ಕೋವಿಡ್ ಜತೆ ಮಲೇರಿಯಾ ಪ್ರಕರಣ: ಕಂಗೆಟ್ಟ ಮುಂಬಯಿ ಜನತೆ

Team Udayavani, Aug 21, 2020, 8:04 PM IST

ಕೋವಿಡ್  ಜತೆ ಮಲೇರಿಯಾ ಪ್ರಕರಣ: ಕಂಗೆಟ್ಟ ಮುಂಬಯಿ ಜನತೆ

ಸಾಂದರ್ಭಿಕ ಚಿತ್ರ

ಮುಂಬಯಿ, ಆ. 20: ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಮಲೇರಿಯಾ ಪ್ರಕರಣಗಳು ಗಮನಾರ್ಹ ಪ್ರಗತಿಯನ್ನು ತೋರಿಸಿದ್ದು, ಸುಮಾರು 600 ಪ್ರಕರಣಗಳು ಪತ್ತೆಯಾಗಿದ್ದು, ವರ್ಷದ ಮೊದಲ ಎರಡು ಮಾನ್ಸೂನ್‌ ಸಂಬಂಧಿತ ಸಾವುಗಳಿಗೆ ಕಾರಣವಾಗಿದೆ. 2019ರ ನಗರದ ಶೂನ್ಯ ಮಲೇರಿಯಾ ಸಾವಿನ ದಾಖಲೆಯನ್ನು ನಿರ್ಮಿಸಿತ್ತು.

ಜಿ ಉತ್ತರ ವಾರ್ಡ್‌ನಿಂದ 27 ವರ್ಷದ ಯುವಕನ ಮತ್ತು ಎಂ ಈಸ್ಟ್‌ ವಾರ್ಡ್‌ನಿಂದ 40 ವರ್ಷದವರೊಬ್ಬರು ಮಲೇರಿಯಾದಿಂದ ಸಾವನ್ನಪ್ಪಿದ್ದಾರೆ. ಇಬ್ಬರೂ ಸಹ ಕೋವಿಡ್‌ ಪಾಸಿಟಿವ್‌ ಆಗಿದ್ದರು. ಅಡಿಟ್‌ ಸಮಿತಿಯು ಮಲೇರಿಯಾದಿಂದ ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದೆ ಎಂದು ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ. ಜುಲೈನಲ್ಲಿ 872 ಪ್ರಕರಣಗಳನ್ನು ದಾಖಲಿಸಿದ ಬಳಿಕ, ನಗರವು ಆಗಸ್ಟ್‌ 1ರಿಂದ 16ರ ನಡುವೆ 592 ಮಲೇರಿಯಾ ಪ್ರಕರಣಗಳನ್ನು ದಾಖಲಿಸಿದೆ. ಮಲೇರಿಯಾ ಮಾತ್ರ ಮಾನ್ಸೂನ್‌ ಕಾಯಿಲೆ ಎಂದು ಬಿಎಂಸಿ ಹೇಳಿದೆ.

ಗ್ಯಾಸ್ಟ್ರೋಎಂಟರೈಟಿಸ್‌, ಹೆಪಟೈಟಿಸ್‌ ಮತ್ತು ಲೆಪ್ಟೊಸ್ಪೈರೋಸಿಸ್‌ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಜಿ ಉತ್ತರ ವಾರ್ಡ್‌ನ ಮಹೀಮ್ ಮತ್ತು ಧಾರಾವಿಯ 27 ವರ್ಷದ ವ್ಯಕ್ತಿಯಲ್ಲಿ ಜುಲೈ 30ರಂದು ಜ್ವರ ಮತ್ತು ವಾಂತಿ ಕಂಡಿಬಂದಿದ್ದು, ಆಗಸ್ಟ್‌ 2ರಂದು ಉಸಿರಾಟ, ಅಧಿಕ ರಕ್ತದೊತ್ತಡ ಮತ್ತು ಎದೆನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದರು. ಮದ್ಯ ವ್ಯಸನಿಯಾಗಿದ್ದ ಇವರು ಹೃದಯ ಸ್ನಾಯುಗಳ ಉರಿಯೂತವನ್ನು ಸಮಸ್ಯೆ ಹೊಂದಿದ್ದರು. ಉಸಿರಾಟದ ಸಮಸ್ಯೆಯಿಂದ ಅವರು ನಿಧನ ಹೊಂದಿದರು. ಕೋವಿಡ್‌-19ರಲ್ಲಿ ಮಲ್ಟಿ ಆರ್ಗನ್‌ ಡಿಸಂಕ್ಷನ್‌ ಸಿಂಡ್ರೋಮ್‌ ಹೊಂದಿರುವ ಪ್ಲಾಸ್ಮೋಡಿಯಮ್‌ ವೈವಾಕ್ಸ್‌ ಮಲೇರಿಯಾ’ ಸಾವಿಗೆ ಕಾರಣ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಸಾವು, ಎಂ ಈಸ್ಟ್‌ ವಾರ್ಡ್‌ ಗೋವಂಡಿಯ 40 ವರ್ಷದ ವ್ಯಕ್ತಿಯಾಗಿದ್ದು, ಜುಲೈ 25 ರಂದು ಜ್ವರ ಮತ್ತು ಕೆಮ್ಮಿನ ಹಿನ್ನೆಲ ನವಿಮುಂಬಯಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾಲ್ಕು ದಿನಗಳ ಬಳಿಕ ಅವರನ್ನು ಮುಂಬಯಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ಸಂದರ್ಭ ರೋಗಿಯಲ್ಲಿ ಉಸಿರಾಟದ ತೊಂದರೆ ಮುಂದುವರೆದಿದೆ ಎಂದು ತೋರಿಸಿದ್ದು, ಅವರು ಕೋವಿಡ್‌ ಮತ್ತು ಮಲೇರಿಯಾಹೊಂದಿದ್ದು, ಸಾವನ್ನಪ್ಪಿದ್ದಾರೆ. ಆಗಸ್ಟ್‌ ಮಧ್ಯದಿಂದ ಸೆಪ್ಟಂಬರ್‌ ವರೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯಲ್ಲಿ ಸಂಯೋಜಿಸಲಾದ 20 ಕೋವಿಡ್‌ -19 ಚಿಕಿತ್ಸಾ ಪ್ಯಾಕೇಜ್‌ ಗಳನ್ನು ಅಕ್ಟೋಬರ್‌ 31ರ ವರೆಗೆ ಯೋಜನೆಯ ಭಾಗವಾಗಿ ವಿಸ್ತರಿಸಲಾಗಿದೆ. ಹಲವಾರು ಆಸ್ಪತ್ರೆಗಳು ಪ್ಯಾಕೇಜ್‌ಗಳನ್ನು ವಿಸ್ತರಿಸುತ್ತಿಲ್ಲವೆಂದು ರಾಜ್ಯವು ಗಮನಿಸಿದ್ದು, ಅಂತಹ ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಾಪ್ ನ್ಯೂಸ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.