ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರ: ಕಲಿಕಾ ವರ್ಗ
Team Udayavani, Aug 29, 2017, 3:32 PM IST
ಪುಣೆ: ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರವು ಕನ್ನಡೇತರರಿಗಾಗಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿಹಬ್ಬದ ಕನ್ನಡ ಕಲಿಕಾ ವರ್ಗವನ್ನು ಇತ್ತೀಚೆಗೆ ಹಿರಿಯ ಪತ್ರಕರ್ತ, ಅರ್ಥಪೂರ್ಣ ಮಾಸಿಕದ ಸಂಪಾದಕ ಹಾಗೂ ಮರಾಠಿಯ ಸಕಾಳ್ ದಿನಪತ್ರಿಕೆಯ ಮಾಜಿ ಸಂಪಾದಕ ಯಮಾಜಿ ಮಾಲಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿ| ಸಾಣೆ ಗುರೂಜಿ ಅಂತರ್ ಭಾರತೀಯ ಸ್ವಪ್ನ ಕಂಡವರು. ಅದನ್ನು ಪ್ರತ್ಯಕ್ಷವಾಗಿ ಕೃತಿಯಲ್ಲಿ ರೂಪಿಸಿದ ಶ್ರೇಯ ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರಕ್ಕೆ ಸಲ್ಲುತ್ತದೆ. ಕಳೆದ 24 ವರ್ಷಗಳಿಂದ ಪುಣೆಯಲ್ಲಿ ಕನ್ನಡೇತರರಿಗೆ, ವಿಶೇಷವಾಗಿ ಮರಾಠಿಗರಿಗೆ ಕನ್ನಡ ಕಲಿಕಾ ವರ್ಗ ನಡೆಸುತ್ತ ಎರಡೂ ಭಾಷಿಕರಲ್ಲಿ ಅನುಬಂಧವನ್ನು ನೇರವಾಗಿ ಬಿಂಬಿಸುತ್ತಿರುವ ಈ ಉಪಕ್ರಮ ಅನನ್ಯವೂ, ಅನುಪಮವೂ ಆಗಿದೆ ಎಂದರು.
ವ್ಯಾಸ ಮಹಾಭಾರತದ ಪ್ರಭಾವ ಕುಮಾರ ವ್ಯಾಸನ ಮೇಲಾಯಿತಾದರೂ, ಅದೊಂದು ಅನುವಾದಿತ ಕೃತಿಯೆಂದು ಗೋಚರಿಸುವುದಿಲ್ಲ. ಕುಮಾರವ್ಯಾಸ ಮಹಾಭಾರತವನ್ನು ಅನುಪಮ ಅಪೂರ್ವ ಸ್ವರೂಪದ ಮಹಾಕಾವ್ಯವನ್ನಾಗಿ ರೂಪಿಸಿ ಅದಕ್ಕೆ ಸರ್ವತಂತ್ರ ಸ್ವತಂತ್ರ ಮಹಾಕಾವ್ಯದ ನೆಲೆಯಲ್ಲಿ ಸೆರೆಹಿಡಿದ ಶ್ರೇಯ ಗದುಗಿನ ನಾರಾಯಣಪ್ಪ ಅಲಿಯಾಸ್ ಕುಮಾರವ್ಯಾಸನಿಗೆ ಸಲ್ಲುತ್ತದೆ. ಈ ಮಹಾಕಾವ್ಯದಲ್ಲಿ ರೂಪುಗೊಳ್ಳುವ ಪ್ರತಿಯೊಂದು ಪಾತ್ರಕ್ಕೆ ಸ್ವತಂತ್ರ ಸ್ಥಾನವನ್ನು ಕಲ್ಪಿಸಿ ಕೃಷ್ಣ ಲೀಲೆಯನ್ನು ಅದ್ಭುತ ಸ್ವರೂಪದಲ್ಲಿ ಬಿಂಬಿಸಿ, ಭಗವತ್ ಧರ್ಮವನ್ನು ಎತ್ತಿಹಿಡಿದ ರೀತಿ ಅನುಪಮವಾಗಿದೆ. ಷಟ³ದಿ ಛಂದ ಮರಾಠಿ ಯಲ್ಲಿ ಕನ್ನಡದಷ್ಟು ಪ್ರಭಾವ ಶಾಲಿಯಾಗಿರದ ಕಾರಣ ನಾನು ನನ್ನ ಸಮಗ್ರ ಅನುವಾದ ಕಾರ್ಯವನ್ನು ಸರಳ ಗದ್ಯದಲ್ಲಿ ರಚಿಸಿದ್ದೇನೆ ಎಂದು ಪುಣೆಯ ನೆಸ್ ವಾಡಿಯಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಜಲಗಾಂವ್ ಜ್ಞಾನಜ್ಯೋತಿ ಇನ್‌ಸ್ಟಿಟ್ಯೂಟ್‌ನ ಸಂಚಾಲಕ ಪ್ರೊ| ಗುರುರಾಜ್ ಸಿ. ಕುಲಕರ್ಣಿ ನುಡಿದರು.
