ಮುಂಬಯಿ ಮಹಾನಗರ ಪಾಲಿಕೆ ಶಾಲೆಯ ಅಧೀಕ್ಷಕಿಯಾಗಿ ಮಮತಾ ವಿ. ರಾವ್
Team Udayavani, Jun 3, 2018, 4:50 PM IST
ಮುಂಬಯಿ: ಮುಂಬಯಿ ಮಹಾನಗರ ಪಾಲಿಕೆ ದಕ್ಷಿಣ ವಿಭಾಗದ ಆರ್ ಪ್ರಭಾಗ ಕ್ರಮಾಂಕ ಶಾಲೆಗಳ ಅಧೀಕ್ಷಕಿಯಾಗಿ ಕನ್ನಡಿಗರಾದ ಮಮತಾ ವಿ. ರಾವ್ ಅವರು ನಿಯುಕ್ತಿಗೊಂಡಿದ್ದಾರೆ.
ಮಮತಾ ವಿಜಯೇಂದ್ರ ರಾವ್ ಅವರು ಮುಂಬಯಿ ಮಹಾನಗರ ಪಾಲಿಕೆಯ ಶಾಲೆಯಲ್ಲಿ ಕಲಿತು ಅದೇ ಶಾಲೆಯ ಶಿಕ್ಷಕಿಯಾಗಿ, ನಿರೀಕ್ಷಣಾಧಿಕಾರಿಯಾಗಿ, ಪ್ರಶಾಸಕೀಯ ಅಧಿಕಾರಿಯಾಗಿ ಹೀಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು. ಮೂಲತಃ ಕುಂದಾಪುರದವರಾದ ಇವರು ಇಂದಿರಾ ಮತ್ತು ಭಾಸ್ಕರ ಗಾಣಿಗ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಭಾಂಡೂಪ್‌ನ ಮುನ್ಸಿಪಾಲ್ ಕನ್ನಡ ಶಾಲೆಯಲ್ಲಿ ಪಡೆದು, ಮಾಧ್ಯಮಿಕ ಶಿಕ್ಷಣವನ್ನು ಮುಲುಂಡ್ ವಿಪಿಎಂ ಮತ್ತು ಪದವಿ ಶಿಕ್ಷಣವನ್ನು ಘಾಟ್‌ಕೋಪರ್‌ನ ಆರ್‌ಜೆ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಆನಂತರ ಬಿಎಡ್ ವೃತ್ತಿಪರ ಶಿಕ್ಷಣವನ್ನು ಆರ್. ಎಂ. ಭಟ್ ಕಾಲೇಜಿನಲ್ಲಿ, ಎಂಎಡ್ ಪದವಿಯನ್ನು ಮುಂಬಯಿ ವಿಶ್ವವಿದ್ಯಾಲಯದಿಂದ ಪಡೆದರು.
ತಮ್ಮ ಸತತ ಪ್ರಯತ್ನ, ಏಕಾಗ್ರತೆ, ಶ್ರದ್ಧೆಯ ಕಾರ್ಯವೈಖರಿಯಿಂದ ಗುರುನಾನಕ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಆರಂಭಿಸಿದರು. ಆನಂತರ ಬಾಂದ್ರಾದ ಪುರುಷೋತ್ತಮ ಹೈಸ್ಕೂಲ್, ಮುಂಬಯಿ ಮಹಾನಗರ ಪಾಲಿಕೆಯ ವರ್ಲಿ ಅಂಬೇಡ್ಕರ್ ಶಾಲೆ, ವಕೋಲ ಸಾಂತಾಕ್ರೂಜ್ ಹಾಗೂ ನಿತ್ಯಾನಂದ ರೋಡ್ ಅಂಧೇರಿ ಶಾಲೆಗಳಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಅಂಧೇರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭದಲ್ಲೇ ಅವರು ನಿರೀಕ್ಷಣಾಧಿಕಾರಿಯ ಕ್ಲಾರ್ಕ್ ಆಗಿ ಕಾರ್ಯ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಪ್ರಸ್ತುತ 2018ನೇ ಮೇ 8ರಿಂದ ದಾದರ್ ಪೂರ್ವದ ಸೆಕೆಂಡರಿ ಸ್ಕೂಲ್‌ನ ಅಧೀಕ್ಷಕಿಯಾಗಿ ಮುಂಭಡ್ತಿ ಪಡೆದಿರುವುದು ಮುಂಬಯಿ ಮಹಾನಗರ ಪಾಲಿಕೆಯ ಕನ್ನಡ ಶಾಲಾ ಶಿಕ್ಷಕವೃಂದಕ್ಕೆ ಹೆಮ್ಮೆಯ ವಿಷಯವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.