ಮಾ.4: ಸೋಂದಾಶ್ರೀ ಮುಂಬಯಿ ಭೇಟಿ
Team Udayavani, Mar 3, 2017, 4:12 PM IST
ಮುಂಬಯಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಮಾ. 4ರಂದು ಸಂಜೆ ಮಹಾನಗರ ಮುಂಬಯಿಗೆ ಪಾದಾರ್ಪಣೆಗೈಯಲ್ಲಿದ್ದು, ಮಾ. 11 ರವರೆಗೆ ಮಾಟುಂಗ ಪೂರ್ವದ ಶ್ರೀ ಶಂಕರ ಮಠದಲ್ಲಿ ಮೊಕ್ಕಾಂ ಹೂಡಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಮಾ. 4ರಂದು ಸಂಜೆ 4.30ಕ್ಕೆ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಮಾ. 5 ರಿಂದ ಮಾ. 11ರ ತನಕ ಪ್ರತಿದಿನ ಮುಂಜಾನೆ 8ರಿಂದ ಶ್ರೀಗಳಿಂದ ಕುಂಕುಮಾರ್ಚನೆ, ಪ್ರತಿದಿನ ಬೆಳಗ್ಗೆ 9 ರಿಂದ ಪಾದಪೂಜೆ, ಮಧ್ಯಾಹ್ನ 1.30 ರಿಂದ ಭಿûಾಸೇವೆ (ಮಾ. 8 ಏಕಾದಶಿ ಹೊರತುಪಡಿಸಿ), ಮಾ. 4 ಮತ್ತು ಮಾ. 5 ರಂದು ಸಂಜೆ
5ರಿಂದ ಭಗವದ್ಗೀತಾ ಪ್ರವಚನ ನಡೆಯಲಿದೆ.ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಮಹಾನಗರದಾದ್ಯಂತದ ಎಲ್ಲಾ ಭಕ್ತಾದಿಗಳು, ಹಿತೈಷಿಗಳು ಪಾಲ್ಗೊಂಡು ಶ್ರೀಗಳ ದರ್ಶನ ಪಡೆಯಲು ಹಾಗೂ ಭಿûಾಸೇವೆ, ಪಾದಪೂಜೆ, ಕುಂಕುಮಾರ್ಚನೆ ಮತ್ತು ಇತರ ಅನೇಕ ಸೇವೆಗಳಿಗೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿ. ಎನ್. ಹೆಗಡೆ (9869007333), ವಸಂತ್ ಭಟ್ (9867307715), ಕೆ. ಸಿ. ಹೆಗಡೆ (9869074115), ಸುರೇಶ ಹೆಗಡೆ (9833910140), ಡಾ| ಎಸ್. ಆರ್. ನಾಯ್ಕ (8454075898), ಮಧುಕರ ನಾಯ್ಕ (9821250228), ಅಶೋಕ ನಾಯ್ಕ (9930528298) ಅವರನ್ನು ಸಂಪರ್ಕಿಸುವಂತೆ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಇದರ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.