ಇದೇ ಸಂದರ್ಭದಲ್ಲಿ ಯಮಾಜಿ ಮಾಲಕರ್ ಮತ್ತು ಕುಲಕರ್ಣಿ ಅವರನ್ನು ಕೇಂದ್ರದ ಗೌರವ ಕಾರ್ಯದರ್ಶಿ, ಕನ್ನಡ ಕಲಿಕಾ ವರ್ಗದ ಸಂಚಾಲಕ ಕೃ. ಶಿ. ಹೆಗಡೆ ಅವರ ಹಸ್ತದಿಂದ ಸತ್ಕರಿಸಲಾಯಿತು.
ತದನಂತರ, ಪ್ರಾಚಿ ಕುಲಕರ್ಣಿ ಅವರು ಮರಾಠಿಗರಿಗೆ ಪರಿಚಿತವಲ್ಲದ, ಕನ್ನಡದಲ್ಲಿ ಆಳವಾಗಿ ಬೇರುಬಟ್ಟಿರುವ ಗಮಕ ಶೈಲಿಯ ವ್ಯಾಸ ಮಹಾಭಾರತದ ಕೆಲವು ಪದ್ಯಗಳನ್ನು ಸಾದರಪಡಿಸಿ ಪ್ರೇಕ್ಷಕರ ಗಮನ ಸೆಳೆದರು.
2016ರ ಮಾರ್ಚ್‌ನಲ್ಲಿ ಆಯೋಜಿಸಲಾದ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅಧ್ಯಕ್ಷ ಯಮಾಜಿ ಮಾಲಕರ್ ಮತ್ತು ಮುಖ್ಯ ಅತಿಥಿ ಪ್ರೊ| ಗುರುರಾಜ ಸಿ. ಕುಲಕರ್ಣಿ ಅವರ ಹಸ್ತದಿಂದ ಪ್ರಮಾಣಪತ್ರ ಪ್ರದಾನಿಸಲಾಯಿತು.
ವರ್ಗದ ಶಿಕ್ಷಕ ವಿಶ್ವನಾಥ ಶೆಟ್ಟಿ ಅವರು ಎರಡೂ ವರ್ಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳು ಶುದ್ಧ ಕನ್ನಡದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
ಕೇಂದ್ರದ ಪ್ರಧಾನ ಕಾರ್ಯದರ್ಶಿ, ಕನ್ನಡ ಕಲಿಕಾ ವರ್ಗದ ಸಂಚಾಲಕ ಕೃ. ಶಿ. ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಕೇಂದ್ರದ ವಿಶ್ವಸ್ತ ಡಾ| ರಾಘವೇಂದ್ರ ಕಟ್ಟಿ ಮುಖ್ಯ ಅತಿಥಿಯ ಪರಿಚಯ ಮಾಡಿದರು. ಲತಾ ಹಿರೇಮs… ಕಾರ್ಯಕ್ರಮದ ಅಧ್ಯಕ್ಷರ ಪರಿಚಯ ಮಾಡಿದರು. ಅದೇ, ಕನ್ನಡ ಕಲಿಕಾ ವರ್ಗದ ವಿದ್ಯಾರ್ಥಿ ಅರುಣಾ ಸಿ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ವಿಶ್ವಸ್ತ ಸಿ. ಎಂ. ಹರ್ಕುಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.