![Summer](https://www.udayavani.com/wp-content/uploads/2025/02/Summer-415x249.jpg)
![Summer](https://www.udayavani.com/wp-content/uploads/2025/02/Summer-415x249.jpg)
Team Udayavani, Dec 7, 2017, 1:38 PM IST
ಮುಂಬಯಿ: ವಾಲ್ಕೇಶ್ವರ ಬಾಣಗಂಗಾ ಮಲಬಾರ್ ಹಿಲ್ ಕಲಾ ಕ್ರೀಡಾ ಕೇಂದ್ರದ ಗ್ರಂಥಾಲಯ ವಿಭಾಗದ 2017 ನೇ ವಾರ್ಷಿಕ ದೀಪಾವಳಿ ವಿಶೇಷಾಂಕದ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಸಂಸ್ಥೆಯ ಸಭಾಗೃಹದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಭಾಗ ಸಮಿತಿಯ ಅಧ್ಯಕ್ಷೆ, ಸ್ಥಳೀಯ ನಗರ ಸೇವಕಿ ಜ್ಯೋತ್ಸಾ° ವೆಹ್ತಾ ಅವರು ದೀಪಾವಳಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ದೀಪಾವಳಿ ವಿಶೇಷಾಂಕವು ಸಂಸ್ಕೃತಿಯನ್ನು ಅನುಸರಿಸುವ ಕಾರ್ಯವನ್ನು ಮಾಡುತ್ತಿದೆ. ಸಾಹಿತ್ಯವು ಸಮಾಜದ ದರ್ಪಣವಾಗಿದ್ದು, ಸಂಸ್ಕೃತಿಯೊಂದಿಗೆ ಸಾಹಿತ್ಯದ ಸಮಾಗಮ ಈ ವಿಶೇಷಾಂಕದಲ್ಲಿ ಮೂಡಿ ಬಂದಿರುವುದು ಅಭಿನಂದನೀಯವಾಗಿದೆ. ಮರಾಠಿಗರ ವೈಶಿಷ್ಟéವೇ ಸಾಹಿತ್ಯ, ಕಲೆ, ರಾಜಕಾರಣವಾಗಿದೆ. ಮಲಬಾರ್‌ಹಿಲ್ ಕಲಾಕ್ರೀಡಾ ಕೇಂದ್ರವು ಕಡಿಮೆ ಬೆಲೆಯಲ್ಲಿ ನೀಡುತ್ತಿರುವ ಈ ವಿಶೇಷಾಂಕದಲ್ಲಿ ಓದುಗರ ಜ್ಞಾನವೃದ್ಧಿಸುವ ಮಾಹಿತಿಗಳಿರುವುದು ಸಂತೋಷದ ಸಂಗತಿಯಾಗಿದೆ. ಕಳೆದ 36 ವರ್ಷಗಳಿಂದ ವಾಲ್ಕೇಶ್ವರ, ಮಲಬಾರ್ ಹಿಲ್,ಬಾಣಗಂಗಾ ವಿಭಾಗದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಈ ಸಂಸ್ಥೆ ಸಲ್ಲಿಸುತ್ತಿರುವ ಕಾರ್ಯ ಅನುಕರಣೀ
ಯವಾಗಿದೆ. ಮಲ್‌ಬಾರ್ ಹಿಲ್ ಕಲಾ ಕ್ರೀಡಾಕೇಂದ್ರದ ಗ್ರಂಥಾಲಯ ವಿಭಾಗವು ಪ್ರತೀ ವರ್ಷವೂ ವಿಶೇಷತೆಯುಳ್ಳ ವಿಶೇಷಾಂಕವನ್ನು ಪ್ರಕಟಿಸುತ್ತಿರುವುದು ಅಭಿನಂದನೀಯವಾಗಿದೆ ಎಂದು ನುಡಿದು ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಸ್ಥಳೀಯ ನಗರ ಸೇವಕಿ ಜ್ಯೋತ್ಸಾ° ಮೆಹ್ತಾ ಅವರು ದೀಪ ಪ್ರಜ್ವಲಿಸಿ ಉದ್ಘಾಸಿದರು. ಕೋಶಾಧಿಕಾರಿ ಹರೀಶ್ ಭಾಲೇಕರ್ ಅವರು ಅತಿಥಿಗಳನ್ನು ಪರಿಚಯಿಸಿ ಗೌರವಿಸಿ, ಗ್ರಂಥಾಮಯ ಉಪಕ್ರಮವು ಎಲ್ಲರ ಕೈಸೇರಬೇಕಿದೆ. ಈ ಕೇಂದ್ರವು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು. ವಿಶೇಷಾಂಕ ಯೋಜನೆಯ ಕಾರ್ಯದರ್ಶಿ ಪ್ರಕಾಶ್ ದೇವಲೆಕರ್, ಅನಿತಾ ಕಾನಡೆ, ಶಾಂತಾರಾಮ್ ಸುವರೆ, ಹರಿಭಾವು ಜೋಶಿ, ರಾಜು ಹದಗೆ, ಗ್ರಂಥಪಾಲರಾದ ವಂದನಾ ಗುರವ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವೇದಿಕೆಯಲ್ಲಿ ಮೀನು ಖಾನ್ ಹಾಗೂ ಅತಿಥಿ-ಗಣ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.