಸಂಪರ್ಕಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.