ಮಲಾಡ್ ಕುರಾರ್ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ: ಶಾಲಾ ಪರಿಕರಗಳ ವಿತರಣೆ
Malad Kurar Shree Shanimahatma Worship Committee: Distribution of School Tools
Team Udayavani, Jun 25, 2019, 2:33 PM IST
ಮುಂಬಯಿ: ಕಳೆದ 22 ವರ್ಷಗಳಿಂದ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯು ಶನೀಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಮಲಾಡ್ ಪರಿಸರದ ಅರ್ಹ ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ ಇತ್ಯಾದಿಗಳ ಮೂಲಕ ಶೈಕ್ಷಣಿಕ ಸಹಾಯ ಮಾಡುತ್ತಿದ್ದು ಈ ಪ್ರಯೋಜನವನ್ನು ಪಡೆದ ಮಕ್ಕಳು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಭಿನಂದನೀಯ ಎಂದು ಮಲಾಡ್ ಕುರಾರ್ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ನುಡಿದರು.
ಜೂ. 22ರಂದು ಮಲಾಡ್ ಪೂರ್ವದ ಕುರಾರ್ ವಿಲೇಜ್‌ನ ಶ್ರೀ ಶನೀಶ್ವರ ಕ್ಷೇತ್ರದಲ್ಲಿ ಪರಿಸರದ ಅರ್ಹ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಧಾರ್ಮಿಕ ಸೇವೆಯೊಂದಿಗೆ ಜನ ಸಾಮಾನ್ಯರ ಸೇವೆ ಮಾಡುತ್ತಿದ್ದು ಇದಕ್ಕೆ ಅನೇಕ ದಾನಿಗಳೂ ಸಹಕರಿಸಿದ್ದು, ನಮ್ಮ ಸಮಿತಿಯ ಎಲ್ಲರ ಪ್ರಯತ್ನದಿಂದ ಇದು ಸಾಧ್ಯವಾಗುತ್ತಿದೆ ಎಂದರು.
ಜನಸೇವೆಗೂ ಒಂದು ಮಾಧ್ಯಮ
ಅತಿಥಿಯಾಗಿ ಉಪಸ್ಥಿತರಿದ್ದ ಸಾಯಿ ಸಿದ್ದಿ ಹಾಸ್ಪಿಟಾಲಿಟಿಯ ಡಾ| ಮಂಜುನಾಥ್ ಶೆಟ್ಟಿ ಅವರು ಮಾತನಾಡಿ, ಈ ಮಂದಿರವು ಜನಸೇವೆಗೂ ಒಂದು ಮಾಧ್ಯಮವಾಗಿದ್ದು ಇದರ ಮೂಲಕ ಜನರನ್ನು ಸೇರಿಸಿ ಈ ಸಮಿತಿಯು ಮಕ್ಕಳ ಶಿಕ್ಷಣಕ್ಕೆ ಸಹಕರಿಸುತ್ತಿರುವುದು ಮಾತ್ರವಲ್ಲದೆ ದೇವರು ಈ ಮೂಲಕ ಸಹಕರಿಸುತ್ತಿದ್ದು ಮಕ್ಕಳು ಮುಂದೆ ಉತ್ತಮ ಶಿಕ್ಷಣ ಪಡೆದು ಅವರೂ ಇದನ್ನು ಮುಂದುವರಿಸಬೇಕು ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ತುಂಗ ಭಟ್ ಅವರು ಮಾತನಾಡಿ, ಭಗವಂತನ ಪ್ರಸಾದ ರೂಪದಲ್ಲಿ ಪರಿಸರದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ಮಾಡುತ್ತಿರುವ ಈ ಕಾರ್ಯದಲ್ಲಿ ಮಕ್ಕಳಿಗೆ ಸರಸ್ವತಿ ಹಾಗೂ ಶನೀಸ್ವರನ ಅನುಗ್ರಹವಿರಲಿ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೊಗವೀರ ಮಾಸಿಕದ ಸಂಪಾದಕ ಅಶೋಕ ಸುವರ್ಣ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ನಮ್ಮ ಕಾಲದಲ್ಲಿ ಇಂತಹ ಶೈಕ್ಷಣಿಕ ಸೌಲಭ್ಯವಿಲ್ಲದೇ ಇದ್ದು ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಯಾಗಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ 2018-2019 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ರಿಯಲ್ಲಿ ಶೇ. 96.83 ಅಂಕಗಳನ್ನು ಪಡೆದ ಪಾರ್ಥೀವ್ ಎಂ. ಶೆಟ್ಟಿಯವರನ್ನು ಸಮ್ಮಾನಿಸಲಾಯಿತು. ಪ್ರಾರಂಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾರಾಯಣ್ ಭಟ್ ಸಹಕರಿಸಿದರು ವೇದಿಕೆಯಲ್ಲಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಜೆ. ಸಾಲ್ಯಾನ್, ಜೊತೆ ಕಾರ್ಯದರ್ಶಿ ಶಾಲಿನಿ ಶೆಟ್ಟಿ, ಜತೆ ಕೋಶಾಧಿಕಾರಿ ಶಿವಾನಂದ ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಬಾಬು ಎನ್. ಚಂದನ್, ಶ್ರೀಧರ ಆರ್. ಶೆಟ್ಟಿ, ಐತು ದೇವಾಡಿಗ, ಟ್ರಸ್ಟಿನ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಮಹೇಶ್ ಸಾಲ್ಯಾನ್, ಕೋಶಾಧಿಕಾರಿ ಸದಾನಂದ ನಾಯಕ್, ಜೊತೆ ಕೋಶಾಧಿಕಾರಿ ರಾಜಶ್ರೀ ಪೂಜಾರಿ ಸಮಿತಿ ಸದಸ್ಯರುಗಳಾದ ಆನಂದ್ ಕೋಟ್ಯಾನ್, ದಿನೇಶ್ ಕುಂಬ್ಳೆ, ದಯಾನಂದ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಭರತ್ ಕೋಟ್ಯಾನ್, ರಾಮಕೃಷ್ಣ ಶೆಟ್ಟಿಯನ್, ರವಿ ಎನ್. ಶೆಟ್ಟಿ, ಜಯ ಸಾಲ್ಯಾನ್, ಸೀತಾರಾಮ್ ಸಫಲಿಗ, ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್, ಜಯಂತಿ ಸಾಲ್ಯಾನ್, ಲತಾ ಎಸ್. ಪೂಜಾರಿ ಜಯಲಕ್ಷಿ¾ ನಾಯಕ್, ವಿನೋದ್ ಕರ್ಕೇರ, ಯಶೋದಾ ರೈ, ಶ್ವೇತಾ ಶೆಟ್ಟಿ, ಪ್ರಿಯಾಂಕಾ ಮರಕಲ, ನಿಧಿ ಎಚ್. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯು ಸುಮಾರು ಒಂದು ಸಾವಿರ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಿದ್ದು, ಕಳೆದ ಹಲವಾರು ವರ್ಷಗಳಿಂದ ಮಾಲಾಡ್ ಪರಿಸರದ ಎಲ್ಲಾ ಭಾಷಿಗರಿಗೆ ಶಾಲಾ ಪರಿಕರಗಳು ವಿತರಿಸಿಕೊಂಡು ಬರಲಾಗುತ್ತಿದೆ. ಈ ಯೋಜನೆಗೆ ದಿವ್ಯ ಸಾಗರ್ ಗ್ರೂಪ್ ಆಫ್ ಹೊಟೆಲ್ಸ್‌ನ ಸಿಎಂಡಿ ಮುದ್ರಾಡಿ ದಿವಾಕರ ಶೆಟ್ಟಿ ಅವರು ಪ್ರಾರಂಭದಿಂದಲೂ ಸಹಕಾರವನ್ನು ನೀಡುತ್ತಿದ್ದು, ಈ ಬಾರಿ ಗಂಗಾವಳಿ ಕೋ. ಅಪರೇಟಿವ್ ಬ್ಯಾಂಕಿನ ನಿರ್ದೇಶಕ ಉದಯ ಮೊಗವೀರ, ನರೇಶ್ ಚೌದ್ರಿ, ಸಂಗೀತ ಚೌದ್ರಿ, ಡಾ| ಮಂಜುನಾಥ್ ಶೆಟ್ಟಿ ಅವರು ಆರ್ಥಿಕ ಸಹಕಾರವನ್ನು ನೀಡಿ¨ªಾರೆ.
ಚಿತ್ರ-ವರದಿ : ಈಶ್ವರ ಎಂ. ಐಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.